ಸುದ್ದಿ

ಕಂಬಳ ವೀಕ್ಷಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ : ಇಬ್ಬರು ಮೃತ್ಯು

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ವೀಕ್ಷಿಸಿ ಊರಿಗೆ ವಾಪಾಸಾಗುತ್ತಿದ್ದಾಗ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ರಾಜ್ಯ ಹೆದ್ದಾರಿ 33 ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ನಡೆದಿದೆ. ಮೃತಪಟ್ಟವರನ್ನು ಬಜಪೆ ಮೂಲದ ಕಿಶಾನ್‍ ಶೆಟ್ಟಿ (20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟ ಗ್ರಾಮದ ಫಿಲೀಪ್‍ ನೇರಿ ಲೋಬೋ (32) ಎಂದು ಗುರುತಿಸಲಾಗಿದೆ. ನಿತೀಶ್‍ ಭಂಡಾರಿ, ಪ್ರೀತಿ ಲೋಬೋ, ಹರೀಶ್ ಗಂಭಿರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ […]

ಕಂಬಳ ವೀಕ್ಷಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ : ಇಬ್ಬರು ಮೃತ್ಯು Read More »

ಮೂರು ಇಲಾಖೆಗಳ ವಿಲೀನ, 2000 ಉದ್ಯೋಗ ನಷ್ಟ!

ಬೆಂಗಳೂರು : ವಿವಿಧ ಇಲಾಖೆಗಳನ್ನು ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಹಳೆಯ ಪ್ರಸ್ತಾವನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಉಪ ಸಮಿತಿ ಸಭೆಯು ಚರ್ಚೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಕುರಿತು ನವೆಂಬರ್‌ 8ರಂದು ಹೊರಡಿಸಲಾಗಿರುವ ಅರೆ ಸರ್ಕಾರಿ ಪತ್ರದಲ್ಲಿ ಈ ಕುರಿತು ಕೂಡಲೇ

ಮೂರು ಇಲಾಖೆಗಳ ವಿಲೀನ, 2000 ಉದ್ಯೋಗ ನಷ್ಟ! Read More »

ವಂಚನೆ; ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ್’ಗೆ ಶಿಕ್ಷೆ

ಸುಬ್ರಹ್ಮಣ್ಯ; ಚೆಕ್ ಬೌನ್ಸ್ ಪ್ರಕರಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ ಎಂಬವರ ಆರೋಪವನ್ನು ಸಾಬೀತು ಮಾಡಿರುವ ಚಿಕ್ಕಮಗಳೂರು ಚಿಕ್ಕಮಗಳೂರು ಜೆಎಂಎಸಿ ನ್ಯಾಯಾಲಯ, ನಾಲ್ಕು ತಿಂಗಳ ಶಿಕ್ಷೆ ತಪ್ಪಿದಲ್ಲಿ 5 ಲಕ್ಷ 18 ಸಾವಿರ 100 ರೂ. ದಂಡ ವಿಧಿಸುವಂತೆ ಆದೇಶಿಸಿದೆ. ವ್ಯವಹಾರ ಸಂಬಂಧ ದುಡ್ಡಿಗೆ ಪ್ರತಿಯಾಗಿ ಶ್ರೀನಾಥ್ ಅವರು ಚೆಕ್ ನೀಡಿದ್ದರು. ಖಾತೆ ಬರಿದಾಗಿದ್ದು, ಚೆಕ್ ಬೌನ್ಸ್ ಆಗಿತ್ತು. ಚೆಕ್ ಪಡಕೊಂಡವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಚಿಕ್ಕಮಗಳೂರು ಸಿವಿಲ್ ಜಡ್ಜ್ ಮತ್ತು ಐಎಂಎಪ್ ಸಿ ಕೋರ್ಟ್

ವಂಚನೆ; ಸುಬ್ರಹ್ಮಣ್ಯ ಮೂಲದ ಟಿ.ಎಸ್ ಶ್ರೀನಾಥ್’ಗೆ ಶಿಕ್ಷೆ Read More »

ವಿದ್ಯುತ್ ತಂತಿ ಸ್ಪರ್ಶಿಸಿದ ಅಲ್ಯೂಮಿನಿಯಂ ಏಣಿ: ಬಾಲಕೃಷ್ಣ ಶೆಟ್ಟಿ ಮೃತ್ಯು

ಬೆಳ್ತಂಗಡಿ: ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಧರ್ಮಸ್ಥಳ ಸಮೀಪದ ಮಲ್ಲರ್ಮಾಡಿ ಎಂಬಲ್ಲಿ ನಡೆದಿದೆ. ಮೃತರನ್ನು ಮಲ್ಲರ್ಮಾಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (49 ವ) ಎಂದು ಗುರುತಿಸಲಾಗಿದೆ. ಸೊಪ್ಪು ತರಲೆಂದು ಶುಕ್ರವಾರ ಬೆಳಿಗ್ಗೆ ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಅವರ ತೋಟಕ್ಕೆ ಹೋಗಿದ್ದರು. ಈ ಸಂದರ್ಭ ಘಟನೆ ನಡೆದಿದೆ ಎಂದು ಹೇಳಲಾಗಿದೆ. ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್ ಲೈನ್ ಗೆ ಅಲ್ಯೂಮಿನಿಯಂ ಏಣಿ ಸ್ಪರ್ಶಿಸಿತ್ತು. ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಬಾಲಕೃಷ್ಣ

ವಿದ್ಯುತ್ ತಂತಿ ಸ್ಪರ್ಶಿಸಿದ ಅಲ್ಯೂಮಿನಿಯಂ ಏಣಿ: ಬಾಲಕೃಷ್ಣ ಶೆಟ್ಟಿ ಮೃತ್ಯು Read More »

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್

ಉಪ್ಪಿನಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಕೋಣಗಳ ದಂಡೇ ಇಂದು ಬೆಂಗಳೂರಿಗೆ ತೆರಳಿತು. ಕರಾವಳಿಯ ವಿವಿಧ ಕಡೆಗಳಿಂದ ಬಂದ ಕೋಣಗಳ ದಂಡು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬಂದು ಸೇರಿದವು. ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ನೂರಾರು ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಪ್ರೀತಿ- ಗೌರವಾದಾರಗಳ ಸ್ವಾಗತ ನೀಡಲಾಯಿತು. ಬಳಿಕ ಕಂಬಳ ಸಮಿತಿಯ ವತಿಯಿಂದ ಕೋಣಗಳ ಯಜಮಾನರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಕೊಂಬು- ಕಹಳೆಗಳ ಸಹಿತ ಮೆರವಣಿಗೆಯೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು. ಪಶು

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್ Read More »

ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ! | ದೇಹಕ್ಕಾಗಿ ಶೋಧ ಕಾರ್ಯ

ಮಂಗಳೂರು: ವ್ಯಕ್ತಿಯೊಬ್ಬರು ಅದ್ದೂರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಆಕಾಶಭವನದ ನಿವಾಸಿ ಪ್ರಶಾಂತ್ (41) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಸ್ನೇಹಿತ ದೇವಿಪ್ರಸಾದ್ ಜೊತೆಗೆ ಎರಡು ದಿನಗಳ ಕಾಲ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಇಂದು ಗುರುಪುರದ ಸೇತುವೆ ಬಳಿ ಬಂದಿದ್ದರು. ಈ ನಡುವೆ ಪ್ರಶಾಂತ್ ಸೇತುವೆಯಿಂದ ನದಿಗೆ ಹಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ದೇವಿಪ್ರಸಾದ್ ನೋಡಿದ್ದು, ಕೂಡಲೇ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪ್ರಶಾಂತ್

ಸೇತುವೆಯಿಂದ ನೀರಿಗೆ ಹಾರಿ ಆತ್ಮಹತ್ಯೆ ! | ದೇಹಕ್ಕಾಗಿ ಶೋಧ ಕಾರ್ಯ Read More »

ಅಕ್ರಮ ಗೋಸಾಗಾಟ : ಇಬ್ಬರ ಬಂಧನ

ಮೂಡುಬಿದಿರೆ: ತಾಲೂಕಿನ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ನಸುಕಿನ ಜಾವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ್ದಾರೆ. ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್‌ ಹಾಗೂ ಪಣಪಿಲದ ಶೈಲೇಶ್ ಮಡಿವಾಳ ಬಂಧಿತ ವ್ಯಕ್ತಿಗಳು. ಗಂಟಾಲ್ಕಟ್ಟೆಯ ಫಾರೂಕ್, ನಿಸಾರ್ ಹಾಗೂ ಪಣಪಿಲದ ಹೆರಾಲ್ಡ್ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡ

ಅಕ್ರಮ ಗೋಸಾಗಾಟ : ಇಬ್ಬರ ಬಂಧನ Read More »

ನೇಣು ಬಿಗಿದುಕೊಂಡು ಆತ್ಮಹತ್ಯೆ !!

ಉಳ್ಳಾಲ: ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಡಿಪು ಬಳಿಯ ಕಾರ್ ಗ್ಯಾರೇಜ್‌ನಲ್ಲಿ ನಡೆದಿದೆ. ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಮುಡಿಪುವಿನಲ್ಲಿ ಕಾರು ಗ್ಯಾರೇಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಶೋರ್‌ ಕಂಕನಾಡಿಯ ಕಾರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನ.20 ರಂದು ಕೆಲಸಕ್ಕೆ ಹೋಗಿದ್ದು ತಡವಾದರೂ ಮನೆಗೆ ಬಂದಿರಲಿಲ್ಲ. ಮನೆಯವರು, ಸಂಬಂಧಿಕರ ಹುಡುಕಾಡಿದರೂ ಕಿಶೋರ್ ಪತ್ತೆಯಾಗಿರಲಿಲ್ಲ. ಕೊನೆಗೆ ಕಿಶೋರ್‌ ಪ್ರತಿದಿನ ಕೆಲಸ ಬಿಟ್ಟು ಕೆಲ ಹೊತ್ತು ಕುಳಿತುಕೊಳ್ಳುತ್ತಿದ್ದ ಮುಡಿಪುವಿನ ಗ್ಯಾರೇಜ್‌ ನಲ್ಲಿ ಹುಡುಕಾಟ

ನೇಣು ಬಿಗಿದುಕೊಂಡು ಆತ್ಮಹತ್ಯೆ !! Read More »

ವಿದೇಶದಲ್ಲಿ ಬಂಧಿಯಾಗಿದ್ದ ಕಡಬದ ಯುವಕ ಬಿಡುಗಡೆ; ಇಂದು ಮಂಗಳೂರಿಗೆ!

ಕಡಬ: ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಕೊನೆಗೂ ಬಂಧನ ಮುಕ್ತರಾಗಿ ಇಂದು ಊರಿಗೆ ಆಗಮಿಸಲಿದ್ದಾರೆ. ಸೌದಿಯ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್‌ ಅವರನ್ನು ಇಂದು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಬಹುತೇಕ ಸಂಜೆ ಸುಮಾರು ಏಳು ಗಂಟೆ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ

ವಿದೇಶದಲ್ಲಿ ಬಂಧಿಯಾಗಿದ್ದ ಕಡಬದ ಯುವಕ ಬಿಡುಗಡೆ; ಇಂದು ಮಂಗಳೂರಿಗೆ! Read More »

ಉಡುಪಿ, ದ.ಕ. ಜಿಲ್ಲೆ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪಿಎಂ ವಿಶ್ವಕರ್ಮ ಯೋಜನೆ ವಿಸ್ತರಣೆ

ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ವಿಶ್ವಕರ್ಮ ಯೋಜನೆಯನ್ನು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಮೊದಲ ಹಂತದಲ್ಲಿ 18 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಇದೀಗ ಉಳಿದ 13 ಜಿಲ್ಲೆಗಳನ್ನು ಯೋಜನೆಯೊಳಗೆ ತರಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯನಗರ ಜಿಲ್ಲೆಗಳನ್ನು ಎರಡನೇ ಹಂತದಲ್ಲಿ ಸೇರಿಸಿಕೊಳ್ಳಲಾಗಿದೆ. ಎಲ್ಲಾ ಕುಶಲ ಕರ್ಮಿಗಳಿಗೂ ಅವಕಾಶ ಮಾಡಿಕೊಡುವ

ಉಡುಪಿ, ದ.ಕ. ಜಿಲ್ಲೆ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪಿಎಂ ವಿಶ್ವಕರ್ಮ ಯೋಜನೆ ವಿಸ್ತರಣೆ Read More »

error: Content is protected !!
Scroll to Top