ಬಂಟ್ವಾಳ ತಾಲೂಕು ಗೌಡರ ಕ್ರೀಡೋತ್ಸವ | ಬೆಂಗಳೂರು ಕಂಬಳದಲ್ಲಿ ಕೋಣ ಓಡಿಸಿದ ವಿಜೇತರಿಗೆ, ಕ್ರೀಡಾ ಸಾಧಕರಿಗೆ ಸನ್ಮಾನ
ವಿಟ್ಲ: ಇಲ್ಲಿನ ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕದ ಸಹಕಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ಡಿ. 3ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ರಾಷ್ಟ್ರಧ್ವಜವನ್ನು ವಿಶ್ವ ಮಟ್ಟಕ್ಕೆ ಎತ್ತಿ ತೋರಿಸಲು ಇರುವ ಏಕೈಕ ಕ್ಷೇತ್ರ ಕ್ರೀಡೆ. ಒಲಿಂಪಿಕ್ ಕ್ರೀಡಾಕೂಟದಲ್ಲೂ ಭಾರತದ ತ್ರಿವರ್ಣ ಧ್ವಜವನ್ನು […]