ಸುದ್ದಿ

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ

ಉಳ್ಳಾಲ: ಪ್ರೇಮ ವೈಫಲ್ಯದ ಕಾರಣಕ್ಕ. ಒಮಾನ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಸೋಮೇಶ್ವರದ ಯುವಕನೊಬ್ಬ ತನ್ನ ಕೊಠಡಿಯಲ್ಲೇ ‌ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ಪುನೀತ್ ಪೂಜಾರಿ(32) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಒಮಾನ್‌ನ ಲಿಫ್ಟ್ ಕಂಪನಿಯೊಂದರಲ್ಲಿ ಪುನೀತ್ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ಮತ್ತೆ ಒಮಾನ್‌ಗೆ ತೆರಳಿದ್ದರು. ಪುನೀತ್ ಉರ್ವಾ ಮೂಲದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಯುವತಿ ಪುನೀತ್ ಅವರ ಕರೆ, ಸಂದೇಶಗಳಿಗೆ ‌ಸ್ಪಂದನೆ ನೀಡುತ್ತಿರಲಿಲ್ಲ. […]

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ Read More »

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ

ತೆಹ್ರಾನ್: ಇರಾನ್ ಮತ್ತು ಅಮೆರಿಕಾ, ಇಸ್ರೇಲ್ ನಡುವಿನ ಜಟಾಪಟಿಯಲ್ಲಿ ಇರಾನಿನ ಪರಿಸ್ಥಿತಿ ಹದೆಗೆಟ್ಟಿದೆ. ಭದ್ರತಾ ಪರಿಸ್ಥಿತಿ ಬಿಗುವಾಗಿದೆ. ಯುದ್ಧದ ಭೀತಿಯ ಕಾರಣಕ್ಕಾಗಿ ಅಲ್ಲಿನ ಭಾರತೀಯರಿಗೆ ಸಂಬಂಧಿಸಿದ ಹಾಗೆ ಭಾರತೀಯ ರಾಯಭಾರ ಕಚೇರಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಇರಾನಿನಲ್ಲಿರುವ ಎಲ್ಲಾ ಭಾರತೀಯರು ಅನಗತ್ಯ ಓಡಾಟ ತಪ್ಪಿಸಿ, ಆದಷ್ಟು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಸ್ಥಳೀಯ ಸುದ್ದಿಗಳು, ರಾಯಭಾರ ಕಚೇರಿಯ ಪ್ರಕಟಣೆಗಳನ್ನು ಗಮನಿಸುವಂತೆ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಪ್ರತಿಭಟನೆ ನಡೆವ ಸ್ಥಳಗಳಿಂದ ದೂರವಿರುವಂತೆಯೂ ಎಚ್ಚರಿಕೆ

ಅನಗತ್ಯವಾಗಿ ಓಡಾಡದಂತೆ ಇರಾನಿನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸೂಚನೆ Read More »

ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ

ಬೀದರ್: ಪತ್ನಿಗೆ ಅನೈತಿಕ ಸಂಬಂಧ ಇರುವ ಸಂದೇಹದಲ್ಲಿ ಗಂಡನೊಬ್ಬ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ‌ಹತ್ಯೆ ಮಾಡಿದ ಘಟನೆ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಶ್ವಿನಿ(28) ಎಂದು ಗುರುತಿಸಲಾಗಿದೆ. ಕಿಶನ್ ಎಂಬವನೇ ಆರೋಪಿ. ಕಿಶನ್ ಮಹಾರಾಷ್ಟ್ರದ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಶ್ವಿನಿ ಮೂವರು ಮಕ್ಕಳ ಜೊತೆಗೆ ಮನ್ನಳ್ಳಿಯಲ್ಲೇ ವಾಸವಿದ್ದಳು. ಕಿಶನ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿ ಪ್ರತಿನಿತ್ಯ ಆಕೆಯ ಜೊತೆಗೆ ಜಗಳವಾಡುತ್ತಿದ್ದ. ಬೇರೊಬ್ಬ ವ್ಯಕ್ತಿಯ ಜೊತೆ ಆಕೆ

ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ Read More »

ನೀನು ಓದಬಾರದು ಎಂದು ಪಿಯುಸಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಸೋದರ ಮಾವ

ಮೈಸೂರು: ನೀನು ಓದಬಾರದು ಎಂದು ಹೇಳಿ ಪರೀಕ್ಷೆ ಬರೆಯಲು ಹೋಗಿ ಬಂದ ವಿದ್ಯಾರ್ಥಿನಿಯ ‌ಮೇಲೆ ಸೋದರ ಮಾವ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ನಂಜನಗೂಡಿನ ಪಾಳ್ಯಾ ಎಂಬಲ್ಲಿ ನಡೆದಿದೆ. ಹಲ್ಲೆಗೆೊಳಗಾದ ವಿದ್ಯಾರ್ಥಿನಿಯನ್ನು ಪೂರ್ಣಿಮಾ ಎಂದು ಗುರುತಿಸಲಾಗಿದೆ. ಆಕೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮನೆಗೆ ಬಂದಿದ್ದು, ಆ‌ವೇಳೆ ಮನೆಗೆ ನುಗ್ಗಿದ ಸೋದರ ಮಾವ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿದೆ. ಹಳೆಯ ದ್ವೇಷದ ಕಾರಣಕ್ಕೆ ಆತ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಈ ವೇಳೆ ವಿದ್ಯಾರ್ಥಿನಿಯನ್ನು ಕಾಪಾಡಲು ಬಂದ

ನೀನು ಓದಬಾರದು ಎಂದು ಪಿಯುಸಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಸೋದರ ಮಾವ Read More »

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ – ಜಿಲ್ಲಾ ಘಟಕದ ಪದಗ್ರಹಣ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೂರ್ವಾಧ್ಯಕ್ಷ, ಸುಳ್ಯ ಸುದ್ಧಿ ಬಿಡುಗಡೆಯ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪತ್ರಿಕಾ ಮಾಧ್ಯಮ ಯಾವಾಗಲೂ ಧನಾತ್ಮಕ ಅಂಶಗಳನ್ನೇ ಬಿಂಬಿಸುವ ಕೆಲಸ ಮಾಡಬೇಕು ಎಂದು

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ – ಜಿಲ್ಲಾ ಘಟಕದ ಪದಗ್ರಹಣ Read More »

ಘನಘೋರ ಸಮರ : ಇರಾನ್‌ನಲ್ಲಿ ಮಕ್ಕಳ ಸಹಿತ 700ಕ್ಕೂ ಅಧಿಕ ಮಂದಿ ಸಾವು

ತೀವ್ರಗೊಂದ ಸೇನಾ ಕಾರ್ಯಾಚರಣೆ, ಮಿಸೈಲ್‌, ಡ್ರೋನ್‌, ಫೈಟರ್‌ ವಿಮಾನಗಳ ಆರ್ಭಟ ಟೆಹ್ರಾನ್‌ : ಇದು ಸದ್ಯಕ್ಕೆ ಮುಗಿಯುವ ಯುದ್ಧವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬೆನ್ನಿಗೆ ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಇರಾನ್ ಮೇಲಿನ ಯುದ್ಧವನ್ನು ತೀವ್ರಗೊಳಿಸಿದ್ದು, ಹಲವು ತಾಣಗಳನ್ನು ಗುರಿಯಾಗಿಸಿ ಬಾಂಬ್ ಹಾಗೂ ಕ್ಷಿಪಣಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತೀಕಾರದ ದಾಳಿ ಮುಂದುವರಿಸಿರುವುದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದೆ. ಗಲ್ಫ್‌ ರಾಷ್ಟ್ರಗಳ ಮೇಲಿನ ದಾಳಿಯನ್ನು ಇರಾನ್‌ ಮುಂದುವರಿಸಿದೆ. ಇರಾನ್‌ನ ಕ್ಷಿಪಣಿ

ಘನಘೋರ ಸಮರ : ಇರಾನ್‌ನಲ್ಲಿ ಮಕ್ಕಳ ಸಹಿತ 700ಕ್ಕೂ ಅಧಿಕ ಮಂದಿ ಸಾವು Read More »

ಗಲ್ಫ್‌ನಲ್ಲಿ ಸಿಲುಕಿರುವವರನ್ನು ಕರೆತರಲು ವಿಮಾನ ರವಾನೆ

ಪರ್ಯಾಯ ವಾಯು ಮಾರ್ಗಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನವದೆಹಲಿ: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಮಧ್ಯಪ್ರಾಚ್ಯದ ವಿವಿಧೆಡೆ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಸಂಭಾವ್ಯ ವಾಯುಪ್ರದೇಶಗಳ ಮೂಲಕ ಭಾರತೀಯರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂಡಿಗೋ ಏರ್​ಲೈನ್ಸ್​ನ 10 ವಿಶೇಷ ವಿಮಾನಗಳು ಮಂಗಳವಾರ ಜೆದ್ದಾಗೆ ತೆರಳಿ ಭಾರತೀಯರನ್ನು ಕರೆತರಲು ಉದ್ದೇಶಿಸಿವೆ ಎಂದು ಸಚಿವಾಲಯ ತಿಳಿಸಿದೆ. ಜೆದ್ದಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಇಂಡಿಗೋ ಸಂಪರ್ಕದಲ್ಲಿದೆ. ಯಾವ ವಾಯುಮಾರ್ಗದ

ಗಲ್ಫ್‌ನಲ್ಲಿ ಸಿಲುಕಿರುವವರನ್ನು ಕರೆತರಲು ವಿಮಾನ ರವಾನೆ Read More »

ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದವನ ವಿರುದ್ಧ ದೂರು

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಂತೋಷ್ ದೊಡ್ಡಮನಿ ಅವರು ಮಾರ್ಚ್ 2ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇನ್‌ಸ್ಟಾಗ್ರಾಂ ಪರಿಶೀಲಿಸುವಾಗ ಸುಹಾಸ್ ಶೆಟ್ಟಿ ಎಂಬಾತನ ಫೋಟೋ ಹೊಂದಿದ್ದ ಪೋಸ್ಟ್‌ಗೆ “shankar11916 Support maadi bro ullal masjid hatra bomb blast madtini (ಉಳ್ಳಾಲ ದರ್ಗಾ

ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್‌ ಹಾಕಿದವನ ವಿರುದ್ಧ ದೂರು Read More »

ಲಂಚ ಸ್ವೀಕರಿಸಿದ ಎಸ್‌ಡಿಎ ಲೋಕಾಯುಕ್ತ ಬಲೆಗೆ

ವಿದ್ಯುತ್‌ ಗುತ್ತಿಗೆದಾರರಿಂದ ಲಂಚ ಕೇಳಿದ್ದ ಅಧಿಕಾರಿ ಮಂಗಳೂರು: ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಒಳಪಟ್ಟ ದಾರಿದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳ ನಿರ್ವಹಿಸಿದ ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ ಗುತ್ತಿಗೆದಾರರಿಗೆ ಕೆಲಸದ ಬಿಲ್ ಪಾವತಿಗೆ ಶೇ.4ರಂತೆ 22,600 ರೂ. ಕೊಡಬೇಕು ಎಂದು ಲಂಚದ ಬೇಡಿಕೆ ಇರಿಸಿದ್ದ ಮಂಗಳೂರು ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕನನ್ನು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ತಂಡ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಎಸ್.ಡಿ.ಎ ಸಂಪತ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ದೂರುದಾರರು ಇಲೆಕ್ಟ್ರಿಕಲ್ ಪ್ರಥಮ ದರ್ಜೆಯ

ಲಂಚ ಸ್ವೀಕರಿಸಿದ ಎಸ್‌ಡಿಎ ಲೋಕಾಯುಕ್ತ ಬಲೆಗೆ Read More »

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ

ದೇವಾಲಯದ ಸಂಪ್ರದಾಯ, ಭಕ್ತರ ನಂಬಿಕೆ ಎತ್ತಿ ಹಿಡಿಯಲು ಆದ್ಯತೆ ತಿರುವಂತಪುರ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂಬ ಮಹತ್ವದ ತೀರ್ಮಾನವನ್ನು ತಿರುವಾಂಕೂರು ದೇವಸ್ವಂ ಮಂಡಳಿ ತೆಗೆದುಕೊಂಡಿದೆ. ಋತುಮತಿಯರಾಗುವ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶ, ಪೂಜೆ ಸಲ್ಲಿಕೆಗೆ ಅವಕಾಶ ಕೊಟ್ಟಿರುವ ಸುಪ್ರೀಂ ಕೋರ್ಟ್‌ 2018ರ ತೀರ್ಪನ್ನು ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ದೇವಸ್ವಂ ಬೋರ್ಡ್‌ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ. ಟಿಡಿಬಿಯು ಶಬರಿಮಲೆ ಪದ್ಧತಿ, ಸಂಪ್ರದಾಯ ಹಾಗೂ ನಂಬಿಕೆಗಳನ್ನು ಕಾಪಾಡಲು ಒತ್ತು ಕೊಡುತ್ತದೆ.

ಶಬರಿಮಲೆ ದೇವಳಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ : ಟಿಡಿಬಿ ನಿರ್ಣಯ Read More »

error: Content is protected !!
Scroll to Top