ಸುದ್ದಿ

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!!

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಲವಾರು ಝಳಪಿಸಿದ ಪ್ರಕರಣದಲ್ಲಿ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ‌‌ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ತಲವಾರು ಝಳಪಿಸಿದ 9 ಮಂದಿ ಪೊಲೀಸ್ ವಶಕ್ಕೆ!!! Read More »

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಅಪರೂಪದ ಪ್ರಾಣಿ ಪಕ್ಷಿಗಳು ಕ್ಯಾಮರಾ ಕಣ್ಣಲ್ಲಿ ಸೆರೆ!!

ಮಂಗಳೂರು: ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಳಿವಿನಂಚಿನಲ್ಲಿರುವ ತೋಳಗಳ ಸೇರ್ಪಡೆಯಾಗಿವೆ. ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮೃಗಾಲಯದಿಂದ ಒಂದು ಜತೆ ತೋಳ ಪಿಲಿಕುಳ ಮೃಗಾಲಯಕ್ಕೆ ತರಿಸಲಾಗಿದೆ. ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ 4 ಜತೆ ಅಳಿಲು ಮಂಗ ಮಾರ್ಮಸೆಟ್, ಟಾಮರಿಂನ್ ಗಳು ಕೂಡ ಸೇರ್ಪಡೆಯಾಗಿದ್ದು, ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್, ಆಸ್ಟ್ರೇಲಿಯಾದಲ್ಲಿ

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಅಪರೂಪದ ಪ್ರಾಣಿ ಪಕ್ಷಿಗಳು ಕ್ಯಾಮರಾ ಕಣ್ಣಲ್ಲಿ ಸೆರೆ!! Read More »

ಉದ್ಯಮಿ ಸೊಸೆ ಆತ್ಮಹತ್ಯೆ | ಆರೋಪಿಗಳಿಗೆ ಜಾಮೀನು !

ಸುಳ್ಯ; ಉದ್ಯಮಿ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳಿಗೆ ಬೆಂಗಳೂರಿನ ಸಿಟಿ ಏಳನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಐಶ್ವರ್ಯಾ ಮಾವ ಗಿರಿಯಪ್ಪ ಗೌಡ ಕಾಪಿಲ, ಅತ್ತೆ ಸೀತಮ್ಮ, ಗಂಡ ರಾಜೇಶ್, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಯ್ ಅವರನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದರು. ಇನ್ನುಳಿದ ಆರೋಪಿಗಳಾದ ಐಶ್ವರ್ಯಾ ಅವರ ತಂದೆಯ ಅಕ್ಕ ಗೀತಾ, ಅವರ ಪತಿ ರವೀಂದ್ರನಾಥ ಕೇವಳ ಹಾಗೂ

ಉದ್ಯಮಿ ಸೊಸೆ ಆತ್ಮಹತ್ಯೆ | ಆರೋಪಿಗಳಿಗೆ ಜಾಮೀನು ! Read More »

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿ.ಎಂ. ಡಿ.ವಿ.ಸದಾನಂದ ಗೌಡ

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬುಧವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಿಂದ ಗರಿಷ್ಠ ಲಾಭ ಪಡೆದಿದ್ದೇನೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಅವರು ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಇತ್ತೀಚೆಗೆ ವದಂತಿಗಳು ಹಬ್ಬಿದ್ದವು. ವಿಚಾರವಾಗಿ ಅಸಮಾಧಾನಗೊಂಡಿದ್ದ ಅವರು, ಪಕ್ಷದ ವರಿಷ್ಠರು ತಮ್ಮ ನಿಲುವು ತಿಳಿಸಬೇಕು ಎಂದು

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿ.ಎಂ. ಡಿ.ವಿ.ಸದಾನಂದ ಗೌಡ Read More »

ಅನ್ಯ ಮತೀಯ ಯುವಕನಿಂದ ಯುವತಿಗೆ ಕಿರುಕುಳ | ಆರೋಪಿ ಬಂಧನ

ಸುಳ್ಯ: ಅನ್ಯಮತೀಯ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ ಘಟನೆ ನಿಂತಿಕಲ್ಲಿನಲ್ಲಿ ಇಂದು ರಾತ್ರಿ ನಡೆದಿದೆ. ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವತಿಯ ಮೈಗೆ ಕೈ ಹಾಕಿರುವುದಾಗಿ ಯುವತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿರುವುದಾಗಿ ತಿಳಿದು ಬಂದಿದೆ.

ಅನ್ಯ ಮತೀಯ ಯುವಕನಿಂದ ಯುವತಿಗೆ ಕಿರುಕುಳ | ಆರೋಪಿ ಬಂಧನ Read More »

ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ದೀಪಾ ಕಾಣೆ | ಪ್ರಕರಣ ದಾಖಲು

ಕಾರ್ಕಳ : ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯೋರ್ವಳು ಕಾಣೆಯಾದ ಘಟನೆ ಕಾರ್ಕಳ ನಂದಳಿಕೆಯಲ್ಲಿ ನಡೆದಿದೆ. ನಂದಳಿಕೆ ಗ್ರಾಮದ ಮಾವಿನಕಟ್ಟೆಯ ದೀಪಾ (21) ಕಾಣೆಯಾದ ವಿದ್ಯಾರ್ಥಿನಿ. ದೀಪಾ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ನ. 6 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿರುತ್ತಾಳೆ. ಆದರೆ ಕಾಲೇಜಿಗೂ ಹೋಗದೆ ಅತ್ತ ವಾಪಾಸು ಮನೆಗೂ ಬಾರದೇ ಜೊತೆಗೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ದೀಪಾಳ ಅಣ್ಣ ದಿಲೀಪ್ ಪೂಜಾರಿ ನೀಡಿದ ದೂರಿನಂತೆ

ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ದೀಪಾ ಕಾಣೆ | ಪ್ರಕರಣ ದಾಖಲು Read More »

ಅಳಿಕೆ ಗ್ರಾಪಂ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆ

ವಿಟ್ಲ: ಅಳಿಕೆ ಗ್ರಾಪಂ ವತಿಯಿಂದ ಉದ್ಯೊಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಸಂಜೀವಿನಿ ಕಟ್ಟಡದ ಉದ್ಘಾಟನಾ ಸಮಾರಂಭವು ಹಾಗೂ ಸ್ವಚ್ಚತಾ ವಾಹನದ ಚಾಲನಾ ಕಾರ್ಯಕ್ರಮ ನಡೆಯಿತು. ಶಾಸಕ ಅಶೋಕ್‍ ಕುಮಾರ್‍ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕುಟುಂಬ ನಿರ್ಹವಣೆ ಜೊತೆ ಕುಟುಂಬದ ಹಿತಕ್ಕಾಗಿ ಕೆಲಸ ಮಾಡುವ ಮಹಿಳೆ ಕುಟುಂಬದ ಜೊತೆ ಈ ದೇಶದ ದೊಡ್ಡ ಸಂಪತ್ತಾಗಿದ್ದಾರೆ. ಪ್ರಸ್ತುತ ಮಹಿಳೆಯರು ಸಂಘಟನೆಯ ಮೂಲಕ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕು . ಸಣ್ಣ ಉದ್ಯಮಗಳ ಕಡೆ

ಅಳಿಕೆ ಗ್ರಾಪಂ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆ Read More »

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಉಡುಪಿ: ಬಾಲಕಿಯೊಬ್ಬಳು ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಡುಪಿ ಜಿಲ್ಲೆಯ ಹೆರ್ಗ ಸಮೀಪದ ಫ್ಲ್ಯಾಟ್ ಒಂದರಲ್ಲಿ ನಡೆದಿದೆ. ಪ್ರಜ್ಞಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮಣಿಪಾಲದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರಜ್ಞಾ, ಬಾಲಕಿ ಇತ್ತೀಚಿನ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದೆ. ಫ್ಲ್ಯಾಟ್ ಒಂದರ ಎಂಟನೇ ಮಹಹಡಿಯಿಂದ ಜಿಗಿದ ಬಾಲಕಿ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಪೋಷಕರು ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

ವೃತ್ತಿ ಜೀವನದ ಬಿಝಿ ಶೆಡ್ಯೂಲ್‍ ನಲ್ಲೂ ಕ್ರೀಡಾ ಕ್ಷೇತ್ರಕ್ಕೆ ಸಮಯ ಮೀಸಲು | ಎರಡನೇ ಬಾರಿ ರಾಷ್ಟ್ರ,ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕೋಡಿಂಬಾಳದ ಮಣಿಕಂಠನ್

ಸುಳ್ಯ: ತನ್ನ ವೃತ್ತಿ ಜೀವನದ ಬಿಝಿ ಶೆಡ್ಯೂಲ್ ಮಧ್ಯೆಯೂ ತನ್ನ ಆಸಕ್ತಿಯ ಕ್ರೀಡಾ ಕ್ಷೇತ್ರಕ್ಕೆ ಒಂದಿಷ್ಟು ಸಮಯವನ್ನು ಮೀಸಲಿಡುವ ಈ ಇಂಜಿನಿಯರ್ ಎರಡನೇ ಬಾರಿಯೂ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸುಳ್ಯದ ಇಂಜಿನಿಯರ್ ಮಣಿಕಂಠನ್ ಸ್ಪೋರ್ಟ್ಸ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸುಳ್ಯ ಉಪವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮಣಿಕಂಠನ್ ಬಾಲ್ಯದಿಂದಲೇ ಕ್ರೀಡಾಪಟು. ಸರಕಾರಿ ಹುದ್ದೆಯಲ್ಲಿದ್ದರೂ ತನ್ನ ಕ್ರೀಡಾ ಅಸಕ್ತಿಯನ್ನು ಮುಂದುವರಿಸುತ್ತಿರುವ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ

ವೃತ್ತಿ ಜೀವನದ ಬಿಝಿ ಶೆಡ್ಯೂಲ್‍ ನಲ್ಲೂ ಕ್ರೀಡಾ ಕ್ಷೇತ್ರಕ್ಕೆ ಸಮಯ ಮೀಸಲು | ಎರಡನೇ ಬಾರಿ ರಾಷ್ಟ್ರ,ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕೋಡಿಂಬಾಳದ ಮಣಿಕಂಠನ್ Read More »

ರೈಲು ಬಡಿದು ಟ್ರ್ಯಾಕ್ ಮ್ಯಾನ್ ನವೀನ್ ಮೃತ್ಯು | ಕೆಲ ಸಮಯದ ಹಿಂದಷ್ಟೇ ಕೆಲಸಕ್ಕೆ ಸೇರಿದ ನವೀನ್

ಕಾಸರಗೋಡು: ರೈಲು ಹಳಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ರೈಲು ಬಡಿದು ಟ್ರ್ಯಾಕ್ ಮ್ಯಾನ್ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಆಂಧ್ರ ಪ್ರದೇಶದ ನವೀನ್ (26)ಮೃತಪಟ್ಟವರು. ಕುಂಬಳೆ ಸಮೀಪದ ಶಿರಿಯ ಸೇತುವೆ ಬಳಿ ಘಟನೆ ನಡೆದಿದ್ದು, ಬಂದ್ಯೋಡು ಮುಟ್ಟಂನಿಂದ ಶಿರಿಯ ತನಕ ಹಳಿ ತಪಾಸಣೆಗೆ ನವೀನ್‌ಗೆ ನೀಡಲಾಗಿತ್ತು. ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್ ರೈಲು ಬಡಿದಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ, ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು,

ರೈಲು ಬಡಿದು ಟ್ರ್ಯಾಕ್ ಮ್ಯಾನ್ ನವೀನ್ ಮೃತ್ಯು | ಕೆಲ ಸಮಯದ ಹಿಂದಷ್ಟೇ ಕೆಲಸಕ್ಕೆ ಸೇರಿದ ನವೀನ್ Read More »

error: Content is protected !!
Scroll to Top