ಸುದ್ದಿ

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಆರೋಪಿಗಳ ಬಂಧನ

ಮೂಡಬಿದ್ರೆ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಮೂಡಬಿದ್ರೆ ಪೊಲೀಸರು ದಾಳಿ ಮಾಡಿ, ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಶ್ರೀ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ ಮುಗಿದ ಬಳಿಕ ಅಕ್ರಮ ಕೋಳಿ ಅಂಕ ನಡೆಯುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಮೂಡುಬಿದ್ರೆ ಪೊಲೀಸರು ತಕ್ಷಣ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಕೋಳಿ ಅಂಕಕ್ಕೆ ಪಣವಾಗಿಟ್ಟಿದ್ದ ₹1,480 ನಗದು, 17 ಜೀವಂತ […]

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಆರೋಪಿಗಳ ಬಂಧನ Read More »

ಮಂಗಳೂರು: ವಧೆಗಾಗಿ ದನಗಳ ಅಕ್ರಮ ಸಾಗಾಟ ಪತ್ತೆ

ಫಾರ್ಚುನರ್‌ ಕಾರಲ್ಲಿ ದನಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಮಂಗಳೂರು: ದನಗಳನ್ನು ವಧೆಗಾಗಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಮುಂಜಾನೆ ಸುಮಾರು 4.30ರ ವೇಳೆಗೆ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗ ಎಡಪದವು ಗ್ರಾಮದ ಬಳಿ ಬಜರಂಗದಳ ಸಂಘಟನೆಯ ಮಾಹಿತಿ ಆಧರಿಸಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನೊಳಗೆ ಹಿಂಸಾತ್ಮಕ ರೀತಿಯಲ್ಲಿ 4 ದನಗಳನ್ನು

ಮಂಗಳೂರು: ವಧೆಗಾಗಿ ದನಗಳ ಅಕ್ರಮ ಸಾಗಾಟ ಪತ್ತೆ Read More »

ಬಂಟ್ವಾಳ : ಮನೆಯಂಗಳಕ್ಕೆ ಬಂದ ಬೃಹತ್‌ ಗಾತ್ರದ ಮೊಸಳೆ

ಬಂಟ್ವಾಳ : ಏಳು ಅಡಿ ಉದ್ದವಿದ್ದ ಬೃಹತ್‌ ಗಾತ್ರದ ಮೊಸಳೆಯೊಂದು ಮನೆಯಂಗಳಕ್ಕೆ ಬಂದ ಘಟನೆ ಬಂಟ್ವಾಳದಲ್ಲಿ ಮುಂಜಾನೆ ವೇಳೆ ಸಂಭವಿಸಿದೆ. ಸರಪಾಡಿ ನಾವೂರು ಗ್ರಾಮದ ಪೂಪಾಡಿಕಟ್ಟೆ ನೆಕ್ಕಿಲಾರು ರಾಜೇಶ್ ನಾಯಕ್ ಎಂಬವರ ಮನೆಯ ಅಂಗಳಕ್ಕೆ ಈ ಮೊಸಳೆ ಬಂದಿದೆ. ನೇತ್ರಾವತಿ ನದಿ ತೀರದಿಂದ ಅವರ ಮನೆ ಸುಮಾರು 250 ಮೀಟರ್‌ ದೂರದಲ್ಲಿದೆ. ನೇತ್ರಾವತಿ ನದಿ ತೀರದಿಂದ ಸುಮಾರು 250 ಮೀಟರ್‌ ದೂರದಲ್ಲಿ ಇವರ ಮನೆಯಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮನೆಯ ಹೊರಗೆ ತರಗೆಲೆಗಳ ಶಬ್ದ

ಬಂಟ್ವಾಳ : ಮನೆಯಂಗಳಕ್ಕೆ ಬಂದ ಬೃಹತ್‌ ಗಾತ್ರದ ಮೊಸಳೆ Read More »

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ಹಣ, ತಿಂಡಿಯ ಆಮಿಷವೊಡ್ಡಿ ಕೃತ್ಯ ಎಸಗಿದ ಯುವಕ​ಮಂಗಳೂರು : ಒಂಬತ್ತು ಬಾಲಕನಿಗೆ ಹಣ ಮತ್ತು ತಿಂಡಿಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣವೊಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರು ಪೋಸ್ಟ್ ವ್ಯಾಪ್ತಿಯ ಮಡ್ಯಾರ್ ನಿವಾಸಿ, ಬಿಜೈನ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆಶೀಶ್ ಪೂಜಾರಿ (33) ಬಂಧಿತ ಆರೋಪಿ. ಬಾಲಕನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ವಿಕೃತ ಚಟುವಟಿಕೆಗಳಿಗೆ ಪ್ರೇರೇಪಿಸಿದಲ್ಲದೆ, ದೈಹಿಕ ದೌರ್ಜನ್ಯ ಎಸಗಿರುವ ಬಗ್ಗೆ ಪೋಷಕರು ನೀಡಿದ ದೂರಿನ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ Read More »

ಇರಾನ್‌ನ ಇನ್ನೋರ್ವ ಪ್ರಮುಖ ನಾಯಕನ ಹತ್ಯೆ

ಇಸ್ರೇಲ್‌ ದಾಳಿಗೆ ಬಲಿಯಾದ ಭದ್ರತಾ ಸಚಿವ ಎಸ್ಮಾಯಿಲ್‌ ಖತೀಬ್‌ ನವದೆಹಲಿ : ಇರಾನ್‌ನ ಭದ್ರತಾ ಸಚಿವ ಅಲಿ ಲಾಲಿಜಾರಿಯನ್ನು ಸಾಯಿಸಿದ ಬೆನ್ನಿಗೆ ಇನ್ನೋರ್ವ ಸಚಿವನನ್ನು ಇಸ್ರೇಲ್‌ ಬಲಿತೆಗೆದುಕೊಂಡಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್​ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು ಹೇಡಿತನದ ಹತ್ಯೆ ಎಂದು ಕರೆದಿದ್ದಾರೆ. ಇಸ್ರೇಲ್ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ

ಇರಾನ್‌ನ ಇನ್ನೋರ್ವ ಪ್ರಮುಖ ನಾಯಕನ ಹತ್ಯೆ Read More »

ನದಿಯಲ್ಲಿ ಮುಳುಗಿ ಬಾಲಕ ಸಾವು

ಮುಂಡಾಜೆ: ದ್ವಿತೀಯ ಪಿಯುಸಿಯ ವಿದ್ಯಾರ್ಥಿಯೊಬ್ಬ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಸಮಜಲು ಎಂಬಲ್ಲಿ ನಡೆದಿದೆ. ಮೃತನನ್ನು ನಿಶಾಂತ್ ಎಂದು ಗುರುತಿಸಲಾಗಿದೆ. ಈತ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ. ಮಾ. 18 ರ ಮಧ್ಯಾಹ್ನ ಆತ ಈಜಾಟಕ್ಕೆಂದು ನದಿಗೆ ತೆರಳಿದ್ದು, ಈ ವೇಳೆ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆತನ ಜೊತೆಗಿದ್ದವರು ಅವನನ್ನು ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ದುರದೃಷ್ಟವಶಾತ್ ಅದಾಗಲೇ ಆತ ಸಾವನ್ನಪ್ಪಿದ್ದಾನೆ.

ನದಿಯಲ್ಲಿ ಮುಳುಗಿ ಬಾಲಕ ಸಾವು Read More »

ಮಯೂರ ಜಂಕ್ಷನ್ ರಾಜಕಾಲುವೆ ‌ನಿರ್ಮಾಣದಲ್ಲಿ ಲೋಪ: ಬಿಲ್ ಸ್ಥಗಿತಕ್ಕೆ ಪುಡಾ ಅಧ್ಯಕ್ಷರಿಂದ ‌ಸೂಚನೆ

ಪುತ್ತೂರು: ಮಯೂರ ಜಂಕ್ಷನ್ ಸಮೀಪದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಾಜಕಾಲುವೆ ‌ಡ್ರೈನೇಜ್ ಮತ್ತು ಸ್ಲಾಬ್ ‌ಕಾಮಗಾರಿಯಲ್ಲಿ ಅಕ್ರಮದ ವಾಸನೆ ಬಡಿದಿದ್ದು, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ಅವರಿಗೆ ತಕ್ಷಣವೇ ಈ ಕೆಲಸದ ಬಿಲ್ ಸ್ಥಗಿತ ಮಾಡುವಂತೆ ನಗರಸಭೆಗೆ ಸೂಚಿಸಲಾಗಿದೆ. ಆರಂಭದಿಂದಲೂ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ರಾಮಚಂದ್ರ ಅವರು ನಿರಂತರ ಪರಿಶೀಲನೆ ನಡೆಸುತ್ತಿದ್ದರು. ಕಾಮಗಾರಿ ಒಂದು ನಡೆಸುವ ವಾರದ ಮೊದಲು, ಕಬ್ಬಿಣದ ಸರಳುಗಳನ್ನು ಸರಿಯಾಗಿ ಕಟ್ಟಿರುವುದು ಮತ್ತು ಹಲಿಗೆಗಳ ನಡುವಿನ ಸೀಳುಗಳನ್ನು

ಮಯೂರ ಜಂಕ್ಷನ್ ರಾಜಕಾಲುವೆ ‌ನಿರ್ಮಾಣದಲ್ಲಿ ಲೋಪ: ಬಿಲ್ ಸ್ಥಗಿತಕ್ಕೆ ಪುಡಾ ಅಧ್ಯಕ್ಷರಿಂದ ‌ಸೂಚನೆ Read More »

ಹದಿನೈದು ದಿನದ ಹಸುಗೂಸು ಅನುಮಾನಾಸ್ಪದ ಸಾವು: ತಂದೆಯೇ ‌ಕೊಲೆಗೈದಿರುವ ಸಂದೇಹ

ಬೆಳಗಾವಿ: ಹದಿನೈದು ದಿನಗಳ ಹೆಣ್ಣುಗೂಸು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಮಗುವಿನ ತಂದೆಯೇ ವಿಷವುಣಿಸಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಮಗುವನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಹೆರಿಗೆಯ ಬಳಿ ಶೀಲಾ ಅವರು ತವರು ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಶೀಲಾ ಪತಿ ಭೀಮರಾಯ ಹೆಂಡತಿ ಮತ್ತು ಮಗುವನ್ನು ನೋಡಲು ಅಲ್ಲಿಗೆ ಆಗಮಿಸಿದ್ದಾನೆ. ಆತ ಬಂದು ಹೋದ ಕೆಲ ಹೊತ್ತಿನಲ್ಲೇ ಆರೋಗ್ಯವಾಗಿದ್ದ ಮಗು ಏಕಾಏಕಿ ಮೃತಪಟ್ಟಿದೆ. ಈ ಸಾವು ಮನೆಯವರನ್ನು ಬೆಚ್ಚಿ ಬೀಳಿಸಿದೆ. ಈ ವೇಳೆ

ಹದಿನೈದು ದಿನದ ಹಸುಗೂಸು ಅನುಮಾನಾಸ್ಪದ ಸಾವು: ತಂದೆಯೇ ‌ಕೊಲೆಗೈದಿರುವ ಸಂದೇಹ Read More »

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ

ಸವಣೂರು: ಎಸ್ ಎಸ್ ಎಲ್ ಸಿ 2026 ಪರೀಕ್ಷಾ ಕೇಂದ್ರವಾದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಅವರು ದೀಪ ಪ್ರಜ್ವಲನೆಯ ಮೂಲಕ ಪರೀಕ್ಷೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷರ ಶಿವಕುಮಾರ್, ಉಪಧೀಕ್ಷಕಿ ಲಕ್ಷ್ಮೀ, ಪ್ರಶ್ನೆಪತ್ರಿಕೆ ಅಧೀಕ್ಷಕ ಸತೀಶ್ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ Read More »

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ

ನವದೆಹಲಿ: ಕಟ್ಟಡವೊಂದರಲ್ಲಿ ಬೆಂಕಿ ಹತ್ತಿಕೊಂಡು ಒಂಬತ್ತು ಜನರು ಸಜೀವ ಸುಟ್ಟು ಹೋದ ಘಟನೆ ನೈಋತ್ಯ ದೆಹಲಿಯ ಪಾಲಂ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಏಕಾಏಕಿ ಈ ದುರಂತ ಸಂಭವಿಸಿರುವುದಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಕಟ್ಟಡದ ಒಳಗೆ ಜನರು ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ Read More »

error: Content is protected !!
Scroll to Top