ಸುದ್ದಿ

ಮಗುವಿನ ಪರಿಪೂರ್ಣ ಶಿಕ್ಷಣಕ್ಕೆ 4 Qಗಳು

ಬುದ್ಧಿವಂತಿಕೆ ಒಂದೇ ಮಗುವಿನ ಆಸ್ತಿ ಅಲ್ಲ ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಕೇವಲ ಪರೀಕ್ಷೆಯ ಅಂಕಗಳ ಮೂಲಕ ಅಳತೆ ಮಾಡುವ ಕಾಲ ಒಂದಿತ್ತು. ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಬುದ್ಧಿವಂತ, ದಡ್ಡ ಇತ್ಯಾದಿಗಳ ವರ್ಗೀಕರಣ ಆಗ್ತಿತ್ತು.ಆದರೆ ಮುಂದೆ ಗುಣಾತ್ಮಕವಾದ ಶಿಕ್ಷಣದ ಕಾನ್ಸೆಪ್ಟ್ ವಿಸ್ತಾರ ಆಗುತ್ತ ಹೋದಂತೆ ಮಗುವಿನ ಸರ್ವಾಂಗೀಣವಾದ ವಿಕಾಸ ಶಿಕ್ಷಣದ ಉದ್ದೇಶ ಅಂತ ಆಯ್ತು. ಅದರ ಆಧಾರದ ಮೇಲೆ ಮಗುವಿನ ಶಿಕ್ಷಣ ಪರಿಪೂರ್ಣ ಆಗಬೇಕು ಅಂತಾದರೆ ಈ ಕೆಳಗಿನ ನಾಲ್ಕು ಅಂಶಗಳು ಅತಿಮುಖ್ಯ ಎಂದು ಶಿಕ್ಷಣತಜ್ಞರು […]

ಮಗುವಿನ ಪರಿಪೂರ್ಣ ಶಿಕ್ಷಣಕ್ಕೆ 4 Qಗಳು Read More »

ಆಳ್ವಾಸ್‌ ವಿರಾಸತ್: ರಂಗೇರಿಸಿದ ನೃತ್ಯ, ಕಸರತ್ತಿನ ಗಮ್ಮತ್ತು

ಜಾನಪದ-ಶಾಸ್ತ್ರೀಯದ ಸ್ಪಂದನ, ಸಾಹಸ-ಹೆಜ್ಜೆಗಳ ಸಮ್ಮಿಲನ ವಿದ್ಯಾಗಿರಿ (ಮೂಡುಬಿದಿರೆ): ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಭಕ್ತಿಗಾನ ಸುಧೆಯಲ್ಲಿ ಮಿಂದ ಪ್ರೇಕ್ಷಕರನ್ನು ನರ್ತನ ಲೋಕಕ್ಕೆ ಕೊಂಡೊಯ್ದದ್ದು ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ. ಉತ್ತರದ ಹಿಂದೂಸ್ಥಾನಿಗೆ ಶ್ರೋತೃಗಳಾಗಿದ್ದ ವಿರಾಸತ್ ಪ್ರೇಕ್ಷಕರು ಪಶ್ಚಿಮದ ಜಾನಪದಕ್ಕೆ ವೀಕ್ಷಕರಾದರು. ದೇಶದ ಪಶ್ಚಿಮ ತೀರದ ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ ನರ್ತಿಸುವ ಜಾನಪದ ನೃತ್ಯವೇ ಗರ್ಭಾ. ಗುಜರಾತ್‌ನ ರಂಗ್ ಮಲಹರ್ ತಂಡ ಸದಸ್ಯರು

ಆಳ್ವಾಸ್‌ ವಿರಾಸತ್: ರಂಗೇರಿಸಿದ ನೃತ್ಯ, ಕಸರತ್ತಿನ ಗಮ್ಮತ್ತು Read More »

ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ಆಳ್ವಾಸ್ ವಿರಾಸತ್-2024 ಪ್ರಶಸ್ತಿ ಪ್ರದಾನ

ವಿದ್ಯಾಗಿರಿ (ಮೂಡುಬಿದಿರೆ): ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 30ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಬುಧವಾರ ಸಂಜೆ ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನಿಸಲಾಯಿತು. ಬಡವರು, ದೀನದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ ಎಂದು ಪಂಡಿತ್ ವೆಂಕಟೇಶ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕರಾಗಿ ನುಡಿದರು. ಶಿಸ್ತು, ಸಂಯಮ, ಸಮಯ

ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ಆಳ್ವಾಸ್ ವಿರಾಸತ್-2024 ಪ್ರಶಸ್ತಿ ಪ್ರದಾನ Read More »

ಮಂಗಳೂರು: ಮಸೀದಿ ಧ್ವನಿವರ್ಧಕವನ್ನು 7 ಗಂಟೆಗೇ ಬಂದ್‌ ಮಾಡಿಸಿದ ಪೊಲೀಸರು

ಧಾರ್ಮಿಕ ಕಾರ್ಯಕ್ರಮಕ್ಕೆ ಪೊಲೀಸರಿಂದ ಅಡ್ಡಿ ಎಂದು ಮುಖಂಡರ ಆಕ್ರೋಶ ಮಂಗಳೂರು : ಉಳ್ಳಾಲ ಸಮೀಪದ ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಅನುಮತಿ ಇರುವ ಸಮಯದಲ್ಲೇ ಮೈಕ್ ಬಳಸಿದ್ದರೂ ಪೊಲೀಸರು ತಡೆದಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಹೇಳಿದೆ. ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಸಂಜೆ 7 ಗಂಟೆ ವೇಳೆಗೆ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲಾಗಿತ್ತು. ಇದೇ ವೇಳೆ ಅನುಮಾನಾಸ್ಪದ ಚಟುವಟಿಕೆ

ಮಂಗಳೂರು: ಮಸೀದಿ ಧ್ವನಿವರ್ಧಕವನ್ನು 7 ಗಂಟೆಗೇ ಬಂದ್‌ ಮಾಡಿಸಿದ ಪೊಲೀಸರು Read More »

ಮುರುಡೇಶ್ವರ ದುರಂತ : 7 ಶಿಕ್ಷಕರು ಪೊಲೀಸ್‌ ವಶಕ್ಕೆ

ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ ಕಾರವಾರ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದಿಂದ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಆಟವಾಡುವಾಗ ನೀರು ಪಾಲಾಗಿ ಸಾವನ್ನಪ್ಪಿದ್ದು, ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬೀಚ್‌ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಶಿಕ್ಷಕರ ವಿರುದ್ಧ ನಾಲ್ವರು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುರುಡೇಶ್ವರದಲ್ಲಿ ಪ್ರವಾಸಿಗರು

ಮುರುಡೇಶ್ವರ ದುರಂತ : 7 ಶಿಕ್ಷಕರು ಪೊಲೀಸ್‌ ವಶಕ್ಕೆ Read More »

ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್‌ ಡಿಕ್ಕಿ : ಇಬ್ಬರು ಸಾವು

ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆ ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಪಾದಯಾತ್ರೆ ನಡೆಸುತ್ತಿದ್ದ ತಂಡ ಮಂಗಳೂರು: ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ತಂಡದಲ್ಲಿದ್ದ ಇಬ್ಬರುಗುಜರಾತಿನಲ್ಲಿ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ನಿನ್ನೆ ಸಂಭವಿಸಿದೆ. ಇವರಲ್ಲಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಪಾದಯಾತ್ರಿಗಳು ನಿನ್ನೆ ಮಧ್ಯಾಹ್ನ ಮಾರುತಿ ಓಮ್ನಿ ಕಾರಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಟ್ರಕ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,

ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್‌ ಡಿಕ್ಕಿ : ಇಬ್ಬರು ಸಾವು Read More »

ಪುರುಷ ಶೋಷಣೆಯ ಕರಾಳ ಮುಖವನ್ನು ಅನಾವರಣಗೊಳಿಸಿದ ಟೆಕ್ಕಿ ಆತ್ಮಹತ್ಯೆ

ಲಿಂಗ ತಟಸ್ಥ ಕಾನೂನು ರಚನೆಗೆ ಆಗ್ರಹ ಬೆಂಗಳೂರು: ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಅತುಲ್‌ ಸುಭಾಶ್‌ ಆತ್ಮಹತ್ಯೆ ಪ್ರಕರಣ ದೇಶವ್ಯಾಪಿ ಹೆಂಡತಿಯಿರಿಂದ ಗಂಡಂದಿರ ಮೇಲಾಗುತ್ತಿರುವ ಶೋಷಣೆಯ ಕುರಿತು ಚರ್ಚೆ ಹುಟ್ಟು ಹಾಕಿದೆ. ಕೌಟುಂಬಿಕ ಕಾನೂನುಗಳನ್ನು ಬಳಸಿ ಪುರುಷರ ವಿರುದ್ಧ ಸುಳ್ಳು ಕೇಸ್‌ ದಾಖಲಿಸಿ ಜೀವನಾಂಶದ ರೂಪದಲ್ಲಿ ಹಣ ಸುಲಿಯುವ ಕುರಿತು ಚರ್ಚೆ ನಡೆಯುತ್ತಿದೆ. ಅಂತೆಯೇ ದೇಶದ ಕಾನೂನುಗಳು ಹೇಗೆ ಮಹಿಳಾ ಪಕ್ಷಪಾತಿಗಳಾಗಿವೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಅತುಲ್‌ ಸುಭಾಶ್‌ ಪ್ರಕರಣ ಸುಪ್ರೀಂ ಕೋರ್ಟ್‌ ಮತ್ತು ಸಂಸತ್ತಿನ ತನಕ

ಪುರುಷ ಶೋಷಣೆಯ ಕರಾಳ ಮುಖವನ್ನು ಅನಾವರಣಗೊಳಿಸಿದ ಟೆಕ್ಕಿ ಆತ್ಮಹತ್ಯೆ Read More »

ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ

ಮುರುಡೇಶ್ವರ: ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಕೋಲಾರ ಶಾಲೆಯ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ. , ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಬೋಟ್ ಮೂಲಕ ಮೂವರ ಮೃತ ದೇಹವನ್ನು ಹೊರತೆಗೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಿನ್ನೆ ಘೋರ ದುರಂತ ಒಂದು ಸಂಭವಿಸಿದ್ದು ಕೋಲಾರ ಜಿಲ್ಲೆಯ  ಮುಳಬಾಗಿಲು ತಾಲೂಕಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಮೂವರು ವಿದ್ಯಾರ್ಥಿನಿಯರು ಸಮುದ್ರಗಳ ಅಲೆ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇದರಲ್ಲಿ ಮೂವರನ್ನು

ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆ Read More »

ಬಾರದ ಯುವಕನಿಗೆ ಮಾತು ಕೊಟ್ಟ ಮಣಿಕಂಠ|ಮಾಲಾಧಾರನಿಗೆ ಸ್ವಾಮಿ ಶರಣೂ ಅನ್ನೋ ಭಾಗ್ಯ

ಪುತ್ತೂರು: ಅಯ್ಯಪ್ಪ ಸ್ವಾಮಿಯ ಮಹಿಮೆ ಎಂತದ್ದು ಅನ್ನೋದು ಅಯ್ಯಪ್ಪ ಭಕ್ತರಿಗೆ ಅರಿವಾಗಿರುತ್ತದೆ. ಶಬರಿ ಮಲೆಯ ಅಯ್ಯಪ್ಪನ ಲೀಲೆಗಳ ಕಥೆಗಳನ್ನು , ಅಥವಾ ಪವಾಡಗಳನ್ನು ಕೇಳೀರುತ್ತೇವೆ, ಇದೇ ಕಾರಣಕ್ಕಾಗಿಯೇ ಅಯ್ಯಪ್ಪ ಸ್ವಾಮಿಯ ಪ್ರಮುಖ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತೆಲೇ ಇರುತ್ತದೆ. ಅಯ್ಯಪ್ಪನ  ಮಹಿಮೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.  ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ

ಬಾರದ ಯುವಕನಿಗೆ ಮಾತು ಕೊಟ್ಟ ಮಣಿಕಂಠ|ಮಾಲಾಧಾರನಿಗೆ ಸ್ವಾಮಿ ಶರಣೂ ಅನ್ನೋ ಭಾಗ್ಯ Read More »

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ

ದೇಶ-ವಿದೇಶಗಳ ಅದ್ಭುತ ಕಲಾಪರಂಪರೆ ಮೂಡುಬಿದಿರೆಯಲ್ಲಿ ಅನಾವರಣ ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ನಡೆದ ದೇಶ-ವಿದೇಶಗಳ ಅದ್ಭುತ ಕಲಾಪರಂಪರೆಯನ್ನು ಧರೆಗಿಳಿಸಿ ಸಾರ್ಥಕವಾಯಿತು. ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ, ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳು ಮಾತ್ರವಲ್ಲದೆ ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.

ವಿರಾಸತ್‌ ಭವ್ಯ ಮೆರವಣಿಗೆ : ಧರೆಗಿಳಿದು ಬಂದ ಕಲಾಲೋಕ Read More »

error: Content is protected !!
Scroll to Top