ಸುದ್ದಿ

ರೈಲಿನಲ್ಲಿ ಹೃದಯಘಾತವಾಗಿ ವ್ಯಕ್ತಿ ಮೃತ್ಯು

ಮಂಗಳೂರು : ರೈಲಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಹೃದಯಘಾತವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೇ.17ರ ಮಧ್ಯಾಹ್ನ 3:30ರ ಸುಮಾರಿಗೆ ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‍ ನ ಜನರಲ್ ಕೋಚ್ ನಲ್ಲಿ ಕುಳಿತಿದ್ದ ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಹೃದಯಾಘಾತವಾಗಿದೆ. ತಕ್ಷಣ  ಆರ್‍ಪಿಎಫ್‍ ಇನ್ಸ್‍ಪೆಕ್ಟರ್‍ ಮನೋಜ್‍ ಕುಮಾರ್‍ ಯಾದವ್‍ ಮತ್ತು ಸಿಬ್ಬಂದಿಗಳು ವ್ಯಕ್ತಿಗೆ ಸಿಪಿ ಆರ್‍ ಕೊಡಿಸಿ ಸರ್ಕಾರಿ ವೆನ್ಲಾಕ್‍ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ  ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೈಲಿನಲ್ಲಿ ಹೃದಯಘಾತವಾಗಿ ವ್ಯಕ್ತಿ ಮೃತ್ಯು Read More »

ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ : ಬಿಜೆಪಿ ಮಾಜಿ ಕಾರ್ಪೋರೇಟರ್‌ ವಿರುದ್ಧ ಕೇಸ್‌

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಆಕ್ಷೇಪಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಮಾಜಿ ಕಾರ್ಪೋರೇಟರ್ ಶ್ವೇತಾ ಪೂಜಾರಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವೇತಾ ಪೂಜಾರಿ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ ಗುಂಡುರಾವ್ ಇವರ ಭಾವ ಚಿತ್ರದ ಕೆಳಗಡೆ ಅವಹೇಳನಕಾರಿ ಪೋಸ್ಟ್, ಮಾಡಿರುವ ಆಧಾರದಲ್ಲಿ ಸುರತ್ಕಲ್

ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ : ಬಿಜೆಪಿ ಮಾಜಿ ಕಾರ್ಪೋರೇಟರ್‌ ವಿರುದ್ಧ ಕೇಸ್‌ Read More »

ಪಾಕ್‌ ಪರ ಗೂಢಚಾರಿಕೆ : ಉತ್ತರ ಪ್ರದೇಶದ ಉದ್ಯಮಿ ಬಂಧನ

ವ್ಯಾಪಾರದ ನೆಪದಲ್ಲಿ ಪಾಕ್‌ಗೆ ಪ್ರಯಾಣಿಸಿ ಮಾಹಿತಿ ನೀಡುತ್ತಿದ್ದ ಪಾತಕಿ ಲಖನೌ: ಪಾಕಿಸ್ಥಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್‌ ಜ್ಯೋತಿ ಬಂಧನ ಬಳಿಕ ದೇಶಾದ್ಯಂತ ಬೇಹಾಗಾರಿಕೆ ನಡೆಸುತ್ತಿರುವವರ ಹುಡುಕಾಟ ನಡೆಯುತ್ತಿದ್ದು, ಇದೇ ಆರೋಪದಲ್ಲಿ ಉದ್ಯಮಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ಥಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿಯ ನಂತರ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮೊರಾದಾಬಾದ್‌ನಲ್ಲಿ ಆರೋಪಿ ಶಹಜಾದ್‌ನನ್ನು ಬಂಧಿಸಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ

ಪಾಕ್‌ ಪರ ಗೂಢಚಾರಿಕೆ : ಉತ್ತರ ಪ್ರದೇಶದ ಉದ್ಯಮಿ ಬಂಧನ Read More »

ನಿಲ್ಲಿಸಿದ ಕಾರಿನೊಳಗೆ ಉಸಿರುಕಟ್ಟಿ ನಾಲ್ವರು ಮಕ್ಕಳು ಸಾವು

ಆಟವಾಡುತ್ತಾ ಕಾರಿನೊಳಗೆ ಹೋದ ಮಕ್ಕಳ ದುರಂತ ಅಂತ್ಯ ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಿಲುಕಿ ಮೂವರು ಬಾಲಕಿಯರು ಸೇರಿದಂತೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಎಷ್ಟು ಹೊತ್ತಾದರೂ ಮಕ್ಕಳು ಬಾರದ ಕಾರಣ ಪೋಷಕರು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಹುಡುಕಿದ ನಂತರ ಕಾರಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ. ಬಳಿಕ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರಗೆ ತಂದಿದ್ದಾರೆ. ಕೂಡಲೇ

ನಿಲ್ಲಿಸಿದ ಕಾರಿನೊಳಗೆ ಉಸಿರುಕಟ್ಟಿ ನಾಲ್ವರು ಮಕ್ಕಳು ಸಾವು Read More »

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಬಹಿಷ್ಕರಿಸಿದ ಟೀಮ್‌ ಇಂಡಿಯಾ

ಪಾಕಿಸ್ಥಾನ ಇರುವ ಐಸಿಸಿಯ ಯಾವುದೇ ಟೂರ್ನಿಯಲ್ಲಿ ಆಡದಿರಲು ನಿರ್ಧಾರ ಮುಂಬಯಿ: ಭಾರತ-ಪಾಕಿಸ್ಥಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಏಷ್ಯಾಕಪ್‌ ಟೂರ್ನಿಯಿಂದ ಹಿಂದೆ ಸರಿಯಲು ಬಿಸಿಸಿಐ ನಿರ್ಧರಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಎಲ್ಲ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. ಶ್ರೀಲಂಕಾದಲ್ಲಿ ಮುಂದಿನ ತಿಂಗಳಿಂದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಬಹಿಷ್ಕರಿಸಿದ ಟೀಮ್‌ ಇಂಡಿಯಾ Read More »

ಧರ್ಮಸ್ಥಳದ ಯುವತಿಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌

ಕೊಲೆಯಲ್ಲ ಆತ್ಮಹತ್ಯೆ ಎಂದ ಪೊಲೀಸರು ಮಂಗಳೂರು: ಪಂಜಾಬಿನಲ್ಲಿ ಧರ್ಮಸ್ಥಳದ ಯುವತಿಯ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳದ ಏರೋನಾಟಿಕ್ಸ್ ಇಂಜಿನಿಯರ್ ಯುವತಿ ಆಕಾಂಕ್ಷಾ ನಾಯರ್‌ ಎಂಬವರು ಪಂಜಾಬಿನಲ್ಲಿ ನಿಗೂಢವಾಗಿ ಸಾವಿಘಿಡಾಗಿರುವುದು ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು.ಯುವತಿ ಆಕಾಂಕ್ಷಾ ಎಸ್ ನಾಯರ್ (22) ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಂಜಾಬ್‌ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಧರ್ಮಸ್ಥಳದ ಬೊಳಿಯೂರು ನಿವಾಸಿಯಾಗಿರುವ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್. ನಾಯರ್

ಧರ್ಮಸ್ಥಳದ ಯುವತಿಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌ Read More »

ಖ್ಯಾತ ನಟಿ ಕೊಲೆ ಆರೋಪದಲ್ಲಿ ಸೆರೆ

ದೇಶಬಿಟ್ಟು ಹೋಗಲು ಯತ್ನಿಸಿದಾಗ ವಿಮಾನ ನಿಲ್ದಾಣದಲ್ಲಿ ಬಂಧನ ಢಾಕಾ : ದೇಶಭ್ರಷ್ಟ ಮಾಜಿ ಪ್ರಧಾನಿ ಶೇಖ್‌ ಹಸಿನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾದೇಶದ ಖ್ಯಾತ ನಟಿ ನುಸ್ರತ್ ಫಾರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿಯ ವಿರುದ್ಧ ವಿದ್ಯಾರ್ಥಿಯೊಬ್ಬನ ಹತ್ಯೆಗೆ ಯತ್ನಿಸಿದ ಆರೋಪ ಹೊರಿಸಲಾಗಿದೆ. ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನುಸ್ರತ್ ಫಾರಿಯಾ ಥಾಯ್ಲೆಂಡ್​ಗೆ ಹೋಗಲು ಯತ್ನಿಸುತ್ತಿದ್ದಾಗ ಈ ಬಂಧನ ಆಗಿದ್ದು, ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ನಟಿಯ ವಿರುದ್ಧ ಈ

ಖ್ಯಾತ ನಟಿ ಕೊಲೆ ಆರೋಪದಲ್ಲಿ ಸೆರೆ Read More »

ಹೈದರಾಬಾದ್‌ನಲ್ಲಿ ಬಾಂಬ್‌ ಸ್ಫೋಟಿಸಲು ಯತ್ನಿಸಿದ ಇಬ್ಬರು ಉಗ್ರರ ಸೆರೆ

ಸ್ಫೋಟಕಗಳನ್ನು ಸಂಗ್ರಹಿಸಿ ಬಾಂಬ್‌ ತಯಾರಿಸುತ್ತಿದ್ದ ಐಸಿಸ್‌ ಉಗ್ರರು ಹೈದರಾಬಾದ್‌: ಹೈದರಾಬಾದ್‌ ನಗರದಲ್ಲಿ ಬಾಂಬ್‌ ಸ್ಫೋಟಿಸುವ ಸಂಚನ್ನು ವಿಫಲಗೊಳಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ವಿಜಯನಗರಂನ ಸಿರಾಜ್‌ ಮತ್ತು ಹೈದರಾಬಾದ್‌ನ ಸಮೀರ್‌ ಸೆರೆಯಾಗಿರುವ ಉಗ್ರರು. ಸೌದಿ ಅರೇಬಿಯದ ಐಸಿಸ್‌ ಉಗ್ರರ ಸಂಘಟನೆಯ ಸೂಚನೆಯ ಮೇರೆಗೆ ಇವರಿಬ್ಬರು ಹೈದರಾಬಾದ್‌ ನಗರದಲ್ಲಿ ಬಾಂಬ್‌ ಸ್ಫೋಟಿಸಲು ಯೋಜನೆ ಹಾಕಿಕೊಂಡಿದ್ದರು. ಹೈದರಾಬಾದ್‌ ಮತ್ತು ತೆಲಂಗಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅವರ ಸಂಚು ವಿಫಲಗೊಂಡಿದೆ. ಸಿರಾಜ್‌ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡು ಬಾಂಬ್‌ ತಯಾರಿಸುವ

ಹೈದರಾಬಾದ್‌ನಲ್ಲಿ ಬಾಂಬ್‌ ಸ್ಫೋಟಿಸಲು ಯತ್ನಿಸಿದ ಇಬ್ಬರು ಉಗ್ರರ ಸೆರೆ Read More »

ಗುಲ್ಜಾರ್‌ ಹೌಸ್‌ನಲ್ಲಿ ಭೀಕರ ಅಗ್ನಿ ಅವಘಡ : 17 ಮಂದಿ ಜೀವಂತ ದಹನ

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ದುರಂತ ಹೈದರಾಬಾದ್: ಇಲ್ಲಿನ ಚಾರ್‌ಮಿನಾರ್ ಬಳಿಯಿರುವ ಗುಲ್ಜಾರ್ ಹೌಸ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 17 ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ.ಮುಂಜಾನೆ 5.30ರ ಸುಮಾರಿಗೆ ಬೆಂಕಿಹತ್ತಿಕೊಂಡಿದೆ. ಗುಲ್ಜಾರ್ ಹೌಸ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಇರುವ ಶಂಕೆಯಿದ್ದು, ಬೆಂಕಿ ಅವಘಡದ ಪರಿಣಾಮ ಉಸಿರಾಟದ ತೊಂದರೆಯಿಂದಾಗಿ 16ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ರಾಜೇಂದ್ರ ಕುಮಾರ್ (67), ಅಭಿಷೇಕ್ ಮೋದಿ, ಸುಮಿತ್ರಾ, ಮುನ್ನಿಬಾಯ್, ಆರುಷಿ ಜೈನ್,

ಗುಲ್ಜಾರ್‌ ಹೌಸ್‌ನಲ್ಲಿ ಭೀಕರ ಅಗ್ನಿ ಅವಘಡ : 17 ಮಂದಿ ಜೀವಂತ ದಹನ Read More »

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸುವ ಸಂದೇಶ ಪ್ರಕಟ ಬೆಂಗಳೂರು: ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಹೇಳಿಕೆ ಪ್ರಕಟಿಸಿದ ಬೆಂಗಳೂರಿನ ಕೋರಮಂಗಲದ ಜಿ.ಎಸ್​.ಸೂಟ್​ ಹೋಟೆಲ್‌ನ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ. ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ನಗರದ ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿರುವ ಈ ಹೋಟೆಲ್‌ನಲ್ಲಿ ನಿನ್ನೆ ಕನ್ನಡಿಗರಿಗೆ ಅಪಮಾನ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಮ್ಮ‌ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ.‌ ಪದೇಪದೇ ಕನ್ನಡಿಗರನ್ನು ಕೆರಳಿಸುತ್ತಿದ್ದಾರೆ ಎಂದು

ಕನ್ನಡಿಗರನ್ನು ಅವಮಾನಿಸಿದ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ Read More »

error: Content is protected !!
Scroll to Top