ಸುದ್ದಿ

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ

ಸುಳ್ಯ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (40), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರಿನಿಂದ ಖರೀದಿಸಿ, ಅನುಮತಿ ಪಡೆಯದೆ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್ […]

ಸುಳ್ಯ: ಗೋವು ಅಕ್ರಮ ಸಾಗಿಸುತ್ತಿದ್ದ ಮೂವರು ಸೆರೆ Read More »

ಒಂದನೇ ತರಗತಿ ದಾಖಲಾಗಲು ವಯೋಮಿತಿ ಸಡಿಲಿಕೆ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ ಪ್ರಕಟ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯಿಸುವಂತೆ ಕರ್ನಾಟಕದಲ್ಲಿ ಒಂದನೇ ತರಗತಿಗೆ ದಾಖಲಾಗಲು ಇದ್ದ 6 ರ ವಯೋಮಿತಿಯನ್ನು ಸಡಿಲಿಸಿರುವುದಾಗಿ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ಸಂಬಂಧ ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಒಂದನೇ ತರಗತಿಗೆ ದಾಖಲಾಗಲು ಇದ್ದ 6 ವರ್ಷದ ಮಿತಿಯನ್ನು 5 ವರ್ಷ 10 ತಿಂಗಳಿಗೆ ಸಡಿಲಿಕೆ ಮಾಡಲಾಗುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಗೂ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ನೀಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ.

ಒಂದನೇ ತರಗತಿ ದಾಖಲಾಗಲು ವಯೋಮಿತಿ ಸಡಿಲಿಕೆ: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ ಪ್ರಕಟ Read More »

ಎ. 6 : ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ

ಕಡಬ: ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ಸನ್ನಿಧಿ ಕುದ್ಮಾರು ಇಲ್ಲಿ ಎ. 6 ರಂದು ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಜರುಗಲಿದೆ. ಎ. 6 ರಂದು ಸಂಜೆ ಗಂಟೆ 6 ಕ್ಕೆ ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7 ರಿಂದ ಗುಳಿಗ ದೈವದ ನೇಮ ರಾತ್ರಿ ಗಂಟೆ 9 ರಿಂದ ಅನ್ನಸಂತರ್ಪಣೆ ರಾತ್ರಿ ಗಂಟೆ 10 ರಿಂದ ಕಲ್ಲುರ್ಟಿ ದೈವದ ನೇಮ ನಡೆಯಲಿದೆ. ಹಾಗೆಯೇ ಎ. 7 ರಂದು ಬೆಳಿಗ್ಗೆ

ಎ. 6 : ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ Read More »

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ

ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಸಂಘ, ಪುತ್ತೂರು ಇದರ ಅಧ್ಯಕ್ಷಪುರಂಧರ ಭಟ್ ಬಿ. ಇವರು ಅಂಕುರ ಭಿತ್ತಿಪತ್ರಿಕೆಯ ಅನಾವರಣ ಮಾಡಿ, ದೀಪ ಪ್ರಜ್ವಲನೆಗೈದರು. ಬಳಿಕ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳಲ್ಲಿನ ನೆನಪನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಅಂಕುರ ಹೆಮ್ಮರವಾಗುವಂತೆ ನಿಮ್ಮ ಭವಿಷ್ಯವು ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಉಮೇಶ್ ನಾಯಕ್

ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ ಅಂಕುರ ಭಿತ್ತಿಪತ್ರ ಅನಾವರಣ Read More »

ಉಗ್ರರ ಜೊತೆ ನಂಟು: ಬಳ್ಳಾರಿಯ ಅಬ್ದುಲ್ ಸಲಾಮ್‌ನನ್ನು ಬಂಧಿಸಿದ ವಿಜಯವಾಡ ಪೊಲೀಸರು

ಬಳ್ಳಾರಿ: ಆನ್‌ಲೈನಿನಲ್ಲಿ ‌ಮೂಲಭೂತವಾದದ ಬಗ್ಗೆ ಪ್ರಚಾರ, ಉಗ್ರರ ಜೊತೆ ನಂಟು ಹೊಂದಿರುವ ಆರೋಪದಲ್ಲಿ ದೇಶದಲ್ಲಿ 12 ಯುವಕರನ್ನು ಬಂಧಿಸಲಾಗಿದ್ದು, ಇದರಲ್ಲಿ ಓರ್ವ ಬಂಧಿತ ಬಳ್ಳಾರಿಯವ ಎಂದು ತಿಳಿದು ಬಂದಿದೆ. ಶಂಕಿತನನ್ನು ಬಳ್ಳಾರಿಯ ಅಬ್ದುಲ್ ಸಲಾಮ್ (36) ಎಂದು ಗುರುತಿಸಲಾಗಿದೆ. ಕರ್ನಾಟಕ, ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಜಯವಾಡ ಪೊಲೀಸರು ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು, ಉಗ್ರವಾದದ ಬಗ್ಗೆ ಪ್ರಚಾರ ಮಾಡುತ್ತಿರುವ ಹಿನ್ನೆಲೆ ಆರೋಪಿ

ಉಗ್ರರ ಜೊತೆ ನಂಟು: ಬಳ್ಳಾರಿಯ ಅಬ್ದುಲ್ ಸಲಾಮ್‌ನನ್ನು ಬಂಧಿಸಿದ ವಿಜಯವಾಡ ಪೊಲೀಸರು Read More »

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್

ಬೆಂಗಳೂರು: ವಿದ್ರಾರ್ಥಿನಿಯೊಬ್ಬಳಿಗೆ ಪ್ರೊಫೆಸರ್ ಒಬ್ಬ ತರಗತಿ ನಡೆಯುತ್ತಿರುವಾಗಲೇ ಲವ್ ಪ್ರೊಪೋಸ್ ಮಾಡಿದ್ದು, ಇದು ವಿವಾದ ಸೃಷ್ಟಿ ಮಾಡಿದೆ. ಪ್ರತಿಷ್ಟಿತ ಮೆಡಿಕಲ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ಪ್ರೊ. ಅಬ್ದುಲ್ಲಾ ಎಂಬಾತ ಚಾಕೊಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆಯನ್ನು ತರಗತಿಯಲ್ಲೇ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಆಕ್ರೋಶದಿಂದ ಆತನನ್ನು ಪ್ರಶ್ನೆ ಮಾಡಿದ್ದಾಳೆ. ಘಟನೆಯಿಂದ ವಿವಾದ ಉಂಟಾಗಿತ್ತು, ಬೇರೆ ವಿದ್ಯಾರ್ಥಿಗಳು ಸಹ ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆತನನ್ನು ಹಿಂಬಾಲಿಸಿ ಕ್ಯಾಂಪಸ್ ನಲ್ಲೇ ಹೊಡೆದಿರುವ ಘಟನೆ ಸಹ ನಡೆದಿದೆ. ಪರಿಸ್ಥಿತಿ

ತರಗತಿಯಲ್ಲೇ ‌ವಿದ್ಯಾರ್ಥಿನಿಗೆ ಲವ್ ಪ್ರೊಪೋಸ್ ಮಾಡಿದ ಪ್ರೊಫೆಸರ್ Read More »

ಬಸ್ – ಟಿಪ್ಪರ್ ‌ಅಪಘಾತ: ಹೊತ್ತಿಕೊಂಡ ಬೆಂಕಿಯಲ್ಲಿ ಹತ್ತು ಮಂದಿ ಸಜೀವ ದಹನ

ಹೈದರಾಬಾದ್: ಬಸ್‌ ಮತ್ತು ಟಿಪ್ಪರ್ ಢಿಕ್ಕಿ ಹೊಡೆದು ಎರಡೂ ವಾಹನಗಳಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಮಾರು 10 ಮಂದಿ ಸಜೀವ ದಹನವಾದ ಘಟನೆ ಮಾರ್ಕಪುರಂ ಬಳಿಯ ರಾಯವರಂ ಎಂಬಲ್ಲಿ ನಡೆದಿದೆ. ಹರಿಕೃಷ್ಣ ಟ್ರಾವೆಲ್ಸ್‌ಗೆ ‌ಸೇರಿದ ಬಸ್ಸು ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದಿದೆ. ಈ ದುರಂತದಲ್ಲಿ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿದೆ. ಘಟನೆಯಲ್ಲಿ 10 ಮಂದಿ ಸಜೀವವಾಗಿ ಸುಟ್ಟು ಹೋಗಿದ್ದಾಗಿ ತಿಳಿದು ಬಂದಿದೆ. ಬೆಳಗ್ಗೆ ಸುಮಾರು 6 ರಿಂದ

ಬಸ್ – ಟಿಪ್ಪರ್ ‌ಅಪಘಾತ: ಹೊತ್ತಿಕೊಂಡ ಬೆಂಕಿಯಲ್ಲಿ ಹತ್ತು ಮಂದಿ ಸಜೀವ ದಹನ Read More »

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ

ಬಂಟ್ವಾಳ: ಕೆಲಸಕ್ಕೆಂದು ತೆರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಅರಳ ಗ್ರಾಮದ ಮುಲಾರಪಟ್ಟದಲ್ಲಿ ನಡೆದಿದೆ. ಮುಲ್ಲಾರಪಟ್ಟ ಆಝಾದ್ ನಗರದನಿವಾಸಿ ಅಬ್ದುಲ್ ರಶೀದ್‌ರವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ. ಪಿಯುಸಿ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಬಿ.ಸಿ.ರೋಡ್ ನ ಸೈಬರ್ ಸೆಂಟರ್ ನಲ್ಲಿ ಕೆಲಸ ಮಾಡಿತ್ತಿದ್ದರು. ಎಂದಿನಂತೆ ಮಾ.24ರಂದು ಕೆಲಸಕ್ಕೆಂದು ತೆರಳಿದ ಫಾತಿವiತ್ ಇಪ್ರಾ ಸಂಜೆಯಾದರು ಮನೆಗೆ ಬಾರದಿರುವುದನ್ನು ಕಂಡು ಗಾಬರಿಗೊಂಡ ಪೋಷಕರು ಆಕೆ ಕೆಲಸ ಮಾಡುವ ಸೈಬರ್ ಸೆಂಟರ್ ನ ಮಾಲೀಕ ಮನ್ನೂರ್ ಅವರ

ಕೆಲಸಕ್ಕೆಂದ್ದು ಹೊರಟು ಹೋದ ಯುವತಿ ನಾಪತ್ತೆ Read More »

ಭಾರತ ಪಾಕಿಸ್ತಾನದಂತೆ ದಲ್ಲಾಳಿಯಲ್ಲ: ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರದ ತಿರುಗೇಟು

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನ ನಡೆಸಬೇಕಿತ್ತು ಎಂಬ ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರ ತಕ್ಕ ತಿರುಗೇಟು ನೀಡಿದೆ. ಕೇಂದ್ರ ಸರ್ಕಾರದ ಸರ್ವಪಕ್ಷ ಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ‌ ವಿದೇಶಾಂಗ ಸಚಿವ ಎಸ್. ಜೈಶಂಕರ್, ಯುದ್ಧ ನಿಲ್ಲಿಸುವಂತೆ ಮಾತುಕತೆ ನಡೆಸಲು ಭಾರತ‌ವು ಪಾಕಿಸ್ತಾನದ ಹಾಗೆ ದಲ್ಲಾಳಿಯಲ್ಲ. ಈ ಸಂಘರ್ಷದಿಂದ ಎಲ್ಲರಿಗೂ ತೊಂದರೆಯಾಗುತ್ತಿದ್ದು, ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಮೋದಿ ಹೇಳಿದ್ದಾರೆ. ಪಾಕಿಸ್ಥಾನವು ಮಧ್ಯಸ್ಥಿಕೆ ವಹಿಸುತ್ತಿರುವುದು ಹೊಸ ವಿಚಾರವೇನಲ್ಲ. 1981ರಿಂ ದಲೂ ಅಮೆರಿಕವು

ಭಾರತ ಪಾಕಿಸ್ತಾನದಂತೆ ದಲ್ಲಾಳಿಯಲ್ಲ: ವಿಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರದ ತಿರುಗೇಟು Read More »

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ

ವಿಟ್ಲ: ಇಲ್ಲಿನ ಕಾಶಿಮಠ ಪೆಟ್ರೋಲ್ ಪಂಪ್ ಬಳಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಲ್ಲಕಟ್ಟ ನಿವಾಸಿ ರತ್ನಕರ್ ಎಂಬುವವರು ಗಾಯಗೊಂಡಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡ ರತ್ನಾಕರ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಟ್ಲ: ಬೈಕ್ – ಲಾರಿ ನಡುವೆ ಡಿಕ್ಕಿ Read More »

error: Content is protected !!
Scroll to Top