ಸುದ್ದಿ

ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಿನಂಗಡಿ ಸಮೀಪದ‌ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಏ. ‌13 ಭಾನುವಾರದಂದು ನಡೆಯಲಿರುವ ಶ್ರೀ ಮಹಾವಿಷ್ಣು ಯಾಗ ಮತ್ತು ಧಾರ್ಮಿಕ ಸಂಭೆಯ ಆಮಂತ್ರಣ ಪತ್ರಿಕೆ ಬಿಡುಗಡೆಯಾಯಿತು. ಶ್ರೀ ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯರ ಪ್ರಾರ್ಥನೆಯೊಂದಿಗೆ ಆಡಳಿತ ಟ್ರಸ್ಟ್ ಉಪಾಧ್ಯಕ್ಷ ನಾರಾಯಣ ಗೌಡರು  ಬಿಡುಗಡೆಗೊಳಿಸಿದರು . ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ  ಟ್ರಸ್ಟಿಗಳಾದ  ಮನೋಹರ ಶೆಟ್ಟಿ, ನವೀನ , ರಾಮಣ್ಣಗೌಡ  ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಮಹಾವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಆಲೋವೆರಾ ಜ್ಯೂಸ್ ಎಂದು ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿ | ಚಿಕಿತ್ಸೆ ಫಲಿಸದೆ ಬಾಲಕಿ ಮೃತ್ಯು

ಬೆಂಗಳೂರು : ಆಲೋವೆರಾ ಜ್ಯೂಸ್ ಎಂದು ತಪ್ಪಾಗಿ ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ. ಮೃತಳು 9ನೇ ತರಗತಿಯ ವಿದ್ಯಾರ್ಥಿನಿ 11ನೇ ವರ್ಷದ ಬಾಲಕಿ ನಿಧಿ ಕೃಷ್ಣ ಎಂದು ಹೇಳಲಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನಿಧಿ ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ, ಮನೆಯವರು ಅಲೋವೆರಾ ಜ್ಯೂಸ್‌ನ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಎಂಬ ಕ್ರಿಮಿನಾಶಕ ಔಷಧವನ್ನು ತುಂಬಿದ್ದರು. ಇದರಿಂದ ಮಾ.18ರಂದು ಬಾಲಕಿ ಜ್ಯೂಸ್ ಎಂದು ಭಾವಿಸಿ ಈ ಕ್ರಿಮಿನಾಶಕವನ್ನು

ಆಲೋವೆರಾ ಜ್ಯೂಸ್ ಎಂದು ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿ | ಚಿಕಿತ್ಸೆ ಫಲಿಸದೆ ಬಾಲಕಿ ಮೃತ್ಯು Read More »

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ

ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದ ಪಾಕ್‌ ಸೈನಿಕರು ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗಡಿ ದಾಟಿ ಬರಲು ಯತ್ನಿಸಿದ ಐವರು ಪಾಕಿಸ್ಥಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆಯವರು ಗುಂಡಿಕ್ಕಿ ಸಾಯಿಸಿದ್ದಾರೆ. ಪೂಂಛ್‌ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಷನ್‌ನಲ್ಲಿ ಪಾಕ್‌ ಕಡೆಯಿಂದ ಕದನ ವಿರಾಮ ಉಲ್ಲಂಘಿಸಿ ಗಡಿದಾಟಲು ಯತ್ನಿಸಲಾಗಿತ್ತು. ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 4-5 ಮಂದಿ ಸತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ನಿನ್ನೆ ಬೆಳಗ್ಗಿನಿಂದ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿತ್ತು. ಅತ್ತ ಕಡೆಯಿಂದ ಪಾಕ್‌ ಸೈನಿಕರು ಗುಂಡು

ಗಡಿಯಲ್ಲಿ ಐವರು ನುಸುಳುಕೋರರು ಸೇನೆಯ ಗುಂಡಿಗೆ ಬಲಿ Read More »

ಗೋಲ್ಡ್‌ ಸ್ಮಗ್ಲಿಂಗ್‌ ಆರೋಪಿ ನಟಿ ರನ್ಯಾಳಿಂದ ವಿಚ್ಚೇದನ ಕೋರಿದ ಪತಿ

ಮದುವೆಯ ಬಳಿಕ ದಾಂಪತ್ಯದಲ್ಲಿ ಒಂದಲ್ಲ ಒಂದು ಸಮಸ್ಯೆ ಎಂದು ಅರ್ಜಿ ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್​ ಕೇಸ್​ನಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಸಂಸಾರವೂ ಈಗ ಸಮಸ್ಯೆಯಲ್ಲಿ ಸಿಲುಕಿದೆ. ರನ್ಯಾಳಿಂದ ವಿಚ್ಛೇದನ ಕೋರಿ‌ ಕೋರ್ಟ್​ಗೆ ಅರ್ಜಿ ಸಲ್ಲಿಸಲು ಪತಿ ಜತಿನ್ ಹುಕ್ಕೇರಿ ಸಿದ್ಧತೆ ನಡೆಸಿದ್ದಾರೆ. ಮದುವೆಯಾದಾಗಿನಿಂದ ರನ್ಯಾ ಜೊತೆಗೆ ಒಂದಲ್ಲ ಒಂದು ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸದ್ಯ ರನ್ಯಾಳಿಂದ ಪತಿ ಜತಿನ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. 2024 ಅಕ್ಟೋಬರ್ 6ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್​ನಲ್ಲಿ ರನ್ಯಾ ಮತ್ತು

ಗೋಲ್ಡ್‌ ಸ್ಮಗ್ಲಿಂಗ್‌ ಆರೋಪಿ ನಟಿ ರನ್ಯಾಳಿಂದ ವಿಚ್ಚೇದನ ಕೋರಿದ ಪತಿ Read More »

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ

ಗುಜರಾತ್ : ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್ (92) ಮಂಗಳವಾರ ಬೆಳಿಗ್ಗೆ ನವಸಾರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ನೀಲಾಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು,  ಅವರು ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರು ಮಹಾತ್ಮ ಗಾಂಧಿಯವರ ಮಗ ಹರಿದಾಸ್ ಗಾಂಧಿಯವರ ಮೊಮ್ಮಗಳು, ನೀಲಾಂಬೆನ್ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರೊಂದಿಗೆ ನವಸಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.ಅವರ ಅಂತ್ಯಕ್ರಿಯೆಯ ಮೆರವಣಿಗೆ ಇಂದು

ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ನೀಲಾಂಬೆನ್ ಪಾರಿಖ್  ನಿಧನ Read More »

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ

 ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಗೇರುಕಟ್ಟೆಯ  ಕ್ಷೀರ ಸಂಗಮ ಸಭಾಭವನದಲ್ಲಿ  48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಹೊಸ ವರ್ಷದ ಆರಂಭದ ದಿನವಾದ ಯುಗಾದಿಯಂದು   ಬಹಳ ಅರ್ಥಪೂರ್ಣವಾಗಿ ಜರಗಿತು. ಸನಾತನ ಧರ್ಮದಲ್ಲಿ  ಮಹಿಳೆಯರಿಗೆ ಬಹಳ ಗೌರವವಿದೆ.  ಮನೆಯಲ್ಲಿ ಮಕ್ಕಳನ್ನು ವಾತ್ಸಲ್ಯದಿಂದ ಕಾಣುವ ತಾಯಿ, ಪತಿಗೆ ಪತ್ನಿಯಾಗಿ,  ಮಗಳಾಗಿ, 

ಗೇರುಕಟ್ಟೆ: ಅಪೂರ್ವವಾಗಿ ನಡೆದ  ಮಾತೃ ವಂದನಾ ಕಾರ್ಯಕ್ರಮ Read More »

ಮಂಗಳೂರು : ಮುಡಾ ಕಮಿಷನರ್‌ಗೇ ವಾಮಾಚಾರ ಯತ್ನ

ಪೊಲೀಸ್‌ ದೂರು ದಾಖಲಿಸಿದ ಕಮಿಷನರ್‌ ನೂರ್ ಝಹರಾ ಖಾನಂ ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಮೇಲೆ ಬ್ರೋಕರ್‌ಗಳು ಮಾಟಮಂತ್ರ ಮಾಡಲು ಮುಂದಾದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಮಿಷನರ್‌ ಇಬ್ಬರು ದಲ್ಲಾಳಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮುಡಾ ಕಚೇರಿಯಲ್ಲಿ ಬ್ರೋಕರ್‌ಗಳ ಕಾರುಬಾರು ಜೋರಾಗಿದ್ದು, ಅವರನ್ನು ನಿಯಂತ್ರಸಲು ಮುಂದಾದ ಕಮಿಷನರ್‌ ನೂರ್ ಝಹರಾ ಖಾನಂ ಅವರಿಗೆ ಬ್ರೋಕರ್‌ಗಳು ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಬ್ರೋಕರ್‌ ಸಿಬ್ಬಂದಿ ಇಲ್ಲದ ವೇಳೆ ಮುಡಾ

ಮಂಗಳೂರು : ಮುಡಾ ಕಮಿಷನರ್‌ಗೇ ವಾಮಾಚಾರ ಯತ್ನ Read More »

ಹೆಂಡತಿ ಬಿಟ್ಟು ಹೋದ ಸಿಟ್ಟು : ಅತ್ತೆ, ನಾದಿನಿ, ಮಗಳನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಚಾಲಕ

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಮೂವರನ್ನು ಗುಂಡು ಹಾರಿಸಿ ಸಾಯಿಸಿದ್ದು, ಬಳಿಕ ತಾನೂ ಅತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿವ. ಈತನ ಹೆಂಡತಿ ಎರಡು ವರ್ಷದ ಹಿಂದೆ ಬಿಟ್ಟು ಹೋಗಿದ್ದು, ಈ ಸಿಟ್ಟಿನಲ್ಲಿ ಅತ್ತೆ ಜ್ಯೋತಿ(50), ಮಗಳು ಮೌಲ್ಯ(6) ಮತ್ತೆ ನಾದಿನಿ ಸಿಂಧು(24)

ಹೆಂಡತಿ ಬಿಟ್ಟು ಹೋದ ಸಿಟ್ಟು : ಅತ್ತೆ, ನಾದಿನಿ, ಮಗಳನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಚಾಲಕ Read More »

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ

16 ಸಿಸಿ ಕ್ಯಾಮರಾ, 8 ನಾಯಿಗಳ ಕಣ್ಣುತಪ್ಪಿಸಿ ಕಳವು ಮಾಡಿದ ಚಾಣಾಕ್ಷ ಕಳ್ಳರು ಮಂಗಳೂರು: ಮನೆಯ ಲಾಕರ್‌ನಲ್ಲಿಟ್ಟ ಸುಮಾರು 1 ಕೆಜಿ ಚಿನ್ನವನ್ನು ಕಳ್ಳರು ಕದ್ದೊಯ್ದ ಘಟನೆ ಮಂಗಳೂರು ಬಜಪೆ ಸಮೀಪದ ಪೆರ್ಮುದೆಯಲ್ಲಿ ಸಂಭವಿಸಿದೆ. ಪೆರ್ಮುದೆಯ ಜಾನ್ವಿನ್‌ ಪಿಂಟೊ ಎಂಬವರ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಮಂಗಳವಾರ ಬೆಳಕಿಗೆ ಬಂದಿದೆ. ಜಾನ್ವಿನ್‌ ಪಿಂಟೊ ಮತ್ತು ಅವರ ಪುತ್ರ ಪ್ರವೀಣ್‌ ಪಿಂಟೊ ಕುವೈಟ್‌ನಲ್ಲಿದ್ದಾರೆ. ಮನೆಗೆ ಬೀಗ ಹಾಕಿದ್ದು, ಮನೆಯ ಸುತ್ತ 16 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಕಳ್ಳರು ಸಿಸಿ

ಬಜಪೆ : ಮನೆಯ ಲಾಕರ್‌ನಲ್ಲಿದ್ದ 1 ಕೆಜಿ ಚಿನ್ನಾಭರಣ ಕಳ್ಳತನ Read More »

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ?

ಜೆ.ಪಿ.ನಡ್ಡಾ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರ ಉತ್ತರಾಧಿಕಾರಿಯ ಆಯ್ಕೆ ಈ ತಿಂಗಳಲ್ಲೇ ನಡೆಯಲಿದೆ ಎನ್ನಲಾಗಿದೆ. ಏ.4ಕ್ಕೆ ಸಂಸತ್‌ ಅಧಿವೇಶನ ಮುಗಿಯಲಿದ್ದು, ಬಳಿಕ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಚುರುಕುಗೊಳಿಸಲಿದೆ. ಬಹುತೇಕ ಏಪ್ರಿಲ್‌ ಮೂರನೇ ವಾರದಲ್ಲಿ ಹೊಸ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿಯಿದ್ದು, ಅದನ್ನು ತ್ವರಿತವಾಗಿ ಮುಗಿಸಿದ ಬಳಿಕ ರಾಷ್ಟ್ರೀಯ

ಈ ತಿಂಗಳಲ್ಲೇ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷ? Read More »

error: Content is protected !!
Scroll to Top