ಸುದ್ದಿ

ಭಾವಿ ಪತಿ ಕೊಲೆ ಕೇಸ್‌ : ಅಪರಾಧಿಗಳಿಗೆ ಕ್ಷಮಾದಾನದ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌

ರಾಜ್ಯಪಾಲರು ಕ್ಷಮಿಸಿದರೆ ಜೀವಾವಧಿ ಜೈಲು ಶಿಕ್ಷೆಯಿಂದ ಬಚಾವಾಗಬಹುದು ಎಂದು ತೀರ್ಪು ಬೆಂಗಳೂರು : 2003ರಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಭಾವಿ ಪತಿ, ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ. ಆದರೂ, ಇದು ಆರೋಪಿಗಳು ಯೌವ್ವನದ ದುಡುಕಿನಲ್ಲಿ ವಿವೇಚನೆಯಿಲ್ಲದೆ ನಡೆಸಿದ ಕೃತ್ಯ ಎಂದಿದ್ದು, ರಾಜ್ಯಪಾಲರಲ್ಲಿ ಕ್ಷಮಾದಾನ ಕೋರಲು ಅವಕಾಶ ಕಲ್ಪಿಸಲು ಆದೇಶಿಸಿದೆ. ಅದುವರೆಗೂ ಅಪರಾಧಿಗಳನ್ನು […]

ಭಾವಿ ಪತಿ ಕೊಲೆ ಕೇಸ್‌ : ಅಪರಾಧಿಗಳಿಗೆ ಕ್ಷಮಾದಾನದ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌ Read More »

ಯುಪಿಐ ಜಗತ್ತಿನ ಅತಿದೊಡ್ಡ ಡಿಜಿಟಲ್‌ ಪಾವತಿ ವ್ಯವಸ್ಥೆ

200 ದೇಶಗಳಲ್ಲಿರುವ ವೀಸಾವನ್ನು ಹಿಂದಿಕ್ಕಿದ 7 ರಾಷ್ಟ್ರಗಳಲ್ಲಿರುವ ಯುಪಿಐ ನವದೆಹಲಿ: ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈ ವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ. ನಿತ್ಯ 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಭಾರತದ ಯುಪಿಐ ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಕುರಿತು

ಯುಪಿಐ ಜಗತ್ತಿನ ಅತಿದೊಡ್ಡ ಡಿಜಿಟಲ್‌ ಪಾವತಿ ವ್ಯವಸ್ಥೆ Read More »

ಲೈಂಗಿಕ ಕಿರುಕುಳ ಪ್ರತಿಭಟಿಸಿ ಕಾಲೇಜಲ್ಲೇ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು

ಪ್ರಾಧ್ಯಾಪಕರ ಕಿರುಕುಳ ತಾಳಲಾರದೆ ಆತ್ಮಾಹುತಿಗೆ ಯತ್ನಿಸಿದ್ದ ಬಿ.ಎಡ್‌ ವಿದ್ಯಾರ್ಥಿನಿ ಭುವನೇಶ್ವರ : ಲೈಂಗಿಕ ಕಿರುಕುಳ ಪ್ರತಿಭಟಿಸಿ ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಲೇಜಿನಲ್ಲಿ ಪ್ರಾಧ್ಯಾಪಕರು ದೀರ್ಘಕಾಲದಿಂದ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಇದರಿಂದ ಬೇಸರಗೊಂಡಿದ್ದ ಆಕೆ ಕಾಲೇಜಿನಲ್ಲೇ ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿ ಬೆಂಕಿ ಹಚ್ಚಿಕೊಂಡಿದ್ದರು. ಶೇ.90ರಷ್ಟು ಸುಟ್ಟ ಗಾಯಗಳಾಗಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಬಾಲಸೋರ್​ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ. ವಿಭಾಗದ ಮುಖ್ಯಸ್ಥರು

ಲೈಂಗಿಕ ಕಿರುಕುಳ ಪ್ರತಿಭಟಿಸಿ ಕಾಲೇಜಲ್ಲೇ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು Read More »

ಭಾರಿ ಮಳೆ : ಕಡಬ, ಬಂಟ್ವಾಳ, ಉಳ್ಳಾಲ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಕಡಬ: ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಬಿಇಒ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ನೀಡಿದ್ದಾರೆ.ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ ಎನ್ನಲಾಗಿದೆ. ಬಂಟ್ವಾಳ ಮತ್ತು ಉಳ್ಳಾಲ ತಾಲೂಕುಗಳಲ್ಲೂ ಎಲ್ಲ ಅಂಗನವಾಡಿ, ಶಾಲೆ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿದೆ. ಕಡಬ ತಾಲೂಕಿನಾದ್ಯಂತ ನಿನ್ನೆ ರಾತ್ರಿಯಿಂದೀಚೆಗೆ ಭಾರಿ ಮಳೆಯಾಗುತ್ತಿದೆ.

ಭಾರಿ ಮಳೆ : ಕಡಬ, ಬಂಟ್ವಾಳ, ಉಳ್ಳಾಲ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ Read More »

ಲಾರ್ಡ್ಸ್‌ನ ಐತಿಹಾಸಿಕ ಗೆಲುವಿನ ಅವಕಾಶ ಕೈಚೆಲ್ಲಿದ ಭಾರತ

ಬೈಸ್‌ ಮೂಲಕ ನೀಡಿದ 6 ಬೌಂಡರಿಗಳೇ ಭಾರತದ ಪಾಲಿಗೆ ಮುಳುವಾಯಿತು ಲಂಡನ್‌ : ಪ್ರತಿಷ್ಠಿ ಲಾರ್ಡ್ಸ್‌ ಅಂಗಣದಲ್ಲಿ ಸಿಬಹುದಾಗಿದ್ದ ಐತಿಹಾಸಿಕ ಗೆಲುವೊಂದನ್ನು ಕೈಚೆಲ್ಲಿ ಶುಭಮನ್‌ ಗಿಲ್‌ ಪಡೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ರವೀಂದ್ರ ಜಡೇಜಾ ಕೊನೆಯವರೆಗೂ ಜಾರಿಯಲ್ಲಿಟ್ಟ ಕೆಚ್ಚಿನ ಹೋರಾಟ ವ್ಯರ್ಥವಾಗಿ 22 ರನ್‌ಗಳಿಂದ ಭಾರತ ಅಂಗ್ಲರಿಗೆ ಶರಣಾಗಿದೆ. ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ 193 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 170 ರನ್​ಗಳಿಗೆ ಆಲೌಟ್

ಲಾರ್ಡ್ಸ್‌ನ ಐತಿಹಾಸಿಕ ಗೆಲುವಿನ ಅವಕಾಶ ಕೈಚೆಲ್ಲಿದ ಭಾರತ Read More »

ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್‌ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್‌ ತನಿಖೆ

ಫೈಬರ್‌ ಮೂರ್ತಿ ಎಂದು ಆರೋಪಿಸಿದವರಿಗೆ ತೀವ್ರ ಮುಖಭಂಗ ಕಾರ್ಕಳ: ಇಲ್ಲಿನ ಬೈಲೂರು ಸಮೀಪ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್‌ನ ಪರಶುರಾಮನ ವಿಗ್ರಹದ ವಿವಾದಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಪರಶುರಾಮ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಕಂಚಿನ ಬದಲಾಗಿ ಹಿತ್ತಾಳೆ

ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್‌ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್‌ ತನಿಖೆ Read More »

ಕಮ್ಯುನಿಷ್ಟರ ದಾಳಿಯಲ್ಲಿ ಎರಡೂ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್ ರಾಜ್ಯಸಭೆಗೆ

ಎರಡೂ ಕಾಲು ಕಳೆದುಕೊಂಡ ಬಳಿಕವೂ ಛಲ ಬಿಡದೆ ಹೋರಾಡಿ ಗೆದ್ದ ಧೀರ ನವದೆಹಲಿ: ರಾಜ್ಯಸಭೆಗೆ ‌ನಾಲ್ವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ ನಾಮನಿರ್ದೇಶನ ಮಾಡಿದ್ದಾರೆ. ಅವರಲ್ಲಿ ಹೆಚ್ಚು ಗಮನ ಸೆಳೆದದ್ದು ಕೇರಳದ ಸಿ. ಸದಾನಂದ ಮಾಸ್ಟರ್. ಇನ್ನುಳಿದವರು ಉಜ್ವಲ್ ನಿಕಮ್, ಹರ್ಷವರ್ಧನ್ ಶ್ರಿಂಗ್ಲಾ, ಮೀನಾಕ್ಷಿ ಜೈನ್ ಅವರನ್ನು ನಾಮ ನಿರ್ದೇಶನಗೊಂಡವರು. ಸಿ. ಸದಾನಂದ ಮಾಸ್ಟರ್ ನಾಮನಿರ್ದೇಶನ ನಿನ್ನೆಯಿಂದೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳ ವೈರಲ್‌ ಆಗಿದೆ. ಸದಾನಂದ ಮಾಸ್ಟರ್ ಅವರು ಕೇರಳದ ಕಣ್ಣೂರಿನವರು. ಮೂರು ದಶಕಗಳ ಹಿಂದೆ

ಕಮ್ಯುನಿಷ್ಟರ ದಾಳಿಯಲ್ಲಿ ಎರಡೂ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್ ರಾಜ್ಯಸಭೆಗೆ Read More »

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ

ಶರಾವತಿ ಹಿನ್ನೀರಿನ ಜನರ ಆರು ದಶಕಗಳ ಕನಸು ನನಸಾಗುವ ಕ್ಷಣ ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್‌ ಸೇತುವೆ ಇಂದು ಸಿಗಂದೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿಗೆ ನಿರ್ಮಿಸಿದ ಈ ಕೇಬಲ್‌ ಬ್ರಿಜ್‌ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ. ಈ ಮೂಲಕ ಶರಾವತಿ ನದಿ ದಡದ ಜನರ 6 ದಶಕಗಳ ಕನಸು ನನಸಾಗುತ್ತಿದೆ. ಗುಜರಾತ್‌ನ ಓಖಾದಿಂದ ಬೇಯ್ ದ್ವಾರಕೆ ದ್ವೀಪಕ್ಕೆ

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ Read More »

ಎಂಆರ್‌ಪಿಎಲ್‌ ವಿಷಾನಿಲ ದುರಂತ : ಮೃತದೇಹ ಒಯ್ದ ಸಿಬ್ಬಂದಿಗೆ ದಿಗ್ಬಂಧನ

ಸಂಸ್ಥೆ ಸರಿಯಾಗಿ ಸ್ಪಂದಿಸಿಲ್ಲ, ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದ ಕುಟುಂಬಸ್ಥರು ಮಂಗಳೂರು : ಮಂಗಳೂರಿನ ಸಮೀಪ ಸುರತ್ಕಲ್​ನಲ್ಲಿರುವ ಎಂಆರ್​ಪಿಎಲ್​​ ಘಟಕದಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಮೃತಪಟ್ಟ ಸಿಬ್ಬಂದಿಯ ಶವವನ್ನು ಅವರ ಹುಟ್ಟೂರಿಗೆ ಒಯ್ದ ಐದು ಮಂದಿಯನ್ನು ಅಲ್ಲಿನ ಗ್ರಾಮಸ್ಥರು ದಿಗ್ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ಎಂಆರ್​ಪಿಎಲ್​​ನ ಒಎಂಎಸ್ ವಿಭಾಗದ ಟ್ಯಾಂಕ್ ಎಫ್.ಬಿ.7029ರಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟು ಓರ್ವ ಅಸ್ವಸ್ಥರಾಗಿದ್ದರು. ಪ್ರಯಾಗ್ ರಾಜ್ ಮೂಲದ ವರ್ಷದ ದೀಪ್ ಚಂದ್ರ ಭಾರ್ತಿಯಾ (33), ಕೇರಳದ ವರ್ಷದ ಬಿಜಿಲ್

ಎಂಆರ್‌ಪಿಎಲ್‌ ವಿಷಾನಿಲ ದುರಂತ : ಮೃತದೇಹ ಒಯ್ದ ಸಿಬ್ಬಂದಿಗೆ ದಿಗ್ಬಂಧನ Read More »

ಮಾದಕವಸ್ತು ಸಾಗಾಟ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಸೆರೆ

ಭಾರಿ ಪ್ರಮಾಣದ ನಿಷೇಧಿತ ಡ್ರಗ್ಸ್‌ ವಶ ಬೆಂಗಳೂರು: ಮಾದಕವಸ್ತು ಸಾಗಾಟ ಮಾಡಿದ ಆರೋಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್‌ ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಕಲ್ಯಾಣ್‌ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆತನ ಬಳಿ ನಿಷೇಧಿತ 120 ಬಾಟಲಿ ಕೊಡೆನೈನ್ ಸಿರಪ್ ಇತ್ತು ಎಂಬ ಆರೋಪ ಕೇಳಿ ಬಂದಿದೆ.

ಮಾದಕವಸ್ತು ಸಾಗಾಟ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಸೆರೆ Read More »

error: Content is protected !!
Scroll to Top