ಸುದ್ದಿ

ಸ್ಮಾರ್ಟ್‌ ಸಿಟಿ ಯೋಜನೆ ಹೆಸರಲ್ಲಿ 70 ಸಾವಿರ ಜನರಿಗೆ 2,676 ಕೋಟಿ ರೂ. ವಂಚಿಸಿದ ಸಹೋದರರು

ಹೂಡಿಕೆ ಮಾಡಿದರೆ ಲಾಭ, ನಿವೇಶನ ನೀಡುವ ನೆಪವೊಡ್ಡಿ ಭಾರಿ ಮೋಸ ನವದೆಹಲಿ:‌ ‘ಧೋಲೇರಾ ಸ್ಮಾರ್ಟ್ ಸಿಟಿ’ ಯೋಜನೆ ಹೆಸರಿನಲ್ಲಿ 70,000 ಜನರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 2,676 ಕೋಟಿ ರೂ. ವಂಚಿಸಿದ ರಾಜಸ್ಥಾನದ ಖತರ್ನಾಕ್‌ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಭಾಷ್ ಬಿಜಾರಾನಿ ಮತ್ತು ರಣವೀರ್ ಬಿಜಾರಾನಿ ಎಂದು ಗುರುತಿಸಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ರಣವೀರ್ ಬಿಜಾರಾನಿ 2014ರಲ್ಲಿ ಮೊದಲ […]

ಸ್ಮಾರ್ಟ್‌ ಸಿಟಿ ಯೋಜನೆ ಹೆಸರಲ್ಲಿ 70 ಸಾವಿರ ಜನರಿಗೆ 2,676 ಕೋಟಿ ರೂ. ವಂಚಿಸಿದ ಸಹೋದರರು Read More »

ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದೆ ಕರ್ನಾಟಕದ 19 ಮಂದಿಯ ತಂಡ

ಅಧ್ಯಯನ ಪ್ರವಾಸ ಕೈಗೊಂಡ ನಿಯೋಗ ಯುದ್ಧದ ನಡುವೆ ಬಾಕಿ ಬೆಂಗಳೂರು : ಇಸ್ರೇಲ್‌ ಮತ್ತು ಇರಾನ್‌ನ ನಡುವಿನ ಯುದ್ಧ ತೀವ್ರಗೊಂಡಿರುವಂತೆಯೇ ಕರ್ನಾಟಕದ 19 ಮಂದಿಯ ನಿಯೋಗವೊಂದು ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯೊಂದು ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧದ ಭೀತಿ ತಲೆದೋರಿರುವಾಗಲೇ ಈ ನಿಯೋಗದ 19 ಮಂದಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ. ಕರ್ನಾಟಕದ 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಅಧ್ಯಯನ ಸಲುವಾಗಿ ಇಸ್ರೇಲ್‌ಗೆ ಹೋಗಿತ್ತು. ಇಸ್ರೇಲ್​ನಲ್ಲೇ ಉಳಿದಿರುವ ಬಗ್ಗೆ

ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದೆ ಕರ್ನಾಟಕದ 19 ಮಂದಿಯ ತಂಡ Read More »

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ. ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯತ್‌ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆ ಕೂಡ

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ Read More »

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ

ಒಂದೇ ಕುಟುಂಬದ ಆರು ಮಂದಿ ಅದೃಷ್ಟವಶಾತ್‌ ಪಾರು ಮಂಗಳೂರು : ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕುಟುಂಬವೊಂದು ಅದೃಷ್ಟವಶಾತ್‌ ಪಾರಾಗಿದೆ. ಕಂಕನಾಡಿ ಬಳಿಯ ಸುವರ್ಣ ಲೇನ್‌ನಲ್ಲಿ ಭಾರಿ ಅವಘಡ ಸಂಭವಿಸಿದೆ. ಧಾರಾಕಾರ ಮಳೆಗೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ Read More »

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು

ಡೆಹ್ರಾಡೂನ್: : ಅಹಮದಾಬಾದ್ ವಿಮಾನ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದ್ದು, ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಗೌರಿಕುಂಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿ ಹೆಲಿಕಾಪ್ಟರ್​​ನಲ್ಲಿದ್ದ ಪೈಲಟರ್​ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಎನ್​​ಡಿಆರ್​ಎಫ್​ ತಂಡಗಳು ಸ್ಥಳಕ್ಕೆ ತಲುಪಿವೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ. ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಹೊಗೆಯನ್ನು ನೋಡಿದ ನಂತರ ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು Read More »

ತೀವ್ರಗೊಂಡ ಇಸ್ರೇಲ್‌-ಇರಾನ್‌ ಸಮರ : ಇರಾನ್‌ನಲ್ಲಿ ಮತ್ತೆ 60 ಸಾವು

ಇರಾನ್‌ ಗ್ಯಾಸ್‌ ಸ್ಥಾವರಕ್ಕೆ ಕ್ಷಿಪಣಿ ದಾಳಿ; ಇಸ್ರೇಲ್‌ನ ಐರನ್‌ ಡೋಮ್‌ ಭೇದಿಸಿದ ಇರಾನ್‌ ಟೆಲ್‌ ಅವೀವ್‌: ರಾತ್ರಿಯಿಡೀ ಇಸ್ರೇಲ್‌ ಮತ್ತು ಇರಾನ್‌ ನಡುವೆ ಭೀಕರ ಸಮರ ನಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ನಲ್ಲಿ ಮತ್ತೆ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಎರಡೂ ದೇಶಗಳು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ಇರಾನ್‌ನ ಜೀವನಾಡಿ ಎಂದೇ ಹೇಳಲಾಗುವ ಬೃಹತ್‌ ಗ್ಯಾಸ್‌ ಸ್ಥಾವರಕ್ಕೆ ಶನಿವಾರ ರಾತ್ರಿ ಇಸ್ರೇಲ್‌ನ ಕ್ಷಿಪಣಿಗಳು ಬಂದೆರಗಿದ್ದು, ಆಪಾರ ಹಾನಿ ಸಂಭವಿಸಿದೆ. ಆಪರೇಷನ್‌ ರೈಸಿಂಗ್‌

ತೀವ್ರಗೊಂಡ ಇಸ್ರೇಲ್‌-ಇರಾನ್‌ ಸಮರ : ಇರಾನ್‌ನಲ್ಲಿ ಮತ್ತೆ 60 ಸಾವು Read More »

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ

ಶಿವಮೊಗ್ಗ: ಕಾಂತಾರ-1 ಚಿತ್ರತಂಡಕ್ಕೆ ಇನ್ನೊಂದು ಅವಘಡ ಎದುರಾದ ಕುರಿತು ವರದಿಯಾಗಿದೆ. ನಿನ್ನೆ ರಾತ್ರಿ ತೀರ್ಥಹಳ್ಳಿ ಸಮೀಪ ಶೂಟಿಂಗ್‌ ನಡೆಯುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಬೋಟ್‌ನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿಯವರೂ ಇದ್ದರು ಎನ್ನಲಾಗಿದೆ. ಕಾಂತಾರ-1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ Read More »

ಮಂಗಳೂರು : ಅವಾಂತರ ಸೃಷ್ಟಿಸಿದ ಮಳೆ; ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಒಂದು ಬದಿ ಸಂಚಾರ ಸ್ಥಗಿತ ಮಂಗಳೂರು : ಕರಾವಳಿಯಾದ್ಯಾಂತ ನಿನ್ನೆ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲಿ ಕೃತಕ ನೆರೆ ನೀರು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಪಂಪ್‌ವೆಲ್‌ನಲ್ಲಿ ಆಳೆತ್ತರಕ್ಕೆ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಬೇಕಾಯಿತು. ಸುಮಾರು ಒಂದೂವರೆ ತಾಸು ರಿಕ್ಷಾ ಮತ್ತಿತರ ವಾಹನಗಳ ಸಂಚಾರವನ್ನು ಸ್ಥಗಿತವಾಗಿತ್ತು. ಹಲವೆಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಮಂಗಳೂರು‌ ಹೊರವಲಯದ ವಾಮಂಜೂರು ಬಳಿಯ ಮಂಗಳೂರು-ಮೂಡಬಿದ್ರೆ-ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ

ಮಂಗಳೂರು : ಅವಾಂತರ ಸೃಷ್ಟಿಸಿದ ಮಳೆ; ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ Read More »

ಇಸ್ರೇಲ್‌ ಮೇಲೆ ಇರಾನ್‌ ಪ್ರತಿಕಾರದ ದಾಳಿ : ಹೆಚ್ಚಿದ ಯುದ್ಧದ ಆತಂಕ

ಇರಾನ್‌ನ ಸೇನಾಧಿಕಾರಿಗಳು, ವಿಜ್ಞಾನಿಗಳು ಸೇರಿ 76 ಮಂದಿ ಸಾವು ಜೆರುಸೆಲಂ: ಇರಾನ್‌ ಮೇಲೆ ಇಸ್ರೇಲ್ ಶುಕ್ರವಾರ ನಸುಕಿನ ಹೊತ್ತು ದಾಳಿ ಮಾಡಿದ ಬಳಿಕ ಮಧ್ಯಪೂರ್ವದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದಾಳಿಗೆ ಪ್ರತಿಕಾರವಾಗಿ ಇಂದು ನಸುಕಿನ ಹೊತ್ತು ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿಗಳ ಮಳೆಗರೆದಿದ್ದು, ಇದರ ಪರಿಣಾಮವಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಇರಾನ್‌ ಪ್ರತಿಕಾರದ ಪಣತೊಟ್ಟಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ ಜಗತ್ತಿನಾದ್ಯಂತ ಇರುವ ತನ್ನ ದೂತವಾಸಗಳನ್ನು ಹಾಗೂ ಇತರ ರಾಜತಾಂತ್ರಿಕ ಸಂಸ್ಥಾಪನೆಗಳನ್ನು ಮುಚ್ಚಿದೆ. ಜಗತ್ತಿನೆಲ್ಲೆಡೆ ಇರುವ ಯೆಹೂದಿಗಳಿಗೆ ಯೆಹೂದಿ ಎಂದು

ಇಸ್ರೇಲ್‌ ಮೇಲೆ ಇರಾನ್‌ ಪ್ರತಿಕಾರದ ದಾಳಿ : ಹೆಚ್ಚಿದ ಯುದ್ಧದ ಆತಂಕ Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು

ಮಧ್ಯರಾತ್ರಿ ಹಟ್ಟಿಯಲ್ಲಿದ್ದ ಹಸುವಿಗೆ ಹಿಂಸೆ ಬೆಂಗಳೂರು: ಬೆಂಗಳೂರು ಬಳಿಕ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಸಂಭವಿಸಿದೆ. ಕುಳಗೇರಿ ಕ್ರಾಸ್‌ ಬಳಿ ಮನೆಯ ಹಟ್ಟಿಯಲ್ಲಿದ್ದ ಹಸುವಿನ ಕೆಚ್ಚಲು ಕತ್ತರಿಸಿ ದುರುಳರು ವಿಕೃತಿ ಮೆರೆದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿರುವ ಹಸುವಿನ ಕೆಚ್ಚಲನ್ನು ದುರುಳರು ಶುಕ್ರವಾರ ಕತ್ತರಿಸಿದ್ದಾರೆ. ಮಧ್ಯರಾತ್ರಿ ಹಸುವಿಗೆ ಮೇವು ಹಾಕಿ ಮನೆಯವರು ತೆರಳಿದ್ದಾರೆ. ಬಳಿಕ ಈ ಕೃತ್ಯ ಎಸಗಿದ್ದಾರೆ. ಹಸುವಿನ ಕೆಚ್ಚಲಿನಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು Read More »

error: Content is protected !!
Scroll to Top