ಸುದ್ದಿ

ವಿವಾದದ ಕಿಡಿ ಹೊತ್ತಿಸಿದ ಹಿಂದಿ ಅಂಕ ಕೈಬಿಡುವ ನಿರ್ಧಾರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ದಿಢೀರ್‌ ಎಂದು ಹಿಂದಿ ಕೈಬಿಟ್ಟ ಸರ್ಕಾರ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹಿಂದಿಯ ಅಂಕವನ್ನು ದಿಢೀರ್‌ ಎಂದು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಮತ್ತೊಮ್ಮೆ ಭಾಷಾ ವಿವಾದ ಭುಗಿಲೇಳುವಂತೆ ಮಾಡಿದೆ. ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು, ಭಾಷಾ ಹೋರಾಟಗಾರರು ಈ ಕುರಿತು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಪರೀಕ್ಷೆ ನಡೆಯುತ್ತಿರುವಾಗಲೇ ಯಾವುದೇ ಮುನ್ಸೂಚನೆ ನೀಡದೆ ದಿಢೀರ್‌ ಎಂದು ಸರ್ಕಾರ ಹಿಂದಿಯನ್ನು ಕೈಬಿಡುವ ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯ ಕಾರಣವೇ ಗುರಿಯಾಗಿರುವಂತೆ ಕಾಣಿಸುತ್ತಿದೆ. ಹಿಂದಿ ಅಂಕಗಳನ್ನು […]

ವಿವಾದದ ಕಿಡಿ ಹೊತ್ತಿಸಿದ ಹಿಂದಿ ಅಂಕ ಕೈಬಿಡುವ ನಿರ್ಧಾರ Read More »

ಭೀಕರ ಅಪಘಾತ : 4 ವರ್ಷದ ಮಗು ಸಹಿತ ದಂಪತಿ ಸಾವು

ತಿರುಪತಿಗೆ ಹೊರಟವರ ದುರಂತ ಅಂತ್ಯ ಬೆಂಗಳೂರು: ನಗರದಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ಪಲಮನೇರ್‌ನಿಂದ ಚಿತ್ತೂರಿಗೆ ಬರುತ್ತಿದ್ದ ಬಸ್ಸು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಿಂತಿತ್ತು. ಈ ವೇಳೆ

ಭೀಕರ ಅಪಘಾತ : 4 ವರ್ಷದ ಮಗು ಸಹಿತ ದಂಪತಿ ಸಾವು Read More »

ದೇವಸ್ಥಾನದಲ್ಲಿ ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ತಡೆದ 7 ಮಂದಿ ಬಂಧನ

ಫೋಟೊಗ್ರಾಫರ್‌ ಮೇಲೆ ಹಲ್ಲೆ ನಡೆಸಿದ ಕುರಿತು ದೂರು ದಾಖಲು ಮಂಗಳೂರು: ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ಗೆ ತೆರಳಿದ್ದ ಫೋಟೊಗ್ರಾಫರ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇಗುಲದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಮಾಡುತ್ತಿದ್ದ ವೇಳೆ ಸ್ಥಳೀಯ ಕೆಲವರು ಫೋಟೊಶೂಟ್‌ ಮಾಡದಂತೆ ಅಡ್ಡಿ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಛಾಯಾಗ್ರಾಹಕ ಯಶ್‌ ಹಾಗೂ ತಂಡದ ಮೇಲೆ ಸ್ಥಳೀಯರ

ದೇವಸ್ಥಾನದಲ್ಲಿ ಪ್ರಿ ವೆಡ್ಡಿಂಗ್‌ ಫೋಟೊಶೂಟ್‌ ತಡೆದ 7 ಮಂದಿ ಬಂಧನ Read More »

ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ

ಪ್ರೊಪೆಸರ್‌ಗೆ ಥಳಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಬೆದರಿಕೆ ಬೆಂಗಳೂರು: ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಬ್ದುಲ್‌ ಎಂಬಾತ ತರಗತಿಯಲ್ಲಿ ವಿದ್ಯಾರ್ಥಿನಿಗೆ ಲವ್ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಡಾ.ಅಬ್ದುಲ್‌ಗೆ ವಿದ್ಯಾರ್ಥಿನಿ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ವೈರಲ್‌ ಆಗಿದೆ. ಶುಕ್ರವಾರ ಮುಂಜಾನೆ ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಅಧಿಕಾರಿಗಳ ಅಧಿಕೃತ ಇಮೇಲ್‌ಗಳಿಗೆ ಬಾಂಬ್

ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಪ್ರಕರಣ : ಕಾಲೇಜಿಗೆ ಬಾಂಬ್‌ ಬೆದರಿಕೆ Read More »

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು

ಬಾವಿ ಕೊರೆಯುವಾಗ ಸಂಭವಿಸಿದ ದುರಂತ ಉಳ್ಳಾಲ: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉಳ್ಳಾಲ ಸಮೀಪ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ (30) ಮೃತರು ಎಂದು ಗುರುತಿಸಲಾಗಿದೆ.ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.

ಮಣ್ಣು ತುಂಬಿದ ಬುಟ್ಟಿ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು Read More »

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ

ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ Read More »

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌

ಹೊಸ ಸರ್ಕಾರ ಬಂದ ಮರುದಿನವೇ ಮಾಜಿಗಳ ವಿರುದ್ಧ ಕ್ರಮ ಕಠ್ಮಂಡು: ನೇಪಾಳದ ಪ್ರಧಾನಮಂತ್ರಿಯಾಗಿ ಬಾಲೇಂದ್ರ ಶಾ ನೂತನ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ ಮರುದಿನವೇ ಕಳೆದ ವರ್ಷ ನೇಪಾಳದಾದ್ಯಂತ ನಡೆದಿದ್ದ ಜನರೇಷನ್ ಝಡ್‌ (ಝೆನ್ ಜಿ) ಪ್ರತಿಭಟನೆಯನ್ನು ಹತ್ತಿಕ್ಕಿದ ಆರೋಪದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದಿದ್ದ ಝೆನ್ ಜಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಓಲಿ ಹಾಗೂ ಲೇಖಕ್‌ ಅವರನ್ನು

ನೇಪಾಲದ ಮಾಜಿ ಪ್ರಧಾನಮಂತ್ರಿ, ಗೃಹ ಸಚಿವ ಬೆಳ್ಳಂಬೆಳಗ್ಗೆ ಅರೆಸ್ಟ್‌ Read More »

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು: ಮಾ. 28 ರಂದು ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ 44 ನೇ ಘಟಿಕೋತ್ಸವವು ನಡೆಯಲಿದ್ದು ಈ ಸಂದರ್ಭದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಕ್ಷೇತ್ರದ ಸಾಧಕ ಪದ್ಮಶ್ರೀ ಹರೇಕಳ ಹಾಜಬ್ಬ, ಮರಣೋತ್ತರವಾಗಿ ಇತ್ತೀಚೆಗೆ ಮೃತರಾದ ಯಕ್ಷಗಾನದ ಮೇರು ನಟ ಸೂರಿಕುಮೇರು ಗೋವಿಂದ ಭಟ್, ದೈವನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ನಡೆಯಲಿರುವುದಾಗಿ ಕುಲಪತಿ ಪ್ರೊ. ಕೆ. ಎಲ್. ಧರ್ಮ ತಿಳಿಸಿದ್ದಾರೆ. ಹರೇಕಳ ಹಾಜಬ್ಬ: ಇವರು ಕಿತ್ತಳೆ

ಮಾ: 28: ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ Read More »

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ

ಉಡುಪಿ: ರೆಸಾರ್ಟ್ ನಿರ್ಮಾಣ ವಿಷಯದಲ್ಲಿ ಉಡಾ (ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ) ದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅವರು ನಡೆಸಿದ ಅನಿರ್ಧಿಷ್ಟಾವಧಿ ಧರಣಿಗೆ 12 ಗಂಟೆಗಳೊಳಗೆ ಫಲ ಸಿಕ್ಕಿದೆ. ಬಡಾನಿಡಿಯೂರು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿಂಗಲ್ ಲೇಔಟ್ ನಕ್ಷೆ ನೀಡದೆ ಉಡಾ ಸತಾಯಿಸುತ್ತಿತ್ತು. ಅದರ ವಿರುದ್ಧ ರಘುಪತಿ ಭಟ್ ಅವರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಕುಳಿತಿದ್ದರು. ಅವರ ಪ್ರತಿಭಟನೆಗೆ ಮಣಿದು ಉಡಾ ತಾತ್ಕಾಲಿಕ ಅನುಮತಿ ಪತ್ರವನ್ನು ನೀಡಿದೆ. ಹಾಗೆಯೇ ಎಲ್ಲಾ ಕಾನೂನು ಪ್ರಕ್ರಿಯೆಗಳ ಪರಿಶೀಲನೆಯ ಬಳಿಕ ಪ್ರಾಧಿಕಾರದ

ರಘುಪತಿ ಭಟ್ ಪ್ರತಿಭಟನೆಗೆ ಮಣಿದು ಅನುಮತಿ ಪತ್ರ ನೀಡಿದ ಉಡಾ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಪುತ್ತೂರು ಘಟಕದ ಸಭೆ ಸ್ವಾಗತ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಪುತ್ತೂರು ಆನಂದಾಶ್ರಮಕ್ಕೆ ಭೇಟಿ, ಜಿಲ್ಲಾ ಸಂಚಾಲಕರ ಭಾಸ್ಕರ್ ಬಾರ್ಯ ಅಗಸ್ತ್ಯ ಅವರ ಮನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಪೂಜೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದು, ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವಾರ್ಷಿಕ ಪ್ರಶಸ್ತಿ ಸಮಾರಂಭ, ಎಪ್ರಿಲ್ 14ರಂದು ಬಾರ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿರುವ ಶ್ರೀ ಮಹಾವಿಷ್ಣು ಯಾಗದಲ್ಲಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಪುತ್ತೂರು ಘಟಕದ ಸಭೆ Read More »

error: Content is protected !!
Scroll to Top