ಸುದ್ದಿ

ನಿರ್ಜನ ಸ್ಥಳದಲ್ಲಿ ಯುವಕನ ಶವ ಪತ್ತೆ : ಕೊಲೆ ಶಂಕೆ

ಕ್ರಿಕೆಟ್‌ ವಿಚಾರದಲ್ಲಿ ನಡೆದ ಹಲ್ಲೆಯಿಂದ ಸಾವಿಗೀಡಾದ ಅನುಮಾನ ಮಂಗಳೂರು : ನಗರದ ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಭಾನುವಾರ ಸಂಜೆ ವೇಳೆಗೆ ಪತ್ತೆಯಾಗಿದೆ. ವ್ಯಕ್ತಿಯನ್ನು ಹಲ್ಲೈಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಸ್ಥಳೀಯರಿಗೆ ಮೃತ ವ್ಯಕ್ತಿಯ ಪರಿಚಯವಿಲ್ಲ. ಆತ ದಿನಗೂಲಿ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದೆ. ಇಲ್ಲೆ ಸಮೀಪ ಕ್ರಿಕೆಟ್‌ ಪಂದ್ಯಾಟವೊಂದು ನಡೆದಿದ್ದು, ಅದನ್ನು ನೋಡಲು ಬಂದ ವ್ಯಕ್ತಿ ಕೊಲೆಯಾಗಿದ್ದಾನೆಯೇ ಎಂಬ ಅನುಮಾನವೂ ಇದೆ. ಕುಡುಪು ಕಟ್ಟೆ ಸಮೀಪದ […]

ನಿರ್ಜನ ಸ್ಥಳದಲ್ಲಿ ಯುವಕನ ಶವ ಪತ್ತೆ : ಕೊಲೆ ಶಂಕೆ Read More »

ಪಹಲ್ಗಾಮ್‌ ಸಂತ್ರಸ್ತರ ದುಃಖ ನೋಡುವಾಗ ಭಾರತೀಯರ ರಕ್ತ ಕುದಿಯುತ್ತಿದೆ : ಮೋದಿ

ಮನ್‌ ಕಿ ಬಾತ್‌ನಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮದ ಭರವಸೆ ನವದೆಹಲಿ: ಪಹಲ್ಗಾಮ್ ದಾಳಿಯಿಂದ ಸಂತ್ರಸ್ತರಾಗಿರುವವರು ದುಃಖಿಸುತ್ತಿರುವ ದೃಶ್ಯಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 121ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಇದು ಭಯೋತ್ಪಾದನೆಯ ಬೆಂಬಲಿಗರ ಹತಾಶೆ, ಹೇಡಿತನವನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಅಪರಾಧ ಎಸಗಿದವರಿಗೆ, ಬೆಂಬಲಿಗರಿಗೆ, ಸೂತ್ರಧಾರಿಗಳ ವಿರುದ್ಧ ಕಠಿಣ

ಪಹಲ್ಗಾಮ್‌ ಸಂತ್ರಸ್ತರ ದುಃಖ ನೋಡುವಾಗ ಭಾರತೀಯರ ರಕ್ತ ಕುದಿಯುತ್ತಿದೆ : ಮೋದಿ Read More »

ನದಿಗೆ ಬಿದ್ದು ಯುವಕ ಸಾವು

ಉಡುಪಿ: ಹೆಬ್ರಿ ಸಮೀಪ ಸೀತಾನದಿ ನದಿಗೆ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕ ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ. ಮೃತನನ್ನು ಹೆಬ್ರಿಯ ಕಿನ್ನಿಗುಡ್ಡೆ ನಿವಾಸಿ ಸುಧಾಕರ ಶೆಟ್ಟಿ ಅವರ ಪುತ್ರ ಸಂಕೇತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸಂಕೇತ್ ತನ್ನ ಸ್ನೇಹಿತರೊಂದಿಗೆ ನದಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೆಬ್ರಿ ಗ್ರಾಮ ಪಂಚಾಯತ್ ಅಡಿಯಲ್ಲಿ ಅಂಗವಿಕಲ ವ್ಯಕ್ತಿಗಳ ಪುನರ್ವಸತಿ ವಿಭಾಗದಲ್ಲಿ ಅವರು ಉದ್ಯೋಗದಲ್ಲಿದ್ದರು ಮತ್ತು ಹೆಬ್ರಿ ಜೆಸಿಐ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ನದಿಗೆ ಬಿದ್ದು ಯುವಕ ಸಾವು Read More »

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ.ಕಸ್ತೂರಿ ರಂಗನ್ ನಿನ್ನೆ ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ 12 ರವರೆಗೆ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಇಸ್ರೊ ತಿಳಿಸಿದೆ. ಡಾ. ಕಸ್ತೂರಿರಂಗನ್ ಅವರ ಹಿರಿಯ ಮಗ ಸಂಜಯ್ ರಂಜನ್

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ Read More »

ಪಾಕ್‌ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ ಹೇಳಿಕೆ

ನಿಶಾನ್-ಎ-ಪಾಕಿಸ್ಥಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ ಎಂದು ಕಿಡಿಕಾರಿದ ಆರ್‌.ಅಶೋಕ್‌ ಬೆಂಗಳೂರು: ಪಾಕಿಸ್ಥಾನದ ಜೊತೆಗೆ ಭಾರತ ಯುದ್ಧ ಮಾಡಬಾರದು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಪಾಕಿಸ್ಥಾನದ ಮಾಧ್ಯಮಗಳು ಪ್ರಮುಖ ಸುದ್ದಿಯಾಗಿ ಪ್ರಕಟಿಸಿವೆ. ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದಾಗ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ನರಮೇಧ ನಡೆಸಿದ ಉಗ್ರ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಾಕಿಸ್ಥಾನದ ಜೊತೆಗೆ ಭಾರತ ಯುದ್ಧ ಮಾಡಬಾರದು, ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದರೆ ಸಾಕು. ಉಗ್ರರ ದಾಳಿಗೆ ಕೇಂದ್ರ ಸರಕಾರದ ವೈಫಲ್ಯ ಕಾರಣ ಎಂದು ಹೇಳಿದ್ದರು.

ಪಾಕ್‌ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ ಹೇಳಿಕೆ Read More »

ಧರ್ಮದ ಹೆಸರಲ್ಲಿ ಹಿಂಸಾಚಾರ : ಇಸ್ಲಾಂ ತ್ಯಜಿಸಿದ ಶಿಕ್ಷಕ

ಕೋಲ್ಕತ್ತಾ: ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮ ಕೇಳಿ ಪ್ರವಾಸಿಗರನ್ನು ಸಾಯಿಸಿದ ಕೃತ್ಯದ ಬಳಿಕ ಪಶ್ಚಿಮ ಬಂಗಾಳದ ಬದುರಿಯಾದ ಶಾಲಾ ಶಿಕ್ಷಕರೊಬ್ಬರು ಇಸ್ಲಾಂ ಧರ್ಮ ತ್ಯಜಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ವೀಡಿಯೋ ಹಂಚಿಕೊಂಡಿರುವ ಶಿಕ್ಷಕ ಸಬೀರ್ ಹುಸೇನ್, ಕಾಶ್ಮೀರ ಸೇರಿದಂತೆ ವಿವಿಧೆಡೆ ಧರ್ಮವನ್ನು ಹಿಂಸೆಗೆ ಆಯುಧವನ್ನಾಗಿ ಬಳಸಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ನಾನು ಇಸ್ಲಾಂನ್ನು ತ್ಯಜಿಸುತ್ತೇನೆ. ಯಾವ ಧರ್ಮದ ವ್ಯಾಪ್ತಿಗೂ ಒಳಪಡದೆ, ಕೇವಲ ಮಾನವನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ

ಧರ್ಮದ ಹೆಸರಲ್ಲಿ ಹಿಂಸಾಚಾರ : ಇಸ್ಲಾಂ ತ್ಯಜಿಸಿದ ಶಿಕ್ಷಕ Read More »

ಕಾಶ್ಮೀರದಲ್ಲಿ ಇನ್ನಿಬ್ಬರು ಉಗ್ರರ ಮನೆ ಧ್ವಂಸ

ಸ್ಫೋಟಕದ ಮೂಲಕ ಮನೆಗಳನ್ನು ನಾಶ ಮಾಡಿದ ಸೇನೆ ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಂದ ಭಯೋತ್ಪಾದಕ ಕೃತ್ಯದ ಬಳಿಕ ಉಗ್ರರ ಮನೆಗಳನ್ನು ಭದ್ರತಾ ಪಡೆ ನಾಶ ಮಾಡುತ್ತಿದೆ. ನಿನ್ನೆ ರಾತ್ರಿ ಐಇಡಿ ಸ್ಫೋಟಿಸಿ ಮತ್ತು ಬುಲ್‌ಡೋಜರ್‌ ಮೂಲಕ ಇಬ್ಬರು ಉಗ್ರರ ಮನೆಯನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಲಷ್ಕರ್ ಎ ತೊಯ್ಬಾದ ಉಗ್ರ ಸಂಘಟನೆಯ ಉಗ್ರ ಫಾರೂಕ್ ಎಂಬಾತನ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ

ಕಾಶ್ಮೀರದಲ್ಲಿ ಇನ್ನಿಬ್ಬರು ಉಗ್ರರ ಮನೆ ಧ್ವಂಸ Read More »

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ

ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಎನ್.ಎಸ್.ಎಸ್ ಘಟಕ ಮತ್ತು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ  ಕಛೇರಿ ಜಂಟಿಯಾಗಿ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಏ.25 ಶುಕ್ರವಾರದಂದು  ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯಾದ ಡಾ. ತ್ರಿಮೂರ್ತಿ ಅವರು ಉಪಸ್ಥಿತರಿದ್ದರು. ತಾಲೂಕು ಆರೋಗ್ಯ  ಶಿಕ್ಷಣ ಅಧಿಕಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಲೇರಿಯಾ ರೋಗವನ್ನು ತಡೆಗಟ್ಟುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್‍ಪೆಕ್ಟರ್ ಉಮರ್ ಖಾನ್ ಮತ್ತು

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ Read More »

ಮೇ1 : ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

ಪುತ್ತೂರು: ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮೇ1 ರಂದು ನಿಡ್ಪಳ್ಳಿಯ ಬ್ರಹ್ಮರ ಗುಂಡದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 300 ವರ್ಷಗಳ ಇತಿಹಾಸವಿರುವ ಬೆಮ್ಮೆರಗುಂಡ ಮೂಲಸ್ಥಾನ ಇದುವರೆಗೆ ತಿಳಿದು ಬಂದಿಲ್ಲವಿತ್ತು. ಈ ನಿಟ್ಟಿನಲ್ಲಿ ಆಲಂಕಾರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಅಧ್ಯಯನ ನಿರತವಾಗಿತ್ತು. ಇದೀಗ ಮೂಲಸ್ಥಾನ

ಮೇ1 : ಕೆಂಪು ಕೇಪುಲಾಜೆ  ಬೆಮ್ಮೆರೆ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ಯೋಜನಾ  ಕಛೇರಿಗೆ ನೂತನ ಯೋಜನಾಧಿಕಾರಿಯಾಗಿ ಸುರೇಶ್ ಗೌಡ ನೇಮಕ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ಯೋಜನಾ  ಕಛೇರಿಯಲ್ಲಿ ಕಳೆದ 1 ವರ್ಷಗಳಿಂದ ಕರ್ತವ್ಯ ಸಲ್ಲಿಸಿರುವ  ಯೋಜನಾಧಿಕಾರಿ ರಮೇಶ್ ರವರು  ಬೆಳ್ತಂಗಡಿ ಸಿ ಆರ್ ಇ ಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡಿದ್ದಾರೆ. ಮುಂದಕ್ಕೆ ನೂತನ ಯೋಜನಾಧಿಕಾರಿ ಯಾಗಿ ನೇಮಕಗೊಂಡ ಸುರೇಶ್ ಗೌಡ ರವರಿಗೆ  ವಿಟ್ಲ ಯೋಜನಾ  ಕಚೇರಿಯಲ್ಲಿ  ಅಧಿಕಾರ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ಯೋಜನಾ  ಕಛೇರಿಗೆ ನೂತನ ಯೋಜನಾಧಿಕಾರಿಯಾಗಿ ಸುರೇಶ್ ಗೌಡ ನೇಮಕ Read More »

error: Content is protected !!
Scroll to Top