ಸುದ್ದಿ

ಸೌದಿ ಅರೇಬಿಯಾ ರಸ್ತೆ ಅಪಘಾತದಲ್ಲಿ ಉಳ್ಳಾಲದ ಯುವಕ ಸಾವು

ಬಸ್ಸಿಗೆ ಬಸ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಮಂಗಳೂರು : ಸೌದಿ ಅರಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿ ಯುವಕ ಮೃತಪಟ್ಟಿದ್ದಾರೆ. ಮೃತನನ್ನು ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ. ಅಬ್ದುಲ್ ರಾಝಿಕ್ ಸೌದಿ ಅರೇಬಿಯಾದಲ್ಲಿ ಕೆಲಸದ ನಿಮಿತ್ತ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸೌದಿ ಅರೇಬಿಯಾದ ಜುಬೈಲ್‌ನ ಪಾಲಿಟೆಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಾಝಿಕ್ ಸೆ.14ರಂದು […]

ಸೌದಿ ಅರೇಬಿಯಾ ರಸ್ತೆ ಅಪಘಾತದಲ್ಲಿ ಉಳ್ಳಾಲದ ಯುವಕ ಸಾವು Read More »

ಪ್ರಚೋದನಾತ್ಮಕ ಭಾಷಣದ ಆರೋಪದಲ್ಲಿ ಯತ್ನಾಳ್ ವಿರುದ್ಧ ಕೇಸು ದಾಖಲು

ಬೆಂಗಳೂರು: ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ ನಡೆದ ಗಣೇಶೋತ್ಸವದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮದ್ದೂರಿನಲ್ಲಿಯೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದರು ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅವರು ತುಮಕೂರಿನಲ್ಲಿ ಶನಿವಾರ ನಡೆದ ಗಣೇಶ ವಿಸರ್ಜನಾ ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಅನ್ಯ ಕೋಮಿನ ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ್ದಾಗಿ ಪೊಲೀಸ್ ಸಿಬ್ಬಂದಿ ರಘುನಾಥ್ ದೂರು ನೀಡಿರುವುದಾಗಿದೆ. ಈ

ಪ್ರಚೋದನಾತ್ಮಕ ಭಾಷಣದ ಆರೋಪದಲ್ಲಿ ಯತ್ನಾಳ್ ವಿರುದ್ಧ ಕೇಸು ದಾಖಲು Read More »

ಪಂದ್ಯದಲ್ಲಿ ಅವಮಾನ : ಭಾರತ ವಿರುದ್ಧ ಪಾಕ್‌ ದೂರು

ಹ್ಯಾಂಡ್‌ ಶೇಕ್‌ ನೀಡದೆ ಶಿಷ್ಟಾಚಾರ ಉಲ್ಲಂಘನೆ ಎಂಬ ಆರೋಪ ದುಬೈ: ಇಲ್ಲಿ ನಡೆದ ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಅವಮಾನ ಒಂದೆಡೆಯಾದರೆ, ಅದಕ್ಕೂ ಮಿಗಿಲಾಗಿ ಭಾರತದ ಆಟಗಾರರು ಪಹಲ್ಗಾಮ್‌ ಉಗ್ರ ದಾಳಿ ಹಾಗೂ ಆಪರೇಷನ್‌ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎದುರಾಳಿ ತಂಡದ ಸಹ ಆಟಗಾರರು ಎಂಬ ಕನಿಷ್ಠ ಗೌರವವನ್ನು ನೀಡದೆ ನಡೆಸಿಕೊಂಡ ರೀತಿಯಿಂದ ಇನ್ನಿಲ್ಲದ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ತಂಡ ಈಗ ತನಗೆ ಸೂಕ್ತ ಗೌರವ ನೀಡಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಭಾರತದ

ಪಂದ್ಯದಲ್ಲಿ ಅವಮಾನ : ಭಾರತ ವಿರುದ್ಧ ಪಾಕ್‌ ದೂರು Read More »

ವಕ್ಫ್‌ ನಿಬಂಧನೆಗೆ ಸುಪ್ರೀಂ ಕೋರ್ಟ್‌ ತಡೆ

ಐದು ವರ್ಷ ಮುಸ್ಲಿಮ್‌ ಆಗಿದ್ದರೆ ಮಾತ್ರ ವಕ್ಫ್‌ ರಚನೆಗೆ ಅವಕಾಶ ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ರಲ್ಲಿನ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದ್ದು, ಒಬ್ಬ ವ್ಯಕ್ತಿ ವಕ್ಫ್ ರಚಿಸಲು ಐದು ವರ್ಷಗಳ ಕಾಲ ಮುಸ್ಲಿಂ ಆಗಿರಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರಗಳು ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮದ ಅನುಯಾಯಿಯಾಗಿ ಅರ್ಹತೆ ಪಡೆಯುತ್ತಾನೆಯೇ ಎಂದು ನಿರ್ಧರಿಸಲು ನಿಯಮಗಳನ್ನು ರೂಪಿಸುವವರೆಗೆ ಈ ಷರತ್ತು ಅಮಾನತಿನಲ್ಲಿರಲಿದೆ ಎಂದು ನಿರ್ದೇಶಿಸಿದೆ. ವಿಚಾರಣೆಯ ಸಮಯದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ

ವಕ್ಫ್‌ ನಿಬಂಧನೆಗೆ ಸುಪ್ರೀಂ ಕೋರ್ಟ್‌ ತಡೆ Read More »

ಹಿಂದೂ ಜಾತಿಗಳೊಂದಿಗೆ ಕ್ರಿಶ್ಚಿಯನ್‌ ಸೇರ್ಪಡೆ : ಮತಾಂತರಕ್ಕೆ ಸರ್ಕಾರದಿಂದಲೇ ಕುಮ್ಮಕ್ಕು ಎಂದ ವಿಜಯೇಂದ್ರ

ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಮಾಹಿತಿ ಸಂಗ್ರಹ ನೆಪದಲ್ಲಿ ಸಿದ್ದರಾಮಯ್ಯ ಹೊಸ ಕುತಂತ್ರ ಬೆಂಗಳೂರು: ಹಿಂದೂ ಧರ್ಮದ ಜಾತಿಯ ಹೆಸರುಗಳೊಂದಿಗೆ ‘ಕ್ರಿಶ್ಚಿಯನ್’ ಸೇರಿಸಿರುವ ಸರ್ಕಾರದ ಕ್ರಮ ಹೊಸ ವಿವಾದವನ್ನು ಸೃಷ್ಟಿ ಮಾಡಿದೆ. ಕ್ರಿಶ್ಚಿಯನ್‌ ಸೇರ್ಪಡೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ

ಹಿಂದೂ ಜಾತಿಗಳೊಂದಿಗೆ ಕ್ರಿಶ್ಚಿಯನ್‌ ಸೇರ್ಪಡೆ : ಮತಾಂತರಕ್ಕೆ ಸರ್ಕಾರದಿಂದಲೇ ಕುಮ್ಮಕ್ಕು ಎಂದ ವಿಜಯೇಂದ್ರ Read More »

ಅಮೆರಿಕದಲ್ಲಿ ಪತ್ನಿ, ಪುತ್ರನ ಎದುರೇ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ

ಕ್ಯೂಬಾ ಮೂಲದ ಪಾತಕಿ ಎಸಗಿದ ಕೃತ್ಯಕ್ಕೆ ಟ್ರಂಪ್‌ ಖಂಡನೆ ವಾಷಿಂಗ್ಟನ್‌ : ಕರ್ನಾಟಕ ಮೂಲದ 50 ವರ್ಷದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಹೆಂಡತಿ ಮತ್ತು ಮಗನ ಎದುರೇ ತಲೆ ಕತ್ತರಿಸಿ ಕೊಲೆ ಮಾಡಿದ ಬರ್ಬರ ಘಟನೆ ಸಂಭವಿಸಿದ್ದು, ಈ ಘಟನೆ ಜಾಗತಿಕವಾಗಿ ಕಳವಳಕ್ಕೆ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಂಥ ಕೃತ್ಯ ಎಸಗಿದವನಿಗೆ ಯಾವುದೇ ಕಾರಣಕ್ಕೂ ಮೃದು ಧೋರಣೆ ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಡಲ್ಲಾಸ್‌ನಲ್ಲಿ ಮೋಟೆಲ್‌ ಮ್ಯಾನೇಜರ್‌ ಆಗಿದ್ದ ಕರ್ನಾಟಕ ಮೂಲದ ಚಂದ್ರಮೌಳಿ ಬಾಬ್‌ ನಾಗಮಲ್ಲಯ್ಯ ಅವರನ್ನ

ಅಮೆರಿಕದಲ್ಲಿ ಪತ್ನಿ, ಪುತ್ರನ ಎದುರೇ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ Read More »

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಮುಡ್ನೂರು ಕಾರ್ಯಕ್ಷೇತ್ರದಲ್ಲಿ ಒಕ್ಕೂಟೋತ್ಸವ

ವಿಟ್ಲ ವಲಯದ ವಿಟ್ಲ ಮೂಡ್ನೂರು ಕಾರ್ಯಕ್ಷೇತ್ರದಲ್ಲಿ ಒಕ್ಕೂಟದ 20 ನೇ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡುತ್ತಾರು ರವರು ಮಾಡಿ ಯೋಜನೆಯ ಕಾರ್ಯಕ್ರಮಗಳ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಯಾಗಿ ಯೋಜನಾಧಿಕಾರಿ ಸುರೇಶ್ ಗೌಡ ಮಾತನಾಡಿ ಯೋಜನೆ ನಡೆದು ಬಂದ ದಾರಿ, ಯೋಜನೆ ಹಿನ್ನಲೆ, ಒಕ್ಕೂಟದ ಜವಾಬ್ದಾರಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅತಿಥಿಯಾಗಿ ಕೇಂದ್ರ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಮಾತನಾಡಿ ಯೋಜನೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವಿಷ್ಣುಮೂರ್ತಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಮುಡ್ನೂರು ಕಾರ್ಯಕ್ಷೇತ್ರದಲ್ಲಿ ಒಕ್ಕೂಟೋತ್ಸವ Read More »

ಹಾಸ್ಟೆಲ್‌ನಲ್ಲಿ ಮಲಗಿದ್ದ ಎಂಟು ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್‌ ಸುರಿದು ವಿಕೃತಿ

ಕಣ್ಣು ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ 8 ವಿದ್ಯಾರ್ಥಿಗಳು ಭುವನೇಶ್ವರ : ಹಾಸ್ಟೆಲ್​ನಲ್ಲಿ ಮಲಗಿದ್ದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್‌ ಅಂಟು ಸುರಿದು ವಿಕೃತಿ ಮೆರೆದಿರುವ ಅಮಾನವೀಯ ಘಟನೆಯೊಂದು ಒಡಿಶಾ ರಾಜ್ಯದ ಕಂಧಮಾಲ್‌ ಎಂಬಲ್ಲಿ ಸಂಭವಿಸಿದೆ. ಮಲಗಿರುವಾಗ 8 ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಹಾಕಲಾಗಿದೆ. ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಫಿರಿಂಗಿಯಾ ಬ್ಲಾಕ್‌ನ ಸಲಗುಡದಲ್ಲಿರುವ ಸೇವಾಶ್ರಮ್ ಶಾಲೆಯ ಹಾಸ್ಟೆಲ್​​​ನಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಬೆಳಗಾಗುವಷ್ಟರಲ್ಲಿ ಕಣ್ಣು ತೆರೆಯಲು ಸಾಧ್ಯವಾಗಲಿಲ್ಲ. ಮೊದಲು ಅವರನ್ನು ಸಮೀಪದ

ಹಾಸ್ಟೆಲ್‌ನಲ್ಲಿ ಮಲಗಿದ್ದ ಎಂಟು ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್‌ ಸುರಿದು ವಿಕೃತಿ Read More »

ಡ್ರಗ್ಸ್‌ ಮಾರಾಟಗಾರರ ಜೊತೆ ಕೈಜೋಡಿಸಿದ್ದ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರ ಅಮಾನತು

ತಿಂಗಳಿಗೆ 1ರಿಂದ 1.5 ಲ.ರೂ. ಕಮಿಷನ್‌ ಪಡೆಯುತ್ತಿದ್ದ ಪೊಲೀಸರು ಬೆಂಗಳೂರು: ಪೊಲೀಸರೇ ಡ್ರಗ್‌ ಪೆಡ್ಲರ್​ಗಳೊಂದಿಗೆ ಕೈಜೋಡಿಸಿರುವ ಆಘಾತಕಾರಿ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ಜೊತೆ ಸೇರಿ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿದ್ದ, ಡ್ರಗ್‌ ಪೆಡ್ಲರ್ಸ್ ಜೊತೆಗೆ ನಂಟು ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಮಂಜಣ್ಣ ಸೇರಿ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಯ 10 ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಡ್ರಗ್ಸ್‌ ಮಾರಾಟಗಾರರ ಜೊತೆ ಕೈಜೋಡಿಸಿದ್ದ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರ ಅಮಾನತು Read More »

ಉಡುಪಿಯಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಇಂದು ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಪ್ರದಾನ, ನಾಳೆ ಲೀಲೋತ್ಸವ ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಭಾನುವಾರ ಮತ್ತು ಸೋಮವಾರ (ಸೆ.14-15)ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಇದಕ್ಕಾಗಿ ವ್ಯಾಪಕ ತಯಾರಿ ಮಾಡಲಾಗಿದೆ. ದೇಶದ ಉಳಿದ ಭಾಗಗಳಲ್ಲಿ ಕೃಷ್ಣಾಷ್ಟಮಿ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಆಚರಣೆಯಾಗುವುದಾದರೆ ಉಡುಪಿಯಲ್ಲಿ ಜನ್ಮಾಷ್ಟಮಿಯನ್ನು ಸೌರಮಾನ ಕ್ಯಾಲೆಂಡರ್ (ಸೌರಮಾನ) ಪ್ರಕಾರ ಆಚರಿಸಲಾಗುತ್ತದೆ. ಸೌರಮಾನ ಪದ್ಧತಿಯ ಪ್ರಕಾರ ಸೆಪ್ಟೆಂಬರ್ 14ರಂದು ಅರ್ಘ್ಯ ಪ್ರದಾನ (ಶ್ರೀಕೃಷ್ಣನಿಗೆ ಮಧ್ಯರಾತ್ರಿಯ ಹೊತ್ತಿಗೆ ಅರ್ಪಣೆ) ನಡೆಯಲಿದೆ, ನಂತರ ಸೆಪ್ಟೆಂಬರ್15 ರಂದು ಲೀಲೋತ್ಸವ (ವಿಟ್ಲಪಿಂಡಿ)

ಉಡುಪಿಯಲ್ಲಿ ಇಂದು-ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ Read More »

error: Content is protected !!
Scroll to Top