ಸುದ್ದಿ

ಬಿಹಾರದಲ್ಲಿ ಎನ್‌ಡಿಎಗೆ ಗೆಲುವಿನ ಹಾರ ಎಂದ ಸಮೀಕ್ಷೆಗಳು

ಒಂಬತ್ತು ಎಕ್ಸಿಟ್‌ ಪೋಲ್‌ಗಳಲ್ಲಿ ಎನ್‌ಡಿಎಗೆ ಬಹುಮತದ ಭವಿಷ್ಯ ನವದೆಹಲಿ: ಬಿಹಾರದ ಮತದಾರ ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಟಕ್ಕೆ ಜೈ ಎಂದಿದ್ದಾನೆ ಎಂದಿವೆ ಎಲ್ಲ ಸಮೀಕ್ಷೆಗಳು. ಬಿಹಾರ ವಿಧಾನಸಭೆಗೆ ಮಂಗಳವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಬೆನ್ನಿಗೆ ಹಲವು ಚುನಾವಣೋತ್ತರ ಸಮೀಕ್ಷೆಗಳು ಸಂಭವನೀಯ ಫಲಿತಾಂಶವನ್ನು ಪ್ರಕಟಿಸಿವೆ. ಈ ಪೈಕಿ ಒಂಬತ್ತು ಸಮೀಕ್ಷೆಗಳು ಈ ಸಲವೂ ಬಿಜೆಪಿ-ಜೆಡಿಯು ಒಳಗೊಂಡಿರುವ ಎನ್‌ಡಿಎ ಮೈತ್ರಿಕೂಟವೆ ನಿಚ್ಚಳ ಬಹುಮತದೊಂದಿಗೆ ಮರಳಿ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ಭವಿಷ್ಯಗಳು ಸುಳ್ಳಾಗುವ […]

ಬಿಹಾರದಲ್ಲಿ ಎನ್‌ಡಿಎಗೆ ಗೆಲುವಿನ ಹಾರ ಎಂದ ಸಮೀಕ್ಷೆಗಳು Read More »

ನವದೆಹಲಿಯಲ್ಲಿ ಸ್ಪೋಟ: ರಕ್ಷಣಾ ಸಚಿವರು ಹೇಳಿದ್ದೇನು ಗೊತ್ತಾ?

ನವದೆಹಲಿ: ನವದೆಹಲಿ ಸ್ಪೋಟಕ್ಕೆ ಕಾರಣರಾದವರನ್ನು ‌ಸುಮ್ಮನೆ ಬಿಡುವುದಿಲ್ಲ. ಆ ಕೃತ್ಯ ನಡೆಸಿದವರನ್ನು ಪತ್ತೆ ಮಾಡುವ ಕಾರ್ಯವನ್ನು ಭಾರತೀಯ ತನಿಖಾ ಸಂಸ್ಥೆಗಳು ತ್ವರಿತ ಮತ್ತು ಸಮಗ್ರವಾಗಿ ಮಾಡುತ್ತಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ. ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಘಟನೆಯ ಬಗ್ಗೆ ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿವೆ ಎಂದು ಅವರು ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ. ತನಿಖೆಯ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಈ ದುರಂತಕ್ಕೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಲಾಗುವುದು ಮತ್ತು ಯಾವುದೇ ಸಂದರ್ಭದಲ್ಲೂ

ನವದೆಹಲಿಯಲ್ಲಿ ಸ್ಪೋಟ: ರಕ್ಷಣಾ ಸಚಿವರು ಹೇಳಿದ್ದೇನು ಗೊತ್ತಾ? Read More »

ವಂದೇ ಮಾತರಂ ವಿರೋಧಿಗಳು ಭಾರತ ಮಾತೆಯನ್ನು ವಿರೋಧಿಸಿದಂತೆ: ಯೋಗೀಜಿ

ಲಕ್ನೋ: ವಂದೇ ಮಾತರಂ ಗೀತೆಯ ವಿರೋಧಿಗಳು ಭಾರತ‌ ಮಾತೆಯನ್ನು ‌ವಿರೋಧಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ಎನ್ನುವುದು ಯಾವುದೇ ರೀತಿಯ ನಿರ್ಧಿಷ್ಟವಾದ ಪೂಜೆಗೆ ಸಂಬಂಧಿಸಿದ ವಿಷಯವಲ್ಲ. ಆ ಗೀತೆ ಭಾರತ ಮಾತೆಯ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ವಂದೇ ಮಾತರಂ ಯಾವುದೇ ವ್ಯಕ್ತಿ, ಜಾತಿ, ಪ್ರದೇಶಕ್ಕೆ ಸೇರಿದ ವಿಷಯವಲ್ಲ. ಸರಸ್ವತಿ, ಲಕ್ಷ್ಮೀ, ದುರ್ಗಾ ದೇವಿ ಮೊದಲಾದವರನ್ನು ಪೂಜೆ ಮಾಡುವುದು ಈ ದೇಶದ ಶಕ್ತಿಯ

ವಂದೇ ಮಾತರಂ ವಿರೋಧಿಗಳು ಭಾರತ ಮಾತೆಯನ್ನು ವಿರೋಧಿಸಿದಂತೆ: ಯೋಗೀಜಿ Read More »

ಕೆಂಪುಕೋಟೆ ‌ಸಮೀಪ ಬ್ಲಾಸ್ಟ್: ಸಂಚುಕೋರರನ್ನು ‌ಸುಮ್ಮನೆ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪುಕೋಟೆ ಸಮೀಪ ಬ್ಲಾಸ್ಟ್ ‌ಮಾಡಿದ ಸಂಚುಕೋರರನ್ನು ‌ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ತುಂಬಾ ಭಾರವಾದ ಹೃದಯದಿಂದ ನಾನಿಂದು ಇಲ್ಲಿಗೆ ಬಂದಿದ್ದೇನೆ. ನವದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಬ್ಲಾಸ್ಟ್ ಎಲ್ಲರನ್ನೂ ಶೋಕಸಾಗರಕ್ಕೆ ‌ನೂಕಿದೆ. ಈ ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡವರ ನೋವು ನನಗೆ ಅರ್ಥವಾಗುತ್ತದೆ. ಆ ಸಂತ್ರಸ್ತರ ಜೊತೆಗೆ ಇಡೀ ದೇಶವೇ ಇರುವುದಾಗಿ ಅವರು ಸಾಂತ್ವನ ಹೇಳಿದ್ದಾರೆ. ಈ ಪಿತೂರಿಯ ಆಳವನ್ನು ನಮ್ಮ ಸಂಸ್ಥೆಗಳು ಕಂಡುಹಿಡಿಯುತ್ತವೆ. ಈ

ಕೆಂಪುಕೋಟೆ ‌ಸಮೀಪ ಬ್ಲಾಸ್ಟ್: ಸಂಚುಕೋರರನ್ನು ‌ಸುಮ್ಮನೆ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ Read More »

ಉಗ್ರ ಉಮರ್‌ನ ತಾಯಿ, ಸಹೋದರರು ಮತ್ತು ಇತರ ಶಂಕಿತರ ಬಂಧನ

ನವದೆಹಲಿ: ಕೆಂಪು ಕೋಟೆಯ ಸಮೀಪ ನಡೆದ ಕಾರ್ ಬ್ಲಾಸ್ಟ್ ‌ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಗ್ರ ಉಮರ್‌ನ ತಾಯಿ, ಸಹೋದರರು ಸೇರಿದಂತೆ ಒಟ್ಟು ಹದಿಮೂರು ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪುಲ್ವಾಮಾ‌ದಿಂದ ಉಮರ್‌‌ನ ಇಬ್ಬರು ಸಹೋದರರು ಮತ್ತು ದೆಹಲಿಯ ವಿವಿಧ ಲಾಡ್ಜ್‌ಗಳಿಂದ ಕೆಲವು ಸಂಶಯಾಸ್ಪದ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸುಮಾರು 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಲವಾರು ಸಿಸಿಟಿವಿ‌ಗಳ ಪರಿಶೀಲನೆಯನ್ನು ಸಹ ಪೊಲೀಸರು ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಅನಂತನಾಗ್ ಜಿಎಂಸಿಯಲ್ಲಿ ರೆಸಿಡೆಂಟ್ ಡಾಕ್ಟರ್

ಉಗ್ರ ಉಮರ್‌ನ ತಾಯಿ, ಸಹೋದರರು ಮತ್ತು ಇತರ ಶಂಕಿತರ ಬಂಧನ Read More »

ಭಾರತ್ ಸಿನಿಮಾಸ್‌ನಲ್ಲಿ ‌ನಡೆಯಿತು ಮಾಹಿ ಚಿತ್ರದ ಪ್ರೀಮಿಯರ್ ಶೋ

ಪುತ್ತೂರು: ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಭಾನುವಾರ ಮದ್ಯಾಹ್ನ 2:00 ಗಂಟೆಯಿಂದ 7:00 ಗಂಟೆವರೆಗೆ ನಡೆಯಿತು. ಒಟ್ಟು ನಾಲ್ಕು ಶೋ ಗಳು ನಡೆದಿದ್ದು ಇದರಲ್ಲಿ ಎಲ್ಲಾ ಶೋ ಗಳು ಕೂಡ ಭರ್ತಿಯಾಗಿದ್ದವು. ಈ ನಾಲ್ಕೂ ಶೋ ಗಳಲ್ಲಿ ಅತಿಥಿ ಅಭ್ಯಾಗತರಾಗಿ ಅನೇಕ ಗಣ್ಯರು ಆಗಮಿಸಿದ್ದರು. ವಿಜಯ್ ಸಾಮ್ರಾಟ್ ಸಹಜ್ ರೈ, ಹಿಂದೂ ನಾಯಕ ಅರುಣ್ ಪುತ್ತಿಲ, ಪ್ರಸಿದ್ಧ ಚಲನಚಿತ್ರ ನಟ ಎಂ ಕೆ ಮಠ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅನುವoಶೀಯ

ಭಾರತ್ ಸಿನಿಮಾಸ್‌ನಲ್ಲಿ ‌ನಡೆಯಿತು ಮಾಹಿ ಚಿತ್ರದ ಪ್ರೀಮಿಯರ್ ಶೋ Read More »

ಪಿ ಟಿ ಸಿ ಎ ಟ್ರೋಫಿ: ಆರ್ ಕ್ಯೂಬ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವಿಟ್ಲ : ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ (ರಿ) ಮತ್ತು ದ. ಕ. ಜಿಲ್ಲಾ ಚೆಸ್ ಅಸೋಸಿಯೇಷನ್ (ರಿ) ಇವರ ಸಹಯೋಗದೊಂದಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ PTCA TROPHY , ಓಪನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ, ಆರ್ ಕ್ಯೂಬ್ ಚೆಸ್ ಅಕಾಡೆಮಿ ವಿಟ್ಲ ಇಲ್ಲಿಯ ವಿದ್ಯಾರ್ಥಿಗಳಾದ ಅಭಿನವ್ ರಾಮ್.ಎಸ್, ಅಮೃತ.ಎಸ್, ಮೋಕ್ಷಿತಾ, ಶೃತಿಕ್ ಇವರು ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ರೋಹಿತ್ ಕುಮಾರ್ ಟಿ. ತರಬೇತಿ ನೀಡಿದ್ದಾರೆ. ಆರ್ ಕ್ಯೂಬ್ ಚೆಸ್ ಅಕಾಡೆಮಿಯ

ಪಿ ಟಿ ಸಿ ಎ ಟ್ರೋಫಿ: ಆರ್ ಕ್ಯೂಬ್ ಚೆಸ್ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ Read More »

ಧರ್ಮೇಂದ್ರ ನಿಧನ ಸುದ್ದಿ ಸುಳ್ಳು : ಹೇಮಮಾಲಿನಿ ಸ್ಪಷ್ಟನೆ

ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಮುಂಬೈ : ಹಿರಿಯ ನಟ ಧರ್ಮೇಂದ್ರ ನಿಧನರಾಗಿರುವ ಸುದ್ದಿ ಸುಳ್ಳು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪತ್ನಿ ಹೇಮಮಾಲಿನಿ ತಿಳಿಸಿದ್ದಾರೆ. ಧರ್ಮೇಂದ್ರ ಮುಂಬೈಯ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಇಂದು ಈ ಮೊದಲು ವರದಿಯಾಗಿತ್ತು. ಇದು ಯಾರೋ ಅವಸರದಲ್ಲಿ ಹರಡಿದ ಸುಳ್ಳು ಸುದ್ದಿ ಎಂಬುದಾಗಿ ಧರ್ಮೇಂದ್ರ ಅವರ ಪುತ್ರಿ ಈಶಾ ಡಿಯೋಲ್‌ ಸ್ಪಷ್ಟೀಕರಣ ನೀಡಿದ್ದಾರೆ. ಸುದ್ದಿವಾಹಿನಿಗಳ ವಿರುದ್ಧ ಕಿಡಿಕಾರಿದ ಹೇಮಮಾಲಿನಿ ಜವಾಬ್ದಾರಿಯುತ ಮಾಧ್ಯಮಗಳು

ಧರ್ಮೇಂದ್ರ ನಿಧನ ಸುದ್ದಿ ಸುಳ್ಳು : ಹೇಮಮಾಲಿನಿ ಸ್ಪಷ್ಟನೆ Read More »

ಇವನೇ ದಿಲ್ಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಡಾ.ಉಮರ್

ಸಿಕ್ಕಿಬೀಳುವ ಭಯದಲ್ಲಿ ಆತ್ಮಾಹುತಿ ದಾಳಿ ಮಾಡಿ ಸತ್ತಿರುವ ಅನುಮಾನ ನವದೆಹಲಿ: ಕೆಂಪುಕೋಟೆ ಬಳಿ ನಿನ್ನೆ ಸಂಜೆ ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ.ಉಮರ್ ಯು ನಬಿ ಸೂಸೈಡ್‌ ಬಾಂಬರ್‌ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. 2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಡಾ.ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ

ಇವನೇ ದಿಲ್ಲಿ ಸ್ಫೋಟದ ಪ್ರಮುಖ ಶಂಕಿತ ಆರೋಪಿ ಡಾ.ಉಮರ್ Read More »

ಡ್ರಗ್ಸ್‌ ದಂಧೆ : ಮೆಡಿಕಲ್‌ ವಿದ್ಯಾರ್ಥಿ ಸೇರಿ ಮೂವರು ಸೆರೆ

ಉಳ್ಳಾಲ: ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಕೋಟೆಕಾರು ಗ್ರಾಮದ ಬಗಂಬಿಲ ಗೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ನ.9ರಂದು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 59,300 ರೂ. ಬೆಲೆಬಾಳುವ 1.511 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪಕ, 2 ಮೊಬೈಲ್, 1 ಸ್ಕೂಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ಧುಲೆ ನಿವಾಸಿ ಮೊಹಮ್ಮದ್ ನಿಗಾರೀಸ್ (22) ವಿಲಾಸಿ ಜೀವನಕ್ಕಾಗಿ

ಡ್ರಗ್ಸ್‌ ದಂಧೆ : ಮೆಡಿಕಲ್‌ ವಿದ್ಯಾರ್ಥಿ ಸೇರಿ ಮೂವರು ಸೆರೆ Read More »

error: Content is protected !!
Scroll to Top