ಸುದ್ದಿ

ಕಾರುಗಳ ಡಿಕ್ಕಿ : ಒಂದೇ ಕುಟುಂಬದ ಐದು ಮಂದಿ ಸಾವು

ಮಂತ್ರಾಲಯಕ್ಕೆ ಹೊರಟಿದ್ದವರ ಕಾರು ಭೀಕರ ಅಪಘಾತ ಬೆಂಗಳೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಕೊಟೆಕಲ್‌ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 164ರಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕೋಲಾರ ಮೂಲದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇದರಲ್ಲಿ ಇಬ್ಬರು ಪುಟ್ಟ ಮಕ್ಕಳೂ ಇದ್ದಾರೆ. ಮತ್ತೊಂದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರು ಒಂದೇ ಕಾರಿನಲ್ಲಿ […]

ಕಾರುಗಳ ಡಿಕ್ಕಿ : ಒಂದೇ ಕುಟುಂಬದ ಐದು ಮಂದಿ ಸಾವು Read More »

ವಿಟ್ಲ : ಎಟಿಎಂ ಕಾರ್ಡ್‌ ಪಡೆದು ಮಹಿಳೆಗೆ ಲಕ್ಷಕ್ಕೂ ಅಧಿಕ ವಂಚನೆ

ವಿಟ್ಲ : ಅಪರಿಚಿತ ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರಿಂದ ಎಟಿಎಂ ಕಾರ್ಡ್‌ ಪಡೆದು ಲಕ್ಷಾಂತರ ರೂ. ವಂಚಿಸಿದ ಘಟನೆ ವಿಟ್ಲದಲ್ಲಿ ಶುಕ್ರವಾರ ನಡೆದಿದೆ. ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ಮಹಿಳೆ ವಿಟ್ಲಕಸಬಾ ಗ್ರಾಮದ ಫಾತಿಮ ಬಿಲ್ಡಿಂಗ್‌ನಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ತೆರಳಿ 6,000 ರೂ. ಡ್ರಾ ಮಾಡಿ ಹೊರಗಡೆ ಬರುತ್ತಿದ್ದ ಸಂದರ್ಭ ಎಟಿಎಂ ಕೇಂದ್ರದ ಒಳಗಡೆಯಿದ್ದ ಅಪರಿಚಿತ ವ್ಯಕ್ತಿಗಳು ಮಹಿಳೆಯನ್ನು ಕರೆದು ಎಟಿಎಂ ಅನ್ನು ಸರಿಯಾಗಿ ಮುಚ್ಚಬೇಕೆಂದು ಹೇಳಿದ್ದಾರೆ. ಅದರಂತೆ ಮಹಿಳೆ ಕೇಂದ್ರದ ಒಳಗೆ ಹೋಗಿ ನೋಡಿ ಹೊರಗಡೆ ಬರುವಾಗ

ವಿಟ್ಲ : ಎಟಿಎಂ ಕಾರ್ಡ್‌ ಪಡೆದು ಮಹಿಳೆಗೆ ಲಕ್ಷಕ್ಕೂ ಅಧಿಕ ವಂಚನೆ Read More »

ಉಪ್ಪಿನಂಗಡಿ : ಪಲ್ಟಿಯಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಟೆಂಪೊ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಪರಿಸರದ ಕೆಂಪುಹೊಳೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿ, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು, ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ : ಪಲ್ಟಿಯಾಗಿ ಬಸ್ಸಿಗೆ ಡಿಕ್ಕಿ ಹೊಡೆದ ಟೆಂಪೊ Read More »

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌

ಸಂವಾದ ಕಾರ್ಯಕ್ರಮದಲ್ಲಿ ಹಿಂದುಗಳ ದೇವತೆಗಳನ್ನು ಅವಮಾನಿಸಿದ್ದ ಮಾಜಿ ಸಚಿವೆ ಬೆಂಗಳೂರು: ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದು ಕರೆದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಬಂಡಾಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ.23ರಂದು ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ‌ ನಡೆದ ಸಂವಾದದಲ್ಲಿ ಲಲಿತಾ ನಾಯ್ಕ್‌ “ರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶರಲ್ಲ ಅವರು ಕ್ರೂರಿಗಳು” ಎಂಬ ಹೇಳಿದ್ದರು. ಭಕ್ತಿಯ ಜೊತೆಗೆ ಬೆರೆತ ಮೌಢ್ಯ ಜನರ ವಿಚಾರ ಶಕ್ತಿಯನ್ನು

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌ Read More »

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ

ಮುಖ್ಯಮಂತ್ರಿ ನಿವಾಸದಲ್ಲಿ ಸಿಎಂ-ಡಿಸಿಎಂ ನಡುವೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬೆಂಗಳೂರು: ಅಧಿಕಾರ ಹಂಚಿಕೆ ಗುದ್ದಾಟದ ನಡುವಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ನೇರ ಮಾತುಕತೆ ನಡೆಯಲಿರುವುದು ಕುತೂಹಲ ಕೆರಳಿಸಿದೆ. ಕುರ್ಚಿ ಕಚ್ಚಾಟ ಶುರುವಾದ ಬಳಿಕ ಬಹಳ ಸಮಯದ ಬಳಿಕ ಹೀಗೆ ಸಿಎಂ ಮತ್ತು ಡಿಸಿಎಂ ಮುಖಾಮುಖಿಯಾಗುತ್ತಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಬೆಳಗ್ಗೆ 9.30ಕ್ಕೆ ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್‌ ಮೀಟಿಂಗ್ ನಡೆಯಲಿದೆ ಎನ್ನಲಾಗಿದೆ. ಮೊದಲು ನೀವಿಬ್ಬರು ಮಾತನಾಡಿಕೊಂಡು ಸ್ಪಷ್ಟತೆಗೆ ಬನ್ನಿ, ಯಾವುದೇ ಗೊಂದಲ

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ Read More »

ಮೋದಿಗೆ ಭಾರತ ಭಾಗ್ಯವಿದಾತ ಬಿರುದು ಪ್ರದಾನ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದ ಲಕ್ಷಕಂಠ ಗೀತಾ ಗಾಯನ-ಪಾರಾಯಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪುತ್ತಿಗೆ ಮಠದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಂಸ್ಕೃತದಲ್ಲಿ ಹಾಡಿ ಹೊಗಳಿ ಬಿರುದೊಂದನ್ನು ನೀಡಿದರು. ಸ್ವಾಮೀಜಿಗಳು ವಿಶೇಷವಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಹಾಗೂ ಧರ್ಮ ರಕ್ಷಣೆಗೆ ಪ್ರಧಾನಿ ಮೋದಿ ನೀಡಿದ ಕೊಡುಗೆಗಳನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿದಾತ’ ಎಂಬ ಬಿರುದು ಸಮರ್ಪಣೆ ಮಾಡಲಾಯಿತು. ಜೊತೆಗೆ ರಾಷ್ಟ್ರ ರಕ್ಷಣೆಯ ಕವಚ ಮತ್ತು ಶ್ರೀಕೃಷ್ಣನ

ಮೋದಿಗೆ ಭಾರತ ಭಾಗ್ಯವಿದಾತ ಬಿರುದು ಪ್ರದಾನ Read More »

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ

ವಿಕಸಿತ ಭಾರತ ಸಂಕಲ್ಪ ಪೂರ್ಣವಾಗಲು ಜನರಿಗೆ 9 ಕರ್ತವ್ಯ ತಿಳಿಸಿದ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎಂದು ಪ್ರಶಂಸೆ ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಎಂದು ಬಣ್ಣಿಸಿದ ಮೋದಿ ಉಡುಪಿ: ಜನರು 9 ಬಗೆಯ ಕರ್ತವ್ಯ ನಿರ್ವಹಿಸಿದರೆ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಿದೆ. ಲಕ್ಷ ಕಂಠ ಗೀತ ಗಾಯನ ಅತ್ಯುತ್ತಮ ಕಾರ್ಯಕ್ರಮ, ಅದರಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ ಸಾಧ್ಯ. ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ Read More »

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ

ರೋಡ್‌ ಶೋದಲ್ಲಿ ಪ್ರಧಾನಿಯನ್ನು ಕಂಡು ಪುಳಕಿತರಾದ ಜನ ಉಡುಪಿ: 17 ವರ್ಷಗಳ ಬಳಿಕ ಕೃಷ್ಣನಗರಿ ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃಷ ಮಠದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಪರ್ಯಾಯ ಪುತ್ತಿಗೆ ಶ್ರೀಗಳು ತಿಲಕವಿಟ್ಟು ಪ್ರಧಾನಿಯನ್ನು ಸಾಂಪ್ರದಾಯಿಒಕವಾಗಿ ಸ್ವಾಗತಿಸಿದರು. ಮಧ್ವ ತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಯಾದ ಬಳಿಕ ಕನಕನ ಕಿಂಡಿಯ ಮೂಲಕ ಮೋದಿ ಕೃಷ್ಣನ ದರ್ಶನ ಪಡೆದರು. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ

ಕೃಷ್ಣ ಮಠದ ಧಾರ್ಮಿಕ ಕಾರ್ಯದಲ್ಲಿ ಮೋದಿ ಭಾಗಿ Read More »

ಉಡುಪಿ : ನರೇಂದ್ರ ಮೋದಿಯ ರೋಡ್‌ ಶೋ ಆರಂಭ

ವಿಮಾನ ನಿಲ್ದಾಣದಲ್ಲಿ ದಿನೇಶ್‌ ಗುಂಡೂರಾವ್‌ ಸ್ವಾಗತ ಮಂಗಳೂರು : ಉಡುಪಿಯ ಕೃಷ್ಣ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಉಡುಪಿಗೆ ತೆರಳಿದ ಮೋದಿಯ ರೋಡ್‌ ಶೋ ಆರಂಭವಾಗಿದೆ. ಬೆಳಗ್ಗೆ 10.25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನಮಂತ್ರಿಗಳನ್ನು, ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್,

ಉಡುಪಿ : ನರೇಂದ್ರ ಮೋದಿಯ ರೋಡ್‌ ಶೋ ಆರಂಭ Read More »

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷ ಪ್ರಾಯದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಾಲಕಿಯನ್ನು ಗರ್ಭಿಣಿಯಾಗಿಸಿದ ಬಗ್ಗೆ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕಿ ವೇಣೂರು ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಅಲ್ಲಿದ್ದ ಬಾಲಕಿಯ ಅತ್ತೆಯ ಮಗ ಬಾಲಕಿಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ಇದಾದ ಬಳಿಕ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬಳಿಕ ಬಾಲಕಿ

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ Read More »

error: Content is protected !!
Scroll to Top