ಸುದ್ದಿ

ಬಾರ್ಯ ಕ್ಷೇತ್ರದಲ್ಲಿ ಡಾ. ಯೋಗಿಂದ್ರ ಭಟ್ ಅವರಿಗೆ ಅಭಿನಂದನೆ

ಉಪ್ಪಿನಂಗಡಿ: ಅಮೆರಿಕಾದ ಫ್ಲೋರಿಡಾದ ಯೋಗ ಯುನಿವರ್ಸಿಟಿಯಿಂದ ಉಪವಾಸ ಮತ್ತು ಆಧ್ಯಾತ್ಮಿಕ ಪ್ರಗತಿ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಡಾ.ಯೋಗಿಂದ್ರ ಭಟ್ ಇವರಿಗೆ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಇಂಜಿನಿಯರ್ ಯಜ್ಞೇಶ್ ಪುತ್ತಿಲ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಜರಗಿತು. ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿನಂದನಾ […]

ಬಾರ್ಯ ಕ್ಷೇತ್ರದಲ್ಲಿ ಡಾ. ಯೋಗಿಂದ್ರ ಭಟ್ ಅವರಿಗೆ ಅಭಿನಂದನೆ Read More »

ರಸ್ತೆಯಲ್ಲಿ ಸಿಕ್ಕಿದ 45 ಲ.ರೂ. ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

ಬಡ ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆಗೆ ಮುಖ್ಯಮಂತ್ರಿಯಿಂದಲೇ ಮೆಚ್ಚುಗೆ ಚೆನ್ನೈ : ರಸ್ತೆಯಲ್ಲಿ ಒಂದು ರೂಪಾಯಿ ನಾಣ್ಯ ಬಿದ್ದು ಸಿಕ್ಕಿದರೂ ಮೆಲ್ಲಗೆ ಜೇಬಿಗಿಳಿಸುವವರ ನಡುವೆ ಪೌರ ಕಾರ್ಮಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಲ. ರೂ. ಮೌಲ್ಯದ ಆಭರಣವನ್ನು ವಾರೀಸುದಾರರಿಗೆ ಮರಳಿಸಿ ಅಪೂರ್ವವಾದ ಪ್ರಾಮಾಣಿಕತೆ ಮೆರೆದಿದ್ದಾರೆ. ನಗರದಲ್ಲಿ ಕಸ ಸ್ವಚ್ಛಗೊಳಿಸುವ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿ ಪೌರ ಕಾರ್ಮಿಕ ಮಹಿಳೆಯೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಸ್ತೆಯಲ್ಲಿ ಸಿಕ್ಕಿದ 45 ಲ.ರೂ. ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ Read More »

ಜಾರ್ಖಂಡ್ ವ್ಯಕ್ತಿಗೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳ ಸೆರೆ

ಬಾಂಗ್ಲಾದೇಶದವನು ಎಂದು ಭಾವಿಸಿ ಹಲ್ಲೆ ಮಂಗಳೂರು: ಬಾಂಗ್ಲಾದೇಶದ ಪ್ರಜೆ ಎಂದು ಭಾವಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಕೂಳೂರು ಗ್ರಾಮ ನಿವಾಸಿಗಳಾದ ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಜ.11ರಂದು ಸಂಜೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ದಿಲ್ಜಾನ್ ಅನ್ಸಾರಿ ಎಂಬವರನ್ನು ತಡೆದು ನಿಲ್ಲಿಸಿ, ನೀನು

ಜಾರ್ಖಂಡ್ ವ್ಯಕ್ತಿಗೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳ ಸೆರೆ Read More »

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರು ಮಂದಿ ಉಪನ್ಯಾಸಕರು ಕರ್ತವ್ಯದಿಂದ ವಜಾ

ಬೆಂಗಳೂರು: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ಆರು ಮಂದಿ ಉಪನ್ಯಾಸಕರನ್ನು ವಜಾ ಮಾಡಲಾಗಿದೆ. ಜ. 8 ರಂದು ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಕಾಲೇಜಿನ ಉಪನ್ಯಾಸಕರೇ ಕಾರಣ ಎಂದು ಉಪನ್ಯಾಸಕರು ಮತ್ತು ಆಕೆಯ ಸಹಪಾಠಿಗಳು ಆರೋಪಿಸಿದ್ದರು. ಉಪನ್ಯಾಸಕರು ಮಾಡಿದ ಜನಾಂಗೀಯ ನಿಂದನೆ, ಕಿರುಕುಳದಿಂದ ‌ನೊಂದು, ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಈ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರೂ ‌ಸೇರಿದಂತೆ ಒಟ್ಟು ಐವರು

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರು ಮಂದಿ ಉಪನ್ಯಾಸಕರು ಕರ್ತವ್ಯದಿಂದ ವಜಾ Read More »

ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ

ರಾಜಸ್ಥಾನ: ಅಜ್ಮೀರ್ ದರ್ಗಾ ಪ್ರದೇಶವು ಮೂಲತಃ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂಬ ಹೇಳಿಕೆಯೊಂದಿಗೆ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯೊಂದು ‌ಸಲ್ಲಿಕೆಯಾಗಿದ್ದು, ಇದು ಸದ್ಯ ಹೊಸ ವಿವಾದವೊಂದನ್ನು ಸೃಷ್ಠಿ ಮಾಡಿದೆ. ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಈ ಅರ್ಜಿ ಸಲ್ಲಿಕೆ ಮಾಡಿರುವುದಾಗಿದೆ. ಅಜ್ಮೀರ್ ಶಿವ ದೇವಾಲಯವನ್ನು ನಂತರದ ಕಾಲದಲ್ಲಿ ದರ್ಗಾ‌ವಾಗಿ ಪರಿವರ್ತನೆ ಮಾಡಲಾಗಿದೆ. ಬಹುಕಾಲದಿಂದಲೂ ನಾನು ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿದ್ದು, ಆ ಪ್ರದೇಶದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆಯೂ ಅವರು

ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ Read More »

ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಜಿ.ಪರಮೇಶ್ವರ ಹೆಸರು : ಬಿಜೆಪಿ ವಿರೋಧ

ಸದ್ದಿಲ್ಲದೆ ಕ್ರೀಡಾಂಗಣದ ಹೆಸರು ಬದಲಾವಣೆ ; ಕಾಂಗ್ರೆಸ್‌ಗೆ ತೀವ್ರ ಮುಜುಗರ ಬೆಂಗಳೂರು: ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಕಾಂಗ್ರೆಸ್ ನಾಯಕ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸಟ್ಟಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ. ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರು ಕೈ ಬಿಟ್ಟು ರಾಮನ ಹೆಸರಿಟ್ಟಿದ್ದಕ್ಕೆ ಇಡೀ ದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ ಕರ್ನಾಟಕದಲ್ಲಿ ಸದ್ದಿಲ್ಲದೆ ಗಾಂಧೀಜಿ ಹೆಸರು ಬದಲಾಯಿಸುರುವುದು ಕಾಂಗ್ರೆಸ್‌ ಪಾಲಿಗೆ ತೀವ್ರ ಮುಜುಗರವುಂಟು ಮಾಡಿದೆ. ಈ ಮೂಲಕ ವಿರೋಧ ಪಕ್ಷ ಬಿಜೆಪಿ ಕೈಗೆ

ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಜಿ.ಪರಮೇಶ್ವರ ಹೆಸರು : ಬಿಜೆಪಿ ವಿರೋಧ Read More »

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ವ್ಯಕ್ತಿಯ ಹತ್ಯೆ

ರಿಕ್ಷಾ ಚಾಲಕನನ್ನು ಕೊಂದು ಹೊಲದಲ್ಲಿ ಎಸೆದ ದುಷ್ಕರ್ಮಿಗಳು ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾ ಸರಣಿ ಮುಂದುವರಿದಿದೆ. ದಕ್ಷಿಣ ಬಾಂಗ್ಲಾದ ಫೆನಿ ಜಿಲ್ಲೆಯ ಧಗನ್​ಭುಯಾನ್​ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ. ಸಮೀರ್ ಕುಮಾರ್ ದಾಸ್ ಮೃತ ವ್ಯಕ್ತಿ. ಆಟೋ ಚಾಲಕನನ್ನು ಕೊಂದು ಆಟೋವನ್ನು ಕೂಡ ಕಳವು ಮಾಡಲಾಗಿದೆ. ಕುಟುಂಬದವರ ಪ್ರಕಾರ, ಸಮೀರ್ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು, ತಡರಾತ್ರಿಯಾದರೂ ಅವನು ಹಿಂತಿರುಗದಿದ್ದಾಗ, ಕುಟುಂಬದವರು ಅವರನ್ನು

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದೂ ವ್ಯಕ್ತಿಯ ಹತ್ಯೆ Read More »

ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ : 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ

ಸರ್ವಾಧಿಕಾರಿ ಖಮೇನಿ ವಿರುದ್ಧ ಭುಗಿಲೆದ್ದ ಆಕ್ರೋಶ ; ಮುಲ್ಲಾಗಳು ದೇಶಬಿಟ್ಟು ಹೋಗಲು ಒತ್ತಾಯ ಟೆಹ್ರಾನ್‌: ಇರಾನ್‌ನಲ್ಲಿ ಮುಲ್ಲಾಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ಜೋರಾಗಿದೆ. ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಸಣ್ಣಮಟ್ಟದಲ್ಲಿ ಆರಂಭವಾದ ಪ್ರತಿಭಟನೆ ತೀವ್ರಗೊಂಡಿದ್ದು, ಇರಾನ್‌ ಜನರು ಈಗ ಮಸೀದಿಗೆ ಬೆಂಕಿ ಹಾಕುತ್ತಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತದ ವಿರುದ್ಧ ತಿರುಗಿ ಬಿದ್ದ ಪ್ರತಿಭಟನಕಾರರು ಸುಮಾರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಷ್ಟರ ತನಕ ಪ್ರತಿಭಟನೆಗೆ 650ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಇರಾನ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ : 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ Read More »

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು

ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದ ಉದ್ಯಮಿ ಮಂಗಳೂರು: ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲದ ಅಯ್ಯಪ್ಪ ವ್ರತಧಾರಿಯೋರ್ವರು ಕೇರಳದ ಎರಿಮಲೆ ಬೆಟ್ಟ ಏರುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತ ವ್ಯಕ್ತಿ. ಚಂದ್ರಹಾಸ್ ಅವರು ಅಯ್ಯಪ್ಪ ವ್ರತಾಧಾರಿಗಳ ಜೊತೆ ಶನಿವಾರ ಅರ್ಕುಳ ತುಪ್ಪೆಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಸೋಮವಾರ ಬೆಳಗ್ಗೆ ಚಂದ್ರಹಾಸ್ ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ

ಶಬರಿಮಲೆಯಲ್ಲಿ ಹೃದಯಾಘಾತದಿಂದ ಉಳ್ಳಾಲದ ಉದ್ಯಮಿ ಸಾವು Read More »

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ

ಬೆಂಗಳೂರಿನಿಂದ ಮಂಗಳೂರಿಗೆ ಮಾದಕವಸ್ತು ಪೂರೈಸುತ್ತಿದ್ದ ಜಾಲದ ಪ್ರಮುಖ ಸೂತ್ರಧಾರಿ ಮಹಿಳೆ ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವ್ಯವಸ್ಥಿತ ರೀತಿಯಲ್ಲಿ ಮಾದಕ ದ್ರವ್ಯ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಅವಳಿಂದ ಸುಮಾರು 4 ಕೋ. ರೂ. ಮೌಲ್ಯದ 4 ಕೆಜಿ ಡ್ರಗ್ಸ್‌ ವಸ್ತು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಹೊರವಲಯದ ಜಿಗಾನಿಯಲ್ಲಿ 4 ಕೆಜಿ ಎಂಡಿಎಂಎ ಜೊತೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯನ್ನು ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದ್ದು, ವಶಪಡಿಸಿಕೊಂಡ ಅಕ್ರಮ ವಸ್ತುಗಳ ಮೌಲ್ಯ

4 ಕೋ. ರೂ. ಮೌಲ್ಯದ ಡ್ರಗ್ಸ್‌ ವಶ : ಉಗಾಂಡದ ಮಹಿಳೆ ಬಂಧನ Read More »

error: Content is protected !!
Scroll to Top