ಅಪಘಾತ

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ

ನವದೆಹಲಿ: ಕಟ್ಟಡವೊಂದರಲ್ಲಿ ಬೆಂಕಿ ಹತ್ತಿಕೊಂಡು ಒಂಬತ್ತು ಜನರು ಸಜೀವ ಸುಟ್ಟು ಹೋದ ಘಟನೆ ನೈಋತ್ಯ ದೆಹಲಿಯ ಪಾಲಂ ಎಂಬಲ್ಲಿ ನಡೆದಿದೆ. ಇಂದು ಬೆಳಗ್ಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಏಕಾಏಕಿ ಈ ದುರಂತ ಸಂಭವಿಸಿರುವುದಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಸುಮಾರು 30 ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಕಟ್ಟಡದ ಒಳಗೆ ಜನರು ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಬೆಂಕಿ ಅವಘಡ Read More »

ಸರ್ಕಾರಿ ಬಸ್‌ ಡಿಕ್ಕಿ ಹೊಡೆದು ಟೆಂಪೊ ಚಾಲಕ ಸಾವು

ಮಂಗಳೂರು : ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಬಳಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮಿನಿ ಗೂಡ್ಸ್ ಟೆಂಪೊ ಚಾಲಕ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತರನ್ನು ಬಂಟ್ವಾಳದ ಕೆಲಿಂಜೆಯ ಲೆಸ್ಟರ್ ಡೇವಿಡ್ ಡಿ’ಸೋಜಾ (30) ಎಂದು ಗುರುತಿಸಲಾಗಿದೆ. ಕಾರ್ಕಳದಿಂದ ಮೂಡುಬಿದಿರೆಯ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್ ಟೆಂಪೋ ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ ) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ

ಸರ್ಕಾರಿ ಬಸ್‌ ಡಿಕ್ಕಿ ಹೊಡೆದು ಟೆಂಪೊ ಚಾಲಕ ಸಾವು Read More »

ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಬಾಲಕಿ ಸಾವು; ಇಬ್ಬರಿಗೆ ಗಾಯ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಲ್ಲೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 5 ವರ್ಷ ಪ್ರಾಯದ ಬಾಲಕಿ ಮೃತಪಟ್ಟು ಇತರ ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ತಣ್ಣಿರುಪಂತ ಗ್ರಾಮದ ಕೊಡಂಗೆ ಮನೆ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಮಗಳು ಸಾಜಿರಾ ಮತ್ತು ಮೊಮ್ಮಗಳು ಸುಹೈರಾಳನ್ನು ಕುಳ್ಳಿರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ವೇಣೂರು ಮೂಲದ ಶಿವಪ್ರಸಾದ್ ಎಂಬವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಸುಹೈರಾ ಮತ್ತಾಕೆಯ ತಾಯಿ ಸಾಜಿರಾ

ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಬಾಲಕಿ ಸಾವು; ಇಬ್ಬರಿಗೆ ಗಾಯ Read More »

ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ : ಆತಂಕದಲ್ಲಿ ‌ಸ್ಥಳೀಯರು

ಕಟಪಾಡಿ: ಗ್ಯಾಸ್‌ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಕಟಪಾಡಿ ಸಮೀಪ ನ್ಯಾಷನಲ್ ಹೈವೇ 66 ರಲ್ಲಿ ನಡೆದಿದೆ. ಕಟಪಾಡಿ ಜಂಕ್ಷನ್ ಸಮೀಪ ನಡೆದಿರುವ ಈ ಘಟನೆಯಿಂದ ಸಾರ್ವಜನಿಕರಲ್ಲಿ ಗ್ಯಾಸ್ ಸೋರಿಕೆಯ ಭೀತಿ ಎದುರಾಗಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಘಟನೆಯ ಕಾರಣಕ್ಕೆ ಹೆದ್ದಾರಿಯಲ್ಲಿ ವಾಹನಗಳು ಸಹ ಸಾಲುಗಟ್ಟಿ ‌ನಿಂತಿವೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಪು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ : ಆತಂಕದಲ್ಲಿ ‌ಸ್ಥಳೀಯರು Read More »

ಕರೆಂಟ್ ಕಂಬಕ್ಕೆ ಗುದ್ದಿದ ಬಸ್: ಅದೃಷ್ಟವಶಾತ್ ತಪ್ಪಿದ ಅನಾಹುತ

ಚಿಕ್ಕಮಗಳೂರು: ಖಾಸಗಿ ಬಸ್ ಒಂದು ಕರೆಂಟ್ ಕಂಬಕ್ಕೆ ಗುದ್ದಿದ್ದು, ಯಾವುದೇ ದೊಡ್ಡ ಮಟ್ಟದ ಅನಾಹುತ ನಡೆಯದೇ‌ ಪವಾಡಸದೃಶ ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಸಂಗಮೇಶ್ವರಪೇಟೆಯ ಬಳಿ ನಡೆದಿದೆ. ಎದುರಿಗೆ ಬಂದ ವಾಹನವೊಂದಕ್ಕೆ ದಾರಿ ನೀಡಲು ಖಾಸಗಿ ಬಸ್ಸಿನ ಚಾಲಕರು ಮುಂದಾಗಿದ್ದಾರೆ. ಆದರೆ ಮಳೆಯ ಕಾರಣದಿಂದ ಜಾರುತ್ತಿದ್ದ ರಸ್ತೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಕಂಬ ಹಲ್ಲಿನ ಮೇಲೆಯೇ ಮುರಿದು ಬಿದ್ದಿದೆ. ವಿದ್ಯುತ್ ಸಂಪರ್ಕ ತಕ್ಷಣ ಕಡಿತವಾದ ‌ಕಾರಣದಿಂದ ಭಾರೀ

ಕರೆಂಟ್ ಕಂಬಕ್ಕೆ ಗುದ್ದಿದ ಬಸ್: ಅದೃಷ್ಟವಶಾತ್ ತಪ್ಪಿದ ಅನಾಹುತ Read More »

ಸುಳ್ಯ : ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯ

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಸಮೀಪ ಬೋಳುಬೈಲು ಎಂಬಲ್ಲಿ ಕಾರು ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ಪುತ್ತೂರಿನಿಂದ ಸುಳ್ಯದತ್ತ ಹೋಗುತ್ತಿದ್ದ ಕಾರು ಬೋಳುಬೈಲಿನಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್‌ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಹೇಮಾ ಮತ್ತು ಶ್ರೀಚಂದ್‌ ಎಂಬವರು ಗಾಯಗೊಂಡಿದ್ದಾರೆ. ಅವರ ಪುಟ್ಟ ಮಗು ಮತ್ತು ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದರು.

ಸುಳ್ಯ : ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯ Read More »

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ : 10 ರೋಗಿಗಳು ಸಾವು

ಐಸಿಯುನಲ್ಲಿದ್ದ ರೋಗಿಗಳು ಉಸಿರುಕಟ್ಟಿ ಒದ್ದಾಡಿ ಸಾವು ಕಟಕ್ : ಒಡಿಶಾದ ಕಟಕ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡಕ್ಕೆ 10 ರೋಗಿಗಳು ಬಲಿಯಾಗಿದ್ದಾರೆ. 11ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ. ಎಸ್​ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಮಧ್ಯರಾತ್ರಿಯ ನಂತರ 2.30ರಿಂದ 3 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ

ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ : 10 ರೋಗಿಗಳು ಸಾವು Read More »

ಭೀಕರ ಅಪಘಾತ : ಮೂವರು ಪೊಲೀಸ್‌ ಅಧಿಕಾರಿಗಳು ಸಾವು

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೀಸಲು ಪೊಲೀಸ್‌ ಪಡೆಯ ಮೂವರು ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 150ಎ ಹೆಗ್ಗೆರೆ ಬಳಿ ಅಪಘಾತ ಸಂಭವಿಸಿದ್ದು, ರಿಸರ್ವ್ ಸಬ್‌ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಅಂಬರೀಶ್, ಸಚಿನ್ ಮೃತ ದುರ್ದೈವಿಗಳು. ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಕಡೆಯಿಂದ ಬಳ್ಳಾರಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. PSI ಈಶ್ವರ್,

ಭೀಕರ ಅಪಘಾತ : ಮೂವರು ಪೊಲೀಸ್‌ ಅಧಿಕಾರಿಗಳು ಸಾವು Read More »

ಬೈಕ್‌ಗಳ ನಡುವೆ ಭೀಕರ ಅಪಘಾತ: ಯುವಕ ಮೃತ್ಯು

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಎರಡು ಬೈಕುಗಳ ‌ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ‌ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಶಂಭೂರು ನಿವಾಸಿ ರಕ್ಷಿತ್ ‌ಶೆಟ್ಟಿ(43) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಕ್ಷಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉತ್ತಮ ವಿಡಿಯೋಗ್ರಾಫರ್ ಆಗಿದ್ದ ಅವರು ಬಂಟ್ವಾಳ ವಲಯ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಅವರ ಮನೆಯಲ್ಲಿ ತಮ್ಮ ಮಗಳ 10 ನೇ ಹುಟ್ಟುಹಬ್ಬಕ್ಕೆ ‌ಸಿದ್ಧತೆ ಸಹ ನಡೆಸಿದ್ದರು.

ಬೈಕ್‌ಗಳ ನಡುವೆ ಭೀಕರ ಅಪಘಾತ: ಯುವಕ ಮೃತ್ಯು Read More »

ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ವಿಜಯಪುರ: ಕಾರು ಪಲ್ಟಿಯಾದ ಪರಿಣಾಮ ಈರ್ವರು ಸ್ಥಳದಲ್ಲೇ ಮೃತಪಟ್ಚ ಘಟನೆ ಬಸವನ ಬಾಗೇವಾಡಿ ತಾಳೀಕೋಟೆಯ ‌ಬಸವನಹಟ್ಟಿ ಕ್ರಾಸ್ ಬಳಿ ನಡೆದಿದೆ. ಬೆಳಗಾವಿಯ ಕಾಗವಾಡ ಪಟ್ಟಣದ ಚಂದ್ರವ್ವ ಟಕ್ಕೆನ್ನವರ (70) ಮತ್ತು ಕಾಮಪ್ಪ ಅವರಾದಿ (65) ಎಂಬವರೇ ‌ಮೃತ ದುರ್ದೈವಿಗಳು. ಸ್ವಿಫ್ಟ್ ಕಾರಿನಲ್ಲಿ ನಾಲ್ವರು ಶ್ರೀಶೈಲಕ್ಕೆ ಹೋಗುತ್ತಿದ್ದು, ಈ ವೇಳೆ ದುರಂತ ಸಂಭವಿಸಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು Read More »

error: Content is protected !!
Scroll to Top