ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ
ಕಾಸರಗೋಡು: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ. ಬಸ್ಗೆ ಗುದ್ದಿರುವ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ಕರ್ನಾಟಕದ ಪುತ್ತೂರು ವಿಭಾಗದ ಬಸ್ಸು ಇದಾಗಿದ್ದು ಕಾಸರಗೋಡಿನಿಂದ ಪ್ರಯಾಣಿಕರನ್ನು ಹೊತ್ತು ಪುತ್ತೂರಿನ ಕಡೆಗೆ ಬರುತ್ತಿತ್ತು. ಈ ವೇಳೆ ಅತಿ ವೇಗದಿಂದ ಬಂದ ಸ್ವಿಫ್ಟ್ ಕಾರು ಬಸ್ಗೆ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿರುವುದಾಗಿಯೂ ವರದಿಯಾಗಿದೆ.
ಅತಿವೇಗದಿಂದ ಬಂದ ಕಾರು ಸರ್ಕಾರಿ ಬಸ್ಸಿಗೆ ಢಿಕ್ಕಿ Read More »










