ಅಪಘಾತ

ಚಿರತೆ ಅಡ್ಡ ಬಂದ ಪರಿಣಾಮ ಗುಂಡಿಗೆ ಬಿದ್ದ ಟ್ರ್ಯಾಕ್ಟರ್

ಭರಮಸಾಗರ: ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆಯೊಂದು ಜಿಗಿದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿದ ಘಟನೆ ನಡೆದಿದೆ. ಓಬಳಾಪುರ ಗ್ರಾಮದ ಉಮೇಶ್ ಎಂಬವರ ‌ಟ್ರ್ಯಾಕ್ಟರ್‌ಗೆ ಚಿರತೆ ಅಡ್ಡ ಬಂದ ಪರಿಣಾಮ ಟ್ರ್ಯಾಕ್ಟರ್ ಗುಂಡಿಗೆ ಬಿದ್ದಿರುವುದಾಗಿದೆ. ಆ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಕಳೆದ ವರ್ಷವೂ ಕಂಡು ಬಂದಿದ್ದು, ವಿಡಿಯೋ ಸಹ ವೈರಲ್ ಆಗಿತ್ತು.‌ಈ ಬಾರಿಯೂ ಚಿರತೆಯ ಸಂಚಾರ ಇರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆ ಸಮಸ್ಯೆಯನ್ನು ಬಗೆಹರಿಸುವಂತೆ […]

ಚಿರತೆ ಅಡ್ಡ ಬಂದ ಪರಿಣಾಮ ಗುಂಡಿಗೆ ಬಿದ್ದ ಟ್ರ್ಯಾಕ್ಟರ್ Read More »

ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ

ಸಿಟಿ ಬಸ್‌ ಚಾಲಕ, ಕಂಡಕ್ಟರ್‌ ಮಾನವೀಯತೆಗೆ ವ್ಯಾಪಕ ಪ್ರಶಂಸೆ ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಿಟಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವ ಮೂಲಕ ಮಾನವೀಯತೆಯ ಕಾರ್ಯ ಮಾಡಿದ್ದಾರೆ. ಕಾವೂರಿನಿಂದ ಕುಂಜತ್‌ಬೈಲ್‌ಗೆ ರೂಟ್ ನಂ. 13B ನಲ್ಲಿ ಪ್ರಯಾಣಿಸುತ್ತಿದ್ದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಮಾನವೀಯತೆ ಮೆರೆದು ಮಾದರಿಯಾದರು. ಮರಕಡ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ

ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ Read More »

ಬಂಟ್ವಾಳ : ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಕಾಂಪೌಂಡ್‌ಗೆ ಡಿಕ್ಕಿ

ಬಂಟ್ವಾಳ : ಇಂಟರ್‌ಲಾಕ್ ಸಿಮೆಂಟ್ ಬ್ಲಾಕ್‌ಗಳನ್ನು ಸಾಗಿಸುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಳದಲ್ಲಿ ರಾತ್ರಿ ವೇಳೆ ನಡೆದಿದೆ. ಬಿ.ಸಿ.ರೋಡ್‌ – ಪೊಳಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಲಾರಿ ಬಿ.ಸಿ.ರೋಡ್‌ ಕಡೆಯಿಂದ ಬರುತ್ತಿದ್ದಾಗ ಏಕಾಏಕಿ ನಿಯಂತ್ರಣ ತಪ್ಪಿ ಜೆಫ್ರಿ ಫೆರ್ನಾಂಡಿಸ್ ಅವರ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ, ಅದರಲ್ಲಿ ತುಂಬಿದ್ದ ಇಂಟರ್‌ಲಾಕ್ ಸಿಮೆಂಟ್ ಬ್ಲಾಕ್‌ಗಳು ಮನೆಯ ಅಂಗಳ ಹಾಗೂ

ಬಂಟ್ವಾಳ : ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಕಾಂಪೌಂಡ್‌ಗೆ ಡಿಕ್ಕಿ Read More »

ಟಯರ್‌ ಸ್ಫೋಟಿಸಿ ಲಾರಿಗೆ ಡಿಕ್ಕಿಯಾದ ಕಾರು : ಐವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿಯಾದ ಪರಿಣಾಮ ಐವರು ದುರ್ಮರಣಕ್ಕೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿ ನಡೆದಿದೆ. ಚಳ್ಳಕೆರೆ ಮೂಲದ ಛಾಯಾಗ್ರಾಹಕ ರಾಘವೇಂದ್ರ, ರುದ್ರೇಶ್, ಸೋಮ, ಮಲ್ಲಿಕಾರ್ಜುನ, ಪ್ರಮೋದ್ ಸ್ಥಳದಲ್ಲೇ‌ ಮೃತಪಟ್ಟವರು. ಕಾರಿನಲ್ಲಿ ಬಳ್ಳಾರಿಯಿಂದ ಚಳ್ಳಕೆರೆಗೆ ಆಗಮಿಸುತ್ತಿದ್ದು, ಚಳ್ಳಕೆರೆ ಛಾಯಾಗ್ರಾಹಕರ ಸಂಘದ ಸಹ ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಐವರು ಬಳ್ಳಾರಿಗೆ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಅತಿವೇಗದಿಂದಾಗಿ ಕಾರಿನ ಟೈಯರ್‌ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ‌ ಕಾರು

ಟಯರ್‌ ಸ್ಫೋಟಿಸಿ ಲಾರಿಗೆ ಡಿಕ್ಕಿಯಾದ ಕಾರು : ಐವರು ಸ್ಥಳದಲ್ಲೇ ಸಾವು Read More »

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು

ನಿರ್ಮಾಣ ಹಂತದಲ್ಲಿದ್ದ ಸೇತುವೆ ಚಂಡಮಾರುತದ ಹೊಡೆತಕ್ಕೆ ಧರಾಶಾಯಿ ಲಖನೌ: ಚಂಡಮಾರುತಕ್ಕೆ ಸಿಕ್ಕಿ ಬೆಟ್ಟಾ ನದಿಯ ಮೇಲೆ‌ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 6 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ನಿರ್ಮಿಸಿದ್ದ ಸೇತುವೆಯೇ ಈಗ ಜನರ ಜೀವಕ್ಕೆ ಸಂಚಕಾರ ತಂದಿದೆ. ಘಟನೆಯಲ್ಲಿ ಈವರೆಗೆ 6 ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಚಂಡಮಮಾರುತಕ್ಕೆ ಸೇತುವೆ ಕುಸಿದು 6 ಕಾರ್ಮಿಕರು ಸಾವು Read More »

ಬಸ್ – ಕಾರು ನಡುವೆ ಅಪಘಾತ

ಮೂಡಬಿದಿರೆ: ಖಾಸಗಿ ಬಸ್ – ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ನಡೆದಿದೆ. ಗುದ್ದಿದ ರಭಸಕ್ಕೆ ಎರಡೂ ವಾಹನಗಳಿಗೆ ತೀವ್ರ ಹಾನಿಯಾಗಿದೆ. ಕಾಂತಾವರ ‌ಕ್ರಾಸ್ ಸಮೀಪ ಇರುವ ಯು ಟರ್ನ್ ಅನ್ನು ಬುಧವಾರದಿಂದ ಬಂದ್ ಮಾಡಲಾಗಿದೆ. ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಹೋಗುವ ಕ್ರಾಸ್ ರಸ್ತೆಯನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಗೊಂದಲ ಉಂಟಾಗಿದೆ. ರಸ್ತೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕಾಂತಾವರ ಕಡೆಯಿಂದ ಬರುವ ವಾಹನಗಳು

ಬಸ್ – ಕಾರು ನಡುವೆ ಅಪಘಾತ Read More »

ಬಸ್‌-ಟೆಂಪೋ ಟ್ರಾವೆಲರ್‌ ಡಿಕ್ಕಿ : ಮಹಿಳೆ ಸಾವು, 7 ಮಂದಿಗೆ ಗಾಯ

ಸುಬ್ರಹ್ಮಣ್ಯ ದೇವಸ್ಥಾನ ಯಾತ್ರಾರ್ಥಿಗಳಿದ್ದ ಟೆಂಪೋ ಟ್ರಾವೆಲರ್‌ ಸುಳ್ಯ: ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಮೇ 25ರಂದು ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯದತ್ತ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಎಂಬವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್‌ನಲ್ಲಿ 14

ಬಸ್‌-ಟೆಂಪೋ ಟ್ರಾವೆಲರ್‌ ಡಿಕ್ಕಿ : ಮಹಿಳೆ ಸಾವು, 7 ಮಂದಿಗೆ ಗಾಯ Read More »

ಆಟೋ – ಬೈಕ್ ಅಪಘಾತ: ಆರು ತಿಂಗಳ ಮಗು ಸೇರಿ ಮೂವರು ಸಾವು

ಬೆಳಗಾವಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಬೆಳಗಾವಿ ಜಿಲ್ಲೆಯ ರಾಯಭಾಗದ ರೈಲು ನಿಲ್ದಾಣದ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಒಂದೇ ಕುಟುಂಬದ ಮೂರು ಜನರು ಮೃತಪಟ್ಟ ಘಟನೆ ನಡೆದಿದೆ. ಅಪ್ಪ, ಅಮ್ಮನ ಜೊತೆಗೆ ಆರು ತಿಂಗಳ ಮಗು ಮೃತಪಟ್ಟಿರುವುದಾಗಿದೆ. ಬೊಮ್ಮನಾಳ‌ ನಿವಾಸಿಗಳಾದ ಮಹಾಂತೇಶ್ ಮಾನೆ, ಸಾಕ್ಷಿ ಮಾನೆ ಹಾಗೂ ಇನ್ನೂ ಹೆಸರು ಸಹ ಇರಿಸದ ಅವರ ಆರು ತಿಂಗಳ ಮಗು ಈ ದುರ್ಘಟನೆಯಲ್ಲಿ ಬಲಿಯಾದ ದುರ್ದೈವಿಗಳು. ದಂಪತಿ ಮಗುವಿನ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ

ಆಟೋ – ಬೈಕ್ ಅಪಘಾತ: ಆರು ತಿಂಗಳ ಮಗು ಸೇರಿ ಮೂವರು ಸಾವು Read More »

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಮಂಗಳೂರು: ಕಾರ್ ಮತ್ತು ಬೈಕ್ ನಡುವೆ ಸೋಮಂತಡ್ಕ‌ ಅಗರಿ ‌ಕ್ರಾಸ್ ಸಮೀಪ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಫೋಟೋಗ್ರಾಫರ್ ಗಣೇಶ್ ಗೌಡ (36) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಬೆಳ್ತಂಗಡಿಯ ಕಳೆಂಜ ನಿವಾಸಿಯಾದ ಇವರು ಉಜಿರೆಯಲ್ಲಿ ತಮ್ಮದೇ ಸ್ಟುಡಿಯೋ ನಡೆಸುತ್ತಿದ್ದರು. ಮೇ 24 ರಂದು ಉಜಿರೆಯಿಂದ ಕಕ್ಕಿಂಜೆಗೆ ಬೈಕಿನಲ್ಲಿ ತೆರಳುವ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು, ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು Read More »

ಪುತ್ತೂರು : ವಿದ್ಯುತ್‌ ಶಾಕ್‌ ಹೊಡೆದು ಯುವಕ ಮೃತ್ಯು

ಪುತ್ತೂರು : ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಬೇಲೂರು ಮೂಲದ ಯುವಕನೋರ್ವಮೃತಪಟ್ಟ ಘಟನೆ ಮೇ 24ರಂದು ರಾತ್ರಿ ಸಂಭವಿಸಿದೆ. ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಮೃತಪಟ್ಟ ಯುವಕ. ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ನಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್‌ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ.

ಪುತ್ತೂರು : ವಿದ್ಯುತ್‌ ಶಾಕ್‌ ಹೊಡೆದು ಯುವಕ ಮೃತ್ಯು Read More »

error: Content is protected !!
Scroll to Top