ರಾಜ್ಯ

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ

ಶಾಲೆ ದಾಖಲಾತಿಗಾಗಿ ಹೊಸ ನಿಯಮ ರಚಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಈಗ ಶಾಲೆ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶಾತಿ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲೇ ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ. ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕಿರುಕುಳ ಕೊಡುವುದು, ಮಕ್ಕಳ ದಾಖಲಾತಿಗೆ ಪೋಷಕರಿಗೆ ಪರೀಕ್ಷೆ ಇಡುವುದು ಹಾಗೂ ದುಬಾರಿ ಶುಲ್ಕ ವಸೂಲು ಮಾಡುವುದು ಇತ್ಯಾದಿಗಳಿಗೆ ಕಡಿವಾಣ ಹಾಕಲಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ […]

ಖಾಸಗಿ ಶಾಲೆಗಳ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ತಡೆ Read More »

ಕುಕ್ಕೆ ಕ್ಷೇತ್ರದ ವಾರ್ಷಿಕ ಆದಾಯ 155.95 ಕೋ.ರೂ. ಏರಿಕೆ

ಹಿಂದಿನ ವರ್ಷಕ್ಕಿಂತ 9.94 ಕೋ.ರೂ. ಹೆಚ್ಚಳ ಸುಬ್ರಹ್ಮಣ್ಯ: ರಾಜ್ಯದಲ್ಲೇ ಅತಿಹೆಚ್ಚು ಆದಾಯವಿರುವ ಪುಣ್ಯಕ್ಷೇತ್ರವಾಗಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಕಳೆದ ಹಣಕಾಸು ಸಾಲಿನಲ್ಲೂ ಭಾರಿ ಹೆಚ್ಚಳವಾಗಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ.ಗೆ ಏರಿಕೆ ಆಗಿದೆ. ಹಿಂದಿನ ವರ್ಷದ ಆದಾಯ 146.01 ಕೋಟಿ ರೂ. ಆಗಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ

ಕುಕ್ಕೆ ಕ್ಷೇತ್ರದ ವಾರ್ಷಿಕ ಆದಾಯ 155.95 ಕೋ.ರೂ. ಏರಿಕೆ Read More »

ಲಾರಿ ಮುಷ್ಕರ ಇಂದಿನಿಂದ ಇನ್ನಷ್ಟು ತೀವ್ರ

ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಭೀತಿ ಬೆಂಗಳೂರು: ಡೀಸೆಲ್‌ ಬೆಲೆ ಏರಿಕೆ ಪ್ರತಿಭಟಿಸಿ ಸೋಮವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರವನ್ನು ಇಂದಿನಿಂದ ಮತ್ತಷ್ಟು ತೀವ್ರರಗೊಳಿಸಲು ತೀವ್ರಗೊಳಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗುತ್ತಿದ್ದು, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಅಭಾವದ ಬಿಸಿ ತಟ್ಟಲು ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅನೇಕ ವಸ್ತುಗಳು ದುಬಾರಿಯಾಗುತ್ತಿವೆ.ಲಾರಿ ಮುಷ್ಕರವನ್ನು ನೆಪವಾಗಿಟ್ಟುಕೊಂಡು ಕಾಳಸಂತೆ ದಂಧೆಕೋರರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ

ಲಾರಿ ಮುಷ್ಕರ ಇಂದಿನಿಂದ ಇನ್ನಷ್ಟು ತೀವ್ರ Read More »

ಸುರತ್ಕಲ್ ಬೀಚ್‌ನಲ್ಲಿ ಇಬ್ಬರು ಯುವಕರು ಸಮುದ್ರಪಾಲು: ಓರ್ವ ಮೃತ, ಇನ್ನೋರ್ವ ನಾಪತ್ತೆ

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ಮಂಗಳೂರು: ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬಯಿಯಿಂದ ಬಂದಿದ್ದ ಇಬ್ಬರು ಯುವಕರು ಸುರತ್ಕಲ್‌ ಬೀಚ್‌ನಲ್ಲಿ ನೀರುಪಾಲಾದ ದುರಂತ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಒಬ್ಬನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ನಾಪತ್ತೆಯಾಗಿದ್ದು ತೀವ್ರ ಹುಡುಕಾಟ ನಡೆಯುತ್ತಿದೆ. ಮೃತ ಯುವಕನನ್ನು ಮುಂಬಯಿಯ ವಿವೇಕ್‌ ಎಂಬವರ ಪುತ್ರ ಜ್ಞಾನ್‌ ಬಂಜನ್‌ (18) ಎಂದು ಗುರುತಿಸಲಾಗಿದೆ. ಮುಂಬಯಿಯ ಉಮೇಶ್‌ ಎಂಬವರ ಪುತ್ರ ಅನಿಲ್‌ (16) ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. ರಾಜ್ಯ ತುರ್ತು ಸ್ಪಂದನ

ಸುರತ್ಕಲ್ ಬೀಚ್‌ನಲ್ಲಿ ಇಬ್ಬರು ಯುವಕರು ಸಮುದ್ರಪಾಲು: ಓರ್ವ ಮೃತ, ಇನ್ನೋರ್ವ ನಾಪತ್ತೆ Read More »

ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು : ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈರುತ್ಯ ರೈಲ್ವೆ ಕೆಲವು ವಿಶೇಷ ರೈಲುಗಳನ್ನು ಓಡಿಸಲಿದೆ. ಈ ಪೈಕಿ ಒಂದು ರೈಲು ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿದೆ. ರೈಲು ಸಂಖ್ಯೆ 06579 ಏಪ್ರಿಲ್ 17ರಂದು ರಾತ್ರಿ 11.55ಕ್ಕೆ ಬೆಂಗಳೂರಿನಿಂದ (ಎಸ್​ಎಂವಿಟಿ) ಹೊರಟು ಮರುದಿನ ಸಂಜೆ 4 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ. ರೈಲು ಸಂಖ್ಯೆ 06580 ಏಪ್ರಿಲ್ 20ರಂದು ಮಧ್ಯಾಹ್ನ 2.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಬೆಂಗಳೂರು (ಎಸ್​ಎಂವಿಟಿ) ತಲುಪುತ್ತದೆ.1 ಪ್ರಥಮ

ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ Read More »

ಜಾತಿ ಗಣತಿ ವರದಿಗೆ ಎಲ್ಲೆಡೆಯಿಂದ ವಿರೋಧ : ಅಡಕತ್ತರಿಯಲ್ಲಿ ಸಿಲುಕಿದ ಸರಕಾರ

ಪ್ರಬಲ ಸಮುದಾಯಗಳಿಂದ ಪ್ರತ್ಯೇಕ ಗಣತಿ, ಹೋರಾಟದ ಎಚ್ಚರಿಕೆ ಬೆಂಗಳೂರು: ಏನೇನೋ ಲೆಕ್ಕಾಚಾರ ಹಾಕಿ ಬಿಡುಗಡೆ ಮಾಡಿದ ಜಾತಿ ಗಣತಿ ವರದಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲಿಗೆ ಬಿಸಿತುಪ್ಪವಾಗುವ ಲಕ್ಷಣ ಕಾಣಿಸಿದೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರೂ ಅದಕ್ಕೂ ಮೊದಲೇ ವರದಿಯ ಕೆಲವು ಅಂಶಗಳು ಬಹಿರಂಗವಾಗಿ ಎಲ್ಲೆಲ್ಲೂ ಆಕ್ರೋಶ ವ್ಯಕ್ತವಾಗುತ್ತದೆ. ಮುಖ್ಯವಾಗಿ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ವರದಿ ವಿರುದ್ಧ ಸಿಡಿದು ನಿಂತಿದ್ದಾರೆ. ಇದರ ಜೊತೆಗೆ ಇತರ

ಜಾತಿ ಗಣತಿ ವರದಿಗೆ ಎಲ್ಲೆಡೆಯಿಂದ ವಿರೋಧ : ಅಡಕತ್ತರಿಯಲ್ಲಿ ಸಿಲುಕಿದ ಸರಕಾರ Read More »

ಸಂಧಾನ ವಿಫಲ : ಮೂರನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ

ಮುಖ್ಯಮಂತ್ರಿ ಮನವೊಲಿಕೆಗೂ ಬಗ್ಗದ ಲಾರಿ ಮಾಲೀಕರು ಬೆಂಗಳೂರು : ಮುಷ್ಕರ ಹೂಡಿರುವ ಲಾರಿ ಮಾಲೀಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನಡೆಸಿದ ಸಂಧಾನ ಸಭೆ ವಿಫಲಗೊಂಡಿದ್ದು, ಲಾರಿ ಮುಷ್ಕರ ಮುಂದುವರಿದಿದೆ. ಏರಿಸಿದ ಡೀಸೆಲ್ ದರ ಇಳಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಏ.14ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ಕೈಬಿಡುವಂತೆ ಲಾರಿ ಮಾಲೀಕರ ಸಂಘದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಲಾರಿ ಮಾಲೀಕರ ಸಂಘ ಒಪ್ಪದ ಹಿನ್ನೆಲೆಯಲ್ಲಿ ಸುದೀರ್ಘ

ಸಂಧಾನ ವಿಫಲ : ಮೂರನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ Read More »

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಮತ್ತೆ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು : ಸುಳ್ಯದ ಬೆಳ್ಳಾರೆಯಲ್ಲಿ 2022ರಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಇನ್ನೂ 4 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ. ಇದುವರೆಗೂ ಈ ಪ್ರಕರಣದಲ್ಲಿ 21 ಆರೋಪಿಗಳನ್ನ ಬಂಧಿಸಲಾಗಿದ್ದು, ಓರ್ವ ಮೃತಪಟ್ಟಿದ್ದಾನೆ. 2022ರ ಜು.26ರಂದು ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆ ನಡೆದಿತ್ತು. ಅಬ್ದುಲ್ ರೆಹಮಾನ್, ನೌಷದ್, ಅಬ್ದುಲ್ ನಾಸೀರ್ ಮತ್ತು ಅತೀಕ್ ಅಹ್ಮದ್​ ಎಂಬವರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಚಾರ್ಜ್​ಶೀಟ್ ಸಲ್ಲಿಸಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಮತ್ತೆ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ Read More »

ಮುಡಾ ಹಗರಣ : ಲೋಕಾಯುಕ್ತ ವರದಿ ಮೇಲಿನ ತೀರ್ಪು ಇಂದು

ಸಿದ್ದರಾಮಯ್ಯನವರಿಗೆ ಕ್ಲೀನ್‌ಚಿಟ್‌ ನೀಡಿರುವ ಲೋಕಾಯುಕ್ತ ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಲೋಕಾಯುಕ್ತರು ನೀಡಿರುವ ಕ್ಲೀನ್‌ಚೀಟ್ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಜನಪ್ರತಿನಿಧಿ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಜನಪ್ರತಿನಿಧಿ ನ್ಯಾಯಾಲಯಕ್ಕೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು. ಜೊತೆಗೆ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ಕೂಡ ಲೋಕಾಯುಕ್ತ ವರದಿ ಪ್ರಶ್ನಿಸಿ ಅರ್ಜಿ ಹಾಕಿತ್ತು. ಎಲ್ಲರ ವಾದ ಆಲಿಸಿರುವ ನ್ಯಾಯಾಲಯ ಇವತ್ತು ಲೋಕಾಯುಕ್ತ ವರದಿ ಒಪ್ಪಿಕೊಳ್ಳಬೇಕಾ ಅಥವಾ ತಿರಸ್ಕರಿಸಬೇಕಾ ಎಂಬ ತೀರ್ಪು

ಮುಡಾ ಹಗರಣ : ಲೋಕಾಯುಕ್ತ ವರದಿ ಮೇಲಿನ ತೀರ್ಪು ಇಂದು Read More »

ಜಾತಿ ಗಣತಿ ವರದಿ : ಇಂದು ಡಿಕೆಶಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಸಭೆ

ಬೆಂಗಳೂರು: ಜಾತಿ ಗಣತಿ ವರದಿಗೆ ಕಾಂಗ್ರೆಸ್‌ನಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂದು ಹಲವು ನಾಯಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ರಾಜ್ಯದ ಎರಡು ಪ್ರಮುಖ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಜಾತಿಯ ಮುಖಂಡರು ಕೂಡ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಒಕ್ಕಲಿಗ ಶಾಸಕರು ಮತ್ತು ಎಂಎಲ್‌ಸಿಗಳ ಸಭೆ ಕರೆದಿದ್ದಾರೆ. ಡಿಕೆಶಿ ಮನೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗುತ್ತದೆ

ಜಾತಿ ಗಣತಿ ವರದಿ : ಇಂದು ಡಿಕೆಶಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರ ಸಭೆ Read More »

error: Content is protected !!
Scroll to Top