ರಾಜ್ಯ

ಮುಡಾ ಹಗರಣ : ಕೆಲವು ನಿವೇಶನಗಳ ಕಡತಗಳೇ ನಾಪತ್ತೆ

ಸಭೆಯಲ್ಲಿ ಕಡತ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 14 ಮುಡಾ ಸೈಟ್‌ಗಳನ್ನು ಪಡೆದುಕೊಂಡ ವಿಚಾರ ಬಯಲಾದ ಬಳಿಕ ಮುಡಾದ ಕಡತಗಳು ನಾಪತ್ತೆಯಾಗಿರುವ ಆರೋಪ ಕೆಳಿಬಂದಿತ್ತು. ಈಗ ಮುಡಾ ಅಧಿಕಾರಿಗಳೇ ಕಡತಗಳು ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಮುಡಾದ 50:50 ಅನುಪಾತದ ದಾಖಲೆಗಳೇ ಮಾಯವಾಗಿರುವುದನ್ನು ಮುಡಾ ಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿರುವ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. 50:50 ಅನುಪಾತದ ‘ಆಯ್ದ ಕೆಲವು ಸೈಟ್‌’ಗಳ ದಾಖಲೆಗಳೇ ಮಾಯವಾಗಿವೆ. ಮುಡಾ ಪ್ರಾಧಿಕಾರದ ಸದಸ್ಯರಿಗೆ ಅಧಿಕೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50:50 ಅನುಪಾತದ ಕೆಲವು […]

ಮುಡಾ ಹಗರಣ : ಕೆಲವು ನಿವೇಶನಗಳ ಕಡತಗಳೇ ನಾಪತ್ತೆ Read More »

ಕೇರಳ ಹಲ್ವಾದಲ್ಲೂ ಅಪಾಯಕಾರಿ ಕೃತಕ ಬಣ್ಣ ಬಳಕೆ

31 ಕುರುಕು ತಿಂಡಿಗಳಲ್ಲಿ ರಾಸಾಯನಿಕ ಅಂಶ ಪತ್ತೆ ಬೆಂಗಳೂರು : ಹಲ್ವಾ ಸೇರಿದಂತೆ ಕೇರಳದಿಂದ ಬರುವ ಹಲವು ಕುರುಕು ತಿಂಡಿಗಳಲ್ಲಿ ಕೃತಕ ಬಣ್ಣ ಬಳಸುತ್ತಿರುವ ಆರೋಪ ಕೇಳಿಬಂದ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೇರಳದ ಹಲ್ವಾ ಬಹಳ ಜನಪ್ರಿಯ ತಿಂಡಿಯಾಗಿದ್ದು, ನಿತ್ಯ ರೈಲಿನಲ್ಲಿ ಮಂಗಳೂರು, ಉಡುಪಿಯಿಂದ ಹಿಡಿದ ಮುಂಬಯಿ ತನಕ ಪೂರೈಕೆಯಾಗುತ್ತದೆ. ಶಬರಿಮಲೆ ಯಾತ್ರೆ ಸಹಿತ ಕೇರಳ ಪ್ರವಾಸ ಕೈಗೊಳ್ಳುವವರು ಈ ಹಲ್ವಾ ತಂದು ಹಂಚುವುದು ವಾಡಿಕೆ. ಈಗಾಗಲೆ ಗೋಬಿಮಂಚೂರಿ, ಪಾನಿಪುರಿ, ಕೇಕ್‌ ಸೇರಿದಂತೆ ಅನೇಕ ತಿನಿಸುಗಳಿಗೆ

ಕೇರಳ ಹಲ್ವಾದಲ್ಲೂ ಅಪಾಯಕಾರಿ ಕೃತಕ ಬಣ್ಣ ಬಳಕೆ Read More »

ಉಪಚುನಾವಣೆ : ಮೂರೂ ಪಕ್ಷಗಳಿಗೆ ಗೆಲ್ಲಲೇ ಬೇಕಾದ ಸಮರ ಕಣ

ರಾಜ್ಯದ ರಾಜಕೀಯದ ಭವಿಷ್ಯ ಈ ಉಪಚುನಾವಣೆಯಲ್ಲಿದೆ ಬೆಂಗಳೂರು: ನವೆಂಬರ್‌ 13ರಂದು ನಡೆಯಲಿರುವುದು ರಾಜ್ಯದ ಬರೀ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ. ಆದರೆ ಈ ಮೂರು ಕ್ಷೇತ್ರಗಳೇ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನಲಾಗುತ್ತಿದೆ. ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲ್ಲಲು ಮೂರೂ ಪಕ್ಷಗಳು ಶಕ್ತಿಮೀರಿ ಪ್ರಯತ್ನಸುತ್ತಿವೆ, ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಹೋರಾಡುತ್ತಿವೆ. ಮೂರೂ ಪಕ್ಷಗಳಿಗೆ ಈ ಚುನಾವಣೆಯ ಗೆಲುವು ಅನಿವಾರ್ಯ ಎನ್ನುವುದು ವಾಸ್ತವ. ಮೂರು ಕ್ಷೇತ್ರಗಳ ಶಾಸಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾರಣ

ಉಪಚುನಾವಣೆ : ಮೂರೂ ಪಕ್ಷಗಳಿಗೆ ಗೆಲ್ಲಲೇ ಬೇಕಾದ ಸಮರ ಕಣ Read More »

ಸಿಎಂ ಸಮಾವೇಶಕ್ಕೆ 300 ರೂ. ಕೊಟ್ಟು ಜನ ಕರೆತಂದ ಕಾಂಗ್ರೆಸ್‌ : ವೀಡಿಯೊ ವೈರಲ್‌

ಬೆಂಗಳೂರು: ಸಂಡೂರು ಉಪಚುನಾವಣೆಗಾಗಿ ನಿನ್ನೆ ಬಳ್ಳಾರಿಯ ಸಂಡೂರಿನಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾವೇಶಕ್ಕೆ 300 ರೂ. ಕೊಟ್ಟು ಜನರನ್ನು ಕರೆದುಕೊಂಡು ಬಂದಿರುವ ವೀಡಿಯೊ ವೈರಲ್‌ ಆಗಿ ಕಾಂಗ್ರೆಸ್‌ ತೀವ್ರ ಮುಜುಗರ ಅನುಭವಿಸಿದೆ. ಸಂಡೂರಿನ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರ ಗುರುವಾರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದರು. ಸಿಎಂ ಭಾಗವಹಿಸಿದ್ದ ಸಮಾವೇಶಕ್ಕೆ ಜನರನ್ನು ಕರೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 300 ರೂ. ಕೊಡುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಲಾಗಿತ್ತು ಎನ್ನಲಾಗಿದೆ. ಟೋಕನ್ ಸಮೇತ ಮಹಿಳೆಯರು

ಸಿಎಂ ಸಮಾವೇಶಕ್ಕೆ 300 ರೂ. ಕೊಟ್ಟು ಜನ ಕರೆತಂದ ಕಾಂಗ್ರೆಸ್‌ : ವೀಡಿಯೊ ವೈರಲ್‌ Read More »

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌

ರೈತನ ಆತ್ಮಹತ್ಯೆಗೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪ ಹೊರಿಸಿ ಕೇಸ್‌ ಬೆಂಗಳೂರು: ರೈತರೊಬ್ಬರ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ, ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವಕ್ಫ್ ನೋಟಿಸ್ ಬಂದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಹರನಗೇರಿ ರೈತ‌ ರುದ್ರಪ್ಪ ಆತ್ಮಹತ್ಯೆ ಬಗ್ಗೆ ಟ್ವೀಟ್​ ಮಾಡಿದ್ದ ತೇಜಸ್ವಿ

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್‌ Read More »

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರ ಓಡಾಟದ ಶಂಕೆ

ಚಿಕ್ಕಮಗಳೂರು : ಕಾರ್ಕಳದ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟದ ಶಂಖೆ ವ್ಯಕ್ತವಾಗಿದೆ. ಆರು ಮಂದಿ ನಕ್ಸಲರು ಓಡಾಡಿದ್ದಾರೆ ಎಂಬ ಮಾಹಿತಿ ಹರಿದಾಡಿ ಆಧಾರದ ಮೇಲೆ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿದೆ.ಕಳಸ ಮತ್ತು ಶೃಂಗೇರಿ ತಾಲೂಕಿನ ಘಟ್ಟ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ. ಹಲವು ವರ್ಷಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಓಡಾಟದ ಸದ್ದು ಕೇಳಿದ್ದು, ಈ ಭಾಗಗಳಲ್ಲಿ ಆತಂಕ ಹೆಚ್ಚಿಸಿದೆ.ಈ ವರ್ಷ ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಸಮಯದಲ್ಲಿ ಕರಾವಳಿ ಭಾಗದಲ್ಲಿ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ನಕ್ಸಲರ ಓಡಾಟದ ಶಂಕೆ Read More »

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌

ರೈತರ ಅಹವಾಲು ಆಲಿಸಲು ಬಂದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬೆಂಗಳೂರು: ರಾಜ್ಯ ಸರಕಾರದ ಸೂಚನೆಯ ಮೇರೆಗೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ, ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ ಎಂಬುದಾಗಿ ವಕ್ಫ್‌ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಆರೋಪಿಸಿದರು.ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ವಕ್ಫ್‌ ಎಂದು ನಮೂದಾಗಿರುವ ರೈತರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌ Read More »

ಅಬಕಾರಿ ಸಚಿವರ ಆಪ್ತ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರ

ಲೈಸೆನ್ಸ್‌ ಕೊಡಿಸುವುದಾಗಿ ನಂಬಿಸಿ ಬಾರ್‌ ಮಾಲೀಕರಿಗೆ ಕೋಟ್ಯಂತರ ರೂ. ವಂಚನೆ ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಭ್ರಷ್ಟಾಚಾರದ ಸೂತ್ರಧಾರ ಅಬಕಾರಿ ಸಚಿವ ಆರ್​​.ಬಿ ತಿಮ್ಮಾಪುರ ಅವರ ಆಪ್ತ ಜೀವನ್ ಶೆಟ್ಟಿ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ ಇಷ್ಟೊಂದು ಅಕ್ರಮ ನಡೆಯಲು ಜೀವನ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಇವರು ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ಬಾರ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್​.ಬಿ ತಿಮ್ಮಾಪುರ ಅಬಕಾರಿ ಸಚಿವರಾಗಿದ್ದನಿಂದಲೂ

ಅಬಕಾರಿ ಸಚಿವರ ಆಪ್ತ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರ Read More »

ಸರಕಾರಿ ಕಚೇರಿ, ಆವರಣಗಳಲ್ಲಿ ತಂಬಾಕು ಉತ್ಪನ್ನ ಬಳಕೆ ನಿಷೇಧ | ಸಿಗರೇಟ್‌, ಗುಟ್ಕಾ ಇತ್ಯಾದಿ ಸೇವಿಸಿದರೆ ಶಿಸ್ತುಕ್ರಮ

ಬೆಂಗಳೂರು : ಸರಕಾರಿ ಕಚೇರಿಗಳಲ್ಲಿ, ಕಚೇರಿಯ ಆವರಣಗಳಲ್ಲಿ ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನಗಳ ಸೇವನೆ ನಿಷೇಧಿಸಿ ರಾಜ್ಯ ಸರಕಾರ ಖಡಕ್ ಆದೇಶ ಹೊರಡಿಸಿದೆ.ಈ ಕುರಿತು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ. ಧೂಮಪಾನ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ಉತ್ಪಾದನೆ, ಪೂರೈಕೆ, ಮಾರಾಟ

ಸರಕಾರಿ ಕಚೇರಿ, ಆವರಣಗಳಲ್ಲಿ ತಂಬಾಕು ಉತ್ಪನ್ನ ಬಳಕೆ ನಿಷೇಧ | ಸಿಗರೇಟ್‌, ಗುಟ್ಕಾ ಇತ್ಯಾದಿ ಸೇವಿಸಿದರೆ ಶಿಸ್ತುಕ್ರಮ Read More »

ಕಾರ್ಕಳದ ಈದುವಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ? | ಕಾಡುತ್ಪತ್ತಿ ಸಂಗ್ರಹಿಸಲು ಹೋದವರಿಗೆ ನಕ್ಸಲರು ಕಾಣಸಿಕ್ಕಿದ ಸುದ್ದಿಯಿಂದ ಆತಂಕ

ಕಾರ್ಕಳ: ಈದು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದಾರೆ ಎಂದು ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಕೆಲವು ಸ್ಥಳೀಯರು ಹೇಳಿಕೊಂಡಿದ್ದಾರೆ. ಆ ಬಳಿಕ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಚಟುವಟಿಕೆ ಮತ್ತೆ ಪ್ರಾರಂಭವಾಗಿದೆಯೇ ಎಂಬ ಅನುಮಾನ ಮೂಡಿದೆ. 30ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ಹಾಡಹಗಲೇ ಕಾಣಸಿಕ್ಕಿದ್ದಾರೆ ಎಂಬ ಸುದ್ದಿ ಕಳೆದ ಮೂರು ದಿನಗಳಿಂದ

ಕಾರ್ಕಳದ ಈದುವಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ? | ಕಾಡುತ್ಪತ್ತಿ ಸಂಗ್ರಹಿಸಲು ಹೋದವರಿಗೆ ನಕ್ಸಲರು ಕಾಣಸಿಕ್ಕಿದ ಸುದ್ದಿಯಿಂದ ಆತಂಕ Read More »

error: Content is protected !!
Scroll to Top