ರಾಜ್ಯ

ಚಂದ್ರದ್ರೋಣ ಪರ್ವತಕ್ಕೆ ಟ್ರೆಕ್ಕಿಂಗ್‌ಗೆ ಬಂದ ಕೇರಳದ ಬಾಲಕಿ ನಾಪತ್ತೆ

40 ಮಂದಿಯ ತಂಡದೊಂದಿಗಿದ್ದ ಬಾಲಕಿ ನಿಗೂಢವಾಗಿ ಕಣ್ಮರೆ ಚಿಕ್ಕಮಗಳೂರು: ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಶ್ರೀನಂದಾ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ಕಾಣೆಯಾಗಿದ್ದಾಳೆ. ಕೇರಳದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರು ಸೇರಿದಂತೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ […]

ಚಂದ್ರದ್ರೋಣ ಪರ್ವತಕ್ಕೆ ಟ್ರೆಕ್ಕಿಂಗ್‌ಗೆ ಬಂದ ಕೇರಳದ ಬಾಲಕಿ ನಾಪತ್ತೆ Read More »

ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರನ್ನು ಸಾಯಿಸಲು ಮುಸ್ಲಿಮರಿಗೆ ಕರೆ : ಖರ್ಗೆ ವಿರುದ್ಧ ದೂರು ದಾಖಲು

ಅಸ್ಸಾಂ ಚುನಾವಣೆ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಖರ್ಗೆ ದಿಸ್ಪುರ್: ಅಸ್ಸಾಂನಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವಂತೆ ಮುಸ್ಲಿಮರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ರಾಜ್ಯ ಬಿಜೆಪಿ ಶಾಸಕರಾದ ಮುನಿರಾಜು, ಸಿ.ಕೆ ರಾಮಮೂರ್ತಿ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಅವರಿಗೆ ದೂರು ಕೊಟ್ಟಿದ್ದಾರೆ. ಹತ್ಯೆಗೆ ಪ್ರಚೋದನಾಕಾರಿ ಭಾಷಣ ಮಾಡಿರುವ ಖರ್ಗೆ ಅವರನ್ನು ಕೂಡಲೇ ಬಂಧಿಸುವಂತೆ ಬಿಜೆಪಿಗರು ಒತ್ತಾಯಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ

ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರನ್ನು ಸಾಯಿಸಲು ಮುಸ್ಲಿಮರಿಗೆ ಕರೆ : ಖರ್ಗೆ ವಿರುದ್ಧ ದೂರು ದಾಖಲು Read More »

ಬೆಂಗಳೂರಿನ ಹುಡುಗಿಯನ್ನು ವರಿಸಿದ ಕುಂಭಮೇಳದ ಐಐಟಿ ಬಾಬಾ

ಕುಂಭಮೇಳದಲ್ಲಿ ಐಐಟಿ ಬಾಬಾ ಎಂದು ವೈರಲ್‌ ಆಗಿದ್ದ ಬಾಬಾ ಬೆಂಗಳೂರು : ಮಹಾಕುಂಭ ಮೇಳದ ಸಂದರ್ಭದಲ್ಲಿ ‘ಐಐಟಿ ಬಾಬಾ’ ಎಂದು ಜನಪ್ರಿಯರಾಗಿದ್ದ ನಾಗಸಾಧು ಅಭಯ್ ಸಿಂಗ್‌ ಬೆಂಗಳೂರಿನ ಯುವತಿಯನ್ನು ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕುಂಭಮೇಳದಲ್ಲಿ ಐಐಟಿಯಂಥ ಉನ್ನತ ಶಿಕ್ಷಣ ಪಡೆದಿದ್ದರೂ ಕೂಡ ನಾಗಸಾಧುವಾಗಿದ್ದ ಕಾರಣಕ್ಕೆ ಹರಿಯಾಣದ ಜಜ್ಝರ್ ಮೂಲದವರಾದ ಅಭಯ್ ಮಹಾಕುಂಭದಲ್ಲಿ ವೈರಲ್ ಆಗಿದ್ದರು. ಈಗ ಮದುವೆಯ ನಂತರ ಪತ್ನಿ ಪ್ರೀತಿಕ್ ಜೊತೆ ತಮ್ಮ ಊರಿಗೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ, ಅವರನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಜನ

ಬೆಂಗಳೂರಿನ ಹುಡುಗಿಯನ್ನು ವರಿಸಿದ ಕುಂಭಮೇಳದ ಐಐಟಿ ಬಾಬಾ Read More »

ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪೀಕಿದ್ದ ಸಮೀರ್‌

ಲವ್‌ ಜಿಹಾದ್‌ ಸಂತ್ರಸ್ತೆಯಿಂದಲೇ ಮೋಜುಮಸ್ತಿಗೆ ಹಣ ವಸೂಲಿ ಮಾಡುತ್ತಿದ್ದ ಕಿರಾತಕ ಹುಬ್ಬಳ್ಳಿ: ಲವ್ ಜಿಹಾದ್ ಪ್ರಕರಣದ ಆರೋಪಿ ಜಿಮ್ ಟ್ರೈನರ್‌ ಸಮೀರ್ ಅತ್ಯಾಚಾರದ ಬಳಿಕ ಬೆದರಿಕೆಯೊಡ್ಡಿ 70 ಸಾವಿರ ರೂ.ಗೂ ಅಧಿಕ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿದ ಬಳಿಕ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಹಲವು ಬಾರಿ ಅತ್ಯಾಚಾರದ ಬಳಿಕ ಹಣವನ್ನು ಪಡೆದಿದ್ದಾನೆ. 5,000 ರೂ, 20,000 ರೂ, 25,000 ರೂ.ಯಂತೆ 70,000

ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪೀಕಿದ್ದ ಸಮೀರ್‌ Read More »

ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣ : ಇನ್ನಷ್ಟು ವಿಡಿಯೋಗಳು ಬಹಿರಂಗ

ಜಿಮ್‌ ಟ್ರೈನಿಂಗ್‌ ನೆಪದಲ್ಲಿ ಹರಡಿದ ಜಿಹಾದ್‌ನ ಕಬಂಧ ಬಾಹು ಬೆಂಗಳೂರು : ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ವಿಡಿಯೋ ಬಹಿರಂಗವಾಗುತ್ತಿದೆ. ಇದೀಗ ಮತ್ತೆರಡು ವಿಡಿಯೋಗಳನ್ನು ಯುವತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​​​ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಮತ್ತೊಮ್ಮೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.

ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣ : ಇನ್ನಷ್ಟು ವಿಡಿಯೋಗಳು ಬಹಿರಂಗ Read More »

ನಾಲ್ಕು ದಿನಗಳಿಂದ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ

ಟ್ರೆಕ್ಕಿಂಗ್‌ಗೆ ಹೋಗಿ ದಾರಿ ತಪ್ಪಿ ಕಾಡಿನ ಪಾಳು ಬಂಗಲೆಯಲ್ಲಿದ್ದ ಕೇರಳದ ಯುವತಿ ಮಡಿಕೇರಿ: ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಎಂಬಾಕೆ ನಾಲ್ಕು ದಿನಗಳ ಸತತ ಹುಡುಕಾಟದ ಬಳಿಕ ಕೊ‌ನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ‌ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳುಬಿದ್ದ ಬಂಗಲೆಯೊಂದರಲ್ಲಿ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಕುಡಿಯ ಯುವಕರು ಅವರನ್ನು ರಕ್ಷಿಸಿ ಕಾಡಿನಿಂದ

ನಾಲ್ಕು ದಿನಗಳಿಂದ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ Read More »

ಲವ್‌ ಜಿಹಾದ್‌ ಆರೋಪಿ ಸಮೀರ್‌ ವಿರುದ್ಧ ರೇಪ್‌ ಕೇಸ್‌ ದಾಖಲು

ಜಿಮ್‌ ಟ್ರೈನಿಂಗ್‌ಗೆ ಬಂದ ಯುವತಿಯರಿಗೆ ಲವ್‌ ಜಿಹಾದ್‌ ಬಲೆ ಬೆಂಗಳೂರು : ಹುಬ್ಬಳ್ಳಿಯ ಲವ್ ಜಿಹಾದ್ ಕೇಸ್‌ ಆರೋಪಿ ಜಿಮ್ ಟ್ರೈನರ್‌ ಸಮೀರ್ ವಿರುದ್ಧ ಸಂತ್ರಸ್ತ ಯುವತಿ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಶುಕ್ರವಾರ ರಾತ್ರಿ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಸಮೀರ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ನಾನು ಜಿಮ್‌ಗೆ ಹೋಗುವಾಗ ಸಮೀರ್ ಪರಿಚಯವಾಗಿದ್ದ. 2025ರ ಆ.16ರಂದು ನನ್ನನ್ನು ಮನೆಗೆ ಕರೆಸಿಕೊಂಡಿದ್ದ. ಆ ವೇಳೆ ಜ್ಯೂಸ್‌ನಲ್ಲಿ ಅಮಲು ಬರುವ ಪದಾರ್ಥ ಹಾಕಿ ನನಗೆ

ಲವ್‌ ಜಿಹಾದ್‌ ಆರೋಪಿ ಸಮೀರ್‌ ವಿರುದ್ಧ ರೇಪ್‌ ಕೇಸ್‌ ದಾಖಲು Read More »

ಜಿಮ್‌ ಟ್ರೈನರ್‌ನಿಂದ ಹಿಂದೂ ಯುವತಿಯರ ಲವ್‌ ಜಿಹಾದ್‌ : ಹುಬ್ಬಳ್ಳಿ ಪ್ರಕ್ಷುಬ್ಧ

ಜಿಮ್‌ಗೆ ಬರುತ್ತಿದ್ದ ಯುವತಿಯರನ್ನು ಬಲೆಗೆ ಬೀಳಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪ ಬೆಂಗಳೂರು: ಹುಬ್ಬಳ್ಳಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್‌ ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಕೆಡವಿ ಕೆಡಿಸಿದ ಪ್ರಕರಣ ರಾಜ್ಯಾದ್ಯಂತ ಆಕ್ರೋಶದ ಕಿಡಿಯೆಬ್ಬಿಸಿದೆ. ಈ ಸಂಬಂಧ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದ್ದು, ಶ್ರೀರಾಮಸೇನೆ ಇದರಲ್ಲಿ ಎಂಟ್ರಿಯಾಗಿದೆ. ಎರಡು ಕುಟುಂಬಗಳು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ಕುಟುಂಬಗಳಿಂದ ದೂರು ಪಡೆದು ತನಿಖೆ ಮಾಡುತ್ತಿದ್ದಾರೆ. ಮುಸ್ಲಿಂ ಜಿಮ್ ಟ್ರೈನರ್ ತನ್ನ ಜಿಮ್‌ಗೆ ಬರುತ್ತಿದ್ದ ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಹಾಕಿಕೊಳ್ಳುತ್ತಿದ್ದ.

ಜಿಮ್‌ ಟ್ರೈನರ್‌ನಿಂದ ಹಿಂದೂ ಯುವತಿಯರ ಲವ್‌ ಜಿಹಾದ್‌ : ಹುಬ್ಬಳ್ಳಿ ಪ್ರಕ್ಷುಬ್ಧ Read More »

ಹಿಂದಿ ಕೈಬಿಡುವ ನಿರ್ಧಾರ ಮರು ಪರಿಶೀಲಿಸಲು ರಾಜ್ಯಪಾಲರ ಪತ್ರ

ಭಾಷಾ ವೈವಿಧ್ಯತೆ, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ತೃತೀಯ ಭಾಷೆ ಕಡ್ಡಾಯವಲ್ಲ ಎಂಬ ನಿಯಮ ಜಾರಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರನೇ ಭಾಷೆಗೆ ಅಂಕಗಳಿಗೆ ಬದಲಾಗಿ ಕೇವಲ ಗ್ರೇಡ್‌ಗಳನ್ನ ನೀಡುವ ನಿರ್ಧಾರದ ಬಗ್ಗೆ ಮರುಪರಿಶೀಲಿಸಬೇಕು. ಬೆಂಗಳೂರಿನ ʻಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʼ ಈ

ಹಿಂದಿ ಕೈಬಿಡುವ ನಿರ್ಧಾರ ಮರು ಪರಿಶೀಲಿಸಲು ರಾಜ್ಯಪಾಲರ ಪತ್ರ Read More »

ಟ್ರೆಕ್ಕಿಂಗ್‌ಗೆ ಹೋದ ಮಹಿಳೆ ನಾಪತ್ತೆ

ಕೊಡಗಿನ ತಡಿಯಂಡಮೋಳ್ ಬೆಟ್ಟ ಹತ್ತಿದ ಬಳಿಕ ಕಾಣೆಯಾದ ಮಹಿಳೆ ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ತಿಳಿದುಬಂದಿದೆ. ಶರಣ್ಯ (36) ನಾಪತ್ತೆಯಾದ ಮಹಿಳೆ. ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್‌ ಹೊರಟಿದ್ದರು ಎಂದು ಹೇಳಲಾಗಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿ ಶರಣ್ಯ ಒಬ್ಬರೇ ಬಂದಿದ್ದರು. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಇರುವುದರಿಂದ ಬೇರೆ ಪ್ರವಾಸಿಗರ ಜೊತೆಯಲ್ಲಿ ಕಳುಹಿಸಲಾಗಿದೆ. ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ

ಟ್ರೆಕ್ಕಿಂಗ್‌ಗೆ ಹೋದ ಮಹಿಳೆ ನಾಪತ್ತೆ Read More »

error: Content is protected !!
Scroll to Top