ರಾಜ್ಯ

ಬಿಜೆಪಿ ಸೇರಿದ ಮುಸ್ಲಿಂ ಮುಖಂಡರು : ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಟಿಕೆಟ್‌ ಸಿಗದಿರುವುದರಿಂದ ಭುಗಿಲೆದ್ದ ಅಲ್ಪಸಂಖ್ಯಾತರ ಆಕ್ರೋಶ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ನಿರಾಶರಾಗಿರುವ ಮುಸ್ಲಿಮ್‌ ಸಮುದಾಯದವರು ಈಗ ಪಕ್ಷಾಂತರ ಪರ್ವ ಆರಂಭಿಸಿದ್ದಾರೆ. 20ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಮತ್ತು ಯುವನಾಯಕರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಲ್ಪಸಂಖ್ಯಾತರನ್ನ ಬಿಜೆಪಿಗೆ ಸೇರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಜೊತೆಗೆ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ ಅಭ್ಯರ್ಥಿಯನ್ನು […]

ಬಿಜೆಪಿ ಸೇರಿದ ಮುಸ್ಲಿಂ ಮುಖಂಡರು : ಕಾಂಗ್ರೆಸ್‌ಗೆ ಬಂಡಾಯದ ಬಿಸಿ Read More »

ಬಸ್‌ ಡಿವೈಡರ್‌ಗೆ ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು

ಚಾಲಕನ ನಿದ್ರೆಯ ಮಂಪರಿನಿಂದ ಸಂಭವಿಸಿದ ಭೀಕರ ಅಪಘಾತ ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ಬಳಿ ಬೆಳ್ಳಂಬೆಳಗ್ಗೆ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೇರಳಂ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್‌ ಕೇರಳದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಪುಟ್ಟಪ್ಪನದೊಡ್ಡಿ ಬಳಿ ಬಸ್‌ ಡಿವೈಡರ್‌ಗೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬಸ್‌ ಡಿವೈಡರ್‌ಗೆ ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು Read More »

ಏ.1ರಂದು ತುಮಕೂರಿಗೆ ರಾಷ್ಟ್ರಪತಿ ಆಗಮನ

ಬೆಂಗಳೂರು: ತುಮಕೂರಿನಲ್ಲಿ ಏ.1ರಂದು ಶಿವೈಕ್ಯ ಶಿವಕುಮಾರ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದಾರೆ. ಮಾ.31ರಂದು ಸಂಜೆ ಬೆಂಗಳೂರಿಗೆ ಆಗಮಿಸಿ ರಾಜಭವನದಲ್ಲಿ ತಂಗಲಿದ್ದಾರೆ. ಏ.1ರಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಸಿದ್ದಗಂಗಾ ಶ್ರೀಗಳ ಗದ್ದಿಗೆ ದರ್ಶನ ಪಡೆದು ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು ಒಂದೂವರೆ ಗಂಟೆಗಳ ಕಾಲ ಇರಲಿದ್ದಾರೆ ಎಂದು ಸಿದ್ದಗಂಗಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಮಾಹಿತಿ

ಏ.1ರಂದು ತುಮಕೂರಿಗೆ ರಾಷ್ಟ್ರಪತಿ ಆಗಮನ Read More »

ಶಾಮನೂರು ಮೊಮ್ಮಗ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ

ಮುಸ್ಲಿಮರ ಬೇಡಿಕೆಗೆ ಸಿಗದ ಮನ್ನಣೆ ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್​​ಗೆ ದೊಡ್ಡ ತಲೆನೋವಾಗಿದ್ದ ದಾವಣಗೆರೆ ದಕ್ಷಿಣ ಟಿಕೆಟ್​​ ಗೊಂದಲ ಕೊನೆಗೂ ಬಗೆಹರಿದಿದೆ. ಶಾಮನೂರ ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರ್​​​​​ಗೆ ಕಾಂಗ್ರೆಸ್ ಹೈಕಮಾಂಡ್​​ ಟಿಕೆಟ್ ಘೋಷಣೆ ಮಾಡಿದೆ. ಆ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಮತ್ತೆ ಶಾಮನೂರ ಕುಟುಂಬದ ಪಾಲಾಗಿದೆ. ದಾವಣಗೆರೆ ಟಿಕೆಟ್‌ಗಾಗಿ ಮುಸ್ಲಿಮ್‌ ಸಮುದಾಯದವರು ಪಟ್ಟುಹಿಡಿದಿದ್ದರು. ಸಚಿವ ಜಮೀರ್‌ ಅಹ್ಮದ್‌ಖಾನ್‌ ಅಖಾಡಕ್ಕಿಳಿದು ಟಿಕೆಟ್‌ ಮುಸ್ಲಿಮರಿಗೆ ಟಿಕೆಟ್‌ ಕೊಡದಿದ್ದರೆ ರಾಜೀನಾಮೆ ನೀಡುವ ಧಮಕಿ

ಶಾಮನೂರು ಮೊಮ್ಮಗ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ Read More »

ಭೀಕರ ಅಪಘಾತ : ಮೂವರು ಮಹಿಳೆಯರ ಸಹಿತ ಆರು ಮಂದಿ ಸಾವು

ಬೆಂಗಳೂರು: ಬೆಂಗಳೂರಿನ ಆಸುಪಾಸಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಎರಡು ಭೀಕರ ಅಪಘಾತದಲ್ಲಿ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೆಯಿಂದ ಸರ್ವೀಸ್ ರಸ್ತೆಗೆ‌ ಬರುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ.

ಭೀಕರ ಅಪಘಾತ : ಮೂವರು ಮಹಿಳೆಯರ ಸಹಿತ ಆರು ಮಂದಿ ಸಾವು Read More »

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು

ಬಂಟ್ವಾಳ: ಮೆಲ್ಕಾರಿನ ಬೊಗೋಡಿಯಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿ ಒಂದರಲ್ಲಿ ಹಲ್ಲೆ ಮತ್ತು ವಸ್ತುಗಳಿಗೆ ಹಾನಿ ಎಸಗಿದ ಘಟನೆಗೆ ಸಂಬಂಧಿಸಿದ ಹಾಗೆ ಮ್ಯಾನೇಜರ್ ಕುನಲ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಾ. 20 ರಂದು ಅಟೋರಿಕ್ಷಾ ಚಾಲಕನೊಬ್ಬ ತನ್ನ ಅಟೋವನ್ನು ಪಂಪ್ ಒಳಗೆ ತಂದಿದ್ದು, ಕಚೇರಿಯ ಸಿಬ್ಬಂದಿ ಅಶ್ವಿನ್ ಎಂಬುವವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ಹಾಗೆಯೇ ಆ ಬಳಿಕ ಪಂಪ್‌ನ ಸೊತ್ತುಗಳಿಗೆ ಹಾನಿ ಎಸಗಿದ್ದಾನೆ. ಈ ಘಟನೆಯಿಂದ ಸುಮಾರು ನಲವತ್ತೆಂಟು ಸಾವಿರ

ಗ್ಯಾಸ್ ಪಂಪ್ ಏಜೆನ್ಸಿ ಸಿಬ್ಬಂದಿಗೆ ಹಲ್ಲೆ, ಸಾವಿರಾರು ರೂ. ಮೌಲ್ಯದ ಸೊತ್ತು ನಾಶ: ದೂರು ದಾಖಲು Read More »

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ

ಉಜಿರೆ: ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಯಕ್ಷಭಾರತಿ ರಿ. ಕನ್ಯಾಡಿ ಹನ್ನೊಂದನೇ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ರೂಪಿಸಲಾದ “ದಶಪರ್ವ” ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಶಾಸಕ ಪ್ರತಾಪಸಿಂಹ ನಾಯಕ್ ಲೋಕಾರ್ಪಣೆಗೊಳಿಸಿದರು. ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕಲಾ ಪೋಷಕ ಶ್ರೀಪತಿ ಭಟ್, ಮೂಡಬಿದಿರೆ ಸಂಪಾದಕ ಮಂಡಳಿಯ ಮಹೇಶ ಕನ್ಯಾಡಿ, ಹರಿದಾಸ ಗಾಂಭೀರ, ಭವ್ಯ ಹೊಳ್ಳ, ಕೌಶಿಕ್ ರಾವ್ ಕನ್ಯಾಡಿ, ರತ್ನವರ್ಮ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು. ದಶಪರ್ವದ ಸಂಪಾದಕ

ಯಕ್ಷ ಭಾರತಿ ದಶಮಾನೋತ್ಸವ ದಶಪರ್ವ ಸ್ಮರಣ ಸಂಚಿಕೆ ಬಿಡುಗಡೆ Read More »

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ

ಕೊಟ್ಟಿಗೆಹಾರ: ಟಿಟಿ ‌ವಾಹನವೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ‌ನಡೆದಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ವಾಹನವು ಭದ್ರಾವತಿಯಿಂದ ಧರ್ಮಸ್ಥಳದತ್ತ ಹೋಗುತ್ತಿತ್ತು. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ ಇದು, ಗಾಯಾಳು ಒಂಬತ್ತು ಜನರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಥಳೀಯರು ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗಾಯ ಆಲಿ ಗಳನ್ನು ನೆರೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು

ಚಾರ್ಮಾಡಿ ಘಾಟ್‌ನಲ್ಲಿ ‌ಪಲ್ಟಿಯಾದ ಟಿಟಿ ವಾಹನ: ಒಂಬತ್ತು ಜನರಿಗೆ ಗಾಯ Read More »

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ

ಚಿಕ್ಕಮಗಳೂರು: ವಿದ್ಯುತ್ ಕಂಬವೊಂದಕ್ಕೆ ಸರ್ಕಾರಿ ಬಸ್ ಗುದ್ದಿದ್ದು, ಎಂಟು ಮಂದಿ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಕೊಡಾಳ್ ಸಮೀಪ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಕುಕ್ಕನೂರಿನಿಂದ ಧರ್ಮಸ್ಥಳದತ್ತ ತೆರಳುತ್ತಿತ್ತು. ನಲವತ್ತಕ್ಕೂ ಅಧಿಕ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಾಳು ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಪಘಾತದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ‌ತನಿಖೆ ನಡೆಸುತ್ತಿದ್ದಾರೆ.

ಸರ್ಕಾರಿ ಬಸ್ ಪಲ್ಟಿ: ಎಂಟು ಜನರಿಗೆ ಗಾಯ Read More »

ಉದ್ಯಮಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ಲಪಟಾಯಿಸಿದ ಸೈಬರ್‌ ವಂಚಕರು

ಬೆಳಗಾವಿ: ವೃದ್ಧ ಉದ್ಯಮಿಯೊಬ್ಬರು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಕೋಟಿ ಕೋಟಿ ಹಣ ಕಳೆದುಕೊಂಡು ಉದ್ಯಮಿ ಕಂಗಾಲಾಗಿದ್ದಾರೆ. ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್‌ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಫ್ರಾಡ್‌ ಲಿಸ್ಟ್‌ನಲ್ಲಿ ತೋರಿಸುತ್ತಿದೆ. ನೀವು ಮನಿ ಲಾಡ್ರಿಂಗ್ ಮಾಡ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದಾರೆ.

ಉದ್ಯಮಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 15 ಕೋಟಿ ಲಪಟಾಯಿಸಿದ ಸೈಬರ್‌ ವಂಚಕರು Read More »

error: Content is protected !!
Scroll to Top