ರಾಜ್ಯ

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌

ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ತರಾಟೆ ಬೈಗುಳ ಕೇಳಿಸಿಕೊಂಡೇ ಚುನಾವಣೆ ಗೆಲ್ಲಬೇಕೆಂದು ಪಾಠ ಮಂಗಳೂರು : ಬಿಜೆಪಿ ಕೋರ್‌ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಪುತ್ತೂರಿನ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಬಂದ ಶಾ ರಾತ್ರಿ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರ ಹಾಗೂ ಪದಾಧಿಕಾರುಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಿಷ್ಕ್ರಿಯ ಶಾಸಕರನ್ನು ಮತ್ತು ಸಂಸದರನ್ನು ಸರಿಯಾಗಿ ಜಾಡಿಸಿದ್ದಾರೆ. ಒಂದು […]

ಬಿಜೆಪಿ ಶಾಸಕ, ಸಂಸದರಿಗೆ ಶಾ ಕ್ಲಾಸ್‌ Read More »

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ

ಸಿ.ಟಿ. ರವಿ ಟೀಕೆಗಳಿಗೆ ತಿರುಗೇಟು ಬೆಂಗಳೂರು : ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂ ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ನಾನು ಹಿಂದೂ ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ

ನಾನು ಹಿಂದೂ, ನನ್ನ ಅಪ್ಪ ಅವ್ವನೂ ಹಿಂದೂ : ಸಿದ್ದರಾಮಯ್ಯ Read More »

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ

ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಮಗೆ ತಪ್ಪು ಮಾಹಿತಿ ಬಂದಿದೆ. ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ ಎಂದರು.ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್

ಉಡುಪಿ, ದ.ಕ. 10 ಸ್ಥಾನಗಳಲ್ಲಿ ಗೆಲುವು : ಡಿಕೆಶಿ Read More »

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ

ಪುತ್ತೂರು: ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ ಇದರ ನೇತೃತ್ವದಲ್ಲಿ ಬೆಳ್ತಂಗಡಿಯ ತೆಂಕಕಾರಂದೂರು ನಿವಾಸಿ ಪ್ರಶಾಂತ್ ಲಾವಣ್ಯ ದಂಪತಿ ಪುತ್ರಿ ಮಾನ್ಯ ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಗಂಗೊಳ್ಳಿ ಖಾರ್ವಿಕೆರೆ ಶ್ರೀ ಮಹಾಂಕಾಳಿ ಅಮ್ಮ ದೇವಸ್ಥಾನದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ 6 ವರ್ಷದ ಮಾನ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ Read More »

ಕಾಂಗ್ರೆಸ್‌ ನಕಲಿ ವೆಬ್‌ಸೈಟ್‌ : ದೂರು ದಾಖಲು

ಪಕ್ಷ, ನಾಯಕರ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳು ಬೆಂಗಳೂರು: ಕಾಂಗ್ರೆಸ್‌ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ನಕಲಿ ವೆಬ್‌ಸೈಟ್ ರಚಿಸಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.ನಕಲಿ ವೆಬ್‌ಸೈಟ್‌ನಲ್ಲಿ ಕಾಂಗ್ರೆಸ್‌ ಹಾಗೂ ಅದರ ನಾಯಕರಿಗೆ ಅಗೌರವ ತರುವಂತಹ ಹೇಳಿಕೆಗಳನ್ನು ಫೋಸ್ಟ್ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶತಭಾಷ್ ಶಿವಣ್ಣ ಸೈಬರ್ ಕ್ರೈಮ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ನಕಲಿ ವೆಬ್‌ಸೈಟ್ ತೆರೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು

ಕಾಂಗ್ರೆಸ್‌ ನಕಲಿ ವೆಬ್‌ಸೈಟ್‌ : ದೂರು ದಾಖಲು Read More »

ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ವರ್ಗಾವಣೆ : ಪ್ರಭಾರ ತಹಶೀಲ್ದಾರ್ ಆಗಿ ರಮೇಶ್ ಬಾಬು

ಪುತ್ತೂರು : 2023 ರ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಸರ್ಗಪ್ರಿಯ ಜೆ. ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಪುತ್ತೂರು ತಹಶೀಲ್ದಾರ್ ಆಗಿ ಪ್ರಸ್ತುತ ಕಡಬ ತಹಶೀಲ್ದಾರ್ ಆಗಿರುವ ರಮೇಶ್ ಬಾಬು ಅವರು ಪುತ್ತೂರು ಪ್ರಭಾರ ತಹಶೀಲ್ದಾರ್ ಆಗಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸಲಿದ್ದಾರೆ. ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ಅವರಿಗೆ ಜ.30 ರಂದೇ ವರ್ಗಾವಣೆ ಆದೇಶ ಬಂದಿತ್ತಾದರೂ ಆದೇಶದಲ್ಲಿ ಗ್ರೇಡ್-2 ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಎಂದು

ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ ವರ್ಗಾವಣೆ : ಪ್ರಭಾರ ತಹಶೀಲ್ದಾರ್ ಆಗಿ ರಮೇಶ್ ಬಾಬು Read More »

ಸರಕಾರದ ಮೀಸಲಾತಿ ನೀತಿಯಿಂದ ಒಕ್ಕಲಿಗ ಹಾಗೂ ಉಪಜಾತಿಗಳಿಗೆ ಶೇ.12 ಮೀಸಲಾತಿ ನೀಡಲು ಒತ್ತಾಯ

ಆಯೋಗಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್‌ರಿಂದ ಒತ್ತಾಯ ಪುತ್ತೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹಾಗೂ ಹಿಂದುಳಿದ ವರ್ಗಗಳ ವಿವಿಧ ಜಾತಿ ಜನಾಂಗಗಳಿಂದ ಸಲ್ಲಿಸಿರುವ ಮನವಿಗಳ ಕುರಿತ ಬಹಿರಂಗ ವಿಚಾರಣೆಯಲ್ಲಿ ಸರಕಾರದ ಮೀಸಲಾತಿ ನೀತಿಯಿಂದ ಒಕ್ಕಲಿಗ ಹಾಗೂ ಅದರ ಉಪಜಾತಿಗಳಿಗೆ ಶೇ.12 ಮೀಸಲಾತಿ ನೀಡುವಂತೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ಎ. ಆಯೋಗವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನ ದಿ.ದೇವರಾಜು ಅರಸು ಅಡಿಟೋರಿಯಮ್‌ನಲ್ಲಿ ನಡೆದ ವಿಚಾರಣೆ ವೇಳೆ ಕರ್ನಾಟಕ ರಾಜ್ಯದ ಏಳು

ಸರಕಾರದ ಮೀಸಲಾತಿ ನೀತಿಯಿಂದ ಒಕ್ಕಲಿಗ ಹಾಗೂ ಉಪಜಾತಿಗಳಿಗೆ ಶೇ.12 ಮೀಸಲಾತಿ ನೀಡಲು ಒತ್ತಾಯ Read More »

ಡಿಕೆಶಿ ಸಿಡಿ ಎಕ್ಸ್‌ಪರ್ಟ್‌ : ಸಚಿವ ಅಶ್ವತ್ಥ ನಾರಾಯಣ

ಕಾಂಗ್ರೆಸ್‌ ಸಿಡಿ ಬ್ಲಾಕ್‌ಮೇಲರ್‌ಗಳ ಪಕ್ಷ ಬೆಂಗಳೂರು : ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುವುದು ಕೆಟ್ಟ ಬೆಳವಣಿಗೆ. ರಾಜಕಾರಣಿಗಳನ್ನು ಟ್ರ್ಯಾಪ್, ಫ್ಯಾಬ್ರಿಕೇಟ್ ಮಾಡಲಾಗುತ್ತಿದೆ. ಇಂತಹದ್ದೊಂದು ವ್ಯವಸ್ಥಿತ ನೆಟ್‌ವರ್ಕ್ ಬೆಳೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಮಾಡಿ, ಚುನಾಯಿತ ಪ್ರತಿನಿಧಿಗಳ ಬದುಕು ಹಾಳು‌ಮಾಡ್ತಿದ್ದಾರೆ. ಇಂತಹ ಜಾಲಗಳನ್ನು ನಡೆಸುವ ನಾಯಕರ ಬಂಡವಾಳ ಬಯಲಾಗಬೇಕು. ಈ ಬಗ್ಗೆ ತನಿಖೆ ಅಗತ್ಯ ಇದೆ. ರಮೇಶ್ ಜಾರಕಿಹೋಳಿ ಧೈರ್ಯ ತೋರಿ ಈ ಬಗ್ಗೆ ದೂರು ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕರಿಗೆ ಆತಂಕ ಸೃಷ್ಟಿಯಾಗ್ತಿದೆ. ಈ ಬಗ್ಗೆ ತನಿಖೆ ಆಗಲಿ

ಡಿಕೆಶಿ ಸಿಡಿ ಎಕ್ಸ್‌ಪರ್ಟ್‌ : ಸಚಿವ ಅಶ್ವತ್ಥ ನಾರಾಯಣ Read More »

ಕಾಂಗ್ರೆಸ್‌ಗೆ ಈಗ ಲೆಟರ್‌ ಬಾಂಬ್‌ ಸಂಕಷ್ಟ

ಡಿಕೆಶಿಗೆ ವಿರುದ್ಧ ಸಿದ್ದರಾಮಯ್ಯ ಹೈಕಮಾಂಡ್‌ಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್‌ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗಿದ್ದು, ಇದು ಕಾಂಗ್ರೆಸಿನ ಒಳ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸಿದೆ.ಈ ಪತ್ರಕ್ಕೆ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿರುಕು ಮೂಡಿಸಲು ನಕಲಿ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದಾರೆ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ

ಕಾಂಗ್ರೆಸ್‌ಗೆ ಈಗ ಲೆಟರ್‌ ಬಾಂಬ್‌ ಸಂಕಷ್ಟ Read More »

ಗ್ರಾಮೀಣ ಅಂಚೆ ಸೇವಕರ ನೇಮಕಕ್ಕೆ ಅರ್ಜಿ ಆಹ್ವಾನ

ಪುತ್ತೂರು : ಮಂಗಳೂರು ಅಂಚೆ ಇಲಾಖೆಯಲ್ಲಿ ಗ್ರಾಮೀಣ ಅಂಚೆ ಸೇವಕರ ನೇಮಕಾತಿ ಸಂಬಂಧ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಂದು ಮಂಗಳೂರು ವಲಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ. ಫೆ,.16 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ. Indiapostgdsonline.gov.in  ವೆಬ್ಸೈಟ್ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಎಲ್ಲಾ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು

ಗ್ರಾಮೀಣ ಅಂಚೆ ಸೇವಕರ ನೇಮಕಕ್ಕೆ ಅರ್ಜಿ ಆಹ್ವಾನ Read More »

error: Content is protected !!
Scroll to Top