ರಾಜ್ಯ

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌

ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವಂತಿಲ್ಲ ಎಂದು ಈ ಹಿಂದೆಯೇ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಹೀಗಿದ್ದರೂ ರಾಜ್ಯದ ಕೆಲ ಶಾಲೆಗಳಲ್ಲಿ ಪ್ರಕರಣ ವರದಿಯಾದ ಬೆನ್ನಲ್ಲೇ ಮತ್ತೊಮ್ಮೆ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಬಾರದೆಂದು ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖಾಧಿಕಾರಿಗಳು […]

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಶಿಕ್ಷಕರ ಮೇಲೆ ಪೊಲೀಸ್‌ ಕೇಸ್‌ Read More »

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) 2025ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈ ವಾರವೇ ಪ್ರಕಟಸುವ ನಿರೀಕ್ಷೆ ಇದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಪತ್ರಿಕಾಗೋಷ್ಠಿ ಮೂಲಕ ಕೆಎಸ್​​ಸಿಎಬಿ ಫಲಿತಾಂಶ ಪ್ರಕಟಿಸಲಿದೆ. ಆ ನಂತರ ಆನ್​ಲೈನ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ಅಂಕಪಟ್ಟಿ ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶವಿದೆ. karresults.nic.in ಮತ್ತು kseab.karnataka.gov.in ಈ ಎರಡು ವೆಬ್​ಸೈಟ್​ಗಳಲ್ಲಿ ದ್ವಿತೀಯ

ಈ ವಾರವೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ Read More »

ಬೆಳ್ಳಿತೆರೆಗೆ ಬರುತ್ತಿದೆ ಯಕ್ಷಗಾನ ಕಲಾವಿದರೇ ನಟಿಸಿರುವ ಸಿನಿಮಾ ವೀರ ಚಂದ್ರಹಾಸ

ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಯಕ್ಷಗಾನದ ಕಥೆಯೇ ಸಿನಿಮಾ ಆದ ಚಿತ್ರ ಉಡುಪಿ: ಸುಮಾರು ಕಲಾವಿದರು ನಟಿಸಿರುವ, ಹಿರಿಯ ನಟ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿರುವ ಯಕ್ಷಗಾನವೇ ಕಥಾವಸ್ತು ಆಗಿ ಉಳ್ಳ ಸಿನಿಮಾವೊಂದು ಕನ್ನಡದಲ್ಲಿ ನಿರ್ಮಾಣವಾಗಿದ್ದು, ಏ.18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮೊದಲು ಯಕ್ಷಗಾನ ಮತ್ತು ಯಕ್ಷಗಾನದ ಪಾತ್ರಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವ ಅನೇಕ ಚಿತ್ರಗಳು ಬಂದಿವೆ. ಆದರೆ ಯಕ್ಷಗಾನ ಪ್ರಸಂಗವೊಂದನ್ನೇ ಸಿನಿಮಾ ಮಾಡಿ ಅದರಲ್ಲಿ ಯಕ್ಷಗಾನ ಕಲಾವಿದರೇ ನಟಿಸಿದ್ದು, ಇದೇ ಮೊದಲು. ಈ ಚಿತ್ರವನ್ನು ನಿರ್ದೇಶಿಸಿದವರು ಈಗಾಗಲೇ ಕನ್ನಡದಲ್ಲಿ

ಬೆಳ್ಳಿತೆರೆಗೆ ಬರುತ್ತಿದೆ ಯಕ್ಷಗಾನ ಕಲಾವಿದರೇ ನಟಿಸಿರುವ ಸಿನಿಮಾ ವೀರ ಚಂದ್ರಹಾಸ Read More »

ವಿಧಾನಸೌಧವಿನ್ನು ವಿದ್ಯುತ್‌ ದೀಪಾಲಂಕಾರದಿಂದ ಜಗಮಗ

ಶಾಶ್ವತ ದೀಪಾಲಂಕಾರಕ್ಕೆ ಚಾಲನೆ-ವಾರದಲ್ಲಿ ಎರಡು ದಿನ ವೀಕ್ಷಣೆಗೆ ಲಭ್ಯ ಬೆಂಗಳೂರು: ಆಡಳಿತ ಶಕ್ತಿಕೇಂದ್ರ ವಿಧಾನಸೌಧವಿನ್ನು ದೀಪಾಲಂಕಾರದಿಂದ ಜಗಮಗಿಸಲಿದೆ. ಹಿಂದೆಲ್ಲ ರಾಷ್ಟ್ರೀಯ ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗುತ್ತಿತ್ತು. ಈಗ ಸ್ಪೀಕರ್‌ ಯು.ಟಿ.ಖಾದರ್‌ ಮುತುವರ್ಜಿಯಿಂದ ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರತಿ ಶನಿವಾರ ಮತ್ತು ಭಾನುವಾರ ವರ್ಣರಂಜಿತ ವಿದ್ಯುತ್​​​​ ದೀಪಗಳಿಂದ ‌ವಿಧಾನಸೌಧ ಕಂಗೊಳಿಸಲಿದೆ. ಶಾಶ್ವತ ವಿದ್ಯುತ್ ದೀಪಾಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಚಾಲನೆ ನೀಡಿದ್ದಾರೆ. ಯುಟಿ ಖಾದರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,

ವಿಧಾನಸೌಧವಿನ್ನು ವಿದ್ಯುತ್‌ ದೀಪಾಲಂಕಾರದಿಂದ ಜಗಮಗ Read More »

ನಳಿನ್‌ ಕುಮಾರ್‌ ಕಟೀಲ್‌ ಪರ ಡಿಕೆಶಿ ಬ್ಯಾಟಿಂಗ್‌

ರಾಜಕೀಯದಲ್ಲಿ ಹೀರೊ ಝೀರೊ ಆಗುತ್ತಾನೆ, ಝೀರೊ ಹೀರೊ ಆಗುತ್ತಾನೆ ಎಂದು ಅಚ್ಚರಿಯ ಹೇಳಿಕೆ ಕಾಸರಗೋಡು: ರಾಜಕೀಯದಲ್ಲಿ ಯಾರು, ಯಾರಿಗೆ, ಯಾವಾಗ ಮಿತ್ರರಾಗುತ್ತಾರೆ, ಯಾವಾಗ ಶತ್ರುವಾಗುತ್ತಾರೆ ಎನ್ನುವುದನ್ನು ಊಹಿಸಿವುದು ಕೂಡ ಕಷ್ಟ. ಇದಕ್ಕೆ ತಾಜಾ ಉದಾಹರಣೆಯೆಂದರೆ ಉಪಮುಖ್ಯಮಂತ್ರಿ ಡಿ.ಕೆ.ಶೀವಕುಮಾರ್‌ ಮತ್ತು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು. ನಿನ್ನೆ ವೇದಿಕೆಯೊಂದರಲ್ಲಿ ಕಟೀಲು ಪರವಾಗಿ ಡಿಕೆಶಿ ಭರ್ಜರಿಯಾಗಿ ಬ್ಯಾಟಿಂಗ್‌ ಮಾಡಿದ್ದು, ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ. ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ

ನಳಿನ್‌ ಕುಮಾರ್‌ ಕಟೀಲ್‌ ಪರ ಡಿಕೆಶಿ ಬ್ಯಾಟಿಂಗ್‌ Read More »

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ

ಬೆಂಗಳೂರು: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿ ಇರುವ ಅಸ್ತಾಪನಹಳ್ಳಿಯಲ್ಲಿ ಏಪ್ರಿಲ್​ 4ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಚಿತ್ರಹಿಂಸೆ ನೀಡಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸರು 9 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಸುಭಾಷ್​ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿಪಿಕ್ಕಿ

ಕಳ್ಳತನ ಮಾಡಿದ ಬಾಲಕರನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ Read More »

ಡೀಸೆಲ್‌ ಬೆಲೆ ಏರಿಕೆಗೆ ಪ್ರತಿಭಟನೆ : ಏ.14ರಿಂದ ಲಾರಿ ಮುಷ್ಕರ

ಗೂಡ್ಸ್ ವಾಹನಗಳು, ಟ್ಯಾಕ್ಸಿ ಸೇರಿ 6 ಲಕ್ಷಕ್ಕೂ ವಾಹನಗಳ ಸಂಚಾರ ಸ್ಥಗಿತ ಬೆಂಗಳೂರು: ರಾಜ್ಯದಲ್ಲಿ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಏ.14ರಿಂದ ಮುಷ್ಕರ ಹೂಡಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಮತ್ತು ಟೋಲ್ ದರ ಹೆಚ್ಚಿಸಿದ್ದು ಇದು ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಡೀಸೆಲ್ ದರ ಏರಿಕೆ ಖಂಡಿಸಿ ಏಪ್ರಿಲ್​ 14ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಸಂಘ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಡೀಸೆಲ್‌ ಬೆಲೆ ಏರಿಕೆಗೆ ಪ್ರತಿಭಟನೆ : ಏ.14ರಿಂದ ಲಾರಿ ಮುಷ್ಕರ Read More »

ಉಡುಪಿ ಲವ್‌ ಜಿಹಾದ್‌ ಪ್ರಕರಣಕ್ಕೆ ತಿರುವು : ಸ್ವಇಚ್ಚೆಯಿಂದ ಹೋಗಿದ್ದೇನೆ ಎಂದ ಯುವತಿ

ಎ.19ರಂದು ರಿಜಿಸ್ಟ್ರರ್‌ ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೆ ಉಡುಪಿ: ಉಡುಪಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲವ್‌ ಜಿಹಾದ್‌ ಪ್ರಕರಣ ಯುವತಿ ನ್ಯಾಯಾಲಯಕ್ಕೆ ಹಾಜರಾಗುವುದರೊಂದಿಗೆ ತಿರುವು ಪಡೆದುಕೊಂಡಿದೆ. ಕ್ರೈಸ್ತ ಸಮುದಾಯದ 19ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಮುಹಮ್ಮದ್‌ ಅಕ್ರಮ್‌ ಎಂಬಾತ ಅಪಹರಿಸಿ ಬಲವಂತವಾಗಿ ಮದುವೆಯಾಗಲು ತಯಾರಿ ನಡೆಸಿದ್ದಾನೆ. ಈ ವಿಚಾರದಲ್ಲಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಯುವತಿಯ ತಾಯಿ ಕೆಲದಿನಗಳ ಹಿಂದೆ ಆರೋಪಿಸಿದ್ದರು. ಇದರ ಬೆನ್ನಿಗೆ ಹಿಂದು ಸಂಘಟನೆಗಳು ಮಧ್ಯೆ ಪ್ರವೇಶಿಸಿ ಲವ್‌ ಜಿಹಾದ್‌ ಅರೋಪ ಮಾಡಿದ್ದವು.ಅಪಹರಣ

ಉಡುಪಿ ಲವ್‌ ಜಿಹಾದ್‌ ಪ್ರಕರಣಕ್ಕೆ ತಿರುವು : ಸ್ವಇಚ್ಚೆಯಿಂದ ಹೋಗಿದ್ದೇನೆ ಎಂದ ಯುವತಿ Read More »

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ

2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಂತಿದೆ ಬೆಂಗಳೂರು: ಈ ಬೇಸಿಗೆ ರಜೆ ಕಳೆದ ಬಳಿಕ ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭಗೊಳ್ಳಲಿವೆ. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ 29ರಿಂದ ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು,

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ Read More »

ಸೌಜನ್ಯಾ ಪ್ರಕರಣ : ನಾಳಿನ ಸಭೆಗೆ ಹೈಕೋರ್ಟ್‌ ತಡೆ

ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏ.6ರಂದು ನಡೆಯಬೇಕಿದ್ದ ಸಭೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ನಾಳೆ ಧರ್ಮಸ್ಥಳದಿಂದ ಉಜಿರೆವರೆಗೆ ಮೆರವಣಿಗೆ ನಡೆಸಿ ಉಜಿರೆಯಲ್ಲಿ ಹಕ್ಕೊತ್ತಾಯ ಸಭೆ ನಡೆಸಲು ನಿರ್ಧರಿಸಲಾಗಿತ್ತು.ಆರಂಭದಲ್ಲಿ ಈ ಪ್ರತಿಭಟನೆಗೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಈ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಪ್‌ ಸೇರಿದಂತೆ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ಗಮನಿಸಿದ ಬಳಿಕ ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು

ಸೌಜನ್ಯಾ ಪ್ರಕರಣ : ನಾಳಿನ ಸಭೆಗೆ ಹೈಕೋರ್ಟ್‌ ತಡೆ Read More »

error: Content is protected !!
Scroll to Top