ರಾಜ್ಯ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಠಿಣ ನಿಯಮ: ಮಧು ಬಂಗಾರಪ್ಪ

ಶೇ.10 ಕೃಪಾಂಕ ಇಲ್ಲ; ಫಲಿತಾಂಶ ಸುಧಾರಣೆಗೆ ನಾನಾ ಕಸರತ್ತು ಬೆಂಗಳೂರು : ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ನಿಯಮ ತರಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ವೆಬ್‌ಕಾಸ್ಟಿಂಗ್ ಹಾಗೂ ಸಿಸಿಟಿವಿ ನಿಯಮ ಮತ್ತಷ್ಟು ಕಠಿಣವಾಗಲಿದೆ. ಜೊತೆಗೆ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೃಪಾಂಕ ಕೊಡದಿರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿನ್ನೆ ಎಸ್‌ಎಸ್‌ಎಲ್‌ಸಿ ಮಕ್ಕಳ ಹಾಗೂ ಶಿಕ್ಷಕರ ಜೊತೆ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಬಳಿಕ ಈ ವರ್ಷ […]

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಠಿಣ ನಿಯಮ: ಮಧು ಬಂಗಾರಪ್ಪ Read More »

ಕೆರೆಗೆ ಈಜಲು ಹೋದ ಗೆಳೆಯರು ನೀರು ಪಾಲು

ಹಾಸನ : ಈಜಲೆಂದು ಕೆರೆಗೆ ಇಳಿದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದ್ದು,ಮೃತಪಟ್ಟ ಯುವಕರನ್ನು ಯಶ್ವಂತ್ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಎನ್ನಲಾಗಿದೆ. ಮೃತ ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸ ಮುಗಿಸಿ ಇಬ್ಬರು ಸಂಜೆ ಕೆರೆಗೆ ಈಜಲು ತೆರಳಿದ್ದರು. ಮೊದಲು ರೋಹಿತ್ ಕೆರೆಗೆ ಇಳಿದಿದ್ದಾನೆ. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ. ರೋಹಿತ್ ಕೆರೆಯಿಂದ ಮೇಲೆ ಬರಲಾರದೇ ಕಿರುಚಾಡಿದಾಗ

ಕೆರೆಗೆ ಈಜಲು ಹೋದ ಗೆಳೆಯರು ನೀರು ಪಾಲು Read More »

ನೇಹಾ ಹತ್ಯೆ ಕೇಸ್‌ ಮತ್ತೆ ಮುನ್ನೆಲೆಗೆ : ಸಿಬಿಐ ತನಿಖೆಗೆ ಒತ್ತಾಯ

ಶಾಸಕರು ಸೇರಿ ಕೆಲವು ಪ್ರಭಾವಿಗಳ ಕೈವಾಡವಿರುವ ಆರೋಪ ಬೆಂಗಳೂರು: ಕಳೆದ ವರ್ಷ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹತ್ಯೆ ನಡೆದು ಒಂಬತ್ತು ತಿಂಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿರುವ ನೇಹಾಳ ತಂದೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನೇಹಾಳ ಹಂತಕನಿಗೆ ಇನ್ನೂ ಶಿಕ್ಷೆಯಾಗಿಲ್ಲ. 4 ತಿಂಗಳಲ್ಲಿ ನೇಹಾಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ ನ್ಯಾಯ ದೊರೆತಿಲ್ಲ. ನೇಹಾ ಕೊಲೆ ಹಿಂದೆ

ನೇಹಾ ಹತ್ಯೆ ಕೇಸ್‌ ಮತ್ತೆ ಮುನ್ನೆಲೆಗೆ : ಸಿಬಿಐ ತನಿಖೆಗೆ ಒತ್ತಾಯ Read More »

ಕುದುರೆಮುಖ ಅದಿರು ಕಾರ್ಖಾನೆ ಮುಚ್ಚಲು ಕಾಂಗ್ರೆಸ್‌ ವ್ಯವಸ್ಥಿತ ಷಡ್ಯಂತ್ರ : ಕುಮಾರಸ್ವಾಮಿ

ಬೆಂಗಳೂರು: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ ಕರ್ನಾಟಕಕ್ಕೆ ಇಂತಹದ್ದು

ಕುದುರೆಮುಖ ಅದಿರು ಕಾರ್ಖಾನೆ ಮುಚ್ಚಲು ಕಾಂಗ್ರೆಸ್‌ ವ್ಯವಸ್ಥಿತ ಷಡ್ಯಂತ್ರ : ಕುಮಾರಸ್ವಾಮಿ Read More »

ಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ರಾಜೀನಾಮೆ ಕಾರಣ ಬಯಲು ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಆರ್‌ ಪಾಟೀಲ್‌

ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದ ಪಾಟೀಲ್‌ ಬೆಂಗಳೂರು: ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಹುದ್ದೆಗೆ ನಿನ್ನೆ ದಿಢೀರ್‌ ಎಂದು ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ್ದ ಶಾಸಕ ಬಿ.ಆರ್‌. ಪಾಟೀಲ್‌ ಇಂದು ತನ್ನ ನಡೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಮದವರ ಜೊತೆ ಮಾತನಾಡಿದ ಪಾಟೀಲ್‌ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ. ಸುಮ್ಮನೆ ರಾಜೀನಾಮೆ ಕೊಟ್ಟಿಲ್ಲ. ಕೆಲವು ಸಮಸ್ಯೆಗಳಿವೆ ಎಂದು ನೇರವಾಗಿ ವಾಗ್ದಾಳಿ ತನ್ನ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ

ಗ್ಯಾರಂಟಿಗಳಿಂದಾಗಿ ಅನುದಾನ ಸಿಗುತ್ತಿಲ್ಲ : ರಾಜೀನಾಮೆ ಕಾರಣ ಬಯಲು ಮಾಡಿದ ಕಾಂಗ್ರೆಸ್‌ ಶಾಸಕ ಬಿ.ಆರ್‌ ಪಾಟೀಲ್‌ Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

ಕೊನೇ ಕ್ಷಣದಲ್ಲಿ ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಂದಿನ ಅವರ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಮಂಡಿ ನೋವು ತೀವ್ರಗೊಂಡ ಕಾರಣ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ. ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ. ಚಿಕ್ಕಬಳ್ಳಾಪುರದ ಹೊಸೂರು ಗ್ರಾಮಕ್ಕೆ ಇಂದು ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಅಲ್ಲಿ ಬಿಗಿ ಭದ್ರತೆ ಸಹಿತ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು Read More »

ಪ್ರಾಣಿಬಲಿ ಪ್ರಕರಣಕ್ಕೆ ಟ್ವಿಸ್ಟ್‌ : ನನ್ನ ಮೇಲೇಯೇ ವಾಮಾಚಾರ ಎಂದು ಆರೋಪಿಸಿದ ಸ್ನೇಹಮಯಿ ಕೃಷ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಬಲಿಗರ ವಿರುದ್ಧ ದೂರು ಮಂಗಳೂರು: ರಾಮ ಸೇನೆಯ ಸ್ಥಾಪಕ ಪ್ರಸಾದ್‌ ಅತ್ತಾವರ ಮುಡಾ ಕೇಸಿನ ದೂರುದಾರ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಬಲ ತುಂಬಲು ಪ್ರಾಣಿಬಲಿ ಕೊಟ್ಟು ರಕ್ತಾಭಿಷೇಕ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಈಗ ಹೊಸದೊಂದು ಟ್ವಿಸ್ಟ್‌ ಸಿಕ್ಕಿದೆ. ಈಗ ಸ್ವತಹ ಸ್ನೇಹಮಯಿ ಕೃಷ್ಣ ಅವರೇ ನನ್ನ ಮೇಲೆ ವಾಮಾಚಾರ ಹಾಗೂ ವಶೀಕರಣ ಪ್ರಯೋಗ ನಡೆಯುತ್ತಿದೆ ಎಂದು ಆರೋಪಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ

ಪ್ರಾಣಿಬಲಿ ಪ್ರಕರಣಕ್ಕೆ ಟ್ವಿಸ್ಟ್‌ : ನನ್ನ ಮೇಲೇಯೇ ವಾಮಾಚಾರ ಎಂದು ಆರೋಪಿಸಿದ ಸ್ನೇಹಮಯಿ ಕೃಷ್ಣ Read More »

ಇಂದು ಉಡುಪಿಯಲ್ಲಿ ಮತ್ತೋರ್ವ ನಕ್ಸಲ್‌ ಶರಣಾಗತಿ ಪ್ರಕ್ರಿಯೆ

ಒಂದೂವರೆ ದಶಕದಿಂದ ಆಂಧ್ರದಲ್ಲಿರುವ ನಕ್ಸಲ್‌ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗತಿಗೆ ಸಿದ್ಧತೆ ಉಡುಪಿ : ಕಳೆದ ಸುಮಾರು ಎರಡು ದಶಕದಿಂದ ನಕ್ಸಲ್‌ ಚಟುವಟಿಕೆಯಿಂದ ದೂರವಾಗಿ ನಾಗರಿಕ ಜೀವನ ನಡೆಸುತ್ತಿದ್ದ ಲಕ್ಷ್ಮೀ ತೊಂಬಟ್ಟು ಇಂದು ಉಡುಪಿಯಲ್ಲಿ ಪೊಲೀಸರಿಗೆ ಶರಣಾಗಲಿದ್ದಾಳೆ. ಮೋಸ್ಟ್ ವಾಂಟೆಡ್ ಆರು ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಇದೀಗ ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿಗೆ ಮುಂದಾಗಿದ್ದಾರೆ. ಇಂದು ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ನಕ್ಸಲ್​ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿದ್ದಾಳೆ ಎಂದು ಮೂಲಗಳು

ಇಂದು ಉಡುಪಿಯಲ್ಲಿ ಮತ್ತೋರ್ವ ನಕ್ಸಲ್‌ ಶರಣಾಗತಿ ಪ್ರಕ್ರಿಯೆ Read More »

ಇಂದಿನಿಂದ ಮಲೆನಾಡು ಸಂಪೂರ್ಣ ನಕ್ಸಲ್‌ ಮುಕ್ತ

ಕೊನೆಯ ನಕ್ಸಲ್‌ ರವೀಂದ್ರ ಇಂದು ಮಧ್ಯಾಹ್ನ ಶಸ್ತ್ರತ್ಯಾಗ ಬೆಂಗಳೂರು: ರಾಜ್ಯದಲ್ಲಿ ಉಳಿದಿರುವ ಕೊನೆಯ ನಕ್ಸಲ್‌ ರವೀಂದ್ರ ಇಂದು ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಲಿದ್ದು, ಇದರೊಂದಿಗೆ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಗಲಿದೆ. ಇತ್ತೀಚೆಗೆ ಆರು ಜನ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶರಣಾಗಿದ್ದರು. ಅವರೀಗ ಪೊಲೀಸರ ವಶದಲ್ಲಿದ್ದು, ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಅವರಿಗೆ ಉತ್ತಮ ಪ್ಯಾಕೇಜ್‌ ಕೂಡ ಘೋಷಿಸಿದೆ. ಆ ಬಳಿಕ ಒಂಟಿಯಾಗಿದ್ದ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಕೋಟಿಹೊಂಡ ಮರಾಟಿ ಕಾಲನಿಯ ರವೀಂದ್ರನ ಶರಣಾಗತಿಗೆ ಶಾಂತಿಗಾಗಿ

ಇಂದಿನಿಂದ ಮಲೆನಾಡು ಸಂಪೂರ್ಣ ನಕ್ಸಲ್‌ ಮುಕ್ತ Read More »

ಬಿಜೆಪಿ ಆಂತರಿಕ ಕಚ್ಚಾಟ : ವಿಜಯೇಂದ್ರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾದ ಯತ್ನಾಳ್‌ ಬಣ

ನಾಯಕರ ಜಗಳದಿಂದಾಗಿ ಅಶಿಸ್ತಿನ ಮಡುವಾದ ಶಿಸ್ತಿನ ಪಕ್ಷ ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಬಿ.ವೈ.ವಿಜಯೇಂದ್ರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಸನಗೌಡ ಯತ್ನಾಳ್‌ ಬಣ ನಿರ್ಧರಿಸಿದ್ದು, ಇದರಿಂದಾಗಿ ಇದೇ ಮೊದಲ ಬಾರಿಗೆ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರನ್ನು ಆರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ.ಬಿಜೆಪಿಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಬಣ ಬಡಿದಾಟದಿಂದ ಪಕ್ಷ ದುರ್ಬಲವಾಗುತ್ತಿದೆ. ಯತ್ನಾಳ್‌ ನೇತೃತ್ವದಲ್ಲಿ ಭಿನ್ನಮತೀಯರೆಲ್ಲ ಒಂದಾಗಿ ಯಡಿಯೂರಪ್ಪ ಪರಿವಾರದ ವಿರುದ್ಧವೇ ಹೋರಾಡುತ್ತಿರುವುದರಿಂದ ಶಿಸ್ತಿನ ಪಕ್ಷ ಅಶಿಸ್ತಿನ ಮಡುವಾಗಿ ಬದಲಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರು ಈ

ಬಿಜೆಪಿ ಆಂತರಿಕ ಕಚ್ಚಾಟ : ವಿಜಯೇಂದ್ರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾದ ಯತ್ನಾಳ್‌ ಬಣ Read More »

error: Content is protected !!
Scroll to Top