ಪುತ್ತೂರು

ಸಂಜೀವ ಮಠಂದೂರೇ ನಮ್ಮ ನಾಯಕರು | ಪುತ್ತೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಹೋರಾಟದ ಎಚ್ಚರಿಕೆ | ಗೌಡ ಸಮುದಾಯದ ಪ್ರಾತಿನಿಧ್ಯಕ್ಕೆ ಒತ್ತಾಯ | ಒಕ್ಕಲಿಗ ಗೌಡ ಸಮುದಾಯದ ಮುಖಂಡರಿಂದ ನಿರ್ಮಲಾನಂದ ಶ್ರೀಗಳ ಭೇಟಿ

ಪುತ್ತೂರು: ಮುಂಬರುವ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು. ಸಂಜೀವ ಮಠಂದೂರು ಅವರನ್ನು ಹೊರತುಪಡಿಸಿ ಯಾರನ್ನೇ ಶಾಸಕ ಅಭ್ಯರ್ಥಿ ಎಂದು ಘೋಷಿಸಿದರೂ ಅದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಂಡಿತಾ ಎಂದು ಒಕ್ಕಲಿಗ ಗೌಡ ಸಮುದಾಯದ ಮುಖಂಡರು ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಗಮನಕ್ಕೆ ತಂದಿದ್ದಾರೆ. ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತನಾಡಿದ ಒಕ್ಕಲಿಗ ಗೌಡ […]

ಸಂಜೀವ ಮಠಂದೂರೇ ನಮ್ಮ ನಾಯಕರು | ಪುತ್ತೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಹೋರಾಟದ ಎಚ್ಚರಿಕೆ | ಗೌಡ ಸಮುದಾಯದ ಪ್ರಾತಿನಿಧ್ಯಕ್ಕೆ ಒತ್ತಾಯ | ಒಕ್ಕಲಿಗ ಗೌಡ ಸಮುದಾಯದ ಮುಖಂಡರಿಂದ ನಿರ್ಮಲಾನಂದ ಶ್ರೀಗಳ ಭೇಟಿ Read More »

ಶ್ರೀ ಭಗವಾನ್ ಮಹಾವೀರ ಜಯಂತಿ ದಿನಾಚರಣೆ | ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಣೆ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಮಂಗಳವಾರ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಶ್ರೀ ಭಗವಾನ್ ಮಹಾವೀರ ಜಯಂತಿ ದಿನಾಚರಣೆ ನಡೆಯಿತು. ಭಗವಾನ್ ಮಹಾವೀರ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ಭಗವಾನ್ ಮಹಾವೀರರು ಸತ್ಯ, ಅಹಿಂಸಾ, ತತ್ವಾದರ್ಶಗಳು ವಿಶ್ವಕ್ಕೆ ಮಾದರಿ. ಅವರು ನೀಡಿರುವ ಶಾಂತಿಯ ಸಂದೇಶ ಜಗತ್ತಿಗೆ ಮಾದರಿ. ಅದನ್ನು ನಾವು ಪಾಲನೆ ಮಾಡುವುದು ಇಂದಿನ ಅಗತ್ಯ ಎಂದರು.

ಶ್ರೀ ಭಗವಾನ್ ಮಹಾವೀರ ಜಯಂತಿ ದಿನಾಚರಣೆ | ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಚರಣೆ Read More »

ಶೇ. 80ರಷ್ಟು ಜನರಿಗೆ ಹಲ್ಲಿನ ಸಮಸ್ಯೆ | ದಂತ ಚಿಕಿತ್ಸಾ ಶಿಬಿರದಲ್ಲಿ ಡಾ. ಅರವಿಂದ್

ಪುತ್ತೂರು: ಸಮಾಜದಲ್ಲಿ ಶೇಕಡಾ 80ರಷ್ಟು ಜನ ಒಂದಲ್ಲ ಒಂದು ರೀತಿಯ ಹಲ್ಲಿನ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಅದು ತೀವ್ರತೆಯ ಮಟ್ಟಕ್ಕೆ ತಲಪುವವರೆಗೆ ಸುಮ್ಮನಿರುತ್ತಾರೆ ಎಂದು ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ.ಅರವಿಂದ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‌ಎಸ್‌ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಪುತ್ತೂರು ಪೂರ್ವ ಮತ್ತು ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ

ಶೇ. 80ರಷ್ಟು ಜನರಿಗೆ ಹಲ್ಲಿನ ಸಮಸ್ಯೆ | ದಂತ ಚಿಕಿತ್ಸಾ ಶಿಬಿರದಲ್ಲಿ ಡಾ. ಅರವಿಂದ್ Read More »

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲು ಎಂಬಲ್ಲಿ ಏ. 3 ರಂದು ಸಂಭವಿಸಿದೆ. ಶಿವಪ್ಪ ಗೌಡ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 4 ವರ್ಷಗಳ ಹಿಂದೆ ದಂಪತ್ಯದಲ್ಲಿ ಮನಸ್ಧಾಪ ಉಂಟಾಗಿ ಆತನ ಪತ್ನಿ ತವರು ಮನೆಯಲ್ಲಿ ನೆಲೆಸಿದ ಕಾರಣ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಏ. 1 ರಂದು ಶಿವಪ್ಪ ಗೌಡ ಕಾಣೆಯಾದ ಬಗ್ಗೆ ಅಣ್ಣ ತಿಮ್ಮಪ್ಪ ಗೌಡ ಪುತ್ತೂರು ನಗರ ಪೊಲೀಸ್‌

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ಏ. 11ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ | ಚುನಾವಣಾಧಿಕಾರಿ ಗಿರೀಶ್ ನಂದನ್ ಮಾಹಿತಿ

ಪುತ್ತೂರು: ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು, ಏ. 20ರಂದು ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ತಾಲೂಕು ಆಡಳಿತ ಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯನ್ನು ಸೂಸೂತ್ರ ಮತ್ತು ನಿರ್ಭೀತಿಯಿಂದ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 220 ಮತದಾನ ಕೇಂದ್ರಗಳಿವೆ. ಈಗಾಗಲೇ ಇವತ್ತಿನ ದಿನಕ್ಕೆ ಸಂಬಂಧಿಸಿ 2,10,792 ಮತದಾರರಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಮಾಧ್ಯಮ ಸಹಿತ ವಿವಿಧ

ಏ. 11ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ | ಚುನಾವಣಾಧಿಕಾರಿ ಗಿರೀಶ್ ನಂದನ್ ಮಾಹಿತಿ Read More »

ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಾರ್ಷಿಕ ಜಾತ್ರೆ, ನೇಮೋತ್ಸವ

ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ. 3ರಂದು ಪ್ರತಿಷ್ಠಾ ಮಹೋತ್ಸವ, ವಾರ್ಷಿಕ ಜಾತ್ರೆ ಹಾಗೂ ದೈವಗಳ ನೇಮೋತ್ಸವ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಏ. 2ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ಭಜನ ಮಂದಿರದಿಂದ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಏ. 3ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು,

ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವಾರ್ಷಿಕ ಜಾತ್ರೆ, ನೇಮೋತ್ಸವ Read More »

ಏ. 5: ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವದ ನೇಮೋತ್ಸವ

ಪುತ್ತೂರು: ಮಾಡಾವು ಪಲ್ಲತ್ತಡ್ಕದ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವ ಏ. 5ರಂದು ನಡೆಯಲಿದೆ. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳ ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ, ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿಯಿಂದ ಭಜನೆ, ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ಶ್ರೀ ಹೊಸಮ್ಮ ದೈವದ ನೇಮೋತ್ಸವ,

ಏ. 5: ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವದ ನೇಮೋತ್ಸವ Read More »

ಏಪ್ರಿಲ್ 8ರಂದು ಮುಖಗಳು ಕಲಾಕೃತಿ ಪ್ರದರ್ಶನ

ಪುತ್ತೂರು: ಪರ್ಪುಂಜ ಸೌಗಂಧಿಕ ಆರ್ಟ್ ಗ್ಯಾಲರಿಯಲ್ಲಿ ಏಪ್ರಿಲ್ 8ರಂದು ಸಂಜೆ 4ಕ್ಕೆ ಮುಖಗಳು ಕಲಾಕೃತಿ ಪ್ರದರ್ಶನ ನಡೆಯಲಿದೆ. ಆದಿತ್ಯ ಸದಾಶಿವ ರಾವ್ ಅವರ ಕಲಾಕೃತಿ ಪ್ರದರ್ಶನ ಇದಾಗಿದೆ. ಕಲಾಪ್ರದರ್ಶನ ಏಪ್ರಿಲ್ 8ರಿಂದ 20ರವರೆಗೆ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ವೀಕ್ಷಣೆಗೆ ಲಭ್ಯವಿದೆ. ಸುಬ್ರಹ್ಮಣ್ಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಗೋವಿಂದ ಅವರು ದೀಪ ಬೆಳಗಿಸುವರು. ರಂಗಗೀತೆಗಳ ಕಾರ್ಯಕ್ರಮವನ್ನು ಸತ್ಯ ನಾ ಕೊಡೇರಿ, ರಾಘವೇಂದ್ರ, ಭ್ರಮರ, ಸಂದೇಶ, ಅರವಿಂದ ಕುಡ್ಲ, ರಶ್ಮಿ ನಡೆಸಿಕೊಡುವರು

ಏಪ್ರಿಲ್ 8ರಂದು ಮುಖಗಳು ಕಲಾಕೃತಿ ಪ್ರದರ್ಶನ Read More »

ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರವನ್ನು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಏಪ್ರಿಲ್ 26, 27ರಂದು ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ. ಅದೇ ದಿನ ಚಂಡಿಕಾ ಹೋಮ ಸಹಿತ ಮಹಾ ಉತ್ಸವ ನಡೆಯಲಿದೆ. ಶ್ರೀ ಅಮ್ಮನವರ ಬೆಳ್ಳಿಯ ಕತ್ತಿ ಮತ್ತು ಬೆಳ್ಳಿಯ ತ್ರಿಶೂಲ ಸಮರ್ಪಣೆಯೂ ನಡೆಯಲಿದೆ. ವಾರ್ಷಿಕ ಮಹೋತ್ಸವಕ್ಕೆ ಮೊದಲು ಅಂದರೆ ಏಪ್ರಿಲ್ 20ರಂದು ಗೊನೆ ಮುಹೂರ್ತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಬಿಡುಗಡೆ Read More »

ಕೂಜುಗೋಡಿನಿಂದ ಮಠಂದೂರುವರೆಗಿನ ಶಾಸಕತ್ವದ ಅವಧಿ | ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಶಾಸಕ ಮಠಂದೂರು ಭಾಗಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಕೂಜುಗೋಡು ವೆಂಕಟ್ರಮಣ ಗೌಡ. ಈಗಿನ ಶಾಸಕ ಸಂಜೀವ ಮಠಂದೂರು. ಶಾಸಕ ಸಂಜೀವ ಮಠಂದೂರು ಅವರು ಕೂಜುಗೋಡು ವೆಂಕಟ್ರಮಣ ಗೌಡ ಅವರ ಮನೆಗೆ ಭೇಟಿ ನೀಡಿದರು. ಗೌಡ ಸಮುದಾಯದ ಪ್ರತಿಷ್ಠಿತ ಮನೆತನವಾದ ಕೂಜುಗೋಡು ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರಿಬ್ಬರೂ ಪ್ರತಿಷ್ಠಿತ ಗೌಡ ಸಮುದಾಯದ ಮನೆತನಗಳಿಗೆ ಸೇರಿದವರು ಎನ್ನುವುದೇ ಇಲ್ಲಿನ ವಿಶೇಷತೆ. ಅವಿಭಜಿತ ವಿಧಾನಸಭಾ ಕ್ಷೇತ್ರ: 1952ರಲ್ಲಿ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ಒಂದೇ ವಿಧಾನಸಭಾ ಕ್ಷೇತ್ರವಾಗಿತ್ತು. ಅದು ಪುತ್ತೂರು ವಿಧಾನಸಭಾ

ಕೂಜುಗೋಡಿನಿಂದ ಮಠಂದೂರುವರೆಗಿನ ಶಾಸಕತ್ವದ ಅವಧಿ | ಕಟ್ಟೆಮನೆಯ ಕಾರ್ಯಕ್ರಮದಲ್ಲಿ ಶಾಸಕ ಮಠಂದೂರು ಭಾಗಿ Read More »

error: Content is protected !!
Scroll to Top