ಪುತ್ತೂರು

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ ನಿಧಿ ಸಂಗ್ರಹ ಅಭಿಯಾನ

ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಡಬ ಯುವವಾಹಿನಿ ಘಟಕದ ಸಹಕಾರದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಏಕಹಾ ಭಜನೆ ಸಂಭ್ರಮದಲ್ಲಿ ಉದನೆ ಬನಾರಿ ನಿವಾಸಿ ಚಂದ್ರಶೇಖರ್ ಅವರ ಚಿಕಿತ್ಸೆಯ ನೆರವಾಗಿ ನಿಧಿ ಸಂಗ್ರಹ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಸಂಗ್ರಹವಾದ ಹಣ 29,910 ರೂ.ವನ್ನು ಚೆಕ್‍ ಮೂಲಕ ಸೋಮವಾರ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಕಡಬ ಆರಕ್ಷಕ ಠಾಣಾ ಉಪನಿರೀಕ್ಷ ಹರೀಶ್ ಅವರು ಚಂದ್ರಶೇಖರ್ ಅವರ ಮನೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ […]

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ ನಿಧಿ ಸಂಗ್ರಹ ಅಭಿಯಾನ Read More »

ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಶಿಷ್ಯಮಿಲನ

ಪುತ್ತೂರು: ಪುತ್ತೂರಿಗೆ ಆಗಮಿಸಿದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಪುತ್ತೂರಿನ ಭಾಗದ ಅವರ ಶಿಷ್ಯಂದಿರ ಸುಮಧುರ ನೆನಪುಗಳ ಶಿಷ್ಯ ಮಿಲನ ಕಾರ್ಯಕ್ರಮ ಅನುರಾಗ ವಠಾರದಲ್ಲಿ ನಡೆಯಿತು. ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಎನ್ನುವಾಗ ಕನ್ನಡಿಗರಿಗೆ ಪ್ರೊ. ಮರಿಯಪ್ಪ ಭಟ್ಟ, ಪ್ರೊ. ಕುಶಾಲಪ್ಪ ಗೌಡ, ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಈ ಹೆಸರುಗಳು ಸ್ಮರಣೆಗೆ ಬಂದು ಹೋಗುತ್ತವೆ. ಯಾಕೆಂದರೆ ಅವರುಗಳು ಬರೀ ಪಾಠ ಮಾಡಿದವರಲ್ಲ. ಆದರಾಚೆಗೆ ನಿಂತು ವಿದ್ಯಾರ್ಥಿಗಳನ್ನು ಮದರಾಸಿನಲ್ಲಿ ನೋಡಿ ಕೊಂಡವರು, ಸಾಕಿದವರು, ಬೆಳೆಸಿದವರು. ವಿದ್ಯಾರ್ಥಿಗಳ ಜೊತೆಗೆ

ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಶಿಷ್ಯಮಿಲನ Read More »

ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಬೀರಮಲೆ ಮಾನಸಿಕ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಸೇವೆ

ಪುತ್ತೂರು: ಬಲ್ನಾಡು ಶೌರ್ಯ  ವಿಪತ್ತು ನಿರ್ವಹಣಾ  ಘಟಕ  ಈ ತಿಂಗಳ  ಸೇವೆ ಭಾನುವಾರ ” ಪ್ರಜ್ಞಾ ” ಬೀರಮಲೆ ಮಾನಸಿಕ  ವಿಕಲಚೇತನರ  ಪುನರ್ವಸತಿ  ಕೇಂದ್ರದಲ್ಲಿ ನಡೆಯಿತು. ಸಂಸ್ಥೆಯು ದಾನಿಗಳು, ಸಂಘ  ಸಂಸ್ಥೆಗಳ  ಸಹಕಾರದಿಂದ  ನಡೆಯುತ್ತಿದ್ದು ಆಶ್ರಮಕ್ಕೆ ಒಂದು ಎಕ್ರೆ ಜಾಗ  ಇದ್ದು ಆಶ್ರಮ ಬಿಟ್ಟು ಉಳಿದ  ಜಾಗದಲ್ಲಿ  ಮರ ಬಳ್ಳಿ  ಗಿಡಗಳು ತುಂಬಿ ದಟ್ಟವಾದ  ಕಾಡಿನಂತೆ ಇದೆ, ನಮ್ಮ  ಘಟಕದ  ಸದಸ್ಯರು ಅವರ  ಮನವಿಯಂತೆ  ಸೇವೆ ಮಾಡುವುದು ಎಂದು  ನಿರ್ಣಯ  ಮಾಡಿ ಭಾನುವಾರ ಆ ಕಾರ್ಯವನ್ನು ಮಾಡಿದೆ.

ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಬೀರಮಲೆ ಮಾನಸಿಕ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಸೇವೆ Read More »

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿಯೊಬ್ಬರು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಸ್  ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಶಿವಪ್ಪ ಗೌಡ (45) ಎಂಬವರ ಮೃತದೇಹ ಪತ್ತೆಯಾಗಿದೆ. ಶಿವಪ್ಪ ಗೌಡ ಮಾ.`17 ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದರು. ಬಳಿಕ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ Read More »

ಕಟ್ಟಿ ನೇಮೊಡು ಜೀವ ಪೊ೦ಡ ಅರ್ದಲ ದೆಪ್ಪರೆ ಇಜ್ಜಿ | ಪರತಿ ಮಾಂಗಣೆ ಪಾಡ್ದನದಲ್ಲೂ ಉಲ್ಲೇಖ

ಪುತ್ತೂರು: ದೈವಾರಾಧನೆ ಕಲೆಯಲ್ಲ ಬದುಕು, ಆರಾಧನಾ ಪ್ರಾಕಾರ. ಇಲ್ಲಿನ ಪ್ರತಿಯೊಂದು ಆಚರಣೆಗೂ ಒಂದೊಂದು ಹಿನ್ನೆಲೆ ಇದೆ. ದೈವಾರಾಧನೆಯ ನಡೆಯಲ್ಲೇ ದೈವ ನರ್ತಕ ಮೃತಪಟ್ಟರೆ, ಅದಕ್ಕೂ ಒಂದು ಕ್ರಮವಿದೆ. ದೈವಾರಾಧನೆ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ಇತ್ತೀಚೆಗೆ ದೋಳ್ಪಾಡಿಯಲ್ಲಿ ನಡೆದಿತ್ತು. ಕೆಲ ವರ್ಷಗಳ ಹಿಂದೆ ಉಡುಪಿಯಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿ ಬೈದರ್ಕಳ ನೇಮೋತ್ಸವದಲ್ಲಿ ಕೋಟಿ ದೈವದ ನರ್ತಕ ಕುಸಿದು ಬಿದ್ದು ಮೃತಪಟ್ಟಿದ್ದರು. ಇಂತಹ ಘಟನೆ ನಡೆದಾಗ ಮುಖದ ಬಣ್ಣ ತೆಗೆಯದೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಕಟ್ಟಿ ನೇಮೊಡು ಜೀವ ಪೊ೦ಡ ಅರ್ದಲ ದೆಪ್ಪರೆ ಇಜ್ಜಿ | ಪರತಿ ಮಾಂಗಣೆ ಪಾಡ್ದನದಲ್ಲೂ ಉಲ್ಲೇಖ Read More »

ಏ.5 ರಿಂದ 8 : ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ

ಪುತ್ತೂರು: ರೆಂಜಿಲಾಡಿ ಗ್ರಾಮದ ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ ಏ.5 ರಿಂದ 8 ರ ತನಕ ನಡೆಯಲಿದೆ.ಏ.5 ರಂದು ಬೆಳಿಗ್ಗೆ ಧ್ವಜಾರೋಹಣ, ಉಗ್ರಾಣ ಮುಹೂರ್ತ, ಕ್ಷೇತ್ರ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ದೈವಜ್ಞರಾದ ಬಾಲಕೃಷ್ಣ ನಾಯರ್ ಹಾಗೂ ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕದವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಏ.6 ರಂದು ನೂಜಿಗುತ್ತು ಮನೆಯಿಂದ ದೈವಗಳ ಆಭರಣವನ್ನು ಹಾಗೂ

ಏ.5 ರಿಂದ 8 : ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ Read More »

ಪುತ್ತೂರಿನ ಬಹುನಿರೀಕ್ಷಿತ ಜಿಎಲ್ ವನ್ ಮಾಲ್ ಲೋಕಾರ್ಪಣೆ

ಪುತ್ತೂರು: ಬಹುಬೇಡಿಕೆಯ, ಬಹುನಿರೀಕ್ಷಿತ ಜಿಎಲ್ ವನ್ ಮಾಲ್ ಏ. 2ರಂದು ಲೋಕಾರ್ಪಣೆಗೊಂಡಿತು.ಜಿಎಲ್ ಸಮೂಹ ಸಂಸ್ಥೆಗಳ ಕೊಡುಗೆಯಾಗಿರುವ ಜಿಎಲ್ ವನ್ ಮಾಲ್ ನ ಲೋಗೋವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅನಾವರಣಗೊಳಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಮಾಲ್ ಅನ್ನು ಲೋಕಾರ್ಪಣೆಗೊಳಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ದೀಪಪ್ರಜ್ವಲನೆ ಮಾಡಿ, ಮಾಲ್ ಅನ್ನು ಲೋಕಾರ್ಪಣೆಗೊಳಿಸಿದರು. ನಂಬರ್ ವನ್ ಆಗಿಯೇ ಇರಲಿ: ಎಡನೀರು ಶ್ರೀಆಶೀರ್ವಚನ

ಪುತ್ತೂರಿನ ಬಹುನಿರೀಕ್ಷಿತ ಜಿಎಲ್ ವನ್ ಮಾಲ್ ಲೋಕಾರ್ಪಣೆ Read More »

ಕಬಕ ಗ್ರಾಮದಲ್ಲಿ ಮೇಳೈಸಿದ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮದ ಐದನೇ ಸರಣಿ  “ಸಾಹಿತ್ಯ ಸಂಭ್ರಮ”

ಪುತ್ತೂರು: ವರ್ಷದಲ್ಲಿ ಒಂದು ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿರುವ ಎಲ್ಲಾ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ವೇದಿಕೆ ನೀಡಲು ಹಾಗೂ  ಸಾಧಕರನ್ನು  ಸನ್ಮಾನಿಸಲು  ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ  ಪುತ್ತೂರು ತಾಲೂಕಿನ 32 ಗ್ರಾಮದಲ್ಲೂ ತಿಂಗಳಿಗೆ ಒಂದರಂತೆ  ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಸಾಧಕರನ್ನ ಗುರುತಿಸುವ  ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ

ಕಬಕ ಗ್ರಾಮದಲ್ಲಿ ಮೇಳೈಸಿದ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮದ ಐದನೇ ಸರಣಿ  “ಸಾಹಿತ್ಯ ಸಂಭ್ರಮ” Read More »

ಅಶಕ್ತರಿಗೆ ನೆರವಾಗಲು ನಿಧಿ ಸಂಗ್ರಹ ಅಭಿಯಾನ

ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್, ದ. ಕ ಕರ್ನಾಟಕ ಇವರ ನೇತೃತ್ವದಲ್ಲಿ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶ ಸಂದರ್ಭದಲ್ಲಿ ಅಶಕ್ತರಿಗೆ ನೆರವಾಗಲು ನಿಧಿ ಸಂಗ್ರಹ ಅಭಿಯಾನ ನಡೆಸಲಾಯಿತು.  ಅಭಿಯಾನದಲ್ಲಿ ಒಟ್ಟಾದ ಮೊತ್ತ 20500 ರೂ.ವನ್ನು ಧರ್ಮಸ್ಥಳ ನಿಡ್ಲೆ ಗ್ರಾಮದ ದೀಪಿಕಾ ಅವರ ಚಿಕಿತ್ಸೆಗಾಗಿ ವಿತರಿಸಲಾಯಿತು.  ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಚಂದ್ರಹಾಸ್ ಗುರಿಕಾರ, ಶಶೀಂದ್ರ ಜಂಕಲ ಹಾಗೂ ಟ್ರಸ್ಟಿನ ಗೌರವಾಧ್ಯಕ್ಷ ಉದಯ

ಅಶಕ್ತರಿಗೆ ನೆರವಾಗಲು ನಿಧಿ ಸಂಗ್ರಹ ಅಭಿಯಾನ Read More »

ಯಕ್ಷಧ್ರುವ ಪಟ್ಲ ಟ್ರಸ್ಟ್ ವತಿಯಿಂದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ನೆರವು

ಮಂಗಳೂರು : ಕಾಣಿಯೂರು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30 ರಂದು ದೈವಾರಾಧ‌ನೆ ನಡೆಯುತ್ತಿದ್ದ ಸಂದರ್ಭ, ದೈವ ನರ್ತಕರಾದ ಕಾಂತು ಅಜಿಲ ಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು. ಅವರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂ. ಆರ್ಥಿಕ ನೆರವನ್ನು ಏ. 2 ರಂದು ಘೋಷಣೆ ಮಾಡಿದೆ.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ

ಯಕ್ಷಧ್ರುವ ಪಟ್ಲ ಟ್ರಸ್ಟ್ ವತಿಯಿಂದ ದೈವ ನರ್ತಕ ಕಾಂತು ಅಜಿಲರ ಕುಟುಂಬಕ್ಕೆ ನೆರವು Read More »

error: Content is protected !!
Scroll to Top