ಪುತ್ತೂರು

ಜನಾರ್ದನ ಯಾನೆ ಜಾರಪ್ಪ ಗೌಡ ನಿಧನ

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಹೊಸಮನೆ ನಿವಾಸಿ ಜನಾರ್ದನ ಯಾನೆ ಜಾರಪ್ಪ ಗೌಡ (55) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಜನಾರ್ದನ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಹಿರೇಬಂಡಾಡಿ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಮಂಡಳಿ ಸದಸ್ಯರಾಗಿದ್ದರು. ಅಲ್ಲದೆ ಹಲವಾರು ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಅಭಿನಯಿಸಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಜನಾರ್ದನ ಯಾನೆ ಜಾರಪ್ಪ ಗೌಡ ನಿಧನ Read More »

ಜನಸಂಖ್ಯೆ ಏರಿಕೆಯಿಂದ ಭೂಮಿ ಕ್ಷೀಣಿಸುತ್ತಿದೆ | ಸಹಾಯಕ ಆಯುಕ್ತ ಗಿರೀಶ್ ನಂದನ್ | ವಿಶ್ವ ಜನಸಂಖ್ಯಾ ದಿನಾಚರಣೆ

ಪುತ್ತೂರು: ದೇಶದಲ್ಲಿರುವ ಸಂಪನ್ಮೂಲಗಳನ್ನು ಸಮಗ್ರತೆಯಿಂದ ಬಳಸಿಕೊಳ್ಳಬೇಕು. ಸಂಪನ್ಮೂಲಗಳನ್ನು ಮುಂದಿನ ಪೀಳೀಗೆಗೆ ಕೊಂಡೊಯ್ಯವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಪನ್ಮೂಲಗಳು ಉಳಿಸಿ ದೇಶದ ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ಜನಸಂಖ್ಯೆ ನಿಯಂತ್ರಣ ಅತೀ ಆವಶ್ಯಕ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ತಾಲೂಕು ಆರೋಗ್ಯಾಧಿಕಾರಿಯವರ ಕಚೇರಿ, ಪ್ರಗತಿ ಪ್ಯಾರಮೆಡಿಕಲ್ ಕಾಲೇಜು ಮತ್ತು ಹೆಚ್.ಪಿ.ಆರ್ ಪ್ಯಾರ ಮೆಡಿಕಲ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪುರಭವನದಲ್ಲಿ ನಡೆದ ವಿಶ್ವಜನ ಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯೆಯು ದಿನೇ ದಿನೇ ಬೆಳೆಯುತ್ತಿದೆ. ವಿಶ್ವದ ಜನಸಂಖ್ಯೆ

ಜನಸಂಖ್ಯೆ ಏರಿಕೆಯಿಂದ ಭೂಮಿ ಕ್ಷೀಣಿಸುತ್ತಿದೆ | ಸಹಾಯಕ ಆಯುಕ್ತ ಗಿರೀಶ್ ನಂದನ್ | ವಿಶ್ವ ಜನಸಂಖ್ಯಾ ದಿನಾಚರಣೆ Read More »

ಸೌಜನ್ಯ ಹತ್ಯೆ ಪ್ರಕರಣ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಸುಳ್ಯದಲ್ಲಿ ವಾಹನ ಜಾಥಾ

ಸುಳ್ಯ: ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಆ.1ರಂದು ಸುಳ್ಯದಲ್ಲಿ ಗೌಡ ಯುವ ಸೇವಾ ಸಂಘದಿಂದ ವಾಹನ ಜಾಥಾ ನಡೆಯಿತು. ಮೊಗರ್ಪಣೆ ಶ್ರೀ ವೆಂಕಟರಮಣ ಸೊಸೈಟಿ ಮುಂಭಾಗದಿಂದ ವಾಹನ ಜಾಥಕ್ಕೆ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಚಾಲನೆ ನೀಡಿ ಮಾತನಾಡಿ, ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೊಳಪಡಿಸಿ 6 ತಿಂಗಳೊಳಗೆ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು

ಸೌಜನ್ಯ ಹತ್ಯೆ ಪ್ರಕರಣ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿ ಸುಳ್ಯದಲ್ಲಿ ವಾಹನ ಜಾಥಾ Read More »

ಆ.6 : ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ “ಆಟಿ ಹಬ್ಬ-2023”

ಪುತ್ತೂರು: ಪುತ್ತೂರು ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದಲ್ಲಿ “ಆಟಿ ಹಬ್ಬ-2023” ಆ.6 ಭಾನುವಾರ ಬೆಳಿಗ್ಗೆ 9 ರಿಂದ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧವಿ ಕೆ. ದರ್ಬೆ ನೆರವೇರಿಸಲಿದ್ದು, ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ ಅಧ್ಯಕ್ಷತೆ ವಹಿಸುವರು. ಬಳಿಕ

ಆ.6 : ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ “ಆಟಿ ಹಬ್ಬ-2023” Read More »

ನಗರ ಪ್ರಾಥಮಿಕ ಕೇಂದ್ರದ ಸಿಸಿಟಿವಿ ಕ್ಯಾಮರಾ ಕಳವು

ಪುತ್ತೂರು: ನಗರದ ನೆಲ್ಲಿಕಟ್ಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಸಿ ಟಿವಿ ಕ್ಯಾಮರಾ ಕಳವಾದ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದೊಮ್ಮೆ ಇದೇ ಪ್ರಾಥಮಿಕ ಕೇಂದ್ರದ ಸಿವಿಟಿವಿ ಕ್ಯಾಮರಾ ಕಳವಾಗಿದ್ದು, ಇದು ಎರಡನೇ ಬಾರಿ ಕಳವು ಪ್ರಕರಣವಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ನಗರ ಪ್ರಾಥಮಿಕ ಕೇಂದ್ರದ ಸಿಸಿಟಿವಿ ಕ್ಯಾಮರಾ ಕಳವು Read More »

ಬೈಕ್-ಆಟೋ ಡಿಕ್ಕಿ : ಇಬ್ಬರಿಗೆ ಗಾಯ

ಪುತ್ತೂರು: ಬೈಕ್ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸಹಸವಾರ, ಆಟೋ ಚಾಲಕ ಇಬ್ಬರಿಗೂ ಗಾಯಗೊಂಡ ಘಟನೆ ನೆಹರುನಗರದ ಕಲ್ಲೇಗ ಸಮೀಪ ನಡೆದಿದೆ. ಬಂಟ್ವಾಳ ಬುಡೋಲಿ ನಿವಾಸಿ ಶ್ರವಣ್ ಕೆ ಪುತ್ತೂರು ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಕಾರೊಂದನ್ನು ಹಿಂದಿಕ್ಕಿ ಬರುತ್ತಿದ್ದ ಆಟೋರಿಕ್ಷಾ ಡಿಕ್ಕಿಯಾಗಿದೆ. ಬೈಕ್ ಸಹಸವಾರ ಅವಿಷ್ ಹಾಗೂ ಆಟೋ ಚಾಲಕ ದಿನೇಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಆಟೋ ಡಿಕ್ಕಿ : ಇಬ್ಬರಿಗೆ ಗಾಯ Read More »

ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ವನಮಹೋತ್ಸವ

ಪುತ್ತೂರು: ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ಪಡ್ಪು ಗ್ರಾಮ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂತೋಷ್ ಜೈನ್ ಬಾರಿಕೆ ಹಾಗೂ ದಾಮೋದರ ಶೇಡಿಗುತ್ತು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುಂಡ್ರುಪುನಿಂದ ಮಂಜುಪಲ್ಲದ ವರೆಗೆ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡಲಾಯಿತು ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಉಮೇಶ್ ಓಡ್ರಪಾಲ್, ಮಾಧವ ಒಂಬೋ೯ಡಿ, ಮುದ್ಯ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ನೂತನ ಅಧ್ಯಕ್ಷ ಗೋಪಾಲ ದಡ್ಡು,

ಪಡ್ಪು ಮುದ್ಯ ಗ್ರಾಮ ವಿಕಾಸ ಸಂಘದ ವತಿಯಿಂದ ವನಮಹೋತ್ಸವ Read More »

ಸರಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕರ ಕೊಠಡಿ ಮೇಲೆ ಬಿದ್ದ ಮರ

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯ ಗೇಟ್ ಬಳಿ ಇರುವ ಬೃಹತ್ ಮರವೊಂದು ಧರೆಗುರುಳಿದ ಘಟನೆ ಆ.1ರಂದು ನಡೆದಿದೆ. ಮರ ಬಿದ್ದ ಪರಿಣಾಮ ಸರಕಾರಿ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರ ಕೊಠಡಿಗೆ ಹಾನಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮರದ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಸರಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕರ ಕೊಠಡಿ ಮೇಲೆ ಬಿದ್ದ ಮರ Read More »

ರಬ್ಬರ್ ನಿಗಮದಿಂದ ಬೋನಸ್ ಬಾಕಿ ವಿಚಾರ : ಶಾಸಕ ಅಶೋಕ್ ರೈಗೆ ಮನವಿ

ಪುತ್ತೂರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಬಾಕಿ ಇದ್ದು ಕಳೆದ ಒಂದು ವರ್ಷದಿಂದ ನಿಗಮಕ್ಕೆ ಮನವಿ ಮಾಡುತ್ತಿದ್ದರೂ ಬೋನಸ್ ಇನ್ನೂ ಸಿಗದೇ ಇದ್ದು ಈ ವಿಚಾರವನ್ನು ಸರಕಾರದ ಗಮನಸೆಳೆಯಬೇಕೆಂದು ಆಗ್ರಹಿಸಿ ಮತ್ತು ಬೋನಸ್ ಕೊಡಿಸುವಲ್ಲಿ ನೆರವು ನೀಡಬೇಕೆಂದು ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಸಾಸಕ ಅಶೋಕ್ ರೈಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.  ರಬ್ಬರ್ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರುಗಳಿಗೆ ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಕನಿಷ್ಟ ಬೋನಸ್ (8.33) ನೀಡಲಾಗುತ್ತಿದೆ.  ಈ ವರ್ಷ ೨೦%

ರಬ್ಬರ್ ನಿಗಮದಿಂದ ಬೋನಸ್ ಬಾಕಿ ವಿಚಾರ : ಶಾಸಕ ಅಶೋಕ್ ರೈಗೆ ಮನವಿ Read More »

ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಪರಿಹಾರ ಪ್ರಾಯಶ್ಚಿತ್ತ ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಶರವೂರು: ತಾಲೂಕಿನ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಪ್ರಾಯಶ್ಚಿತ್ತ ಕಾರ್ಯಕ್ರಮಗಳು ಜು.24 ರಿಂದ ಆರಂಭಗೊಂಡಿದ್ದು, ಆ.1 ಮಂಗಳವಾರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಹರಿಪ್ರಸಾದ್ ಹಾಗೂ ರಾಘವೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಜು.24 ಸೋಮವಾರ ಬೆಳಿಗ್ಗೆ 8 ರಿಂದ ಗಣಪತಿ ಹವನ, ಸುಕೃತ ಹವನ, ಪವಮಾನ ಹೋಮ, ದ್ವಾದಶಮೂರ್ತಿ ಆರಾಧನೆ, ಸಂಜೆ ಮಹಾಸುದರ್ಶನ ಹೋಮ, ಸಪ್ತಪತೀ ಪಾರಾಯಣ, ದುರ್ಗಾಪೂಜೆ ಜರಗಿತು.

ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಪರಿಹಾರ ಪ್ರಾಯಶ್ಚಿತ್ತ ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು Read More »

error: Content is protected !!
Scroll to Top