ಪುತ್ತೂರು

ಭಾರೀ ಮಳೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ | ಸರಿದೂಗಿಸಲು ನ.4 ರ ವರೆಗೆ ಶನಿವಾರ ದಿನಪೂರ್ತಿ ತರಗತಿ

ಪುತ್ತೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಈ ಬಾರಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಅದನ್ನು ಸರಿದೂಗಿಸಲು ನವೆಂಬರ್ 4 ರ ವರೆಗೆ ಶನಿವಾರ ದಿನಪೂರ್ತಿ ತರಗತಿ ನಡೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಬಾರಿ ಮಳೆಯಿಂದ ಶಾಲೆಗಳಿಗೆ 6 ದಿನ ರಜೆ ನೀಡಲಾಗಿತ್ತು. ರಜೆಯನ್ನು ಸರಿದೂಗಿಸುವ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕವೂ ಪಾಠಗಳನ್ನು ಮಾಡುವ ಮೂಲಕ ದಿನಪೂರ್ತಿ ತರಗತಿ ನಡೆಯಲಿದೆ. ಈ ಕುರಿತು ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದ್ದು, ನ.4 ರ ವರೆಗೆ ಅಂದರೆ 12 ಶನಿವಾರದಂದು ತರಗತಿ […]

ಭಾರೀ ಮಳೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ | ಸರಿದೂಗಿಸಲು ನ.4 ರ ವರೆಗೆ ಶನಿವಾರ ದಿನಪೂರ್ತಿ ತರಗತಿ Read More »

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ

ಪುತ್ತೂರು: ಪುತ್ತೂರು ದೇವಾಂಗ ಸೇವಾ ಸಮಾಜ ಬಾಂಧವರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಗುಣ ಎಂ ಶೆಟ್ಟಿ, ಎಮ್ ಎನ್ ಚೆಟ್ಟಿಯಾರು, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ ಕುಂಬ್ರ ಶುಭ ಹಾರೈಸಿದರು. ಎಂ ಎಸ್ ಚೆಟ್ಟಿಯಾರ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು. ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾಜ

ದೇವಾಂಗ ಸೇವಾ ಸಮಾಜದ ವತಿಯಿಂದ ಆಟಿಡೊಂಜಿ ದಿನ Read More »

ಎಂಡೋ ಸಂತ್ರಸ್ತರಿಗೆ ಉಚಿತ ಬಸ್ ಪಾಸ್ | ಯಾವ ತಾಲೂಕಿನವರಿಗೆ ಎಲ್ಲಿ , ಯಾವಾಗ | ಇಲ್ಲಿದೆ ಡಿಟೈಲ್ಸ್

ಪುತ್ತೂರು: ಪುತ್ತೂರು ವಿಭಾಗ ವ್ಯಾಪ್ತಿಯ ಬರುವ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿರುವ ಎಂಡೋ ಸಂತ್ರಸ್ತರಿಗೆ ಅನುಕೂಲವಾಗುವಂತೆ ಉಚಿತ ಎಂಡೋಸಲ್ಫಾನ್ ಬಸ್ ಪಾಸ್‍ ಗಳನ್ನು ವಿತರಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳು ನಡೆಯುವ ದಿನಾಂಕ, ಸ್ಥಳದ ಮಾಹಿತಿ ಹೀಗಿದೆ : ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಡೋ ಸಂತ್ರಸ್ಥರ ಕೇಂದ್ರದಲ್ಲಿ ಸೆ.9 ರಂದು, ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.10, ಪುತ್ತೂರು ತಾಲೂಕಿನ ಕೊಯಿಲ ಪಂಚಾಯಿತಿ ಕಚೇರಿಯಲ್ಲಿ ಸೆ.11, ಬಂಟ್ವಾಳ ತಾಲೂಕಿನ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.12

ಎಂಡೋ ಸಂತ್ರಸ್ತರಿಗೆ ಉಚಿತ ಬಸ್ ಪಾಸ್ | ಯಾವ ತಾಲೂಕಿನವರಿಗೆ ಎಲ್ಲಿ , ಯಾವಾಗ | ಇಲ್ಲಿದೆ ಡಿಟೈಲ್ಸ್ Read More »

ಆ.6 : ನಲಿಕೆಯವರ ಸಮಾಜ ಸೇವಾ ಸಂಘದಿಂದ ವರ್ಷಾಚರಣೆ ಹಾಗೂ ಆಟಿದಿನ

ಪುತ್ತೂರು: ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ವರ್ಷಾಚರಣೆ ಹಾಗೂ ಆಟಿ ದಿನ ಕಾರ್ಯಕ್ರಮ ಆ.6 ಭಾನುವಾರ ಇಲ್ಲಿಯ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಇಡ್ಪಾಡಿ  ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ನಲಿಕೆ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ರವಿ ಎಂಡೆಸಾಗು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ

ಆ.6 : ನಲಿಕೆಯವರ ಸಮಾಜ ಸೇವಾ ಸಂಘದಿಂದ ವರ್ಷಾಚರಣೆ ಹಾಗೂ ಆಟಿದಿನ Read More »

ಸೌಜನ್ಯ ಕೊಲೆ ಪ್ರಕರಣ | ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆಯ ಕುರಿತು ತೀರ್ಮಾನ | ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ

ಪುತ್ತೂರು: ಸೌಜನ್ಯ ಕೊಲೆ ಪ್ರಕರಣ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಗೌಡ ಸಂಘವೂ ಮೌನವಹಿಸುವುದಿಲ್ಲ. ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಮಟ್ಟದಲ್ಲಿ ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯರು ಹೇಳಿದರು. ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ಗೌಡ ಸೇವಾ ಸಂಘದ ಮಾತೃ ಸಂಘ, ಯುವ, ಮಹಿಳಾ, ಸ್ವಸಹಾಯ ಸಂಘದ ಮಹಾಸಭೆಯಲ್ಲಿ

ಸೌಜನ್ಯ ಕೊಲೆ ಪ್ರಕರಣ | ದ.ಕ.ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಸಂಘಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಡೆಯ ಕುರಿತು ತೀರ್ಮಾನ | ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಪುತ್ತೂರು: ನಾವೆಲ್ಲರೂ ಜಗತ್ತಿನಲ್ಲಾಗುತ್ತಿರುವ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಗೆ ಒಗ್ಗಿಕೊಳ್ಳುತ್ತಾ, ಸ್ವೀಕರಿಸುತ್ತಾ ಅದನ್ನು ಬಳಸಿಕೊಳ್ಳುತ್ತಾ ಮುನ್ನಡೆಯಬೇಕು ಎಂದು ಮುಳಿಯ ಜುವೆಲ್ಸ್ ಪ್ರೈವೆಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗಗಳ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತಾಡಿದರು. ನಮ್ಮ ಜೀವನದಲ್ಲಿ ತಂತ್ರಜ್ಞಾನದ ಬಳಕೆ ಅದರಲ್ಲೂ ಮುಖ್ಯವಾಗಿ ಕೃತಕ ಬುದ್ದಿಮತ್ತೆಯ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿದ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ Read More »

ರಸ್ತೆ ಸಮಸ್ಯೆ : ಕ್ರಮ ಕೈಗೊಂಡಿದ್ದರೂ ಮಾಹಿತಿ ನೀಡದ ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 15 ಸಾವಿರ ರೂ. ದಂಡ

ಪುತ್ತೂರು: ರಸ್ತೆ ಸಮಸ್ಯೆಗೆ ಸಂಬಂಧಿಸಿದ ಕ್ರಮ ಕೈಗೊಂಡಿದ್ದರೂ ಈ ಕುರಿತು ಮಾಹಿತಿ ನೀಡದ ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸುಲೋಚನಾ ಅವರಿಗೆ ರಾಜ್ಯ ಮಾಹಿತಿ ಆಯೋಗ 15 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ರಸ್ತೆ ಸಮಸ್ಯೆಗೆ ಸಂಬಂಧಿಸಿದ ಸೂಕ್ತ ಕ್ರಮ ವಹಿಸಲು ಆಯೋಗದ ಕಾರ್ಯದರ್ಶಿಗಳಿಗೆ ಸೂಚಿಸಿದೆ. ಅಲ್ಲದೇ, ಮೇಲ್ಮನವಿದಾರರ ಪ್ರಕರಣದ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಂಡು ಇತ್ಯರ್ಥಪಡಿಸಲು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಸೂಚಿಸಿದೆ.ಕಳೆದ 25 ವರ್ಷಗಳಿಂದ ಬಳಸುತ್ತಿದ್ದ ಸರಕಾರಿ

ರಸ್ತೆ ಸಮಸ್ಯೆ : ಕ್ರಮ ಕೈಗೊಂಡಿದ್ದರೂ ಮಾಹಿತಿ ನೀಡದ ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ 15 ಸಾವಿರ ರೂ. ದಂಡ Read More »

ಪುತ್ತೂರು ಕ. ಸಾ. ಪ ಕಾರ್ಯಕಾರಿ ಸಮಿತಿಯ ಸಭೆ | ಕನ್ನಡ ಭವನ ನಿರ್ಮಾಣ ಸಮಿತಿ ರಚನೆಗೆ ನಿರ್ಣಯ

ಪುತ್ತೂರು: ಕ.ಸಾ. ಪ ಪುತ್ತೂರು ಕಾರ್ಯಕಾರಿ ಸಮಿತಿಯ ಸಮಾಲೋಚನಾ ಸಭೆ ಅಧ್ಯಕ್ಷರ ಕಚೇರಿಯಲ್ಲಿ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ  ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯ ಮತ್ತು ಮುಂದೆ ನಡೆಸುವ ಕಾರ್ಯಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಮುಖ್ಯವಾಗಿ  ಸಾಹಿತ್ಯ ಪರಿಷತ್ತಿಗೆ ಜಮೀನು  ಮಂಜೂರಾಗಲು ಸೂಚನೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ  ಸರ್ವ ರೀತಿಯಲ್ಲಿ ಸಹಕಾರ ನೀಡಿದ  ಸಹಾಯಕ ಅಯುಕ್ತ ಗಿರೀಶ್ ನಂದನ್ , ನಗರಸಭಾ

ಪುತ್ತೂರು ಕ. ಸಾ. ಪ ಕಾರ್ಯಕಾರಿ ಸಮಿತಿಯ ಸಭೆ | ಕನ್ನಡ ಭವನ ನಿರ್ಮಾಣ ಸಮಿತಿ ರಚನೆಗೆ ನಿರ್ಣಯ Read More »

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾ ಮಂದಿರದ 10ನೇ ತರಗತಿಯ ವಿದ್ಯಾರ್ಥಿಗಳಾದ ವಿಸ್ಮಯ್ ಎನ್ ನಾಯಕ್ ಮತ್ತು ಮೋಕ್ಷಿತ್ ಪಿ ಎಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 9ನೇ ತರಗತಿಯ ರಿಷಿ ಭಾರಧ್ವಜ್

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ Read More »

ನಾಳೆ (ಆ.2) : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಅಪರಾಧಿ ಪತ್ತೆಗೆ ಹಕ್ಕೊತ್ತಾಯ | ಕಡಬದಲ್ಲಿ ಮೌನ ಮೆರವಣಿಗೆ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾವರ್ಜನಿಕ ಮೌನ ಮೆರವಣಿಗೆ ಆ.2 ಬುಧವಾರ ಕಡಬದಲ್ಲಿ ನಡೆಯಲಿದೆ. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನೈಜ ಅಪರಾಧಿಯ ಪತ್ತೆಗೆ ಹಕ್ಕೊತ್ತಾಯದ ಕುರಿತು ಈ ಮೌನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಕಡಬ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಿಂದ ಮೌನ ಮೆರವಣಿಗೆ ನಡೆಯಲಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಆ.2) : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಅಪರಾಧಿ ಪತ್ತೆಗೆ ಹಕ್ಕೊತ್ತಾಯ | ಕಡಬದಲ್ಲಿ ಮೌನ ಮೆರವಣಿಗೆ Read More »

error: Content is protected !!
Scroll to Top