ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪುಷ್ಪಲತಾ ಮಾತನಾಡಿ, ಔಷಧೀಯ ಗಿಡಗಳನ್ನು ಬೆಳೆಸುವ ಹವ್ಯಾಸ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತು ವೃಕ್ಷಗಳಿಗೂ ಅನ್ವಯಿಸುತ್ತದೆ. ಮರ ಗಿಡಗಳನ್ನು ನಾವು ರಕ್ಷಿಸಿದರೆ ಅವುಗಳು ನಮ್ಮ ಬದುಕನ್ನು ಹಸನಾಗಿಸುತ್ತವೆ. ವಿವೇಕ ಸಂಜೀವಿನಿ ಎಂಬ ಈ ಸುಂದರ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ […]

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ Read More »

ಸೌಜನ್ಯ ಪ್ರಕರಣ : ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು : ಸಂಚಲನ ಮೂಡಿಸಿದ ವಸಂತ ಬಂಗೇರ ಹೇಳಿಕೆ

ಬೆಳ್ತಂಗಡಿ : ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದ ನ್ಯಾಯ ಸಿಗಬಹುದು ಎಂಬ ನಂಬಿಕೆಯಿತ್ತು. ಆದರೆ ಸತ್ಯ ಹೊರಬಂದಿಲ್ಲ, ಸಿಬಿಐ ತನಿಖೆ ಹಳಿ ತಪ್ಪಿದ ವಿಚಾರ ಆಗಲೇ ಗೊತ್ತಾಗಿತ್ತು. ತನಿಖೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅದನ್ನು ಈಗ ಹೇಳುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಅದಕ್ಕೆ ಕಾಲ ಬರುತ್ತೆ. ಯಾರು ಇದನ್ನು ತಪ್ಪಿಸಿದ್ದಾರೆ, ಯಾರು ಅನ್ಯಾಯ ಮಾಡಿದ್ದಾರೆ, ಯಾರು ತೊಂದರೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು. ಇಲ್ಲವೆಂದರೆ ಎಲ್ಲವನ್ನೂ ಹೇಳುತ್ತೇನೆ, ನನ್ನ ಜೀವನದ ಅಂತ್ಯದೊಳಗೆ

ಸೌಜನ್ಯ ಪ್ರಕರಣ : ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು : ಸಂಚಲನ ಮೂಡಿಸಿದ ವಸಂತ ಬಂಗೇರ ಹೇಳಿಕೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಪ್ರಾತ್ಯಕ್ಷಿಕೆ

ಪುತ್ತೂರು: ಪಕೃತಿ ವಿಕೋಪ ಸೇರಿದಂತೆ ಇತರೆ ಯಾವುದೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಎನ್.ಡಿ.ಆರ್. ಎಫ್. ಜನರ ಜೀವ ಉಳಿಸುವ ಮಹತ್ವದ ಕಾರ್ಯ ಮಾಡುತ್ತದೆ.ಈ ಸಂದರ್ಭಗಳಲ್ಲಿ ಆಗುವ ಜೀವಹಾನಿಯನ್ನು ಕಡಿಮೆ ಮಾಡಲು ಯೋಜಿತ ರೀತಿಯಲ್ಲಿ ತುರ್ತುಸ್ಥಿತಿಯ ಅರ್ಥದಲ್ಲಿ ವಿಪತ್ತುಗಳಿಗೆ ಪ್ರತಿಕ್ರಿಯಿಸಲು ಈ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಯೋಜಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ 10 ನೇ ಬೆಟಾಲಿಯನ್ ನ ಟೀಮ್ ಕಮಾಂಡರ್ ಅಜಯ್ ಕುಮಾರ್ ಹೇಳಿದರು. ಪ್ರಕೃತಿ ವಿಕೋಪ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಪ್ರಾತ್ಯಕ್ಷಿಕೆ Read More »

ಸೌಮ್ಯ ಭಟ್ ಕೊಲೆಯಾಗಿ ಇಂದಿಗೆ 26 ವರ್ಷ | ಪುತ್ತಿಲ ಪರಿವಾರದಿಂದ ಕೊಲೆಯಾದ ಸ್ಥಳಕ್ಕೆ ಭೇಟಿ

ಪುತ್ತೂರು: ಸೌಮ್ಯ ಭಟ್ ರವರ ಭೀಕರ  ಕೊಲೆಯಾಗಿ ಇಂದಿಗೆ 26 ವರ್ಷ ಆದ ದಿನದ ಪ್ರಯುಕ್ತ, ಪುತ್ತಿಲ ಪರಿವಾರದ ವತಿಯಿಂದ ಕೊಲೆಯಾದ ಸ್ಥಳಕ್ಕೆ ಸೋಮವಾರ ಭೇಟಿ ನೀಡಲಾಯಿತು. ಕಬಕ ಸಮೀಪ ಕೊಲೆಯಾದ ಸ್ಥಳದಲ್ಲಿರುವ ‘ಸೌಮ್ಯ ಸ್ಮೃತಿ’ ಕಟ್ಟೆಗೆ ಭೇಟಿ ನೀಡಿ ಕಟ್ಟೆ ಸ್ವಚ್ಚಗೊಳಿಸಿ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭ ಡಾ.ಶಶಿಧರ್ ಕಜೆ , ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷ ಪ್ರಸನ್ನ ಮಾರ್ತಾ, ಜೊತೆ ಕಾರ್ಯದರ್ಶಿ ಉಮೇಶ್ ಗೌಡ,  ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪ್ರವೀಣ್

ಸೌಮ್ಯ ಭಟ್ ಕೊಲೆಯಾಗಿ ಇಂದಿಗೆ 26 ವರ್ಷ | ಪುತ್ತಿಲ ಪರಿವಾರದಿಂದ ಕೊಲೆಯಾದ ಸ್ಥಳಕ್ಕೆ ಭೇಟಿ Read More »

ನಾಳೆ (ಆ.8) : ನಗರ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು: ಮೆಸ್ಕಾಂನ ತುರ್ತು ಕಾಮಗಾರಿನಿಮಿತ್ತ ಪುತ್ತೂರು ನಗರ ಪ್ರದೇಶದಲ್ಲಿ ಆ.8 ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ತನಕ ವಿದ್ಯುತ್‍ ನಿಲುಗಡೆ ಮಾಡಲಾಗುವುದು. ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ನಗರ ಹಳೆಯ ಫೀಡರ್ ನಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಬೊಳ್ವಾರು, ಕರ್ಮಲ, ಬೈಪಾಸ್, ಕೋರ್ಟ್ ರೋಡ್, ಪುತ್ತೂರು ಮುಖ್ಯ

ನಾಳೆ (ಆ.8) : ನಗರ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ Read More »

ಆ.11 : ಪುತ್ತೂರಿನಲ್ಲಿ ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಅಧಿಕೃತ ಚಾಲನೆ

ಪುತ್ತೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ಗೃಹಜ್ಯೋತಿ ಯೋಜನೆಯ ಅಧಿಕೃತ ಚಾಲನಾ ಕಾರ್ಯಕ್ರಮ ಆ.11 ರಂದು ಪುತ್ತೂರಿನಲ್ಲಿ ನಡೆಯಲಿದೆ. ಈ ಕುರಿತ ಪೂರ್ವಭಾವಿ ಸಭೆ ಶಾಸಕರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಪುತ್ತೂರಿನ ಪುರಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ನಗರ ಸಹಾಯಕ ಇಂಜಿನಿಯರ್ ರಾಜೇಶ್ ಪುತ್ತೂರು, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಪುತ್ತೂರು ಬ್ಲಾಕ್

ಆ.11 : ಪುತ್ತೂರಿನಲ್ಲಿ ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಅಧಿಕೃತ ಚಾಲನೆ Read More »

ಪಣೆಜಾಲು ನಿವಾಸಿ ಪ್ರವೀಣ್ ಪ್ರಭು ನಿಧನ

ಗುರುವಾಯನಕೆರೆ: ಇಲ್ಲಿಯ ಪಣೆಜಾಲು ನಿವಾಸಿ ಪ್ರವೀಣ್ ಪ್ರಭು (34) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.7 ರಂದು ನಿಧನರಾದರು.   ಅವರು ಬೆಳ್ತಂಗಡಿ ಬಾಳಿಗ ಜುವೆಲ್ಲರ್ ನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಪತ್ನಿ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರು ಪುತ್ತೂರು ತಾಲೂಕಿನ ಪುರುಷರಕಟ್ಟೆಯ ಶೆಟ್ಟಿಮಜಲಿನಲ್ಲಿ ಹಲವು ವರ್ಷಗಳ ಕಾಲ ವಾಸವಾಗಿದ್ದರು.

ಪಣೆಜಾಲು ನಿವಾಸಿ ಪ್ರವೀಣ್ ಪ್ರಭು ನಿಧನ Read More »

ಆ.11, 12 ಹಾಗೂ 13 : ಪುತ್ತೂರಿನಲ್ಲಿ ಮೇಳೈಸಲಿದೆ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ | ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ಸಾಥ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ವತಿಯಿಂದ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ ಹಾಗೂ ಸಾಹಿತ್ಯ ವೈಭವ ಕಾರ್ಯಕ್ರಮ ಆ.11, 12 ಹಾಗೂ 13 ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯುವ ಜನತೆಯಲ್ಲಿ ಪುಸ್ತಕ

ಆ.11, 12 ಹಾಗೂ 13 : ಪುತ್ತೂರಿನಲ್ಲಿ ಮೇಳೈಸಲಿದೆ ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ | ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಹಾಗೂ ಜ್ಞಾನಗಂಗಾ ಪುಸ್ತಕ ಮಳಿಗೆ ಸಾಥ್ Read More »

ಆ.14 : ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ “ ಶೀಂಟೂರು ಸ್ಮೃತಿ-2023”

ಪುತ್ತೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ : ಶೀಂಟೂರು ಸ್ಮೃತಿ-2023” ಆ.14 ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಸೇನಾನಿ, ಶಿಕ್ಷಕರೂ ಆಗಿದ್ದ ದಿ.ಶೀಂಟೂರು ಆದರ್ಶ ಕೃಷಿಕರೂ ಆಗಿದ್ದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಅವರು ಕಂಡಿದ್ದ ಕನಸ್ಸಾಗಿತ್ತು.ಈ ನಿಟ್ಟಿನಲ್ಲಿ ಅವರ ಸ್ಮೃತಿಯನ್ನು ಪ್ರತೀ ವರ್ಷ ಹಮ್ಮಿಕೊಂಡು

ಆ.14 : ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ 12ನೇ ವರ್ಷದ ಸ್ಥಾಪಕರ ದಿನಾಚರಣೆ “ ಶೀಂಟೂರು ಸ್ಮೃತಿ-2023” Read More »

ಸೌಜನ್ಯ ಕೊಲೆ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯ | ಸವಣೂರು ಯುವಕ ಮಂಡಲ, ಸಮಾನ ಮನಸ್ಕರ ವೇದಿಕೆ ವತಿಯಿಂದ ಸವಣೂರಿನಲ್ಲಿ ಸಾರ್ವಜನಿಕ ಮೌನ ಪ್ರತಿಭಟನೆ

ಪುತ್ತೂರು: ಸವಣೂರು ಯುವ ಮಂಡಲ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಸೌಜನ್ಯ ಕೊಲೆಯ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯದ ಕುರಿತು ಸಾರ್ವಜನಿಕ ಮೌನ ಪ್ರತಿಭಟನೆ ಸವಣೂರಿನಲ್ಲಿ ಸೋಮವಾರ ನಡೆಯಿತು. ಸವಣೂರು ಪದ್ಮಾವತಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಿರಿಶಂಕರ ಸುಲಾಯ ಮೌನ ಮೆರವಣಿಗೆಗೆ ಚಾಲನೆ ನೀಡಿದರು. ರಾಕೇಶ್ ರೈ ಕೆಡೆಂಜಿ ಸಂದರ್ಭೋಚಿತವಾಗಿ ಮಾತನಾಡಿದರು. ಬಳಿಕ ಮೌನ ಮೆರವಣಿಗೆ ಸಾಗಿ ಸವಣೂರು ವೃತ್ತದಲ್ಲಿ ಸಮಾಪನಗೊಂಡು ಬಳಿಕ ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಂಬೈಲು ಅವರು ಸವಣೂರು ಗ್ರಾಮ

ಸೌಜನ್ಯ ಕೊಲೆ ನೈಜ ಆರೋಪಿಗಳ ಪತ್ತೆಗೆ ಹಕ್ಕೊತ್ತಾಯ | ಸವಣೂರು ಯುವಕ ಮಂಡಲ, ಸಮಾನ ಮನಸ್ಕರ ವೇದಿಕೆ ವತಿಯಿಂದ ಸವಣೂರಿನಲ್ಲಿ ಸಾರ್ವಜನಿಕ ಮೌನ ಪ್ರತಿಭಟನೆ Read More »

error: Content is protected !!
Scroll to Top