ಪುತ್ತೂರು

ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪುತ್ತೂರಿನಲ್ಲಿ ಸಾಮೂಹಿಕ ಪ್ರಾರ್ಥನೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣ ಶೀಘ್ರದಲ್ಲಿ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪುತ್ತೂರು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಿಂದ ಆ.7 ಸೋಮವಾರ ಪುತ್ತೂರಿನಲ್ಲಿ ಕಾಲ್ನಡಿಗೆ ಮತ್ತು ಸಾಮೂಹಿಕ ಪ್ರಾರ್ಥನೆ  ಮಾಡಲಾಯಿತು. ಬೆಳಿಗ್ಗೆ ಗಂಟೆ 10 ಗಂಟೆಗೆ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ನಂತರ ಅಲ್ಲಿಂದ ಕಾಲ್ನಡಿಗೆ ಮೂಲಕ ಮುಖ್ಯರಸ್ತೆಯಾಗಿ ಸಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ, ಮಾಜಿ ಶಾಸಕ ಸಂಜೀವ […]

ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪುತ್ತೂರಿನಲ್ಲಿ ಸಾಮೂಹಿಕ ಪ್ರಾರ್ಥನೆ Read More »

ಕೆ.ನಾರಾಯಣ ಶೆಟ್ಟಿ ನಿಧನ

ಪುತ್ತೂರು: ಪುತ್ತೂರು ನಗರದ ಜನತಾ ಕಬ್ಬಿನ ಹಾಲು ಅಂಗಡಿ ಮಾಲಕ ಕೆ.ನಾರಾಯಣ ಶೆಟ್ಟಿ ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ತೂರು ಹಳೆ ಪೊಲೀಸ್ ಸ್ಟೇಷನ್ ಕಟ್ಟಡದ ಬಳಿಯ ಕಟ್ಟಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿದ್ದರು. ಪುತ್ತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಂಚವಟಿ ಬಳಿಯ ನಿವಾಸಿಯಾಗಿರುವ ಮೃತರು ಜನಸಂಘದ ಕಾರ್ಯಕರ್ತರಾಗಿದ್ದು, ತುರ್ತು ಸಂದರ್ಭದಲ್ಲಿ ಜೈಲು ಸೇರಿದ್ದರು. ಪುತ್ತೂರು ಪುರಸಭೆಯ ಮಾಜಿ ಸದಸ್ಯರಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಗಣೇಶೋತ್ಸವ ಸಮಿತಿ ಆರಂಭದ

ಕೆ.ನಾರಾಯಣ ಶೆಟ್ಟಿ ನಿಧನ Read More »

ರೋಟರಿ ಜಿಲ್ಲೆ 3181 ರ ಪ್ರಥಮ WASH Group ರಾಯಭಾರಿಯಾಗಿ ಡಾ.ರಾಜೇಶ್ ಬೆಜ್ಜಂಗಳ

ಪುತ್ತೂರು: ಅಂತಾರಾಷ್ಟ್ರೀಯ ರೋಟರಿ ಯಲ್ಲಿ ನೀರು ಮತ್ತು ಶುಚಿತ್ವ ಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಗುಂಪು (WASH – water ,sanitation, hygiene) ಇದರ ರೋಟರಿ ಜಿಲ್ಲೆ 3181 ರ ಪ್ರಥಮ ರಾಯಭಾರಿಯಾಗಿ ರೊಟೇರಿಯನ್ ಡಾ. ರಾಜೇಶ್ ಬೆಜ್ಜಂಗಳ ಅವರು ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಅಂತಾರಾಷ್ಟ್ರೀಯ ರೋಟರಿಯು WASH ಚಟುವಟಿಕೆಗಳನ್ನು ಏಷ್ಯಾ ,ಯುರೋಪ್, ಅಮೇರಿಕಾ ಮತ್ತು ಆಫ್ರೀಕನ್ ವಿಭಾಗ ಮಾಡಲಾಗಿದ್ದು 83 ನೇ ರಾಯಭಾರಿಯಾಗಿ ರಾಜೇಶ್ ಬೆಜ್ಜಂಗಳ ನೇಮಕಗೊಂಡಿದ್ದಾರೆ. ರೋಟರಿ ಭಾರತದಲ್ಲಿ 16 ಮಂದಿ ಇದ್ದು ಕರ್ನಾಟಕದಲ್ಲಿ

ರೋಟರಿ ಜಿಲ್ಲೆ 3181 ರ ಪ್ರಥಮ WASH Group ರಾಯಭಾರಿಯಾಗಿ ಡಾ.ರಾಜೇಶ್ ಬೆಜ್ಜಂಗಳ Read More »

ಸೌಜನ್ಯ ಪ್ರಕರಣ – ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸಮುದಾಯದ ಸಭೆಯಲ್ಲಿ ಮುಂದಿನ ಹೋರಾಟಕ್ಕೆ ಚರ್ಚೆ | ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚನೆ

ಪುತ್ತೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2011 ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೈಜ್ಯ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮುಂದಿನ ಹೋರಾಟಕ್ಕೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಗೌಡ ಸಮಾಜದಿಂದ ಸಭೆ ಭಾನುವಾರ ನಡೆದಿದ್ದು, ಜಿಲ್ಲಾ ಮಟ್ಟದ ಹೋರಾಟ ಸಮಿತಿಯನ್ನು ರಚಿಸಲಾಯಿತು. ಹೋರಾಟ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಬಾಲಕೃಷ್ಣ ಗೌಡ ಅವರನ್ನು ಆಯ್ಕೆ  ಮಾಡಲಾಯಿತು. ಅಲ್ಲದೆ ವಿವಿಧ ತಾಲೂಕಿನ ಸಂಘದ ಅಧ್ಯಕ್ಷರುಗಳು ಸಂಚಾಲಕರಾಗಿರುತ್ತಾರೆ ಎಂದು ತಿಳಿಸಲಾಯಿತು. ಕಾನೂನಾತ್ಮಕ ಹೋರಾಟಕ್ಕೆ ನ್ಯಾಯವಾದಿಗಳ ಸಮಿತಿಯನ್ನು ಪ್ರತ್ಯೇಕವಾಗಿ ರಚಿಸಲಾಯಿತು.

ಸೌಜನ್ಯ ಪ್ರಕರಣ – ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸಮುದಾಯದ ಸಭೆಯಲ್ಲಿ ಮುಂದಿನ ಹೋರಾಟಕ್ಕೆ ಚರ್ಚೆ | ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚನೆ Read More »

ತುಳು 2ನೇ ರಾಜ್ಯಭಾಷೆ ಮಾಡುವಲ್ಲಿ ಪ್ರಯತ್ನ: ಶಾಸಕಿ ಭಾಗೀರಥಿ ಮುರುಳ್ಯ |ಎಸ್‌ಎಸ್‌ಎಲ್‌ಸಿ ತುಳು ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ರಾಮಕುಂಜ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತೃತೀಯ ಭಾಷೆ ತುಳು ವಿಷಯದಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನೇತ್ರಾವತಿ ತುಳುಕೂಟ ರಾಮಕುಂಜ ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ, ರಾಮಕುಂಜ ಇದರ ಸಹಯೋಗದಲ್ಲಿ ಆ.6 ಭಾನುವಾರ ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು. ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹದ ಇಂದಿನ ಸಂದರ್ಭದಲ್ಲೂ ವಿದ್ಯಾರ್ಥಿಗಳು ತುಳು ಕಲಿಕೆಗೆ ಆಸಕ್ತಿ ತೋರ್ಪಡಿಸುತ್ತಿರುವುದು

ತುಳು 2ನೇ ರಾಜ್ಯಭಾಷೆ ಮಾಡುವಲ್ಲಿ ಪ್ರಯತ್ನ: ಶಾಸಕಿ ಭಾಗೀರಥಿ ಮುರುಳ್ಯ |ಎಸ್‌ಎಸ್‌ಎಲ್‌ಸಿ ತುಳು ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ Read More »

ಸೌಜನ್ಯ ಪ್ರಕರಣ – ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸಮುದಾಯದ ಸಭೆಯಲ್ಲಿ ಮುಂದಿನ ಹೋರಾಟಕ್ಕೆ ಚರ್ಚೆ | ಸಭೆಯಲ್ಲಿ ಸೌಜನ್ಯ ತಾಯಿ‌ ಕುಸುಮಾವತಿ ಭಾಗಿ

ಪುತ್ತೂರು: ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು, ಉಜಿರೆಯಲ್ಲಿ 2011 ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೈಜ್ಯ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮುಂದಿನ ಹೋರಾಟಕ್ಕೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಗೌಡ ಸಮಾಜದಿಂದ ಸಭೆ ಭಾನುವಾರ ಮಂಗಳೂರು, ಸುಳ್ಯ, ಬೆಳ್ತಂಗಡಿ, ಕಡಬ , ಪುತ್ತೂರು ತಾಲೂಕಿನ ಒಕ್ಕಲಿಗ ಗೌಡ ಸಮಾಜ ಬಾಂದವರು ಸಬವೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸಹಿತ ಅವರ ಸಂಬಂಧಿಕರು ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.

ಸೌಜನ್ಯ ಪ್ರಕರಣ – ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಸಮುದಾಯದ ಸಭೆಯಲ್ಲಿ ಮುಂದಿನ ಹೋರಾಟಕ್ಕೆ ಚರ್ಚೆ | ಸಭೆಯಲ್ಲಿ ಸೌಜನ್ಯ ತಾಯಿ‌ ಕುಸುಮಾವತಿ ಭಾಗಿ Read More »

ಅಂದರ್-ಬಾಹರ್ ಆಡುತ್ತಿದ್ದ ಅಡ್ಡೆಗೆ ಪೊಲೀಸರಿಂದ ದಾಳಿ | ಮೂವರು ಆರೋಪಿಗಳ ಬಂಧನ

ವಿಟ್ಲ: ಅಂದರ್ ಬಾಹರ್ ಇಸ್ಟಿಟ್ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ನಗದು ಸಹಿತ ಜುಗಾರಿಗೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವೀರಕಂಭ ಗ್ರಾಮದ ಎರ್ಮೆಮಜಲಿನಲ್ಲಿ ಈ ಘಟನೆ ನಡೆದಿದ್ದು, ಸರಕಾರಿ ಜಾಗವೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 15 ಸಾವಿರ ರೂ. ನಗದು, ಆಡಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಐದು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ್-ಬಾಹರ್ ಆಡುತ್ತಿದ್ದ ಅಡ್ಡೆಗೆ ಪೊಲೀಸರಿಂದ ದಾಳಿ | ಮೂವರು ಆರೋಪಿಗಳ ಬಂಧನ Read More »

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 ಕಾರ್ಯಕ್ರಮ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆ.6 ಭಾನುವಾರ ನಡೆಯಿತು. ವಿಶೆಷವಾಗಿ 93 ವರ್ಷ ಪ್ರಾಯದ ದರ್ಬೆ ನಿವಾಸಿ ಮಾಧವಿ ಕೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಚೆನ್ನೆಮಣೆ ಆಡುವ ಮೂಲಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮೂಡನಂಬಿಕೆಯಲ್ಲ ವೈಜ್ಞಾನಿಕ ಸತ್ಯವಿದೆ: ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಮಹಿಳಾ ಸಂಘದ ಉಪಾಧ್ಯಕ್ಷೆ ಗೀತಾ ಮಾತನಾಡಿ, ಆಟಿ ಆಚರಣೆ ಮೂಡನಂಬಿಕೆಯಲ್ಲ ವೈಜ್ಞಾನಿಕ

ಪುತ್ತೂರು ಒಕ್ಕಲಿಗ ಮಹಿಳಾ ಗೌಡ ಸಂಘದಿಂದ ಆಟಿ ಹಬ್ಬ -2023 | 93  ವರ್ಷ ಪ್ರಾಯದ ಹಿರಿಯೆ ಮಾಧವಿ ಕೆ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ Read More »

ಲಕ್ಷಾಂತರ ಮೌಲ್ಯದ ಅಡಿಕೆ ಕಳವು | ಇಬ್ಬರು ಕಳ್ಳರ ಬಂಧನ | ಸೊತ್ತುಗಳು  ವಶಕ್ಕೆ

ಪುತ್ತೂರು: ಮಾಡನ್ನೂರು ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ವಿಷ್ಣು ಕಲ್ಲೂರಾಯ ಎಂಬವರ ಮನೆಯಂಗಳದ ಉಗ್ರಾಣದಿಂದ 12 ಕ್ವಿಂಟಾಲ್ ಅಡಿಕೆ ಕಳವು ಪ್ರಕರಣದ ಆರೋಪಿಗಳನ್ನು ಸಂಪ್ಯ ಪೊಲೀಸರು ಎರಡೇ ವಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡನ್ನೂರ್ ಗ್ರಾಮದ ಕಾವು ಅಮ್ಮಿನಡ್ಕ ಉಜ್ರುಗುಳಿ ನಿವಾಸಿ ಕಿರಣ್ ಕುಮಾರ್ (27) ಮತ್ತು ಸಂತೋಷ್ ಯು (30) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳಿಬ್ಬರಿಂದ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾನ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಡನ್ನೂರ್ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ

ಲಕ್ಷಾಂತರ ಮೌಲ್ಯದ ಅಡಿಕೆ ಕಳವು | ಇಬ್ಬರು ಕಳ್ಳರ ಬಂಧನ | ಸೊತ್ತುಗಳು  ವಶಕ್ಕೆ Read More »

ಆ.11,12, 13 : ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ | ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಪುಸ್ತಕ ಉಚಿತ

ಪುತ್ತೂರು: ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಇವರ ಸಹಕಾರದೊಂದಿಗೆ ಆಗಸ್ಟ್ 11, 12, 13ರಂದು ಪುತ್ತೂರಿನ ಕೋ ಆಪರೇಟಿವ್  ಬ್ಯಾಂಕಿನ ಸಭಾಂಗಣದಲ್ಲಿ ಪುಸ್ತಕ ಹಬ್ಬ- ಪುಸ್ತಕದಾನಿಗಳ ಮೇಳ- ಸಾಹಿತ್ಯ ವೈಭವ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ  ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಒಂದು ಪುಸ್ತಕ ಉಚಿತವಾಗಿ ನೀಡಲಾಗುವುದು. ಮೂರು ದಿನದಲ್ಲಿ ಪುಸ್ತಕ ಪ್ರದರ್ಶನ- ಮಾರಾಟ  10%ರಿಂದ 90% ರಿಯಾಯಿತಿ ದರದಲ್ಲಿ ಲಭ್ಯವಿದೆ. ಅಧಿಕಮಾಸದಲ್ಲಿ ದಾನ ಮಾಡಿದರೆ ಉತ್ತಮ ಫಲವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪುಸ್ತಕದ ದಾನಿಗಳ ಮೇಳ

ಆ.11,12, 13 : ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ | ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಪುಸ್ತಕ ಉಚಿತ Read More »

error: Content is protected !!
Scroll to Top