ಪುತ್ತೂರು

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ

ಪುತ್ತೂರು : ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡಗಳೂ ಔಷಧೀಯ ಸಸ್ಯಗಳೇ ಆಗಿವೆ. ಹಾಗಾಗಿ ಪ್ರತಿಯೊಂದು ಗಿಡದಲ್ಲೂ ಸಕಾರಾತ್ಮಕ ಶಕ್ತಿ ಅಡಗಿದೆ. ಗಿಡಮರಗಳಷ್ಟೇ ಅಲ್ಲದೆ ಇಡಿಯ ಪ್ರಕೃತಿಯೇ ತನ್ನೊಳಗೆ ಔಷಧೀಯ ಅಂಶಗಳನ್ನು ಒಳಗೊಂಡಿದೆ ಎಂದು ನಾಟಿ ವೈದ್ಯ ದೇವಿಪ್ರಸಾದ್ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ’ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೂಡುಕುಟುಂಬಗಳಿದ್ದಾಗ ಈ ಪ್ರಕೃತಿ ಆಧಾರಿತ ನಾಟಿ ವೈದ್ಯ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ವಿಭಕ್ತ ಕುಟುಂಬಗಳು ಹೆಚ್ಚಾದಂತೆ ನಾಟಿ ಪರಂಪರೆಯೂ ನಶಿಸಿ […]

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ Read More »

ದಿನೇಶ್ ಪೆರಿಯಡ್ಕ ನಿಧನ

ಪುತ್ತೂರು: ಹಿಂದೂ ಜಾಗರಣ ವೇದಿಕೆ ಸವಣೂರು ಘಟಕದ ಕಾರ್ಯಕರ್ತ ದಿನೇಶ್ ಪೆರಿಯಡ್ಕ (34) ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮೃತರು ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದರು. ಅವರು ತಂದೆ, ತಾಯಿ, ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ದಿನೇಶ್ ಪೆರಿಯಡ್ಕ ನಿಧನ Read More »

ಆ.14 : ಸೌಜನ್ಯ ಪ್ರಕರಣದ ಕುರಿತು ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಬೃಹತ್ ಕಾಲ್ನಡಿಗೆ ಜಾಥಾ

ಪುತ್ತೂರು: 11 ವರ್ಷಗಳ ಹಿಂದೆ  ಅತ್ಯಾಚಾರ ನಡೆದು ಕೊಲೆಯಾದ ಸಹೋದರಿ ಸೌಜನ್ಯ ಪ್ರಕರಣಕ್ಕೆ  ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆ.14 ರಂದು  ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ. ಆ.8 ಮಂಗಳವಾರ ಪುತ್ತಿಲ ಪರಿವಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಆಗಸ್ಟ್ 14ರ ಸೋಮವಾರದಂದು ಬೆಳಿಗ್ಗೆ 9.30 ಕ್ಕೆ  ದರ್ಬೆ

ಆ.14 : ಸೌಜನ್ಯ ಪ್ರಕರಣದ ಕುರಿತು ಪುತ್ತಿಲ ಪರಿವಾರದಿಂದ “ನಮ್ಮ ನಡೆ ನ್ಯಾಯದ ಕಡೆ” ಬೃಹತ್ ಕಾಲ್ನಡಿಗೆ ಜಾಥಾ Read More »

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ಪುತ್ತೂರು: ಮಹಿಳೆಯೊಬ್ಬರು ಗಿರಾಕಿ ಸೋಗಿನಲ್ಲಿ ಬಂದು ಚಿನ್ನಾಭರಣ ಅಂಗಡಿಯಿಂದ ಚಿನ್ನದ ಚೈನು ಎಗರಿಸಿದ ಘಟನೆ ನಡೆದಿದೆ. ಸೋಮವಾರ ನಗರದ ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ಗೆ ಬುರ್ಖಾ ಧರಿಸಿ ಸಣ್ಣ ಮಗುವಿನೊಂದಿಗೆ ಬಂದ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾರೆ. ಗಿರಾಕಿಯಂತೆ ಬಂದ ಮಹಿಳೆ 8 ಗ್ರಾಂ, 4ಗ್ರಾಂ ನ ಚೈನು(ಸರ) ಬೇಕೆಂದು ಬೇರೆ ಬೇರೆ ಡಿಸೈನ್ ನ ಸರಗಳನ್ನು ನೋಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಆ ಮಹಿಳೆ ಮಗುವಿಗೆ ಎದೆ ಹಾಲು ಕೊಡಲು ಶುರು ಮಾಡಿದೆ. ಈ

ಗಿರಾಕಿ ಸೋಗಿನಲ್ಲಿ ಬಂದು ಚಿನ್ನದ ಚೈನ್ ಎಗರಿಸಿದ ಮಹಿಳೆ | ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ Read More »

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ

ಪುತ್ತೂರು: ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಸಾಂಪ್ರಾದಾಯಿಕ  ಕಂಬುಲ ಕೆಸರ ಕಂಡ ಕ್ರೀಡಾಕೂಟ ತಿಂಗಳಾಡಿ ಬಾಲಯ ಕಂಬಳ ಕೂಟೋದ ಲೋಹಿತ್ ಬಂಗೇರ ಉಂಬೆರೆನ ಮುತಾಲಿಕೆಡ್  ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು ಉಂದುವೆ ಐತಾರ ಆಟಿ ೨೮ ಪೋಪುನಾನಿ ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ ನಡೆಪಿಯರ ಉಂಡು. ಗೊಬ್ಬುದ  ಉದಿಪನೊನು ಸಿರಿಮತಿ ಆಶಾತಿಮ್ಮಪ್ಪ ಗೌಡ ನಡಪಾದ್ ಕೊರ್ಯರ ಉಲ್ಲೆರ್. ಮಿತ್ತರ್ಮೆದ ಬಾಮೋಡು ಲೇಸ್ ದ ಉದಿಪನೊನು ಕ್ಯಾಂಪ್ಕೊ ಲಿ. ದ

ಆ.13 : ನಡೆಪಿಯರ ಉಂಡು ಸಾರಕರೆ ಬೊಲಿಯಾಳ ಶ್ರೀ ಶೀನಪ್ಪ ಪೂಜಾರಿ ಮೇರ್‍ನ ಸ್ಮರಣಾರ್ಥವಾದ್ ಕೆಸರ ಕಂಡೋಡು ಒಂಜಿದಿನ ಪೊರ್ಲ ಪೊಲಬು | ಶ್ರೀ ಧರ್ಮರಸು ಉಳ್ಳಾಕುಳು ಚಾಕೋಟೆತ್ತಡಿ ಮಾಡ, ಮುಲ್ಪ Read More »

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆ ಕಳೆದ ಜೂನ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುದೇಶ್ ಭಟ್-245 ಅಂಕ, ಆದಿತ್ಯ ನಾರಾಯಣ ಪಿ ಎಸ್-239 ಅಂಕ, ಪ್ರದೀಪ್ ಕೃಷ್ಣ ಐ-202 ಅಂಕ  ಮತ್ತು ಎಸ್ ತ್ವಿಷ-200 ಅಂಕಗಳನ್ನು ಪಡೆದು ತೇರ್ಗಡೆಯಾಗುವುದರ ಮೂಲಕ ಮುಂದಿನ ಹಂತದ ಸಿ ಎ ಇಂಟರ್‌ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ Read More »

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ವಸ್ತುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಬಿ ಮೂಡ ಗ್ರಾಮದ ನಿವಾಸಿ, ಕೆ.ಎಸ್‍.ಆರ್. ಕನ್‍ ಸ್ಟ್ರಕ್ಷನ್ ಕಂಪೆನಿಯ ಪಿಆರ್ ಒ ಆಗಿರುವ ಆರ್.ನಂದಕುಮಾರ್ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಕಬ್ಬಿಣದ ಸಲಾಖೆಗಳು, ಪ್ಲೇಟ್ಸ್ ಇನ್ನಿತರ ಸಾಮಾಗ್ರಿಗಳು ಸೋಮವಾರ ಕಳ್ಳತನವಾಗಿತ್ತು. ಕಳ್ಳತನವಾದ ಸಾಮಾಗ್ರಿಗಳ ಒಟ್ಟು ಮೌಲ್ಯ 3.50 ಲಕ್ಷ ಎಂದು ಅಂದಾಜಿಸಲಾಗಿದೆ.

ಸೇತುವೆ ನಿರ್ಮಾಣಕ್ಕೆಂದು ತಂದಿಟ್ಟಿದ್ದ ಸಾಮಾಗ್ರಿಗಳು ಕಳವು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Read More »

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ

ನಿಂತಿಕಲ್ಲು: ಸೌಜನ್ಯ ಕೊಲೆಯಾಗಿ 11 ವರ್ಷ ಕಳೆದರೂ ನೈಜ ಕೊಲೆ ಅಪರಾಧಿಗಳ ಪತ್ತೆಗೆ ಪ್ರತಿಭಟನೆ, ಹಕ್ಕೊತ್ತಾಯಗಳು ದಿನದಿಂದ ದಿನಕ್ಕೆ ಕಾವೇರುತ್ತಿದೆ. ದ.ಕ.ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿರುವ ಸಂಘ ಸಂಸ್ಥೆಗಳು, ಸಮುದಾಯಗಳು ನೈಜ ಆರೋಪಿಗಳ ಪತ್ತೆಗಾಗಿ ದೈವ-ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿರುವುದಲ್ಲದೆ, ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೌನ ಮೆರವಣಿಗೆ, ವಾಹನ ಜಾಥಾ, ಪ್ರತಿಭಟನೆಗಳನ್ನು ಹಮ್ಮಿಕೊಳ‍್ಳುತ್ತಿದೆ. ಸಮುದಾಯದವರು ತಾಲೂಕು ಮಟ್ಟದಿಂದ ತೊಡಗಿ ಜಿಲ್ಲಾ ಮಟ್ಟದ ತನಕ ಹಕ್ಕೊತ್ತಾಯದ ಸಭೆಗಳನ್ನು ನಡೆಸುವ ಮೂಲಕ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸುತ್ತಿದೆ.

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ Read More »

ಪ್ರತಿಷ್ಠಿತ ಪ್ರೇರಣಾ ತರಬೇತಿ ಸಂಸ್ಥೆಯ ಸ್ಮಿತಾ ಎಸ್ ರೈ ಮತ್ತು ಸಿಮ್ರಾನ್ ತಾಜ್ ಅವರು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ

ಪುತ್ತೂರು: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯಲ್ಲಿ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿನಿಯರು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಸಂಸ್ಥೆಗೆ ಶೇ.100 ಫಲಿತಾಂಶ ಬಂದಿದೆ. ಜೂ.2023 ಪ್ರೇರಣಾ ಸಂಸ್ಥೆಯಿಂದ ಸಿ.ಎ.ಫೌಂಡೇಶನ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಾದ ಸಿಮ್ರನ್ ತಾಜ್ ಹಾಗೂ ಸ್ಮಿತಾ ಎಸ್.ರೈ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಸಿಮ್ರನ್ ತಾಜ್ ಅವರು ಆರ್ಯಾಪು ಗ್ರಾಮದ ಸಂಪ್ಯ ನಿವಾಸಿಯಾದ ಮುಬಾರಕ್ ಪಾಶಾ ಹಾಗೂ ಸಬಿಹಾ ಖನಮ್ ದಂಪತಿ ಪುತ್ರಿ. ಸ್ಮಿತಾ ಎಸ್. ರೈ ಅವರು ಕೊಳ್ತಿಗೆ

ಪ್ರತಿಷ್ಠಿತ ಪ್ರೇರಣಾ ತರಬೇತಿ ಸಂಸ್ಥೆಯ ಸ್ಮಿತಾ ಎಸ್ ರೈ ಮತ್ತು ಸಿಮ್ರಾನ್ ತಾಜ್ ಅವರು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ Read More »

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ

ಸುಳ್ಯ: ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸುಳ್ಯ ತಾಲೂಕಿನ ನಿಂತಿಕಲ್ಲಿನಿಂದ ಸುಳ್ಯದ ತನಕದ ಬೃಹತ್ ವಾಹನ ಜಾಥಾ-ಪ್ರತಿಭಟನೆಗೆ ಮಂಗಳವಾರ ಬೆಳಿಗ್ಗೆ ನಿಂತಿಕಲ್ಲು ವೃತ್ತದ ಬಳಿ ಚಾಲನೆ ನೀಡಲಾಯಿತು. ನ್ಯಾಯ ಎಲ್ಲಿದೆ ? ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ವಾಹನ ಜಾಥಾಕ್ಕೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ Read More »

error: Content is protected !!
Scroll to Top