ಒಲಿಂಪಿಯಾಡ್ ಪರೀಕ್ಷೆ : ಅಂಬಿಕಾ ಸಿಬಿಎಸ್ ಇ ಸಂಸ್ಥೆಯಿಂದ ಎರಡನೆಯ ಹಂತಕ್ಕೆ ನಾಲ್ವರು ವಿದ್ಯಾರ್ಥಿಗಳು ಆಯ್ಕೆ
ಪುತ್ತೂರು: ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ ಡಿಸೆಂಬರ್ ತಿಂಗಳಿನಲ್ಲಿ ನವದೆಹಲಿಯ ಸಿಲ್ವರ್ ಝೋನ್ ಫೌಂಡೇಶನ್ ನಡೆಸಿರುವ ಒಲಿಂಪಿಯಾಡ್ ಪರೀಕ್ಷೆ ಬರೆದಿದ್ದು, ಪರೀಕ್ಷೆ ಬರೆದಿದ್ದ ಒಟ್ಟು 512 ವಿದ್ಯಾರ್ಥಿಗಳಲ್ಲಿ ಸಂಸ್ಥೆಯ ಒಟ್ಟು ನಾಲ್ಕು ಮಂದಿ ವಿದ್ಯಾರ್ಥಿಗಳು ಎರಡನೆಯ ಹಂತಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ 90 ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, 54 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, 27 ವಿದ್ಯಾರ್ಥಿಗಳು ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, ಉಳಿದಂತೆ […]