ಪುತ್ತೂರು

ಕೆದಿಲ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಸಹಾಯ ಹಸ್ತ ವಿತರಣೆ

ಪುತ್ತೂರು: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಣೇಶ್  ವಳಂಗಜೆ ಕೆದಿಲ ಇವರಿಗೆ “ಅರುಣ ಸಾರಥಿ”ಚಾಲಕರ ಸಂಘಟನೆಯ ಸಹಯೋಗದಲ್ಲಿ 10,000 ರೂಪಾಯಿ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ  ವತಿಯಿಂದ ನೀಡಲಾಯಿತು. ಟ್ರಸ್ಟ್‍ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ  “ಹಿಂದವಿ” ಕಚೇರಿ ಯಲ್ಲಿ ನೀಡಲಾಯಿತು. ಈಗಾಗಲೇ ಪ್ರತೀ ತಿಂಗಳಿಗೆ 10,000 ರೂಪಾಯಿಯಂತೆ ಕಳೆದ 7 ತಿಂಗಳಿನಲ್ಲಿ  ರೂಪಾಯಿ 70,000 ಸಾವಿರ ಧನ ಸಹಾಯ ವನ್ನು ಅನಾರೋಗ್ಯದಲ್ಲಿರುವವರಿಗೆ  ವಿತರಣೆ ಮಾಡಲಾಗಿದೆ.

ಕೆದಿಲ ಅರುಣ ಸಾರಥಿ ಚಾಲಕರ ಸಂಘಟನೆಯಿಂದ ಸಹಾಯ ಹಸ್ತ ವಿತರಣೆ Read More »

ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನೆ

ಪುತ್ತೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು , ಕಬಕ ಗ್ರಾಮ ಪಂಚಾಯತ್ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ನೂತನ ಕಚೇರಿ ಮತ್ತು ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಭಾಗವಹಿಸಿದರು ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲ, ಉಪಾಧ್ಯಕ್ಷೆ ಗೀತಾ,

ವಿದ್ಯಾಪುರ ಅಂಗನವಾಡಿ ಕಟ್ಟಡ ಉದ್ಘಾಟನೆ Read More »

ಎ ವಿ ಜಿ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ | ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣದ ಉದ್ದೇಶ :. ಚಂದ್ರಶೇಖರ್ ಕೆದ್ದೋಟೆ

ಪುತ್ತೂರು: ನೈತಿಕತೆ ಎನ್ನುವಂತದ್ದು ಒತ್ತಾಯಪೂರ್ವಕವಾಗಿ ಬರುವಂತದ್ದಲ್ಲ .ಮಕ್ಕಳು ಭಯಮುಕ್ತರಾಗಿ ಖುಷಿ ಖುಷಿಯಿಂದ ಕಲಿಯುವಂತಾಗಬೇಕು ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ  ಕೆದ್ದೋಟೆ ಹೇಳಿದರು.  ಅವರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯ 2025 -26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಜೊತೆಗೆ ಕೆಟ್ಟ ಚಟಗಳತ್ತ ಮುಖ ಮಾಡದಂತೆ

ಎ ವಿ ಜಿ ಶಾಲಾ ಶಿಕ್ಷಕ ರಕ್ಷಕ ಸಂಘದ ಮಹಾಸಭೆ | ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣದ ಉದ್ದೇಶ :. ಚಂದ್ರಶೇಖರ್ ಕೆದ್ದೋಟೆ Read More »

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಅಭಾವ ಎನ್ನುವ ನೆಪದಲ್ಲಿ ಕಾಂಗ್ರೆಸ್‍ ಅಭಿವೃದ್ಧಿಯಲ್ಲಿ ಜನವಿರೋಧಿಸಿ ನೀತಿ ಮಾಡುತ್ತಿದೆ : ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಶೆಟ್ಟಿ ಉಜಿರೆಮಾರು | ಜು.14 ರಂದು ಪುತ್ತೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು, ಕೆಂಪು ಕಲ್ಲು ಅಭಾವವಿದೆ. ಕರ್ನಾಟಕ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಜನ ವಿರೋಧಿ ನೀತಿ ಮಾಡುತ್ತಿದೆ ಎಂದು ಆರೋಪಿಸಿ ಜು.14 ರಂದು ಪುತ್ತೂರು ಬಿಜೆಪಿಯಿಂದ ಪುತ್ತೂರಿನ ಕಿಲ್ಲೆ ಮೈದಾನದ ಆವರಣದ ಅಮ‌ರ್ ಜವಾನ್ ಸ್ಮಾರಕದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಜನ ವಿರೋಧಿ ನೀತಿಗಳಿಂದಾಗಿ

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಅಭಾವ ಎನ್ನುವ ನೆಪದಲ್ಲಿ ಕಾಂಗ್ರೆಸ್‍ ಅಭಿವೃದ್ಧಿಯಲ್ಲಿ ಜನವಿರೋಧಿಸಿ ನೀತಿ ಮಾಡುತ್ತಿದೆ : ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಶೆಟ್ಟಿ ಉಜಿರೆಮಾರು | ಜು.14 ರಂದು ಪುತ್ತೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ Read More »

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ | ಗುರುಗಳ ಆಶೀರ್ವಾದದಿಂದ ಮಾತ್ರ ಕರ್ಮ ಬಂಧನದಿಂದ ಮುಕ್ತಿ : ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ನಾವು ಮಾಡುವ ಪ್ರತಿ ಕೆಲಸಕ್ಕೆ ಪ್ರತಿಫಲವಿದೆ. ಜನ್ಮಜನ್ಮಾಂತರದ ಕರ್ಮಫಲ ನಮ್ಮ ಬದುಕನ್ನು ರೂಪಿಸುತ್ತದೆ. ಕರ್ಮ ಬಂಧನದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಗುರುಗಳ ಆಶೀರ್ವಾದಕ್ಕೆ ಮಾತ್ರ ಕರ್ಮ ಬಂಧನವನ್ನು ತಪ್ಪಿಸುವ ಶಕ್ತಿ ಇದೆ. ಶಿವ ಪಥವರಿಯಲು ಗುರು ಪಥವೇ ಮೊದಲು. ಅಜ್ಞಾನಾಂಧಕಾರವನ್ನು ಹೊಡೆದೋಡಿಸುವವನು ಗುರು ಎಂದು ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು. ಅವರು ನಗರದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೇದಗಳ ವಿಂಗಡಣೆ ಮಾಡಿದ, ಅಷ್ಟದಶ ಪುರಾಣ ಮುಂತಾದ ಕೃತಿಗಳನ್ನು,

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ | ಗುರುಗಳ ಆಶೀರ್ವಾದದಿಂದ ಮಾತ್ರ ಕರ್ಮ ಬಂಧನದಿಂದ ಮುಕ್ತಿ : ಶ್ರೀಕೃಷ್ಣ ಉಪಾಧ್ಯಾಯ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ  ಸಚಿವರಿಗೆ ಶಾಸಕರಿಂದ ಮನವಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಿದರು. ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿ ಮಾಡುವ ಬಗ್ಗೆ ಈಗಾಗಲೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಿದ್ದು ,ದೇವಸ್ಥಾನ ಅಭಿವೃದ್ದಿಪಡಿಸುವ ಮೂಲಕ ಭಕ್ತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಈಗಾಗಲೇ ನೀಲಿ ನಕಾಶೆಯನ್ನು ಸಿದ್ದಪಡಿಸಲಾಗಿದೆ. ಸರಕಾರ ಈ ಹಿಂದೆ ಘೋಷಣೆ ಮಾಡಿರುವ ಅನುದಾನ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವಂತೆ  ಸಚಿವರಿಗೆ ಶಾಸಕರಿಂದ ಮನವಿ Read More »

ರೋಟರಿ ಕ್ಲಬ್‍ ಪುತ್ತೂರು ಯುವ ಪದಪ್ರದಾನ ಸಮಾರಂಭ

ಪುತ್ತೂರು: ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ರೋಟರಿ ಮನೀಷಾ ಸಭಾಂಗಣದಲ್ಲಿ ಬುಧವಾರ ಸಂಜೆ ಜರಗಿತು. ಪದ ಪ್ರದಾನ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್, ನೆರೆಯ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಕೆಲವು ಪ್ರಕರಣಗಳು ಇವೆಯಾದರೂ ಹನಿಗೂಡಿ ಹಳ್ಳ ಎಂಬಂತೆ ಸೇವಾ ಸಂಸ್ಥೆಯಾಗಿರುವ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಮಾರಕ’ ಪೋಲಿಯೊ ರೋಗವನ್ನು ಶೇ.99

ರೋಟರಿ ಕ್ಲಬ್‍ ಪುತ್ತೂರು ಯುವ ಪದಪ್ರದಾನ ಸಮಾರಂಭ Read More »

ಜು.12 ರಿಂದ 25 : ಪ್ರತಿಷ್ಠಿತ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಆಟಿ ಸೇಲ್‍ | ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಆಟಿ ಸೇಲ್ ಪ್ರಯುಕ್ತ ಗ್ರಾಹಕರಿಗೆ ಜು.12 ರಿಂದ ಜು.25 ರವರೆಗೆ ಚಿನ್ನದ, ವಜ್ರದ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ 300 ರೂ. ನೇರ ರಿಯಾಯಿತಿ ಹಾಗೂ ಪ್ರತಿ 1 ಕ್ಯಾರೆಟ್ ಗ್ಲೋ ವಜ್ರಾಭರಣಗಳ ಖರೀದಿಯಲ್ಲಿ 5000 ರೂ. ನೇರ ರಿಯಾಯಿತಿ ಮತ್ತು ಎಲ್ಲಾ ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿ.ಗೆ 3000 ರೂ. ನೇರ

ಜು.12 ರಿಂದ 25 : ಪ್ರತಿಷ್ಠಿತ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಆಟಿ ಸೇಲ್‍ | ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ Read More »

ವಜ್ರತೇಜಸ್ ಸೇವಾ ತಂಡದಿಂದ ಆನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಪುತ್ತೂರು: ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಹೃದಯಿ ಸದಸ್ಯರಿಂದ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು. ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ಕಷ್ಟದಲ್ಲಿ ಇರುವ ಬಲ್ನಾಡು ನಿವಾಸಿ ನಾಗಪ್ಪ ಮಡಿವಾಳ ಎಂಬವರಿಗೆ ವಜ್ರತೇಜಸ್ ತಂಡದಿಂದ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ವಜ್ರತೇಜಸ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಕೋಶಾಧಿಕಾರಿ ಗಣೇಶ್ ಕಾಮತ್, ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಸಹ ಕಾರ್ಯದರ್ಶಿ

ವಜ್ರತೇಜಸ್ ಸೇವಾ ತಂಡದಿಂದ ಆನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ Read More »

ಸರಕಾರಿ ಆಸ್ಪತ್ರೆಯ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ

ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಆಡಳಿತ  ವೈಧ್ಯಾಧಿಕಾರಿ ಆಶಾಜ್ಯೋತಿ , ದಂತ ತಜ್ಞರಾದ ಡಾ. ಜಯದೀಪ್ , ಅರಿವಳಿಕೆ ತಜ್ಞರಾದ ಡಾ. ಜಯಕುಮಾರಿ , ಡಾ. ಶ್ವೇತಾ ಅವರಿಗೆ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಬೀಳ್ಕೋಡುಗೆ ಸಮಾರಂಭ ವೈಧ್ಯಾಧಿಕಾರಿ ಕಛೇರಿಯಲ್ಲಿ ಗುರುವಾರ ನಡೆಯಿತು.  ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್ , ಸುದೇಶ್ ಶೆಟ್ಟಿ ಶಾಂತಿನಗರ , ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಮುಖೇಶ್ ಕೆಮ್ಮಿಂಜೆ ಶುಭ ಹಾರೈಸಿ ಮಾತನಾಡಿದರು. ಸದಸ್ಯರಾದ ವಿಕ್ಟರ್ ಪಾಯಿಸ್ ಹಾಗು

ಸರಕಾರಿ ಆಸ್ಪತ್ರೆಯ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ Read More »

error: Content is protected !!
Scroll to Top