ಪುತ್ತೂರು

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ

ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ನಮಗೆ ದಾರಿ ತೋರಿಸುವವರು ಹಾಗೂ ನಮ್ಮ ತಪ್ಪುಗಳನ್ನು ತಿದ್ದಿ ಸರಿಯಾದ ದಾರಿಗೆ ಕರೆದುಕೊಂಡು ಹೋಗುವವರು ಗುರು, ಅದಕ್ಕಾಗಿ ಗುರುಹಿರಿಯರಿಗೆ ಗೌರವ ಕೊಟ್ಟು ಸನ್ಮಾರ್ಗದಲ್ಲಿ ನಡೆಯಿರಿ ಎಂದರು. ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಗುರು ಎಂದರೆ ಜ್ಞಾನ. ಜ್ಞಾನ ಎಂದರೆ ಬೆಳಕು. ಮನಸ್ಸಿನ ಕಲ್ಮಶವನ್ನು ತೆಗೆದಾಗ ಜ್ಞಾನವನ್ನು ಪಡೆಯಲು ಸಾಧ್ಯ ಜೀವನದಲ್ಲಿ ಯಶಸ್ಸು ನಿಮ್ಮದಾಗಲಿ […]

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಗುರುಪೂರ್ಣಿಮೆ ಆಚರಣೆ Read More »

ಗುರುಪೂರ್ಣಿಮೆ ದಿನ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಗುರುಪೂರ್ಣಿಮೆಯ ಪವಿತ್ರ ದಿನದಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು “ಗುರು” ಪರಂಪರೆಯ ಘನತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ಮೊದಲು ಪುತ್ತೂರಿನ ನೆಕ್ಕಿಲಾಡಿಯಲ್ಲಿರುವ “ಬಲ್ಲಿ ಆಯುರ್‌ಗ್ರಾಮ” ಆಯುರ್ವೇದ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವನ್ನು ಸ್ಥಾಪಿಸಿರುವ ಸುಪ್ರೀತ್ ಲೋಬೋ ಅವರ ಮಾದರಿಯಾದ ಸೇವಾ ಮನೋಭಾವನೆಗೆ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 91 ವರ್ಷದ ಹಿರಿಯ ವೈದ್ಯರಾದ ಡಾ. ಕೆ.ಜಿ. ಭಟ್ ಉಪ್ಪಿನಂಗಡಿ ಅವರನ್ನು ಗೌರವಿಸಲಾಯಿತು. ಇವರು ದಶಕಗಳ ಕಾಲ

ಗುರುಪೂರ್ಣಿಮೆ ದಿನ ಡಾ. ಕೆ.ಜಿ. ಭಟ್ ಹಾಗೂ ಶಿಕ್ಷಕರಿಗೆ ಗೌರವ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು Read More »

ಎವಿಜಿ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ

ಪುತ್ತೂರು: ಬನ್ನೂರಿನ ಕೃಷ್ಣ ನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೇದವ್ಯಾಸರ ಜನ್ಮದಿನವಾದ ಗುರು ಪೂರ್ಣಿಮೆಯನ್ನು ಗುರುವಾರ ಆಚರಿಸಲಾಯಿತು. ನಿವೃತ್ತ ಪಂಚಾಯತ್ ಅಧಿಕಾರಿ ಸುಂದರ ಗೌಡ ಕಳುವಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ದಿನದ ಮಹತ್ವದ ಸಂದೇಶ ನೀಡಿ, ಆಧ್ಯಾತ್ಮಿಕ ಗುರುವಾದ ವೇದವ್ಯಾಸರು ವೇದವನ್ನು ವಿಭಾಗ ಮಾಡಿ ಅವುಗಳಿಗೆ ಪ್ರಸರಣ ಕೊಟ್ಟು ಆ ಜ್ಞಾನವನ್ನು ಲೋಕಕ್ಕೆ ಸಮರ್ಪಿಸಿದರು. ಅವರ ಜ್ಞಾನ ಅನುಪಮ ಮತ್ತು ಮಹತ್ವದ್ದಾಗಿದೆ. ಇಂದು ಎಲ್ಲಾ ಲೌಕಿಕ ಗುರುಗಳಿಗೆ ಆದರ್ಶ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ

ಎವಿಜಿ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ Read More »

ಗುರು ಪೂರ್ಣಿಮೆಯಂದು ಕೆಮ್ಮಾಯಿ ಕೃಷ್ಣನಗರ ಬಿಜೆಪಿ ಬೂತ್ ವತಿಯಿಂದ ಸನ್ಮಾನ

ಪುತ್ತೂರು: ಗುರು ಪೂರ್ಣಿಮೆ ದಿನದಂದು  ಕೆಮ್ಮಾಯಿ ಕೃಷ್ಣನಗರ 140 ನೇ ಬೂತಿನಲ್ಲಿ ಕೃಷ್ಣನಗರದ ನಿವೃತ್ತ ಉಪನ್ಯಾಸಕರಾದ ಗುಡ್ಡಪ್ಪ ಗೌಡ ಬಲ್ಯ ಇವರ ಧರ್ಮಪತ್ನಿಯಾದ ನಿವೃತ್ತ ಉಪನ್ಯಾಸಕಿ ಡಾ. ಮೋತಿ ಬಾಯಿ ಅವರಿಗೆ  ಆಂದ್ರ ಪ್ರದೇಶದ ಕುಪ್ಪಂ ಯುನಿವರ್ಟಿಸಿಯಿಂದ ಡಾಕ್ಟರೇಟ್ ಪದವಿ ಲಭಿಸಿದ್ದು, ಗುರು ಪೂರ್ಣಿಮೆಯ ದಿನದಂದು  ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮ ನಡೆಯಿತು.  ಅವರ ಶೈಕ್ಷಣಿಕ ಸಾಧನೆ ,ಹಾಗೂ ಅವರ ಸಮಾಜ ಸೇವೆಯನ್ನು ಗೌರವಿಸುವ ಸಲುವಾಗಿ ಸನ್ಮಾನ ನಡೆಯಿತು. ನಗರ ಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ,

ಗುರು ಪೂರ್ಣಿಮೆಯಂದು ಕೆಮ್ಮಾಯಿ ಕೃಷ್ಣನಗರ ಬಿಜೆಪಿ ಬೂತ್ ವತಿಯಿಂದ ಸನ್ಮಾನ Read More »

ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಪರಿಹಾರ ಕಾರ್ಯ | ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನ

ಪುತ್ತೂರು : ತಾಲೂಕಿನ ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ದಾರ ಪ್ರಯುಕ್ತ ಚಿಂತಿಸಿದ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜು.5 ರಿಂದ ಜು.10 ಗುರುವಾರತನಕ ನಡೆಯಿತು. ಪರಿಹಾರ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರ ತoತ್ರಿಗಳಾದ  ಬ್ರಹ್ಮಶ್ರೀ ಕೆಮ್ಮಿoಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜು. 5 ಶನಿವಾರ ಬೆಳಿಗ್ಗೆ 9 ರಿಂದ ಸರ್ಪಸಂಸ್ಕಾರ ನಡೆಯಿತು. ಜು.8 ಮಂಗಳವಾರ ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಮಹಾಗಣಪತಿ ಹೋಮ, ಸರ್ಪ ಸಂಸ್ಕಾರ

ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಪರಿಹಾರ ಕಾರ್ಯ | ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನ Read More »

ವಿವೇಕಾನಂದ ಕಾಲೇಜಿನಲ್ಲಿ ಪೋಷಕರ ಸಭೆ | ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆ ಅಗತ್ಯ-ಡಾ.ಶ್ರೀಪತಿ ಕಲ್ಲೂರಾಯ

ಪುತ್ತೂರು: ಬದುಕಿನಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕೊಡಬಹುದಾದ ಜೀವನ ಕ್ರಮ ನಮ್ಮ ಪರಂಪರೆಯಲ್ಲಿದೆ. ಹಾಗಾಗಿ ಅಂತಹ ಪರಂಪರೆಯನ್ನು ನಮ್ಮ ಇಂದಿನ ಯುವಜನತೆ ಕಲಿಯಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ  ಸಂಸ್ಕಾರಯುತ ಜೀವನವನ್ನು ಅನುಷ್ಠಾನ ಮಾಡಲು ಉತ್ಕೃಷ್ಟ ಶಿಕ್ಷಣವನ್ನು ನೀಡುತ್ತಿದೆ. ಬೌದ್ಧಿಕವಾಗಿ ಇದು ಶೀಘ್ರವಾಗಿ ಬೆಳೆಯುವ ಕಾಲ. ಹಾಗಾಗಿ ಈ ಸಂದರ್ಭದಲ್ಲಿ ಬೌಧ್ದಿಕವಾಗಿ ಬೆಳೆಯಲು ಅತ್ಯಂತ ಶಿಸ್ತುಬದ್ಧವಾದ ಜೀವನ ಕ್ರಮವನ್ನು ಅನುಸರಿಸಿ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು ಅವರು ವಿವೇಕಾನಂದ

ವಿವೇಕಾನಂದ ಕಾಲೇಜಿನಲ್ಲಿ ಪೋಷಕರ ಸಭೆ | ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆ ಅಗತ್ಯ-ಡಾ.ಶ್ರೀಪತಿ ಕಲ್ಲೂರಾಯ Read More »

ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವಿಟ್ಲ ಪೊಲೀಸ್ ಠಾಣಾ ಗ್ರಹ ರಕ್ಷಕದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ.

ವಿಟ್ಲ: ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಹರಕ್ಷಕದಳ ಸಿಬ್ಬಂದಿಗಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ವತಿಯಿಂದ ರೈನ್ ಕೋಟ್ ವಿತರಣಾ ಸಮಾರಂಭ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಗುರುವಾರ ನಡೆಯಿತು. ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಗಾಲಕ್ಕೆ ಅವಶ್ಯಕತೆ ಇರುವ ರೈನ್ ಕೋಟ್ ವಿತರಿಸಿ ಮಾತಾನಾಡಿದ ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗ್ರಹ ರಕ್ಷಕ ದಳ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ

ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವಿಟ್ಲ ಪೊಲೀಸ್ ಠಾಣಾ ಗ್ರಹ ರಕ್ಷಕದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ. Read More »

ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ | ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರು : ಪ್ರಿಯಾಶ್ರೀ ಕೆ.ಎಸ್.

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಬುಧವಾರ ಗುರುಪಾದುಕೆಯನ್ನು ಪೂಜಿಸುವ ಮೂಲಕ ಗುರುಪೂರ್ಣಮಿ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಮಾತನಾಡಿ, ಗುರು ಎಂದರೆ ಅಜ್ಞಾನದ ಅಂಧಕಾರವನ್ನು ದೂರಮಾಡುವವನು. ಮನುಷ್ಯ ಜಗತ್ತಿಗೆ ಅರಿವನ್ನು ತೋರಿದಾತ ಗುರು. ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರುವೇ ಆಗಿದ್ದಾನೆ. ಹರಿ ಪಥವನ್ನರಿವೊಡೆ ಗುರು ಪಥವೇ ಮೊದಲು, ಹರಿ ಮುನಿದರೆ ಗುರು ಕಾಯುವ ಎಂಬ ಮಾತು ಸಹ ಇದೆ, ಆದ್ದರಿಂದ ನಮ್ಮ ಪರಂಪರೆ ದೇವರಿಗೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಿತ್ತು ಎನ್ನುವುದಕ್ಕೆ

ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ | ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರು : ಪ್ರಿಯಾಶ್ರೀ ಕೆ.ಎಸ್. Read More »

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ

ಪುತ್ತೂರು: ಮಂಗಳೂರು ಕೃಷ್ಣವಾಣಿ ಪಿಕ್ಚರ್ಸ್‍ ಲಾಂಛನದಲ್ಲಿ ತಯಾರಾದ ನಡುಬೈಲ್‍ ಜಗದೀಶ್‍ ಅಮೀನ್‍ ನಿರ್ಮಾಣದಲ್ಲಿ, ನಿತಿನ್‍ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ತಯಾರಾದ ‘ ಧರ್ಮ ಚಾವಡಿ’ ತುಳು ಚಿತ್ರ ಜು.11 ರಂದು ದ.ಕ ಹಾಗೂ ಉಡುಪಿ ಜಿಲ್ಲಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ನಿತಿನ್‍‍ ರೈ ಕುಕ್ಕುವಳ್ಳಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮ ದೈವ ಚಿತ್ರ ಬಳಿಕ ಇದು ಎರಡನೇ ಚಿತ್ರವಾಗಿದ್ದು, ಧರ್ಮ ಚಾವಡಿ ಈಗಾಗಲೇ ಮುಂಬೈಯಲ್ಲಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ Read More »

ಪತಂಜಲಿ ಯೋಗ ಶಾಖೆಯಲ್ಲಿ ಗುರುಪೂರ್ಣಿಮಾ ಆಚರಣೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗುತ್ತಿರುವ ಯೋಗ ಶಿಬಿರದಲ್ಲಿ ಶ್ರೀ ಗುರು ಪೂರ್ಣಿಮೆ ದಿನವನ್ನು ಆಚರಿಸಲಾಯಿತು. ಭಗವಂತನ ಇನ್ನೊಂದು ರೂಪವಾಗಿಯೇ ಕಾಣಿಸಿಕೊಂಡ ವ್ಯಾಸ ಮಹರ್ಷಿಗಳು ಜ್ಞಾನದ ರಾಶಿಯನ್ನು ನಾಲ್ಕು ವೇದಗಳಾಗಿ ವಿಂಗಡಿಸಿ 18 ಪುರಾಣ, ಉಪ ಪುರಾಣ ಮತ್ತು ಮಹಾಭಾರತ ಕೃತಿಯನ್ನು ರಚಿಸಿ ಎಲ್ಲರಿಗೂ ಜೀವನದ ಮೌಲ್ಯಗಳನ್ನು ಬೋಧಿಸಿದ ಮಹಾನ್ ಗುರುಗಳೆಂದು ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ತಿಳಿಸಿದರು.ಗುರು ಪೂರ್ಣಿಮೆಯ ಬಗ್ಗೆ ಯೋಗಬಂಧು

ಪತಂಜಲಿ ಯೋಗ ಶಾಖೆಯಲ್ಲಿ ಗುರುಪೂರ್ಣಿಮಾ ಆಚರಣೆ Read More »

error: Content is protected !!
Scroll to Top