ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ | ತಾಕತ್ತಿದ್ದರೆ ಶಾಸಕರು ತಡೆಯಲಿ | ಪ್ರತಿಭಟನೆಯಲ್ಲಿ ಸವಾಲೆಸೆದ ಮಾಜಿ ಶಾಸಕ ಸಂಜೀವ ಮಠಂದೂರು
ಪುತ್ತೂರು: ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರು ಶಾಸಕರಿಗೆ ತಾಕತ್ತಿದ್ದರೆ ಬಂದು ತಡೆಯಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ ಸೋಮವಾರ ನಡೆದ ಮರಳು, ಕೆಂಪುಕಲ್ಲು ಅಭಾವದ ಕುರಿತು ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ಕಾರ್ಯಕರ್ತರು ಬಳೆಯಿಟ್ಟು ರಾಜಕೀಯ ಮಾಡಿದವರಲ್ಲ. ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನಿಗಳು, ಹಣ, ಅಮಿಷಗಳಿಗೆ ಮರುಳಾಗುವವರು ಬಿಜೆಪಿಗರಲ್ಲ ಇಂದು ಯಾವುದಾದರೂ ಕೆಲಸಕ್ಕೆ ಶಾಸಕರ ಬಳಿ ಹೋದಲ್ಲಿ ಅವರಿಗೆ […]










