ಪುತ್ತೂರು

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು

ಪುತ್ತೂರು: ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವ ವಿಚಾರದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪನಡ್ಕ ನಿವಾಸಿ ನವೀನ್ ರೈ ಕೈಕಾರ ಎಂಬವರು ದಿನೇಶ್ ಪುತ್ತೂರು ಎಂಬವರ ವಿರುದ್ಧ ದೂರು ನೀಡಿದ್ದಾರೆ. ತನ್ನ ಫೊಟೋದ ಜೊತೆ ಇನ್ನೊಂದು ಹುಡುಗಿಯ ಫೊಟೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಈ ಫೊಟೋವನ್ನು ಪುತ್ತಿಲ ಪರಿವಾರ – 1 ವಾಟ್ಸಆ್ಯಪ್ ಗ್ರೂಪಿನಲ್ಲಿ ಹರಿಯಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫೊಟೋ ಎಡಿಟ್ ಮಾಡಿ ವೈರಲ್: ಠಾಣೆಗೆ ದೂರು Read More »

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ

ಕೆದಿಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವಿಟ್ಲ ಪೆರ್ನೆ ವಲಯದ ಕೆದಿಲ ಎ ಹಾಗೂ ಬಿ ಒಕ್ಕೂಟದ ವತಿಯಿಂದ “ಸಾವಯವ ಕೃಷಿ  ತರಬೇತಿ ಮತ್ತು ಪ್ರಾತ್ಯಕ್ಷಿಕೆ ಪ್ರಗತಿಪರ ಕೃಷಿಕ ಬಾಬು ಮೂಲ್ಯರ ಮನೆಯಲ್ಲಿ ಅ.1 ಭಾನುವಾರ ನಡೆಯಿತು. ಕಜೆ ಬಾಬು ಮೂಲ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಜಗದೀಶ್ ಪ್ರಾರ್ಥನೆ ಹಾಡಿದರು. ಸೇವಾಪ್ರತಿನಿಧಿ ಶಾರದ ಸ್ವಾಗತಿಸಿ,

ಸಾವಯವ ಕೃಷಿ ತರಬೇತಿ, ಪ್ರಾತ್ಯಕ್ಷಿಕೆ Read More »

ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ

ಪುತ್ತೂರು: ತಾಲೂಕಿನ ಪುರುಷರಕಟ್ಟೆಯಲ್ಲಿನ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು (72) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಪುರುಷರಕಟ್ಟೆ ವೃತ್ತದ ಬಳಿ ಕಳೆದ ಹಲವು ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದ ಸುರೇಶ್ ಪ್ರಭು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನದ ಹಿನ್ನಲೆಯಲ್ಲಿ ಹೊಟೇ;ಲ್ ನಡೆಸುವ ಬಿಲ್ಡಿಂಗ್ ಇತರರು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚಿಸಿದರು.

ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು ನಿಧನ Read More »

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ

ಪುತ್ತೂರು: ಕಾರು ಹಾಗೂ ಟ್ರಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನರಿಮೊಗರು ಸಮೀಪದ ಪಾಪೆತ್ತಡ್ಕ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಅಪಘಾತದಿಂದ ಟ್ರಾಕ್ಟರ್ ಚಾಲಕ ಸಣ್ಣಪುಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಪರಿಣಾಮ ಟ್ರಾಕ್ಟರ್ ನಜ್ಜುಗುಜ್ಜಾಗಿದ್ದು, ಕಾರು ಬೆಂಗಳೂರಿನಿಂದ ಕಾಣಿಯೂರು ಮಾರ್ಗವಾಗಿ ಬರುತ್ತಿತ್ತು. ಕಾರಿನಲ್ಲಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ವಿಶ್ವನಾಥ ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಾರು- ಟ್ರಾಕ್ಟರ್ ಅಪಘಾತ: ನೆರವಿಗೆ ಧಾವಿಸಿದ ಪುತ್ತಿಲ Read More »

ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು

ಪುತ್ತೂರು: ವಯನಾಡ್‍ ಗೆ ಪ್ರವಾಸಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ಅಡೆಕ್ಕಲ್ ನಿವಾಸಿ ಅಝೀಂ (20) ಮೃತಪಟ್ಟ ಯುವಕ ಅಝೀಂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿಕೊಂಡು ವಯನಾಡ್ ಗೆ ಪ್ರವಾಸಕ್ಕೆ ತೆರಳಿದ್ದರು. ಶುಕ್ರವಾರ ರಾತ್ರಿ ತೆರಳಿದವರು ರೂಮ್ ಅಲ್ಲಿ ಸ್ಟೇ ಆಗಿದ್ದು, ಇಂದು ಬೆಳಿಗ್ಗೆ ಪಯ್ಯನೂರು ಸಮೀಪ ಕೆರೆಯಲ್ಲಿ ಸ್ನಾನ ಮಾಡಲು ಇಳಿದಿದ್ದು, ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಪ್ರವಾಸಕ್ಕೆ ತೆರಳಿದ ಹಿರೇಬಂಡಾಡಿ ನಿವಾಸಿ ಅಝೀಂ ನೀರಿನಲ್ಲಿ ಮುಳುಗಿ ಮೃತ್ಯು Read More »

`ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ಪುತ್ತೂರು: ದೇಶದಾದ್ಯಂತ ನಡೆಯುವ ’ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಚಾಲನೆ ನೀಡಲಾಯಿತು. ದೇಶಕ್ಕಾಗಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸುವ ಮತ್ತು ದೇಶದ ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮೃತ್ತಿಕೆಯನ್ನು ಕಲಶಕ್ಕೆ ಅರ್ಪಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ, ದೇಹ ಸರಿ

`ನನ್ನ ಮಣ್ಣು ನನ್ನ ದೇಶ’ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ Read More »

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ

ಪುತ್ತೂರು: ವಿಜಯ ಸಾಮ್ರಾಟ್ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಪಿಲಿಗೊಬ್ಬು ಸ್ಪರ್ಧೆ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಚಪ್ಪರ ಮುಹೂರ್ತ ಶನಿವಾರ ನಡೆಯಿತು. ಪುತ್ತೂರು ವಿಜಯ ಸಾಮ್ರಾಟ್ ನ ಸ್ಥಾಪಕಾಧ್ಯಕ್ಷ ಸಹಜ್ ರೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮದ ಚಪ್ಪರ ಮುಹೂರ್ತವನ್ನು ದೇವಸ್ಥಾನದ ಅರ್ಚಕ ಉದಯಕೃಷ್ಣ ಭಟ್ ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಹಜ್ ರೈ ಬಳಜ್ಜ, ನಾಗರಾಜ್ ನಡುವಡ್ಕ, ಶರತ್ ಕುಮಾರ್ ಮಾಡಾವು, ಶಂಕರ್ ಭಟ್

ಪಿಲಿಗೊಬ್ಬು’, `ಫುಡ್ ಫೆಸ್ಟ್’ಗೆ ಚಪ್ಪರ ಮುಹೂರ್ತ Read More »

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪುತ್ತೂರಿನಲ್ಲಿರುವುದು ಅಭಿನಂದನಾರ್ಹ : ಅಶೋಕ್ ರೈ | ಮ್ಯಾಟ್ ಅಂಕಣ ಪ್ರೋ ಮಾದರಿಯ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ

ಪುತ್ತೂರು: ಪುತ್ತೂರಿನಂತ ಗ್ರಾಮೀಣ ಭಾಗದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಿರುವುದು ಅಭಿನಂದನಾರ್ಹ ಮತ್ತು ಕಬಡ್ಡಿ ಕ್ರೀಡಾಪಟುಗಳನ್ನು ಸೃಷ್ಟಿಸಿದ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸೇವೆ ಶ್ಲಾಘನೀಯ ಎಂದು ಶಾಸಕ ಅಶೋಕ್ ರೈ ಹೇಳಿದರು. ಶನಿವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್, ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಹಾಗೂ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಮ್ಯಾಟ್ ಅಂಕಣದ ಪ್ರೋ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟದ ಉದ್ಘಾಟನಾ

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಪುತ್ತೂರಿನಲ್ಲಿರುವುದು ಅಭಿನಂದನಾರ್ಹ : ಅಶೋಕ್ ರೈ | ಮ್ಯಾಟ್ ಅಂಕಣ ಪ್ರೋ ಮಾದರಿಯ ಆಹ್ವಾನಿತ ತಂಡಗಳ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ Read More »

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ

ಸವಣೂರು: 2023-24ನೇ ಸಾಲಿನ ಜಿಲ್ಲಾ ವಲಯ ಪ್ರಚಾರ ಸಾಹಿತ್ಯ ಯೋಜನೆಯ ಅಂಗವಾಗಿ ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿ.ಪಂ., ತೋಟಗಾರಿಕೆ ಇಲಾಖೆ ಪುತ್ತೂರು, ಡೆ. ಎನ್.ಆರ್.ಎಲ್. ಎಂ ಯೋಜನೆ ತಾ.ಪಂ. ಕಡಬ, ಸವಣೂರು ಗ್ರಾ.ಪಂ., ಕಾಣಿಯೂರು -ಸವಣೂರು ರೈತ ಉತ್ಪಾದಕ ಕಂಪೆನಿ ಇದರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರಗಿತು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು, ತೋಟಗಾರಿಕೆ ಇಲಾಖೆಯ ವತಿಯಿಂದ ದೊರಕುವ

ಸವಣೂರು: ವೈಜ್ಞಾನಿಕ ತರಕಾರಿ ಬೇಸಾಯ ತರಬೇತಿ ಕಾರ್ಯಾಗಾರ, ತರಕಾರಿ ಬೀಜ ವಿತರಣೆ Read More »

ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಅಂಬಿಕಾದ ಅನಿಕೇತ್ ಮತ್ತು ಧನ್ವಿತ್ ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಧನ್ವಿತ್ ಹಾಗೂ ಅನಿಕೇತ್ ಎನ್. ಅವರು ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಘಟಕ ಹಾಗೂ ಮಂಗಳೂರಿನ ಬಲ್ಮಠದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಆಶ್ರಯದಲ್ಲಿ ಮಂಗಳೂರಿನ ಮಂಗಳ ಈಜು ಕ್ಲಬ್’ನಲ್ಲಿ ಸ್ಪರ್ಧೆ ನಡೆದಿತ್ತು. ಪುತ್ತೂರು ಮರೀಲಿನ ಕೇಶವ ಕುಮಾರ್ ಕೆ.ಎಂ. ಮತ್ತು ಮೀನಾಕ್ಷಿ ದಂಪತಿ ಪುತ್ರ ಧನ್ವಿತ್ 100 ಮೀಟರ್ ಫ್ರೀ

ಜಿಲ್ಲಾ ಮಟ್ಟದ ಈಜು ಸ್ಪರ್ಧೆ: ಅಂಬಿಕಾದ ಅನಿಕೇತ್ ಮತ್ತು ಧನ್ವಿತ್ ರಾಜ್ಯಮಟ್ಟಕ್ಕೆ ಆಯ್ಕೆ Read More »

error: Content is protected !!
Scroll to Top