ಪುತ್ತೂರು

ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ…

ಪುತ್ತೂರು: ಅ.6 ಮತ್ತು 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ 204ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಸಾವಿರಾರು‌ ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು, ಬಿಎ, ಬಿಕಾಂ, […]

ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ… Read More »

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್

ಪುತ್ತೂರು: ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ, ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗೆ ’ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ ಪುತ್ತೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯ ಸ್ವಾಗತ ಮಾಡಿ ಬೈಕ್ ರ್ಯಾಲಿಯ ಮೂಲಕ ಪುತ್ತೂರಿನಿಂದ ಮುಂದಿನ ತಾಲೂಕಿಗೆ ಬೀಳ್ಕೊಡಲಾಯಿತು. ಬೈಕ್ ರ್ಯಾಲಿಯನ್ನು ಪುತ್ತೂರಿನ ಕಾರ್ಯಕರ್ತರು ಸ್ವಾಗತಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್ Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅರ್ಥಪೂರ್ಣ ಗಾಂಧೀ ಜಯಂತಿ | ಗಾಂಧೀಜಿ ಜೀವನಾದರ್ಶ ಅನುಕರಣೀಯ : ಸವಣೂರು ಸೀತಾರಾಮ ರೈ | ಹೋರಾಟದಿಂದ ಪಡೆದ ಸ್ವಾತಂತ್ರ್ಯ ದುರುಪಯೋಗ ಆಗದಿರಲಿ: ಅಶ್ವಿನ್ ಎಲ್. ಶೆಟ್ಟಿ

ಸವಣೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 146ನೇ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಠಾರ ಸ್ವಚ್ಛತೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಮವನ್ನು ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಇತಿಹಾಸವನ್ನು ನೆನಪಿಡಬೇಕಿದೆ. ಗಾಂಧೀಜಿಯವರು ಮಾಡಿದ ಸಾಧನೆ ಅತಿ ವಿಶೇಷವಾದದ್ದು ಮತ್ತು ಅವರ ಜೀವನಾದರ್ಶಗಳನ್ನು ನಾವು ಅನುಸರಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕಿ ಪರಿಮಳಾ ಎನ್.ಎಂ. ಅವರನ್ನು

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅರ್ಥಪೂರ್ಣ ಗಾಂಧೀ ಜಯಂತಿ | ಗಾಂಧೀಜಿ ಜೀವನಾದರ್ಶ ಅನುಕರಣೀಯ : ಸವಣೂರು ಸೀತಾರಾಮ ರೈ | ಹೋರಾಟದಿಂದ ಪಡೆದ ಸ್ವಾತಂತ್ರ್ಯ ದುರುಪಯೋಗ ಆಗದಿರಲಿ: ಅಶ್ವಿನ್ ಎಲ್. ಶೆಟ್ಟಿ Read More »

ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೆಜ್ಜೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ | ಗಾಂಧೀಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ, ರೋಟರಿ ಕ್ಲಬ್ ಸಂಸ್ಥೆಗಳು ಹಾಗೂ ಜೆಸಿಐ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆಯಲ್ಲಿ ಸೋಮವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ತೋರಿಕೆಯಿಂದ ಸ್ವಚ್ಛತೆ ಸಾಧ್ಯವಿಲ್ಲ. ಕೇವಲ ಭಾಷಣಕ್ಕೆ ಮಾತ್ರ ಸ್ವಚ್ಛತೆ ಸೀಮಿತವಾಗಿರದೆ ಮನಸ್ಸಿನಲ್ಲಿ ಬಾದಲಾವಣೆ ತಂದರೆ ದೇಶದ ಸ್ವಚ್ಛತೆ ಸಾಧ್ಯ ಎಂದ ಅವರು, ಹಲವಾರು ಚಳವಳಿ ಮೂಲಕ ಬ್ರಿಟಿಷರನ್ನು

ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೆಜ್ಜೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ | ಗಾಂಧೀಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಶಾಸಕ ಅಶೋಕ್ ರೈ Read More »

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು

ಪುತ್ತೂರು: ಆಕ್ಟಿವಾ ಸ್ಕೂಟರಿಗೆ 800 ಕಾರು ಡಿಕ್ಕಿಯಾಗಿದ್ದು,ಡಿಕ್ಕಿ ಹೊಡೆದ ಕಾರು ಎಸ್ಕೇಪ್ ಆಗಿದ್ದು ಸ್ಕೂಟರ್‌ನಲ್ಲಿ ತೆಳುತ್ತಿದ್ದ ಗ್ರಾಪಂ ಸದಸ್ಯರಿಬ್ಬರಿಗೆ ಗಾಯಗಳಾಗಿವೆ. ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ ಹಾಗೂ ಚಿತ್ರ ರವರು ಆಕ್ಟಿವಾ ಸ್ಕೂಟರಿನಲ್ಲಿ ತೆರಳುವಾಗ ಕುಂಬ್ರ ಸಮೀಪ ಕಾರು ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಸ್ಕೂಟರ್ ಪಲ್ಟಿಯಾಗಿದೆ. ಕಾರು ಚಾಲಕ ಕಾರನ್ನು‌ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಗಾಯಾಳುಗಳಿಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಿಟ್ ಆಂಡ್ ರನ್ : ಸ್ಕೂಟರ್ ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು | ಒಳಮೊಗ್ರು ಗ್ರಾಪಂ ಸದಸ್ಯರಿಬ್ಬರು ‌ಆಸ್ಪತ್ರೆಗೆ ದಾಖಲು Read More »

ಮರೀಲ್ ನಿವಾಸಿ ಯತೀಶ್ ನಿಧನ

ಪುತ್ತೂರು: ಇಲ್ಲಿಯ ಮರೀಲ್ ನಿವಾಸಿ ಯತೀಶ್ (31) ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಮರೀಲ್ ನಿವಾಸಿ ಯತೀಶ್ ನಿಧನ Read More »

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ, ಜಾಥಾ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌.ಸಿ.ಸಿ.ಯ ಭೂದಳ ಮತ್ತು ನೌಕಾದಳ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ಇಕೋ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆ ನಮ್ಮ ಮನೆ ಪರಿಸರ ಗ್ರಾಮದಿಂದ ಪ್ರಾರಂಭವಾಗಬೇಕು. ಪರಿಸರವನ್ನು ಸ್ವಚ್ಛವಾಗಿರಿಸುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯವಾಗಿದೆ. ಕೇಂದ್ರ ಸರಕಾರವು ಸ್ವಚ್ಛತೆಗೆ ಹಲವು ಮಾನದಂಡಗಳನ್ನು ನಿಯೋಜಿಸಿದೆ. ಅವುಗಳನ್ನೆಲ್ಲ ಪಾಲಿಸಿದ್ದೇ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಬೀದಿ ನಾಟಕ, ಜಾಥಾ Read More »

ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ | ಸದಸ್ಯರಿಂದ ರಕ್ತದಾನ

ಪುತ್ತೂರು: ಪುತ್ತೂರು ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ ಭಾನುವಾರ ಅನುರಾಗ ವಠಾರದಲ್ಲಿ ನಡೆಯಿತು. ಸಭೆಯ ಬಳಿಕ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನಲ್ಲಿ ಸಂಘದ ಹಲವಾರು ಸದಸ್ಯರಿಂದ ರಕ್ತದಾನ ನಡೆಯಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ನಾಗ ಸನ್ನಿಧಿ, ಅಯ್ಯಪ್ಪ ಸನ್ನಿಧಿ ಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ, ಕೋಶಾಧಿಕಾರಿ

ನವಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹಾಗೂ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘದ ಮಹಾಸಭೆ | ಸದಸ್ಯರಿಂದ ರಕ್ತದಾನ Read More »

ಅ.7: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಅ.7 ಶನಿವಾರ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಮಾನ್ಯ ರೋಗ, ಕಣ್ಣು, ಗ್ಯಾಸ್ಟ್ರೋಂಟಾರಲಾಜಿ, ಹೃದಯ ರೋಗ, ಎಲುಬು, ಕೀಲು ರೋಗ, ಮೂತ್ರಶಾಸ್ತ್ರ ವಿಭಾಗ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ಬಿ.ಪಿ ಮತ್ತು ಮಧುಮೇಹ ತಪಾಸಣೆ, ಅಗತ್ಯ ಇರುವವರಿಗೆ ಇ.ಸಿ.ಜಿ ಪರೀಕ್ಷೆ, ಔಷಧ ವಿತರಣೆ, ಓದುವ ಕನ್ನಡಕ ವಿತರಣೆ ಉಚಿತವಾಗಿ ಲಭ್ಯವಿದೆ. ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ ಆಸ್ಪತ್ರೆಯ

ಅ.7: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ Read More »

ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ

ಪುತ್ತೂರು: ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಸ್ಪಷ್ಟವಾಗಿ ಓದಲು ಕಲಿಸುವ ತರಗತಿಗಳನ್ನು ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ತರಗತಿಯ ಅವಧಿ ಒಂದು ಗಂಟೆಯಾಗಿದ್ದು, 140 ದಿವಸಗಳಲ್ಲಿ ನಿರಂತರವಾಗಿ, ನಿಯಮಿತವಾಗಿ ಸೇರಬೇಕಾದ್ದು ಕಡ್ಡಾಯ. ಹೊಸ ತರಗತಿಗಳ ಸಮಯ ಈ ಕೆಳಗಿನಂತಿದೆ. ಮಧ್ಯಾಹ್ನ 3 ಗಂಟೆ , ಸಂಜೆ 6.30 ಹಾಗೂ ರಾತ್ರಿ 7.30, 8 ಹಾಗೂ 8.30. ಭಗವದ್ಗೀತೆ ಕಲಿಯಲು ಆಸಕ್ತಿ ಇರುವವರು ಈ ಕೆಳಗಿನ ಗೂಗಲ್ ಫಾರ್ಮನ್ನು ಅ.2, 2023ರ ಒಳಗೆ ಭರ್ತಿ ಮಾಡಿ ಕಳಿಸಬೇಕು. ಗೂಗಲ್ ಫಾರ್ಮ್ ಭರ್ತಿ ಮಾಡಿದವರೆಲ್ಲರಿಗೂ

ಶೀಘ್ರದಲ್ಲಿ ಆರಂಭಗೊಳ್ಳಲಿದೆ ಭಗವದ್ಗೀತೆ ಶ್ಲೋಕಗಳ ತರಗತಿ Read More »

error: Content is protected !!
Scroll to Top