ಪುತ್ತೂರು

ಬನ್ನೂರು ಮಹಿಳಾ ವಿದ್ಯಾರ್ಥಿ ವಸತಿ ನಿಲಯದಲ್ಲಿ ಡೆಂಗ್ಯೂ ಪ್ರಕರಣ ಪತ್ತೆ | ಮುಂಜಾಗ್ರತಾ ಕ್ರಮ ವಹಿಸುವಂತೆ ನಗರಸಭೆ ಅಧಿಕಾರಿಗಳಿಂದ ಸೂಚನೆ

ಪುತ್ತೂರು: ಬನ್ನೂರು ಮಹಿಳಾ ವಿದ್ಯಾರ್ಥಿ ವಸತಿ ನಿಲಯ ಬಳಿ 3 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಈಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಿಕ ಯಚ್ಚರೇಶ್ ಅವರೊಂದಿಗೆ ನಗರಸಭಾ ಪೌರಾಯುಕ್ತ ಬದ್ರುದ್ದಿನ್ ಸೌದಗರ್, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ ಭೇಟಿ ನೀಡಿ ರೋಗ ಹರಡದಂತೆ ಮುನ್ನೇಚ್ಚರಿಕೆ ವಹಿಸಲು ತಿಳಿಸಿದರು. ಬಳಿಕ ವಠಾರದಲ್ಲಿ ನಗರಸಭಾ ವತಿಯಿಂದ […]

ಬನ್ನೂರು ಮಹಿಳಾ ವಿದ್ಯಾರ್ಥಿ ವಸತಿ ನಿಲಯದಲ್ಲಿ ಡೆಂಗ್ಯೂ ಪ್ರಕರಣ ಪತ್ತೆ | ಮುಂಜಾಗ್ರತಾ ಕ್ರಮ ವಹಿಸುವಂತೆ ನಗರಸಭೆ ಅಧಿಕಾರಿಗಳಿಂದ ಸೂಚನೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ಸಂಘ , ಟ್ರೈನಿಂಗ್‌ ಆ್ಯಂಡ್‌ ಪ್ಲೇಸ್‌ಮೆಂಟ್‌ ಸೆಲ್‌ ಹಾಗೂ ಸೀನಿಯರ್‌ ಚೇಂಬರ್‌ ಇಂಟರ್‌ನ್ಯಾಶನಲ್ ಪುತ್ತೂರು ರೀಜನ್‌ಗಳ ಸಯೋಗದಲ್ಲಿ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ “ಅನ್‌ಲಾಕಿಂಗ್‌ ದ ಪಾಥ್‌ : ನ್ಯಾವಿಗೇಟಿಂಗ್‌ ಕರಿಯರ್‌ ಇನ್‌ ಬ್ಯಾಂಕಿಂಗ್‌ ಸೆಕ್ಟರ್‌” ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊರವರು ಬ್ಯಾಂಕಿಂಗ್‌ ಒಂದು ಬಹಳಷ್ಟು ಉದ್ಯೋಗಾವಕಾಶಗಳಿರುವ ಕ್ಷೇತ್ರ. ಬ್ಯಾಂಕಿಂಗ್ ಕ್ಷೇತ್ರವು ಜಾಗತಿಕ ಆರ್ಥಿಕ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಬ್ಯಾಂಕಿಂಗ್‌ ಕ್ಷೇತ್ರದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ Read More »

800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ : ದ ಕ ಜಿಲ್ಲಾ ಕ.ಸಾ.ಪ  – “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆ -2

ಪುತ್ತೂರು: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ  ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ. ಈ ಶಿಲಾ ಶಾಸನವು ಸುಮಾರು 30 ಇಂಚು ಎತ್ತರ ಹಾಗೂ 16 ಇಂಚು ಅಗಲ , 4 ಇಂಚು ದಪ್ಪ ಇದೆ. ಶಾಸನದ ಮುಖ್ಯ ಪಠ್ಯವನ್ನು 14 ಇಂಚು ಅಗಲ ಹಾಗೂ 17 ಇಂಚು ಎತ್ತರದ ಅಳತೆಯಲ್ಲಿ  ಶಿಲೆಯನ್ನು ಅರ್ಧ ಇಂಚು ಒಳಭಾಗಕ್ಕೆ ಕೊರೆದು ಹೊರ ಭಾಗದಲ್ಲಿ  ಚೌಕ

800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ : ದ ಕ ಜಿಲ್ಲಾ ಕ.ಸಾ.ಪ  – “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆ -2 Read More »

ಮೇ.25 : ಖ್ಯಾತ ಕೃಷಿ ಉಪಕರಣಗಳ  ತಯಾರಿಕಾ ಸಂಸ್ಥೆ “ಎಸ್.ಆರ್.ಕೆ. ಲ್ಯಾಡರ್ಸ್” ನ ರಜತ ಸಂಭ್ರಮದ ಸಮಾರೋಪ ಸಮಾರಂಭ | ನಿರಂತರ 12 ಗಂಟೆಗಳ ಕಾಲ ಮೇಳೈಸಲಿದೆ ಸಾಂಸ್ಕೃತಿಕ ಕಾರ್ಯಕ್ರಮ : ಪತ್ರಿಕಾಗೋಷ್ಠಿಯಲ್ಲಿ ಕೇಶವ ಅಮೈ

ಪುತ್ತೂರು: ಖ್ಯಾತ ಕೃಷಿ ಉಪಕರಣಗಳ ತಯಾರಿಕಾ ಸಂಸ್ಥೆ ಎಸ್‍ ಆರ್‍ ಕೆ. ಲ್ಯಾಡರ್ಸ್ ನ ರಜತ ಸಂಭ್ರಮದ ಸಮಾರೋಪ ಸಮಾರಂಭ ವಿವಿಧ ಸಾಂಸ್ಕೃತಿ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಕಡಬ ತಾಲೂಕಿನ ಕೊಯಿಲ ಗ್ರಾಮದ ಕಲಾಯಿಗುತ್ತುವಿನಲ್ಲಿ ನಡೆಯಲಿದೆ ಎಂದು ಎಸ್‍ ಆರ್‍ ಕೆ. ಲ್ಯಾಡರ್ಸ್ ಸಂಸ್ಥೆಯ ಮಾಲಕ ಕೇಶವ ಅಮೈ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆ 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ನವೆಂಬರ್ 2023 ಕ್ಕೆ ಸಂಸ್ಥೆಯ ರಜತ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ

ಮೇ.25 : ಖ್ಯಾತ ಕೃಷಿ ಉಪಕರಣಗಳ  ತಯಾರಿಕಾ ಸಂಸ್ಥೆ “ಎಸ್.ಆರ್.ಕೆ. ಲ್ಯಾಡರ್ಸ್” ನ ರಜತ ಸಂಭ್ರಮದ ಸಮಾರೋಪ ಸಮಾರಂಭ | ನಿರಂತರ 12 ಗಂಟೆಗಳ ಕಾಲ ಮೇಳೈಸಲಿದೆ ಸಾಂಸ್ಕೃತಿಕ ಕಾರ್ಯಕ್ರಮ : ಪತ್ರಿಕಾಗೋಷ್ಠಿಯಲ್ಲಿ ಕೇಶವ ಅಮೈ Read More »

ಪ್ಲಾಸ್ಟಿಕ್ ಬಳಕೆ ಪರಿಶೀಲನೆ | ವಿವಿಧ ಅಂಗಡಿ ಮಳಿಗೆಗೆ ದಾಳಿ ಮಾಡಿದ ನಗರಸಭೆ

ಪುತ್ತೂರು: ಪ್ಲಾಸ್ಟಿಕ್ ಬಳಕೆ ಪರಿಶೀಲನೆ ಕುರಿತು ವಿವಿಧ ವಾಣಿಜ್ಯ ಮಳಿಗೆಗಳಿಗೆ ನಗರಸಭೆ ಇಂದು ದಾಳಿ ಮಾಡಿದೆ. ಕೋರ್ಟ್ ರೋಡ್, ಮುಖ್ಯ ರಸ್ತೆ ಹಾಗೂ ದರ್ಬೆಯ ಕೆಲವು ಅಂಗಡಿ ಮಳಿಗೆಗೆ ದಾಳಿ ಮಾಡಿದ ಅಧಿಕಾರಿಗಳು ವಿವಿಧ ಅಂಗಡಿ ಮಳಿಗೆಗಳಿಂದ ಸುಮಾರು 40 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಕಂದಾಯ ಅಧಿಕಾರಿ ಪಕೀರ ಮೂಲ್ಯ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಕಂದಾಯ ವಿಭಾಗದ ಸಿಬ್ಬಂದಿ ಪುರುಷೋತ್ತಮ್ ಹಾಗೂ ಸ್ವಚ್ಛತಾ

ಪ್ಲಾಸ್ಟಿಕ್ ಬಳಕೆ ಪರಿಶೀಲನೆ | ವಿವಿಧ ಅಂಗಡಿ ಮಳಿಗೆಗೆ ದಾಳಿ ಮಾಡಿದ ನಗರಸಭೆ Read More »

ಹೃದಯಾಘಾತದಿಂದ  ಮೃತ್ಯು : ಸಿಡಿಲಾಘಾತ ಶಂಕೆ

ಪುತ್ತೂರು : ಹೃದಯಾಘಾತದಿಂದ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ನಿವಾಸಿ ಪಿ.ಬಾಬು (55) ಮೃತಪಟ್ಟಿದ್ದಾರೆ. ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡಿ ಬಳಿಕ ಒಳ ಹೋದವರು ನೀರು ಕುಡಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟರು ಎನ್ನಲಾಗಿದೆ. ಸಿಡಿಲಾಘಾತ ಶಂಕೆ : ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡುತ್ತಿದ್ದು, ಸಿಡಿಲಾಘಾತದಿಂದ ಮೃತಪಟ್ಟಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ವೈದ್ಯಕೀಯ ರಿಪೋರ್ಟ್ ಬಂದ ಬಳಿಕವಷ್ಟೇ  ತಿಳಿದುಬರಬೇಕಿದೆ ಎಂದು ತಹಶೀಲ್ದಾರ್ ಕುಂಞಿ ಅಹಮ್ಮದ್ ತಿಳಿಸಿದ್ದಾರೆ.

ಹೃದಯಾಘಾತದಿಂದ  ಮೃತ್ಯು : ಸಿಡಿಲಾಘಾತ ಶಂಕೆ Read More »

ಕಾರಿನ ಮೇಲೆ ಮರ ಬಿದ್ದು ಕಾರು ಜಖಂ : ಇಬ್ಬರಿಗೆ ಗಾಯ

ವಿಟ್ಲ: ಚಲಿಸುತ್ತಿದ್ದಕಾರಿಮ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕುಕ್ಕರಬಟ್ಟುವಿನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಂಗಳೂರು ಮೂಲಕ ಕಾರು ಇದಾಗಿದ್ದು, ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೈಸೂರು ಕಡೆಗೆ ತೆರಳುತ್ತಿದ್ದಾಗ ಈ ಮರ ಕಾರಿನ ಮೇಲೆ ಬಿದ್ದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನ ಮೇಲೆ ಮರ ಬಿದ್ದು ಕಾರು ಜಖಂ : ಇಬ್ಬರಿಗೆ ಗಾಯ Read More »

ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ

ಪುತ್ತೂರು: ಪುತ್ತೂರಿನ ರೈ ಎಸ್ಟೇಟ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ಬಿಎಸ್‍ ಎಂ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ವಿಕಸನ ಫೌಂಡೇಶನ್, ಟಿಸಿಹೆಚ್‍ ಆರ್‍ ಆ್ಯಪ್‍, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಹತ್ತು ದಿನಗಳ ಆಫ್‍ ಲೈನ್ ಅಂಡ್ ಹಾಗೂ 15

ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ Read More »

ಮೇ 23 : ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ

ಪುತ್ತೂರು: ಕೆಯ್ಯೂರು ಡಾ.ಪಿ.ಬಿ.ರೈ ಪ್ರತಿಷ್ಥಾನ ಹಾಗೂ ಪವಿತ್ರ ನೆಲ್ಯಾಡಿ ವಿವಾ ಎಂಟರ್ ಪ್ರೈಸಸ್ ಜಂಟಿ ಆಶ್ರಯದಲ್ಲಿ ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ ಮೇ 23 ಗುರುವಾರ ಬೆಳಿಗ್ಗೆ 10 ಕ್ಕೆ ಪುತ್ತೂರು ಬಂಟರ ಭವನದಲ್ಲಿ ನಡೆಯಲಿದೆ ಎಂದು ಪಿ.ಬಿ.ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಾ ಕಿಸಾನ್ ಕಿಂಗ್ ಅಡಕೆ, ತೆಂಗು ಸೇರಿದಂತೆ ಪ್ರತಿಯೊಂದು ಬೆಳೆಗಳಿಗೆ ಉತ್ತಮ ಸಾವಯವ ಔಷಧಿಯ

ಮೇ 23 : ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ Read More »

155 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಮೂಲಭೂತ ಸೌಕರ್ಯ| ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನೂತನ ಕಟ್ಟಡದ ಅವಶ್ಯಕತೆ ಹೊಂದಿರುವ ಶಾಲೆ

ಪುತ್ತೂರು:  ನಗರದಲ್ಲಿ 155 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಎಲ್ಲಾ ವಿಧದಲ್ಲೂ ಅಭಿವೃದ್ಧಿಯಾಗಬೇಕಿದೆ. ನಗರದ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರಿನ ಪ್ರಾಚೀನ ಶಾಲೆಗಳ ಪೈಕಿ ಮೊದಲ ಶಾಲೆಯಾಗಿದೆ. ಸುಮಾರು 3.5 ಎಕ್ರೆ ಜಾಗದ ಒಂದು ಬದಿಯಲ್ಲಿ ಈ ಶಾಲೆಯಿದ್ದು, ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿದ್ಯಾರ್ಜನೆಗೆ ಹೆಸರುವಾಸಿಯಾಗಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ

155 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಮೂಲಭೂತ ಸೌಕರ್ಯ| ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನೂತನ ಕಟ್ಟಡದ ಅವಶ್ಯಕತೆ ಹೊಂದಿರುವ ಶಾಲೆ Read More »

error: Content is protected !!
Scroll to Top