ಪುತ್ತೂರು

ಯುವಕರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಗೆ ಸಮಗ್ರ ವಿಧಾನ ಅತ್ಯಗತ್ಯ | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಡಾ.ಬಿ.ವೆಂಕಟರಾಜ

ಪುತ್ತೂರು: ಸುಸ್ಥಿರ ಭವಿಷ್ಯವನ್ನು ರಚಿಸಲು ನಾವು ಇಂದಿನ ಯುವಕರನ್ನು ಸಶಕ್ತಗೊಳಿಸಬೇಕು. ಅಗತ್ಯ ಕೌಶಲ್ಯ ಮತ್ತು ಜ್ಞಾನದೊಂದಿಗೆ ಅವರನ್ನು ಸಜ್ಜುಗೊಳಿಸುವ ಮೂಲಕ ನಾಳೆಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ಭವಿಷ್ಯದ ಬದುಕಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದು ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವೆಲೋಪ್ ಮೆಂಟ್ ನ ಅರ್ಥಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಬಿ. ವೆಂಕಟರಾಜ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಇಂದಿನ ಯುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಹೊಸಯುಗದ ಕೌಶಲ್ಯದ ಅಗತ್ಯತೆಯ ಬಗೆಗಿನ ವಿಶೇಷ ಉಪನ್ಯಾಸ […]

ಯುವಕರು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲ್ಯ ಅಭಿವೃದ್ಧಿಗೆ ಸಮಗ್ರ ವಿಧಾನ ಅತ್ಯಗತ್ಯ | ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಡಾ.ಬಿ.ವೆಂಕಟರಾಜ Read More »

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ | ಚಿಕಿತ್ಸೆಗೆ ಸಹೃದಯಿಗಳಿಂದ ಬೇಕಾಗಿದೆ ಧನಸಹಾಯ

ಭವಿಷ್ಯದ ಸುಂದರ ಬದುಕಿನ ಕನಸಿನೊಂದಿಗೆ ಹೆಜ್ಜೆ ಹಾಕಬೇಕಾಗಿದ್ದ ಬಾಲಕ ಮಾ.ಧನ್ವಿತ್ ಇದೀಗ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗೆ ಸಹೃದಯಿಗಳಿಂದ ಧನ ಸಹಾಯ ಬೇಕಾಗಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ನಿವಾಸಿಗಳು, ಶ್ರಮ ಭರಿತ ದುಡಿಮೆಯ ಆದಾಯದಿಂದ ಕಷ್ಟದ ಬದುಕು ಸಾಗಿಸುತ್ತಿರುವ ಮೋನಪ್ಪ  ಪೂಜಾರಿ ಹಾಗೂ ವನಿತಾ ದಂಪತಿ ಕಿರಿಯ ಪುತ್ರ 13 ವರ್ಷದ ಧನ್ವಿತ್ ಎಲ್ಲಾ ಮಕ್ಕಳಂತೆ ಆಟದಲ್ಲೂ ಪಾಠದಲ್ಲೂ ಸದಾ ಚಟುವಟಿಕೆಯಿಂದ್ದಿದ್ದ. ಮೂರು ತಿಂಗಳ ಹಿಂದೆ ತರಗತಿ ಪರೀಕ್ಷೆ ಸಂಧರ್ಭದಲ್ಲಿ ಇದ್ದಕಿದ್ದಂತೆ ವಾಂತಿ ಮಾಡಿ ಅನಾರೋಗ್ಯಕ್ಕೆ

ಅನಾರೋಗ್ಯಕ್ಕೆ ತುತ್ತಾದ ಧನ್ವಿತ್ | ಚಿಕಿತ್ಸೆಗೆ ಸಹೃದಯಿಗಳಿಂದ ಬೇಕಾಗಿದೆ ಧನಸಹಾಯ Read More »

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು: ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಪಡೀಲು ವಿಜಯನಗರ ಬಡವಾಣೆಯಲ್ಲಿರುವ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕುರಿತು ಇಂದು ಬೆಳಕಿಗೆ ಬಂದಿದೆ. ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸಂಗೀತ ಕಾರ್ಯಕ್ರಮಕ್ಕೆ ಮೈಸೂರಿಗೆ ಹೋಗಿದ್ದು, ಅವರ ಪುತ್ರ ಬೆಂಗಳೂರಿಗೆ ಹೋಗಿದ್ದರು. ಇಂದು ಮನೆಗೆ ಹಿಂದಿರುಗಿದಾಗ ಕಳವಾದ ಕುರಿತು ಬೆಳಕಿಗೆ ಬಂದಿದೆ. ಅವರು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲ ಬೀಗ ಮುರಿದು

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

ಅಕ್ರಮ ಗೋ ಸಾಗಾಟ : ಸ್ಥಳೀಯರಿಂದ ದಿಗ್ಬಂಧನ

ಪುತ್ತೂರು: ಅಕ್ರಮ ಗೋವುಗಳನ್ನು ಪಿಕಪ್ ನಲ್ಲಿ ಸಾಗಾಟ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿದ ಮತ್ತು ಜೀಪು ಚಾಲಕ  ಹಾಗೂ ಇನ್ನೋರ್ವರಿಗೆ ದಿಗ್ಭಂಧನ ವಿಧಿಸಿದ ಘಟನೆ ಎಲಿಮಲೆಯ ಅಂಬೆಕಲ್ಲಿನಲ್ಲಿ ನಡೆದಿದೆ. ಪಡ್ಡಾಯರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರು ದಿಗ್ಭಂಧನಕ್ಕೆ ಒಳಗಾದವರು. ಸುಳ್ಯದ ಎಲಿಮಲೆಯ ಅಂಬೆಕಲ್ಲು ಕಡೆಯಿಂದ ಇಂದು ಮುಂಜಾನೆ 4 ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಪಣೆ ಎಂಬಲ್ಲಿ ಸ್ಥಳೀಯರು ವಾಹನವನ್ನು ಅಡ್ಡ ಗಟ್ಟಿದರು. ಈ

ಅಕ್ರಮ ಗೋ ಸಾಗಾಟ : ಸ್ಥಳೀಯರಿಂದ ದಿಗ್ಬಂಧನ Read More »

ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ಭಾರತ ತಂಡಕ್ಕೆ ಧನ್ವಿತ್ ಆಯ್ಕೆ

ಪುತ್ತೂರು: ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯು ವಿದ್ಯಾರ್ಥಿ ಧನ್ವಿತ್ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ (ಆರ್‌ಎಲ್‌ಎಸ್‌ಎಸ್) ವತಿಯಿಂದ ನಡೆಸಲ್ಪಟ್ಟ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್‌ನ ಆಯ್ಕೆ ಪ್ರಕ್ರಿಯೆಯು ವಿಶಾಖಪಟ್ಟಣದಲ್ಲಿ ಮೇ ತಿಂಗಳ 15, 16 ಹಾಗೂ 19 ರಂದು ನಡೆದಿತ್ತು. 200 ಮೀ. ಅಬ್ಸ್ಟೆಕಲ್, 200 ಮೀ. ಸೂಪರ್

ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ಭಾರತ ತಂಡಕ್ಕೆ ಧನ್ವಿತ್ ಆಯ್ಕೆ Read More »

ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷೆಯಾಗಿ ಪ್ರತಿಮಾ ಹೆಗ್ಡೆ, ಉಪಾಧ್ಯಕ್ಷರಾಗಿ ಪ್ರೊ.ಝೇವಿಯರ್ ಡಿಸೋಜಾ, ಕಾರ್ಯದರ್ಶಿಯಾಗಿ ತೇಜಸ್ವಿ ಭಟ್, ಕೋಶಾಧಿಕಾರಿಯಾಗಿ ಅಭಿಷೇಕ್ ಸುವರ್ಣ

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ 2024-26ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಪ್ರತಿಮಾ ಹೆಗ್ಡೆ, ಉಪಾಧ್ಯಕ್ಷರಾಗಿ ಪ್ರೊ|ಝೇವಿಯರ್ ಡಿ’ಸೋಜ, ಪ್ರಧಾನ ಕಾರ್ಯದರ್ಶಿಯಾಗಿ ತೇಜಸ್ವಿ ಭಟ್, ಕೋಶಾಧಿಕಾರಿಯಾಗಿ ಅಭಿಷೇಕ್ ಸುವರ್ಣ, ಜೊತೆ ಕಾರ್ಯದರ್ಶಿಯಾಗಿ ಸೋಮಶೇಖರ್ ರೈ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರುಫೀನಾ ರೊಡ್ರಿಗಸ್, ಸುನಿಲ್ ಕುಮಾರ್ ಶೆಟ್ಟಿ, ವೆಂಕಟೇಶ್ ಪ್ರಸಾದ್,

ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷೆಯಾಗಿ ಪ್ರತಿಮಾ ಹೆಗ್ಡೆ, ಉಪಾಧ್ಯಕ್ಷರಾಗಿ ಪ್ರೊ.ಝೇವಿಯರ್ ಡಿಸೋಜಾ, ಕಾರ್ಯದರ್ಶಿಯಾಗಿ ತೇಜಸ್ವಿ ಭಟ್, ಕೋಶಾಧಿಕಾರಿಯಾಗಿ ಅಭಿಷೇಕ್ ಸುವರ್ಣ Read More »

ಕರ್ನಾಟಕ ವಿದ್ಯುತ್ ಪ್ರಸರಣಾ ನಿಯಮಿತದ ನೌಕರರ ಸಂಘದ 22ನೇ ವಾರ್ಷಿಕ ಮಹಾ ಅಧಿವೇಶನ | ಪುತ್ತೂರು ವಿಭಾಗದಿಂದ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ

ಪುತ್ತೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಯಮಿತದ ನೌಕರರ ಸಂಘದ 22ನೇ ವಾರ್ಷಿಕ ಮಹಾ ಅಧಿವೇಶನಕ್ಕೆ ಪುತ್ತೂರು ವಿಭಾಗದ ಮೆಸ್ಕಾಂನಿಂದ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮೆಸ್ಕಾಂ ಬೆಟ್ಟಂಪಾಡಿ ಶಾಖೆಯ ಕಿರಿಯ ಇಂಜಿನಿಯರ್ ಪುತ್ತು ಜೆ., ಕುಂಬ್ರ ಶಾಖೆಯ ಕಿರಿಯ ಇಂಜಿನಿಯರ್ ರವೀಂದ್ರ ಎಂ. ಹಾಗೂ ಎಲ್.ಟಿ ರೇಟಿಂಗ್ ನ ಪವರ್ ಮೆನ್ ಕೆ.ಗೋವರ್ಧನ ಗೆಲುವು ಸಾಧಿಸಿದ್ದಾರೆ. ಬುಧವಾರ ಚುನಾವಣಾ ಪ್ರಕ್ರಿಯೆಗಳು ಪುತ್ತೂರು ವಿಭಾಗದ ಮೆಸ್ಕಾಂ ಕಚೇರಿಯಲ್ಲಿ ನಡೆಯಿತು. ಪುತ್ತೂರು ಪ್ರಾಥಮಿಕ ಸಮಿತಿಯ ನೂರು ಮಂದಿ ಪ್ರತಿನಿಧಿಗಳ

ಕರ್ನಾಟಕ ವಿದ್ಯುತ್ ಪ್ರಸರಣಾ ನಿಯಮಿತದ ನೌಕರರ ಸಂಘದ 22ನೇ ವಾರ್ಷಿಕ ಮಹಾ ಅಧಿವೇಶನ | ಪುತ್ತೂರು ವಿಭಾಗದಿಂದ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ Read More »

ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಿವಾಸಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಸಂತ ಫಿಲೋಮಿನಾ ಕಾಲೇಜಿನಲ್ಲಿ ಗಣಿತ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ತನ್ನ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಮನೆ ಪಾಠ ಹೇಳಿಕೊಡುತ್ತಿದ್ದರು. ಮೃತರು ಪತ್ನಿ, ಪುತ್ರ, ನಾಲ್ವರು ಪುತ್ರಿಯರು, ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ Read More »

ಮಾಜಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ | ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಜ್ವಲ್ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ.17 ರಂದು ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೈ ಎಂಬಾತ ಕೀಳು ಮಟ್ಟದ ಅವಮಾನಕಾರಕ ಪದಗಳನ್ನು ಬಳಸಿ ತೇಜೋವಧೆ ಮಾಡಿದ್ದು, ಸಾಮಾಜಿಕ ಜಾಲತಾಣದ ಮುಖಾಂತರ ರೋಡಿನಲ್ಲಿ “ಕಲ್ಲೇಟು ಬೀಳುವುದು ಖಚಿತ ” ಎಂಬುದಾಗಿ ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ ಮಾಜಿ ಶಾಸಕರು ಪುತ್ತೂರು ನಗರ ಠಾಣೆಗೆ

ಮಾಜಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ | ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು Read More »

ಮೇ 23 : ಕೆಲಿಂಜ-ಪಾಲ್ತಿಮಾರ್ “ಗೋಕುಲ ನಿಲಯ’ದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಕಲ್ಲುರ್ಟಿ ದೈವದ ಕೋಲ

ಪುತ್ತೂರು: ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಲ್ಲುರ್ಟಿ ದೈವದ ಕೋಲ ಕೆಲಿಂಜ-ಪಾಲ್ತಿಮಾರ್ ‘ಗೋಕುಲ ನಿಲಯ’ದಲ್ಲಿ ಮೇ 23 ಗುರುವಾರ ಸಂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆಯಾಗಲಿದೆ. ಬಳಿಕ ರಾತ್ರಿ 9 ಕ್ಕೆ ಕಲ್ಲುರ್ಟಿ ದೈವದ ಕೋಲ ನಡೆಯಲಿದೆ. ಆ ಪ್ರಯುಕ್ತ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಪ್ರಸಾದ ಸ್ವೀಕರಿಸಿ, ಶ್ರೀ ದೈವ-ದೇವರ ಕೃಪೆಗೆ ಪಾತ್ರರಾಗಬೇಕಾಗಿ ಲಲಿತ ಮತ್ತು ಕೃಷ್ಣಪ್ಪ ಗೌಡ ತಿಳಿಸಿದ್ದಾರೆ.

ಮೇ 23 : ಕೆಲಿಂಜ-ಪಾಲ್ತಿಮಾರ್ “ಗೋಕುಲ ನಿಲಯ’ದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಕಲ್ಲುರ್ಟಿ ದೈವದ ಕೋಲ Read More »

error: Content is protected !!
Scroll to Top