ಮಳೆಯಿಂದಾಗಿ ಗುಂಡಿಗಳಿಂದ ಕೆಟ್ಟು ಹೋದ ರಸ್ತೆ | ಪುತ್ತೂರು ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಪರಿಶೀಲಿಸಿ ತಕ್ಷಣ ದುರಸ್ಥಿಗೆ ಸೂಚನೆ
ಪುತ್ತೂರು: ವಾಡಿಕೆಗಿಂತ ಹೆಚ್ಚು ಹಾಗೂ ನಿರಂತರ ಮಳೆ ಸುರಿದ ಪರಿಣಾಮ ನಗರಸಭೆಯ ಬಹುಪಾಲು ರಸ್ತೆಗಳು ಹದಗೆಟ್ಟು ಗುಂಡಿಗಳಾಗಿ ಸಂಚಾರಕ್ಕೆ ಸಂಚಕಾರ ಎದುರಾಗಿರುವ ಹಿನ್ನಲೆಯಲ್ಲಿ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ಜೊತೆ ನಗರಸಭೆ ಮುಖ್ಯರಸ್ತೆಯಲ್ಲಿ ಪರಿಶೀಲನೆ ನಡೆಸಿ ತಕ್ಷಣದ ಪರಿಹಾರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇ ತಿಂಗಳಿನಿಂದಲೇ ಮಳೆ ಬಿಡುವಿಲ್ಲದೆ ಸುರಿದಿದ್ದರಿಂದ ರಸ್ತೆಗಳು ಹದಗೆಟ್ಟಿದೆ. ಹೀಗಾಗಿ, ಹದಗೆಟ್ಟ ರಸ್ತೆಗಳು ಹಾಳಾಗಿ ಹೊಂಡ ಗುಂಡಿಗಳಾಗಿ ಸಂಚಾರಕ್ಕೆ ಅಡ್ಡಿಯಾಗಿವೆ. ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೂ ಮತ್ತೆ […]










