ವಿಧಾನ ಪರಿಷತ್ ಉಪಚುನಾವಣೆ : ಪುತ್ತೂರಿನಲ್ಲಿ ಜನಪ್ರತಿನಿಧಿ, ಕಾರ್ಯಕರ್ತರ ಸಮಾವೇಶ | ಈ ಬಾರಿಯ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ನೀಡುವ ಚುನಾವಣೆ : ಕ್ಯಾ.ಬ್ರಿಜೇಶ್ ಚೌಟ
ಪುತ್ತೂರು: ಈ ಬಾರಿಯ ವಿಧಾನ ಪರಿಷತ್ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ಕೊಡುವಂತಹ ಚುನಾವಣೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು. ಅವರು ಭಾನುವಾರ ನಗರದ ಜೈನಭವನದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಂದ ಕಾರ್ಯಕರ್ತರನ್ನು ಆರಿಸುವ ಚುನಾವಣೆ ಇದಾಗಿದ್ದು, ಈ ಸ್ಥಾನಕ್ಕೆ ನ್ಯಾಯ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ ಸ್ಥಾನಕ್ಕೆ, ಸ್ಥಳೀಯ ಜನಪ್ರತಿನಿಧಿಗಳ ಸಮಸ್ಯೆಗಳಿಗೆ ಧ್ವನಿವಾಗಲು ಕಿಶೋರ್ […]










