ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು ಬೇಡಿಕೆ ಇರುವಂಥದ್ದು. ಪಾಶ್ಚಿಮಾತ್ಯ ಸಂಪ್ರದಾಯಕ್ಕೆ ಹೋಲಿಸಿದರೆ ಭಾರತೀಯ ಮನಃಶಾಸ್ತ್ರದಲ್ಲಿ ಬಹಳ ವ್ಯತ್ಯಾಸವಿದೆ. ಮನುಷ್ಯ ಯೋಗ ಮತ್ತು ಧ್ಯಾನವನ್ನು ಅಭ್ಯಾಸಿಸುವ ಮೂಲಕ ದೈವತ್ವವನ್ನು ಸಾಧಿಸುತ್ತಾನೆ. ಮನಸ್ಸನ್ನು ಲಗಾಮಿಲ್ಲದ ಕುದುರೆ ಎಂದು ಕೃಷ್ಣ ಭಗವದ್ ಗೀತೆಯಲ್ಲಿ ಹೇಳಿದ್ದಾನೆ. ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಹಾಗೂ ಧ್ಯಾನಅತ್ಯಗತ್ಯ. ಮನುಷ್ಯನ ಮೆದುಳಿನ ಸ್ಥಿತಿಗತಿಯು ಆತ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಡಾ.ಸುಧೀರ್ ಕೆ.ವಿ ಹೇಳಿದರು. ಇವರು ವಿವೇಕಾನಂದ […]

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನೆ Read More »

ಅದ್ದೂರಿಯಾಗಿ ನಡೆದ ಪ್ರತಿಷ್ಠಿತ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನವರ ಗೋಲ್ಡನ್ ಗರ್ಲ್ಸ್ ಆಫ್‍ ಜಿ.ಎಲ್‍. ನ ಫೈನಲ್ ಕಾರ್ಯಕ್ರಮ

ಪುತ್ತೂರು: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರ ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.ನ ಫೈನಲ್ ಕಾರ್ಯಕ್ರಮ ಜಿ.ಎಲ್. ವನ್ ಮಾಲ್ ನಲ್ಲಿ ನಡೆಯಿತು. ಈ ಗೋಲ್ಡನ್ ಗರ್ಲ್ಸ್ ಆಯ್ಕೆಗಾಗಿ ಆಸಕ್ತ ಸ್ಥಳೀಯ ರೂಪದರ್ಶಿಗಳಿಂದ ಫೋಟೋಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು ಒಂದು ಸಾವಿರದಷ್ಟು ಆಕಾಂಕ್ಷಿಗಳು ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.’ ಆಗುವ ಕನಸಿನೊಂದಿಗೆ ತಮ್ಮ ಆಕರ್ಷಕ ಫೋಟೋಗಳನ್ನು ಕಳುಹಿಸಿದ್ದರು. ಈ ಪೈಕಿ ವಿವಿಧ ಮಾನದಂಡಗಳಿಗೆ ಅನುಸಾರವಾಗಿ ಅಂತಿಮ 20 ರೂಪದರ್ಶಿಗಳನ್ನು ಆಯ್ಕೆ ಮಾಡಲಾಯಿತು. ಹೀಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳಲ್ಲಿ

ಅದ್ದೂರಿಯಾಗಿ ನಡೆದ ಪ್ರತಿಷ್ಠಿತ ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ ನವರ ಗೋಲ್ಡನ್ ಗರ್ಲ್ಸ್ ಆಫ್‍ ಜಿ.ಎಲ್‍. ನ ಫೈನಲ್ ಕಾರ್ಯಕ್ರಮ Read More »

ಕೆದಿಲ ಎಸ್. ಆರ್. ಕೆ ನಾಸಿಕ್ ಬ್ಯಾಂಡ್ ತಂಡದಿಂದ ಅಗ್ನಿವೀರ್ ಗೆ ಆಯ್ಕೆಯಾದ ಅವಿನ್ ರಿಗೆ ಗೌರವಾರ್ಪಣೆ

ಕೆದಿಲ: ಅಗ್ನಿಪತ್ ಯೋಜನೆಯ ಅಗ್ನಿವೀರ್ ಆಗಿ ಆಯ್ಕೆಯಾದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತೆರಳುತ್ತಿರುವ ನಮ್ಮ ಎಸ್.ಆರ್.ಕೆ ನಾಸಿಕ್ ಬ್ಯಾಂಡ್ ತಂಡದ ಯುವ ಪ್ರತಿಭೆ ಕಾವು ಮಾಣಿಯಡ್ಕ ಚಂದ್ರಶೇಖರ ಮತ್ತು ಗೀತಾ ದಂಪತಿಯ ಪುತ್ರ ಅವಿನ್ ಎಂ ಅವರನ್ನು ಕೆದಿಲ ಶ್ರೀ ರಾಮ್ ನಾಸಿಕ್ ಬ್ಯಾಂಡ್ (ಎಸ್.ಆರ್.ಕೆ) ತಂಡದ ವತಿಯಿಂದ ಹಿರಿಯರಾದ ಗೌರವಿಸಲಾಯಿತು. ತಂಡದ ಹಿರಿಯರಾದ ಶಿವರಾಮ ಭಟ್ ವಳಂಗಜೆ, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರ ಸಮ್ಮುಖದಲ್ಲಿ ಶಾಲು, ಹಾರ ಹಾಕಿ, ಫಲಪುಷ್ಪ

ಕೆದಿಲ ಎಸ್. ಆರ್. ಕೆ ನಾಸಿಕ್ ಬ್ಯಾಂಡ್ ತಂಡದಿಂದ ಅಗ್ನಿವೀರ್ ಗೆ ಆಯ್ಕೆಯಾದ ಅವಿನ್ ರಿಗೆ ಗೌರವಾರ್ಪಣೆ Read More »

ಕಲಾವಿದ ಗುಡ್ಡಪ್ಪ ಬಲ್ಯರಿಗೆ ರಾಮನಗರ ಶ್ರೀ ಶಾರದೋತ್ಸವ ಸಮಿತಿಯಿಂದ ಸನ್ಮಾನ

ಉಪ್ಪಿನಂಗಡಿ: ರಾಮನಗರದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಸೌಹಾರ್ದ ಯಕ್ಷಗಾನ ಸಮಿತಿ  ಸಹಯೋಗದಲ್ಲಿ  ಶ್ರೀ ಶಾರದಾ ಕಲಾಮಂಟಪ ಜರಗಿದ 30ನೇ ವರ್ಷದ ಶ್ರೀ ಶಾರದೋತ್ಸವ  ಕಾರ್ಯಕ್ರಮದಲ್ಲಿ ಉಪನ್ಯಾಸಕ ಅರ್ಥಧಾರಿ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಲಾಯಿತು.  ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಉಮೇಶ ಶೆಣೈ.ಯನ್, ಶಾರದೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ  ರಾಮಚಂದ್ರ ಮಣಿಯಾಣಿ, ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಖಜಾಂಜಿ ಕಂಗ್ವೆ ವಿಶ್ವನಾಥ ಶೆಟ್ಟಿ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಿದರು. ಕಾರ್ಯದರ್ಶಿ ದೀಪಕ್ ಪೈ, ಸಹ ಕಾರ್ಯದರ್ಶಿ ಗಣೇಶ್ ಭಂಡಾರಿ, ಭೂಸೇನೆಯ ಮಾಜಿ

ಕಲಾವಿದ ಗುಡ್ಡಪ್ಪ ಬಲ್ಯರಿಗೆ ರಾಮನಗರ ಶ್ರೀ ಶಾರದೋತ್ಸವ ಸಮಿತಿಯಿಂದ ಸನ್ಮಾನ Read More »

ಶ್ರೀ ಮಹಾಭಾರತ ಸರಣಿಯ 50 ನೇ ತಾಳಮದ್ದಳೆ ಅಭಿಮನ್ಯು ಕಾಳಗ | ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ ನಿಮಿತ್ತ ನಡೆಸುತ್ತಿರುವ  ಮಹಾಭಾರತ ಸರಣಿಯ 100 ತಾಳಮದ್ದಳೆಗಳಲ್ಲಿ 50ನೇ ತಾಳಮದ್ದಳೆ ‘ಅಭಿಮನ್ಯು ಕಾಳಗ’ ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು. ಶ್ರೀ ಶಾರದೋತ್ಸವ ಸಮಿತಿ ಪ್ರಾಯೋಜಕತ್ವದಲ್ಲಿ ನಡೆದ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ ಆಚಾರ್ಯ ಅಲಂಕಾರು, ಸುರೇಶ್ ರಾವ್ ಬನ್ನೆಂಗಳ, ಹಿಮ್ಮೇಳದಲ್ಲಿ ಶ್ರೀಪತಿಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ , ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ

ಶ್ರೀ ಮಹಾಭಾರತ ಸರಣಿಯ 50 ನೇ ತಾಳಮದ್ದಳೆ ಅಭಿಮನ್ಯು ಕಾಳಗ | ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ Read More »

ಅಗ್ನಿವೀರ್ ಗೆ ಆಯ್ಕೆಯಾದ ಅವಿನ್ ಎಂ. ಅವರಿಗೆ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಗೌರವಾರ್ಪಣೆ

ಕಾವು: ಅಗ್ನಿಪತ್ ಯೋಜನೆಯ ಅಗ್ನಿವೀರ್ ಗೆ ಆಯ್ಕೆಗೊಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ತೆರಳುತ್ತಿರುವ ಕಾವು ಮಾಣಿಯಡ್ಕ ಚಂದ್ರಶೇಖರ ಮತ್ತು ಗೀತಾ ದಂಪti ಪುತ್ರ ಅವಿನ್ ಎಂ. ಅವರನ್ನು ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗೌರವಿಸಲಾಯಿತು. ಸಮಿತಿಯ ಗೌರವಾದ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಪೇಟ ತೋಡಿಸಿ ಶಾಲು, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ, ಗೌರವ

ಅಗ್ನಿವೀರ್ ಗೆ ಆಯ್ಕೆಯಾದ ಅವಿನ್ ಎಂ. ಅವರಿಗೆ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಗೌರವಾರ್ಪಣೆ Read More »

ಅ.16 ರಿಂದ 19 : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರಮಟ್ಟದ ವಾಲಿಬಾಲ್‍ ಪಂದ್ಯಾಟ | 6 ಕ್ರೀಡಾಂಗಣದಲ್ಲಿ ನಡೆಯಲಿದೆ ಪಂದ್ಯಾಟ, 2 ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಕಾರದೊಂದಿಗೆ ವಿದ್ಯಾಭಾರತಿ ಶಿಕ್ಷಣ ಸಂಸ್ಥಾನಂಗೆ ಸಂಯೋಜನೆಗೊಂಡಿರುವ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ ಅ.16 ರಿಂದ 19 ರ ವರೆಗೆ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್‍ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂರು ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, 6 ರಿಂದ 8 ನೇ ತರಗತಿ ಬಾಲವರ್ಗ, 9

ಅ.16 ರಿಂದ 19 : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರಮಟ್ಟದ ವಾಲಿಬಾಲ್‍ ಪಂದ್ಯಾಟ | 6 ಕ್ರೀಡಾಂಗಣದಲ್ಲಿ ನಡೆಯಲಿದೆ ಪಂದ್ಯಾಟ, 2 ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ Read More »

ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು, ಚಾಲಕ ಗಂಭೀರ

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಡಿಕೆ ತೋಟಕ್ಕೆ ಬಿದ್ದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಬಿ.ಸಿ.ರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಕೋಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಭಾಗೀರಥಿ ಅವರು ಮಂಗಳೂರು ಕೊಡಿಯಾಲ್ ಬೈಲು ನಿವಾಸಿ ಪಿಡಬ್ಲೂಡಿ ಇಂಜಿನಿಯರ್ ಗೋಪಾಲರವರ ಸಹೋದರಿ ಎನ್ನಲಾಗಿದೆ. ಚಾಲಕ ರೂಪೇಶ್ (40) ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರೂಪೇಶ್ ಅವರ ಪತ್ನಿ ಸುಚಿತ್ರ

ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು, ಚಾಲಕ ಗಂಭೀರ Read More »

ಅ.17 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” | ಯುಗಳ ನೃತ್ಯ- ಕಲಾದೀಪ ನೃತ್ಯ ದಂಪತಿ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ ನೃತ್ಯ ಪ್ರದರ್ಶನ

ಪುತ್ತೂರು: ನಗರದ ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” ಅ.17 ಗುರುವಾರ ಸಂಜೆ 5.30 ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆ ಮಾಡುವರು. ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಆಳ್ವಾಸ್

ಅ.17 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” | ಯುಗಳ ನೃತ್ಯ- ಕಲಾದೀಪ ನೃತ್ಯ ದಂಪತಿ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ ನೃತ್ಯ ಪ್ರದರ್ಶನ Read More »

ಕಾಡುಕೋಣ ಬೇಟೆ | ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡದಿಂದ ಪತ್ತೆ | ಆರೋಪಿಗಳು ಪರಾರಿ

ಉಪ್ಪಿನಂಗಡಿ : ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಹಾಡಹಗಲೇ ನಾಲ್ವರು ಬೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಕೊಂದು ಒಣ ಮಾಂಸವನ್ನಾಗಿ ಪರಿವರ್ತಿಸಿದ ಘಟನೆಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ನಿಡ್ಲೆ ಗ್ರಾಮದ ಬೂಡುಜಾಲಿನಲ್ಲಿ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಕತ್ತರಿಸಿ ಪಿಕಪ್ ವಾಹನದ ಮೂಲಕ ಸಾಗಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಬೂಡುಜಾಲು ಅರಣ್ಯ ಅಂಚಿನಲ್ಲಿ ಇರುವ ತೋಟಕ್ಕೆ ಬೃಹತ್ ಗಾತ್ರದ ಕಾಡುಕೋಣ ಬರುತ್ತಿತ್ತೆನ್ನಲಾಗಿದ್ದು, ಇದಕ್ಕಾಗಿ

ಕಾಡುಕೋಣ ಬೇಟೆ | ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡದಿಂದ ಪತ್ತೆ | ಆರೋಪಿಗಳು ಪರಾರಿ Read More »

error: Content is protected !!
Scroll to Top