ಪುತ್ತೂರು

ಹೆಬ್ಬಾರಬೈಲು ತಾರನಾಥ್ ಹೆಚ್. ಹೃದಯಾಘಾತದಿಂದ ನಿಧನ

ಪುತ್ತೂರು: ಪುತ್ತೂರಿನ ಹೆಬ್ಬಾರಬೈಲು ನಿವಾಸಿ ಹಾಗೂ ಹಿರಿಯ ಜವುಳಿ ವ್ಯಾಪಾರಿ ಹೆಚ್. ನಾರಾಯಣ ಅವರ ಪುತ್ರ ತಾರನಾಥ್ ಹೆಚ್. (49) ರವರು ಅಕ್ಟೋಬ‌ರ್ 13ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಂದೆ ಹಾಗೂ ಸಹೋದರರೊಂದಿಗೆ ಹೆಚ್. ನಾರಾಯಣ ಅಂಡ್ ಸನ್ಸ್‌ ಜವುಳಿ ಮಳಿಗೆಯಲ್ಲಿ ವ್ಯವಹಾರ ನಿರ್ವಹಿಸುತ್ತಿದ್ದ ಅವರು ಇತ್ತೀಚಿನ ಕೆಲ ವರ್ಷಗಳಿಂದ ಪಿಗ್ನಿ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 13ರ ಸಂಜೆ ಎಂದಿನಂತೆ ಪಿಗ್ನಿ ಸಂಗ್ರಹಣೆಯ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ […]

ಹೆಬ್ಬಾರಬೈಲು ತಾರನಾಥ್ ಹೆಚ್. ಹೃದಯಾಘಾತದಿಂದ ನಿಧನ Read More »

ಕಾರ್ಕಳ : ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆ

ಬ್ರಹ್ಮಾವರದಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆಗೆ ಶರಣು ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ದಿ.ಎಚ್.ಗೋಪಾಲ ಭಂಡಾರಿ ಅವರ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸುದೀಪ್ ಭಂಡಾರಿ ಎಂದು ಗುರುತಿಸಲಾಗಿದೆ. ನಿನ್ನೆ ಸಾಯಂಕಾಲ ಅವರು ಹೆಬ್ರಿಯಲ್ಲಿದ್ದು ಬಳಿಕ ಬ್ರಹ್ಮಾವರಕ್ಕೆ ಹೋಗಿದ್ದರು ಎನ್ನಲಾಗಿದೆ. ಸುದೀಪ್‌ ಭಂಡಾರಿ ಬಾರಕೂರಿನಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಾಯಿ ಪ್ರಕಾಶಿನಿ, ಸಹೋದರ ಪ್ರದೀಪ, ಸಹೋದರಿ ದೀಪಾ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾರ್ಕಳ : ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆ Read More »

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ

ಪುತ್ತೂರು: ಯುವ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ವಿದ್ದು ಉಚ್ಚಿಲ ಅವರ ಮಾರ್ಗದರ್ಶನದಲ್ಲಿ, ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ಬೆಳ್ಳಾರೆ ನೇತೃತ್ವದ ಗೊಂಬೆ ರಾವಣ ಎಂಬ ಮಕ್ಕಳ ರಂಗ ನಾಟಕ ಅ. 18 ಶನಿವಾರದಂದು ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 13 ಮಕ್ಕಳು ಈ ರಂಗನಾಟಕದಲ್ಲಿ ಅಭಿನಯಿಸಲಿದ್ದಾರೆ. ಕಲಾ ಪೋಷಕರ ಸಹಕಾರದ ಜೊತೆಗೆ ‘ಮುದ್ರಾರಂಗ’ – ಚಿಣ್ಣರ

ಅ. 18: ಪೆರುವಾಜೆಯ ಜೆ. ಡಿ. ಆಡಿಟೋರಿಯಂ‌ನಲ್ಲಿ ಮಕ್ಕಳ ‘ಗೊಂಬೆ ರಾವಣ’ ನಾಟಕ Read More »

ಪುತ್ತೂರು : ಹೆಜ್ಜೇನು ದಾಳಿಯಿಂದ ಬಾಲಕಿ ಮೃತ್ಯು

ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಾಲಕಿಯರ ಮೇಲೆ ದಾಳಿ ನಡೆಸಿದ ಹೆಜ್ಜೇನು ಪುತ್ತೂರು: ಹೆಜ್ಜೇನು ದಾಳಿಯಿಂದ ಬಾಲಕಿ ಮೃತಪಟ್ಟ ದಾರುಣ ಘಟನೆ ಸೇಡಿಯಾಪು ಕೂಟೇಲು ಸಮೀಪ ಸಂಭವಿಸಿದೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಮೂವರು ಗಾಯಗೊಂಡಿದ್ದರು. ಈ ಪೈಕಿ ಓರ್ವ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಸೇಡಿಯಾಪು ಕೂಟೇಲು ಎಂಬಲ್ಲಿನ ನಿವಾಸಿ ಕಿರಣ್ ಪೂಜಾರಿ ಎಂಬವರ ಪುತ್ರಿ ದಿಶಾ (7) ಮೃತ ಬಾಲಕಿ. 5ನೇ ತರಗತಿ

ಪುತ್ತೂರು : ಹೆಜ್ಜೇನು ದಾಳಿಯಿಂದ ಬಾಲಕಿ ಮೃತ್ಯು Read More »

ಪುತ್ತೂರು : ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು

ಮನೆಯ ಎದುರು ಕುಳಿತಿದ್ದ ವೇಳೆ ಬಡಿದ ಸಿಡಿಲು ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಆನಡ್ಕ ನಿವಾಸಿ ವಾಮನ (40) ಸಾವನ್ನಪ್ಪಿದ ವ್ಯಕ್ತಿ. ಕೂಲಿ ಕಾರ್ಮಿಕರಾಗಿದ್ದ ವಾಮನ ಅವರು ಸಂಜೆ ಸುಮಾರು 5.30ರ ವೇಳೆಗೆ ತನ್ನ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದ ವೇಳೆಯಲ್ಲಿ ಸಿಡಲು ಬಡಿದಿದ್ದು,

ಪುತ್ತೂರು : ಸಿಡಿಲು ಬಡಿದು ಕೂಲಿ ಕಾರ್ಮಿಕ ಸಾವು Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ.ರಿ ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಪುತ್ತೂರಿನ ಸ್ವಾಗತ ಹೋಟೆಲ್ ನಲ್ಲಿ ಜರಗಿತು . ಪಡುಮಲೆ ಶ್ರೀ ಕೂವೆ ಶಾಸ್ತರ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿದ ಜಿಲ್ಲಾಮಟ್ಟದ ಹಿರಿಯರ ಕಾರ್ಯಾಗಾರದ ಫಲಶ್ರುತಿ ಬಗ್ಗೆ ಚರ್ಚಿಸಲಾಯಿತು. ಮೂರು ವಿಚಾರಗೋಷ್ಠಿಗಳು, ಹಿರಿಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ ಪಡುಮಲೆ ಇವರನ್ನು ಅಭಿನಂದಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 18.10.2025 ರಂದು ಜರಗಲಿರುವ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಪುತ್ತೂರು ಘಟಕದ ಸಭೆ Read More »

4 ತಿಂಗಳು ಜೀವನ್ಮರಣ ಹೋರಾಟ ನಡೆಸಿ ನಿಧನರಾದ ಅಪೂರ್ವ ಭಟ್‌ : ಕಂಬನಿ ಮಿಡಿದ ಪುತ್ತೂರಿನ ಜನ

ಮುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಅಪೂರ್ವ ಭಟ್‌ ಪುತ್ತೂರು: ನಾಲ್ಕು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ‌ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾದರು. ಬರೋಬ್ಬರಿ 134 ದಿನ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿದ ಅಪೂರ್ವ ಭಟ್‌ ಅಗಲಿಕೆ ಭಾರಿ ದುಃಖ ತಂದಿದ್ದು, ಸಾವಿರಾರು ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಕಂಬನಿ

4 ತಿಂಗಳು ಜೀವನ್ಮರಣ ಹೋರಾಟ ನಡೆಸಿ ನಿಧನರಾದ ಅಪೂರ್ವ ಭಟ್‌ : ಕಂಬನಿ ಮಿಡಿದ ಪುತ್ತೂರಿನ ಜನ Read More »

ಕಾರಿನಲ್ಲಿ ಡ್ರಗ್ಸ್‌ ಸಾಗಾಟ : ಆರೋಪಿ ಸೆರೆ

ಪುತ್ತೂರು : ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಉಪ್ಪಿನಂಗಡಿಯ ಮಠ ಹಿರ್ತಡ್ಕ ನಿವಾಸಿ ರಜಾಕ್ (43) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 30ರಂದು ಉಪ್ಪಿನಂಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವಿನಾಶ್ ಎಚ್ ಮತ್ತು ಅವರ ತಂಡ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ರಜಾಕ್ ಸ್ವಲ್ಪ ಮುಂದೆ ವಾಹನ ಚಲಾಯಿಸಿ ಕಾರು ನಿಲ್ಲಿಸಿ ಓಡಿ ಪರಾರಿಯಾಗಲು ಪ್ರಯತ್ನಿಸಿದ್ದ. ಪೊಲೀಸರು ಆತನನ್ನು

ಕಾರಿನಲ್ಲಿ ಡ್ರಗ್ಸ್‌ ಸಾಗಾಟ : ಆರೋಪಿ ಸೆರೆ Read More »

ಕಲಾಕ್ಷೇತ್ರದ ಸಾಧನೆಗೆ ಮುಂಬೈಯಲ್ಲಿ ಗೌರವಾರ್ಪಣೆ ಪಡೆದ ಅಶ್ವಥ್ ಎನ್ ಪುತ್ತೂರು

ಕಲಾಕ್ಷೇತ್ರದ ಕಲಾವಿದನ ಸಾಧನೆಯನ್ನು ಗುರುತಿಸಿ ಮುಂಬೈ ಚಾರ್ ಕೋಪ್ ಕನ್ನಡಿಗರ ಬಗಳ ಕಾಂದಿವಲಿ(ರಿ.) ಇವರಿದ ನಟ ರಂಗಭೂಮಿ ಕಲಾವಿದ ನಿರ್ದೇಶಕ ಮಚ್ಚಿಮಲೆ ನಿವಾಸಿ ಅಶ್ವಥ್ ಎನ್ ಪುತ್ತೂರು ಇವರಿಗೆ ಮುಂಬೈ ಯಲ್ಲಿ ಗೌರವಾರ್ಪಣೆ ನೀಡಿದರು. ಏಳು ಬೀಳುವಿನ ಜೊತೆ ಜೊತೆ ಸಾಕಷ್ಟು ಕನಸುಗಳನ್ನು ಕಾಣುತ್ತಾ, ಸಾಧನೆಯೇ ನನ್ನ ಹಾದಿ ಎಂದು ತಿಳಿದು. ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಬರಹ, ನಟನೆ, ನಿರ್ದೇಶನ, ಹಾಡುಗಾರಿಕೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ ಪುತ್ತೂರಿನ ಪ್ರತಿಭೆ ಇವರು. ಇತರರಿಗೆ ಪ್ರೇರಣಾತ್ಮಕವಾಗಿ ಜೀವಿಸಿದಲ್ಲದೆ

ಕಲಾಕ್ಷೇತ್ರದ ಸಾಧನೆಗೆ ಮುಂಬೈಯಲ್ಲಿ ಗೌರವಾರ್ಪಣೆ ಪಡೆದ ಅಶ್ವಥ್ ಎನ್ ಪುತ್ತೂರು Read More »

ಎವಿಜಿ ಸ್ಕೂಲ್’ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ರಾಷ್ಟ್ರಪಿತ ಗಾಂಧೀಜಿಯವರ 156ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121ನೇ ಜನ್ಮದಿನಾಚರಣೆಗಳ ಪ್ರಯುಕ್ತ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ದೀಪ ಪ್ರಜ್ವಲಿಸಿ, ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ರಾಷ್ಟ್ರಪಿತ ಗಾಂಧೀಜಿ ಮತ್ತು ಪೂರ್ವ ಪ್ರಧಾನಿ ಶಾಸ್ತ್ರೀಜಿಯವರ ಬದುಕಿನ ಆದರ್ಶಗಳನ್ನು ಅನುಸರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿ ಈ ನಮ್ಮ ಎವಿಜಿ

ಎವಿಜಿ ಸ್ಕೂಲ್’ನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ Read More »

error: Content is protected !!
Scroll to Top