ಪುತ್ತೂರು

ಕಾಣೆಯಾದ ನಾಯಿ: ಪೊಲೀಸರಿಗೆ ದೂರು

ಪುತ್ತೂರು: ಪ್ರೀತಿಯಿಂದ ಸಾಕಿದ್ದ ಶ್ವಾನವೊಂದು ಕಾಣೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾವು ಪ್ರೀತಿಯಿಂದ ಸಾಕಿದ್ದ ಶಿಟ್ಝೂ ತಳಿಯ ನಾಯಿ ಬಾಬ್ರೂ ಕಾಣೆಯಾಗಿರುವುದಾಗಿ ದೂರಿನಲ್ಲಿ ಪೂನಂ ಶೆಟ್ಟಿ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ. ನೆಲ್ಲಿಕಟ್ಟೆಯ ‌ಮಲ್ಯ ಕಾಂಪೌಂಡ್‌ನಿಂದ ನಾಯಿ ಕಾಣೆಯಾಗಿದೆ. ನಾಯಿಯ ಕೆಲವು ದೃಶ್ಯಾವಳಿಗಳು ‌ಸಿಸಿಟಿವಿ‌ಯಲ್ಲಿ ಸೆರೆಯಾಗಿರುವುದಾಗಿಯೂ ಅವರು ದೂರಿನಲ್ಲಿ ‌ಹೇಳಿದ್ದಾರೆ.

ಕಾಣೆಯಾದ ನಾಯಿ: ಪೊಲೀಸರಿಗೆ ದೂರು Read More »

ಭಾರತದ ಆತ್ಮ ಧರ್ಮ ಮತ್ತು ಸಂಸ್ಕೃತಿ: ಶ್ರೀಕಾಂತ್ ಶೆಟ್ಟಿ ಕಾರ್ಕಳ

ವಿವೇಕಾನಂದ ಕಾಲೇಜು ಆವರಣದಲ್ಲಿ ಮೊಳಗಿತು ಮೈ ನವಿರೇಳಿಸುವ ರಾಷ್ಟ್ರ ಭಕ್ತಿಯ ಅಲೆ ಪುತ್ತೂರು: ಭಾರತದ ಆತ್ಮ ಧರ್ಮ ಮತ್ತು ಸಂಸ್ಕೃತಿ. ಇವುಗಳ ಮೇಲೆ ದಾಳಿ ನಡೆದಾಗೆಲ್ಲ ದೇಶ ಜಾಗೃತವಾಗಿದೆ. ಪ್ರಸ್ತುತ ಭಾರತೀಯತೆಯ ಪುನರುತ್ಥಾನದ ಜೊತೆಗೆ ದೇಶದ ಅತಃಶಕ್ತಿ ಜಾಗೃತವಾಗುತ್ತಿದ್ದು, ನಾವೆಲ್ಲರೂ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಪರಂಪರೆಗೆ ಸಾಕ್ಷಿಗಳಾಗುತ್ತಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ವಿವೇಕಾನಂದ ಜಯಂತಿಯ ಕಾರ್ಯಕ್ರಮ

ಭಾರತದ ಆತ್ಮ ಧರ್ಮ ಮತ್ತು ಸಂಸ್ಕೃತಿ: ಶ್ರೀಕಾಂತ್ ಶೆಟ್ಟಿ ಕಾರ್ಕಳ Read More »

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ಉದ್ಘಾಟನೆ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿಯವರು ಸೇವಾ ರೂಪದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಡಾ. ಯೋಗಿಂದ್ರ ಭಟ್ ಉಳಿ ಉದ್ಘಾಟಿಸಿ, ಶುಭ ಹಾರೈಸಿದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ, ದೇವಸ್ಥಾನದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಪ್ರಶಾಂತ ಪೈ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅರ್ಚಕ ಗುರುಪ್ರಸಾದ ನೂರಿತ್ತಾಯ, ವಾಣಿ ಶಿಕ್ಷಣ ಸಂಸ್ಥೆಯ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ಉದ್ಘಾಟನೆ Read More »

ಕೃಷಿ ವಲಯದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳಿ: ಎನ್. ಚೆಲುವರಾಯಸ್ವಾಮಿ

ಪುತ್ತೂರು: ಕೃಷಿ ವಲಯದಲ್ಲಿ ನಾವೀನ್ಯತೆಯನ್ನು ಅಳವಡಿಕೆ ಮಾಡಿಕೊಳ್ಳುವುದು ಇಂದಿನ ಅಗತ್ಯ. ರೈತರು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸುವ ಮುಖೇನ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಅವರು ನಿನ್ನೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಾಣಲು ಸಮಯಾವಕಾಶ ಬೇಕು. ಕೃಷಿಕರು ಮಣ್ಣಿನ ಗುಣಮಟ್ಟಕ್ಕೆ ಅನುಸಾರವಾಗಿ ಸಮ್ಮಿಶ್ರ ಬೆಳೆಗಳನ್ನು ಬೆಳೆಯುವತ್ತ ಗಮನ ನೀಡಬೇಕು

ಕೃಷಿ ವಲಯದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳಿ: ಎನ್. ಚೆಲುವರಾಯಸ್ವಾಮಿ Read More »

ವಿದ್ಯಾಭ್ಯಾಸ ಮಕ್ಕಳಿಗೆ ಸ್ಪರ್ಧೆಯಾಗಬಾರದು : ಕಿಶೋ‌ರ್ ಕುಮಾ‌ರ್ ಪುತ್ತೂರು

ಅಲುಂಬುಡ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ವಾರ್ಷಿಕ ಕಾರ್ಯಕ್ರಮ ಪುತ್ತೂರು: ಬನ್ನೂರಿನ ಕೃಷ್ಣನಗರ ಸಮೀಪದ ಅಲುಂಬುಡದಲ್ಲಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಚಿಣ್ಣರೋತ್ಸವ ಜ.2ರಂದು ಶಾಲಾ ವಠಾರದಲ್ಲಿ ನಡೆಯಿತು. ಪ್ರತಿಭಾ ಪುರಸ್ಕಾರ, ಸನ್ಮಾನ ಮುಂತಾದ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು. ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಕೊಡುವ ಶಾಲೆ ಸದಸ್ಯ ಕಿಶೋ‌ರ್ ಕುಮಾ‌ರ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ತಾಯಂದಿರು ಮನಸು ಮಾಡಿದರೆ ಏನೂ

ವಿದ್ಯಾಭ್ಯಾಸ ಮಕ್ಕಳಿಗೆ ಸ್ಪರ್ಧೆಯಾಗಬಾರದು : ಕಿಶೋ‌ರ್ ಕುಮಾ‌ರ್ ಪುತ್ತೂರು Read More »

ಕುರಿಯ ವಿದ್ಯುತ್ ಆಕಸ್ಮಿಕದಿಂದ ಹಾನಿಗೊಂಡ ಅಡಿಕೆ ತೋಟಕ್ಕೆ ಬಿಜೆಪಿ ನಿಯೋಗ ಭೇಟಿ: ಪರಿಹಾರಕ್ಕಾಗಿ ಆಗ್ರಹ

ಪುತ್ತೂರು: ತಾಲೂಕು ಕುರಿಯ ಗ್ರಾಮದ ಬೂಡಿಯಾರು ಎಂಬಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದುದರ ಪರಿಣಾಮ ಉಂಟಾದ ಅಗ್ನಿ ದುರಂತದಲ್ಲಿ ಕೃಷಿಕ ಗಣೇಶ್ ರೈ ಬೂಡಿಯಾರು ಅವರಿಗೆ ಸೇರಿದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾಗಿ ಅಪಾರ ನಷ್ಟ ಸಂಭವಿಸಿದೆ. ದುರಂತ ನಡೆದ ಸ್ಥಳಕ್ಕೆ ನಿನ್ನೆ ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಸುನೀಲ್ ಆಳ್ವ,

ಕುರಿಯ ವಿದ್ಯುತ್ ಆಕಸ್ಮಿಕದಿಂದ ಹಾನಿಗೊಂಡ ಅಡಿಕೆ ತೋಟಕ್ಕೆ ಬಿಜೆಪಿ ನಿಯೋಗ ಭೇಟಿ: ಪರಿಹಾರಕ್ಕಾಗಿ ಆಗ್ರಹ Read More »

ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ MLC ಕಿಶೋರ್ ಕುಮಾರ್ ಪುತ್ತೂರು ಮನವಿ

ಪುತ್ತೂರು: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ದೊರೆತ ಉತ್ತರದ ಪ್ರಕಾರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇರುವುದಾಗಿ ತಿಳಿದುಬಂದಿದೆ. ರಾಜ್ಯದಾದ್ಯಂತ ಅರ್ಹ ವಿದ್ಯಾರ್ಹತೆ ಪಡೆದ ಲಕ್ಷಾಂತರ ಯುವಜನತೆಗಳು ಸರ್ಕಾರಿ ಉದ್ಯೋಗಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ನಿರೀಕ್ಷೆಯಲ್ಲಿ ಕಾಯುತ್ತಿರುವ ಈ ಸಂದರ್ಭದಲ್ಲಿ, ಖಾಲಿ ಹುದ್ದೆಗಳ ಭರ್ತಿ ವಿಳಂಬವಾಗುತ್ತಿರುವುದು ಗಂಭೀರ ವಿಷಯವಾಗಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ-ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್

ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ MLC ಕಿಶೋರ್ ಕುಮಾರ್ ಪುತ್ತೂರು ಮನವಿ Read More »

KSRTCಯ ನಿವೃತ್ತ ನೌಕರ ಹೃದಯಾಘಾತದಿಂದ ನಿಧನ

ಪುತ್ತೂರು: KSRTC ಯ ನಿವೃತ್ತ ನೌಕರ ಪರಮೇಶ್ವರ ನಾಯ್ಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿ. ದ ಮಂಗಳೂರು ವಿಭಾಗದಲ್ಲಿ 20 ವರ್ಷಗಳ ಕಾಲ ನಿರ್ವಾಹಕರಾಗಿ, ಪುತ್ತೂರು ಬಸ್ಸು ನಿಲ್ದಾಣದಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ, ಆ ನಂತರ ಪುತ್ತೂರು ಘಟಕದ ಸಹಾಯಕ ಸಂಚಾರ ನಿಯಂತ್ರಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಸಂಸ್ಥೆಯಲ್ಲಿ ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಇವರು 2023 ರ ಮಾರ್ಚ್‌ನಲ್ಲಿ ವೃತ್ತಿಯಿಂದ ನಿವೃತ್ತರಾಗಿದ್ದರು. ಮೃತರು ಪತ್ನಿ,

KSRTCಯ ನಿವೃತ್ತ ನೌಕರ ಹೃದಯಾಘಾತದಿಂದ ನಿಧನ Read More »

ಪುತ್ತೂರು : ವಿದ್ಯುತ್‌ ತಂತಿ ಕಡಿದು ಬಿದ್ದು 900 ಅಡಿಕೆ ಗಿಡ ಬೆಂಕಿಗಾಹುತಿ

ತೋಟದ ಮಧ್ಯೆ ಹಾದುಹೋಗಿದ್ದ ವಿದ್ಯುತ್‌ ತಂತಿ ಕಡಿದು ಬಿದ್ದು ಅನಾಹುತ ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಬೂಡಿಯಾರಿನಲ್ಲಿ ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್‌ ತಂತಿ ಮುರಿದು ಬಿದ್ದ ಪರಿಣಾಮವಾಗಿ ತೋಟಕ್ಕೆ ಬೆಂಕಿ ಹತ್ತಿಕೊಂಡು 900ಕ್ಕೂ ಅಧಿಕ ಅಡಿಕೆ ಗಿಡಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ಸಂಭವಿಸಿದೆ. ಬೂಡಿಯಾರಿನ ಗಣೇಶ್‌ ರೈ ಎಂಬವರ ತೋಟ ಪೂರ್ತಿಯಾಗಿ ಬೆಂಕಿಗಾಹುತಿಯಾಗಿದೆ. ಒಂದು ವರ್ಷದ ಹಿಂದಷ್ಟೇ ನೆಟ್ಟ ಅಡಿಕೆ ಗಿಡಗಳು ಉತ್ತಮವಾಗಿ ಬೆಳೆದು ನಿಂತಿದ್ದವು. ಮಂಗಳವಾರ ಮಧ್ಯಾಹ್ನದ ಹೊತ್ತು ವಿದ್ಯುತ್‌ ತಂತಿ

ಪುತ್ತೂರು : ವಿದ್ಯುತ್‌ ತಂತಿ ಕಡಿದು ಬಿದ್ದು 900 ಅಡಿಕೆ ಗಿಡ ಬೆಂಕಿಗಾಹುತಿ Read More »

ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಮತ್ತು ಮೋರ್ಲ ಕುಟುಂಬ ಸ್ವರ ಸಹಯೋಗದಲ್ಲಿ ವಿಧಾನ ಸಭಾ ಸ್ಪೀಕರ್ ಯು. ಟಿ. ಖಾದರ್ ಅವರನ್ನು ಚಂದ್ರಹಾಸ ಶೆಟ್ಟಿ ಮೋರ್ಲ ಅವರ ಸ್ವಗೃಹದಲ್ಲಿ ‌ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಂದ್ರಹಾಸ ಶೆಟ್ಟಿ ಮೋರ್ಲ, ಜಯಶ್ರೀ ಸಿ. ಶೆಟ್ಟಿ, ರತ್ನಾಕರ ಶೆಟ್ಟಿ ಮೋರ್ಲ, ಮುರಳಿಧರ ಶೆಟ್ಟಿ ಮೋರ್ಲ, ಶೈಲಜಾ ಶೆಟ್ಟಿ, ಸೀನಿಯರ್ ಚೇಂಬ‌ರ್ ಇಂಟರ್ನ್ಯಾಷನಲ್ ಅಧ್ಯಕ್ಷೆ ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.

ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ Read More »

error: Content is protected !!
Scroll to Top