ಪುತ್ತೂರು

ಜೋಕಾಲಿಯ ಹಗ್ಗ ಸಿಲುಕಿ ಬಾಲಕಿ ಮೃತ್ಯು

ವಿಟ್ಲ : ಜೋಕಾಲಿಯಲ್ಲಿ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ (8) ಜೋಕಾಲಿಗೆ ಬಲಿಯಾದ ಬಾಲಕಿ, ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆಗೆ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿದ ದುರಂತ ಸಂಭವಿಸಿದೆ

ಜೋಕಾಲಿಯ ಹಗ್ಗ ಸಿಲುಕಿ ಬಾಲಕಿ ಮೃತ್ಯು Read More »

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 56ನೇ ತಾಳಮದ್ಧಳೆ ಭಾನುಮತಿ ಕಲ್ಯಾಣ  ಬನ್ನೆಂಗಳ ಸಮೃದ್ಧಿ ನಿವಾಸದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ,ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್, ಗುಡ್ಡಪ್ಪ ಬಲ್ಯ (ಬಾಹ್ಲಿಕ ರಾಜ ), ಶ್ಶ್ರುತಿ  ವಿಸ್ಮಿತ್ (ವನಚರರು, ಮಂತ್ರಿ

ಬನ್ನೆಂಗಳದ ಸಮೃದ್ಧಿ ನಿವಾಸದಲ್ಲಿ ಭಾನುಮತಿ ಕಲ್ಯಾಣ ತಾಳಮದ್ದಳೆ Read More »

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ನಿಂದ “ನೆರಳು” ಮನೆ ಹಸ್ತಾಂತರ | ವಿವಿಧ ಚಾರಿಟೇಬಲ್‍ ಟ್ರಸ್ಟ್, ಸಹಕರಿಸಿದವರಿಗೆ ಸನ್ಮಾನ, ಗೌರವಾರ್ಪಣೆ

ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ಕರ್ನಾಟಕದ ವತಿಯಿಂದ ಬಡ ರೇವತಿ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿಕೊಟ್ಟ ನೂತನ ಮನೆ “ನೆರಳು” ಇದರ ಹಸ್ತಾಂತರ ಸಮಾರಂಭ ಹಾಗೂ ಸೇವಾ ಸಾಧಕರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ ಭಾನುವಾರ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಠಾಣಾ ಇನ್‍ ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಜೀವನದಲ್ಲಿ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರೀತಿಯಿಂದ, ಆದರತೆಯಿಂದ ದಾನ ಮಾಡಿದರೆ ಅದು ನಿಜವಾದ ಸಮಾಜ ಸೇವೆ.

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್‍ ಟ್ರಸ್ಟ್ ನಿಂದ “ನೆರಳು” ಮನೆ ಹಸ್ತಾಂತರ | ವಿವಿಧ ಚಾರಿಟೇಬಲ್‍ ಟ್ರಸ್ಟ್, ಸಹಕರಿಸಿದವರಿಗೆ ಸನ್ಮಾನ, ಗೌರವಾರ್ಪಣೆ Read More »

ವಿವೇಕಾನಂದ ಶಿಶುಮಂದಿರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಆರಂಭ

ಪುತ್ತೂರು: ಪುತ್ತೂರು ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದಲ್ಲಿ ದೇವಾಲಯಗಳ ಸಂವರ್ಧನ ಸಮಿತಿ ವತಿಯಿಂದ  ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯನ್ನು, ಶುಕ್ರವಾರ ಆರಂಭಿಸಲಾಯಿತು ಕೃಷ್ಣವೇಣಿ ಪ್ರಸಾದ್ ಮುಳಿಯ ಹಿಂದೂ ಧಾರ್ಮಿಕ ಶಿಕ್ಷಣದ ಉದ್ದೇಶ ಮತ್ತು ಅದರ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಶ್ಲೋಕವೊಂದರ ಅರ್ಥ, ದೈನಂದಿನ ಜೀವನದಲ್ಲಿ ಆಚಾರ – ವಿಚಾರಗಳು ವೈಜ್ಞಾನಿಕ ತಳಹದಿ ಮೇಲೆ  ಪರಂಪರಾಗತವಾಗಿ ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸಿ, ಭಜನೆ ನಡೆಸಿಕೊಟ್ಟರು. ಶಂಕರಿ ಶರ್ಮ ಕನ್ನಡದ ಭಗವದ್ಗೀತೆ ಎನಿಸಿಕೊಂಡಿರುವ ಡಿ.ವಿ.ಜಿ.ಯವರ ಕಗ್ಗವೊಂದನ್ನು ಪ್ರಸ್ತುತಪಡಿಸಿದರು. ಮುಂದೆ, ಅದರ ಅರ್ಥವನ್ನು

ವಿವೇಕಾನಂದ ಶಿಶುಮಂದಿರದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಶಾಖೆಯ ಆರಂಭ Read More »

ಡಿ.20-21 : ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಬಿಡುಗಡೆ

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಯ್ಯಪ್ಪ ಸೇವಾ ಸಮಿತಿ ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಹಿರಿತನದಲ್ಲಿ ಡಿ.20-ಡಿ.21ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಭಾನುವಾರ ಶ್ರೀ ಕೌಡಿಚ್ಚಾರು ಶ್ರೀ ಕೃಷ್ಣ ಸಭಾಭವನದಲ್ಲಿ ಬಿಡುಗಡೆಗೊಂಡಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ  ವಾಸು ಪೂಜಾರಿ ಗುಂಡ್ಯಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ,ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಈ ಬಾರಿ ಅಯ್ಯಪ್ಪ ದೀಪೋತ್ಸವ ನಡೆಯುತ್ತಿರುವುದು ಸಂತಸದ ವಿಚಾರ.ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿ

ಡಿ.20-21 : ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ : ಆಮಂತ್ರಣ ಬಿಡುಗಡೆ Read More »

ಮುಳಿಯ ಸಂಸ್ಥಾಪಕರ ದಿನದ ಆಂಗವಾಗಿ ಗ್ರಾಹಕರು ಖರೀದಿಸಿದ ಪ್ರತೀ ಗ್ರಾಂ ಚಿನ್ನದಲ್ಲಿ 50 ರೂ. ಸಾಮಾಜಿಕ ಉದ್ದೇಶಕ್ಕೆ | ‘ಮುಳಿಯರ-ಅಳಿಯದ ನೆನಪು’ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರ ದಿನದ ಅಂಗವಾಗಿ ಗ್ರಾಹಕರು ಖರೀದಿಸಿದ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂಪಾಯಿಯನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸುವ ಕಾರ್ಯಕ್ಕೆ ಮುಂದಾಗಿದೆ. ಮುಳಿಯ ಜ್ಯುವೆಲ್ಸ್ ಸಂಸ್ಥಾಪಕರಾದ ದಿ. ಮುಳಿಯ ಕೇಶವ ಭಟ್ಟ ಅವರು ಜನಿಸಿ 127 ವರ್ಷಗಳಾಗಿದ್ದು, ಇದರ ಅಂಗವಾಗಿ ‘ಮುಳಿಯರ – ಅಳಿಯದ ನೆನಪು’ ಕಾರ್ಯಕ್ರಮವನ್ನು ಡಿ.7, 8, 9ರಂದು ಹಾಕಿಕೊಳ್ಳಲಾಗಿದೆ. ಇದರ ಅಂಗವಾಗಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸದೆ, ಅವರು ಖರೀದಿಸುವ ಚಿನ್ನದ ಗ್ರಾಂ ಲೆಕ್ಕದಲ್ಲಿ ೫೦ ರೂ

ಮುಳಿಯ ಸಂಸ್ಥಾಪಕರ ದಿನದ ಆಂಗವಾಗಿ ಗ್ರಾಹಕರು ಖರೀದಿಸಿದ ಪ್ರತೀ ಗ್ರಾಂ ಚಿನ್ನದಲ್ಲಿ 50 ರೂ. ಸಾಮಾಜಿಕ ಉದ್ದೇಶಕ್ಕೆ | ‘ಮುಳಿಯರ-ಅಳಿಯದ ನೆನಪು’ ಕಾರ್ಯಕ್ರಮಕ್ಕೆ ಚಾಲನೆ Read More »

ಹಣ ವಂಚನೆ ಪ್ರಕರಣ | ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪುತ್ತೂರು: ಹಣ ಹೂಡಿಕೆಯ ಯೋಜನೆಯ ಮೂಲಕ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ  ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಸಕಾರ ನಿವಾಸಿ ಸೋಮೇಶ್ವರ (38) ಬಂಧಿತ ಆರೋಪಿ. ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆ ನಿವಾಸಿ ಗಣೇಶ್ ಅವರು ಕುಶಾಲನಗರದಲ್ಲಿ ಹಿಂದುಸಿನ್ ಇಸ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಪ್ರತಿನಿಧಿಯಾಗಿರುವ ಸಂದರ್ಭ ಅವರು ಆರೋಪಿ

ಹಣ ವಂಚನೆ ಪ್ರಕರಣ | ತಲೆಮರೆಸಿಕೊಂಡಿದ್ದ ಆರೋಪಿ ಬಂಧನ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ  ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,  ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ 10ನೇ ತರಗತಿಯ ವೈಷ್ಣವಿ ಪೈ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 9ನೇ ತರಗತಿಯ ನಿಲಿಷ್ಕಾ ಚಿತ್ರಕಲೆಯಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ  ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ Read More »

ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ : ಅರವಿಂದಚೊಕ್ಕಾಡಿ | ವಿದ್ಯಾಸ್ಪೂರ್ತಿ – 2024 ಉದ್ಘಾಟನೆ

ಪುತ್ತೂರು: ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್  ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಾಗೂ  ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ  ಶ್ರೀರಾಮ ಸಭಾಭವನದಲ್ಲಿ  ‘ವಿದ್ಯಾಸ್ಫೂರ್ತಿ – 2024’ ನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ, ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ, ಎಷ್ಟು ಸಂಸ್ಕಾರ ಎನ್ನುವುದು ಯೋಚನೆ ಮತ್ತು ಯೋಜನೆಗಳಲ್ಲಿ ಕಾರ್ಯಗತವಾಗಬೇಕು. ವಿದ್ಯಾಸ್ಪೂರ್ತಿಯಂತಹ ಕಾರ್ಯಕ್ರಮಮ ಬಹು ವಿಧದ ಚಿಂತನೆಯಲ್ಲಿ ಸಹಕರಿಸುತ್ತದೆ ಎಂದುಹೇಳಿದರು. ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಟಿ.

ನಾವು ಯೋಚಿಸಿದಂತೆ ನಮ್ಮ ನಡತೆ ಇರುತ್ತದೆ : ಅರವಿಂದಚೊಕ್ಕಾಡಿ | ವಿದ್ಯಾಸ್ಪೂರ್ತಿ – 2024 ಉದ್ಘಾಟನೆ Read More »

ಡಿ.25 : ಕಡಬ ಹೊಸಮಠದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ | ಪೂರ್ವಭಾವಿ ಸಭೆ

ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಕಡಬದ ಹೊಸಮಠದಲ್ಲಿರುವ ನೂತನ ಸಮುದಾಯ ಭವನದಲ್ಲಿ ಡಿ.25 ರಂದು ನಡೆಯುವ ಸಂಘದ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ಹಾಗೂ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಪೂರ್ವಭಾವಿ ಸಭೆ ಶನಿವಾರ ಕಡಬದಲ್ಲಿ ನಡೆಯಿತು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಅಂದು ಬೆಳಿಗ್ಗೆ 7 ಗಂಟೆಗೆ ನಾಗ ತಂಬಿಲ ಹಾಗೂ

ಡಿ.25 : ಕಡಬ ಹೊಸಮಠದಲ್ಲಿರುವ ನೂತನ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಚೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ | ಪೂರ್ವಭಾವಿ ಸಭೆ Read More »

error: Content is protected !!
Scroll to Top