ಪುತ್ತೂರು

ಮೊಬೈಲ್‍ ಟವರ್ ಬ್ಯಾಟರಿ ಕಳವು | ಆರೋಪಿ ಬಂಧನ

ಪುತ್ತೂರು  : ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬುಲೇರಿಕಟ್ಟೆ ಸಾಜರೋಡ್ ಮಾವಲೆಕೊಚ್ಚಿ ಎಂಬಲ್ಲಿ  ಮೊಬೈಲ್ ಟವರ್ ಬ್ಯಾಟರಿಗಳ ಕಳ್ಳತನವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪತ್ತೆಗಾಗಿ ರವಿ ಬಿ. ಎಸ್ ಪಿಐ ಪುತ್ತೂರು ಗ್ರಾಮಾಂತರ ಠಾಣೆಯ ನೇತೃತ್ವದಲ್ಲಿ ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ಹಾಗೂ ತಾಂತ್ರಿಕ ಮಾಹಿತಿಯನ್ನಾಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.  ಹರೀಶ್ ನಾಯ್ಕ (30), ಕಾವಳಮುಡೂರು ಗ್ರಾಮ, ಬಂಟ್ವಾಳ ತಾಲೂಕು ಬಂಧಿತ ಅರೋಪಿ ಎಂದು ತಿಳಿದು […]

ಮೊಬೈಲ್‍ ಟವರ್ ಬ್ಯಾಟರಿ ಕಳವು | ಆರೋಪಿ ಬಂಧನ Read More »

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ, ಆಶ್ಲೇಷ ಪೂಜೆ, ನಾಗತಂಬಿಲ ಸೇವೆ

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಷಷ್ಠಿ ಮಹೋತ್ಸವದ ಅಂಗವಾಗಿ ಪಂಚಮಿ ದಿನವಾದ ಶುಕ್ರವಾರ ಬೆಳಗ್ಗೆ ಭಕ್ತಾದಿಗಳಿಂದ ಮೂಲನಾಗನ ಕಟ್ಟೆಯಲ್ಲಿ ಆಶ್ಲೇಷ ಪೂಜೆ, ನಾಗತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5 ರಿಂದ ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ನೃತ್ಯೋಹಂ ಪ್ರದರ್ಶನಗೊಂಡಿತು. ಸಂಜೆ 6 ರಿಂದ ಬೆದ್ರಾಳ ಶ್ರೀ

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ, ಆಶ್ಲೇಷ ಪೂಜೆ, ನಾಗತಂಬಿಲ ಸೇವೆ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ | ಸಾವಿರಾರು ಮಂದಿ ಭಕ್ತರ ಪಾಲ್ಗೊಳ್ಳುವಿಕೆ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಶನಿವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 3 ಕ್ಕೆ ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಜೆ 6 ರಿಂದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಹಾಗೂ

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ | ಸಾವಿರಾರು ಮಂದಿ ಭಕ್ತರ ಪಾಲ್ಗೊಳ್ಳುವಿಕೆ Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ನಿಧನ

ಪುತ್ತೂರು: ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು (75.ವ.) ಇವರು ಡಿ.07 ರಂದು ಬೆಳಗ್ಗೆ ಹೃದಯಾಘತದಿಂದ ನಿಧನರಾಗಿದ್ದಾರೆ. ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ಅವರು ಬ್ಯಾಂಕ್ ಆಫ್ ಬರೋಡಾ, ಹಿಂದೆ ಇದ್ದ ವಿಜಯ ಬ್ಯಾಂಕಿನ ಪುತ್ತೂರು ಶಾಖೆಯಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ನಿವೃತ್ತರಾಗಿದ್ದರು. ನಿನ್ನೆ ಸಂಜೆ ಇವರು ಆರೋಗ್ಯದಿಂದ ಇದ್ದು ಮನೆಯಲ್ಲಿ ಕೆಲಸ ಮಾಡುತ್ತಿದ್ದರು, ಇಂದು ಬೆಳಗ್ಗೆ ಸೋಮಪ್ಪ ಗೌಡ ಇವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘತವಾಗಿ

ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಪ್ಪ ಗೌಡ ಬಡಾವು ನಿಧನ Read More »

ಕೆ ಎಸ್‍ ಆರ್ ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು | ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ನಿರ್ವಾಹಕ

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ  ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ತಿಳಿದು ಬಂದಿದೆ. ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ವೇಳೆ ಬಸ್ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿಯವರ ಚಾಲನೆಯ ವೇಗವನ್ನು ನಿಧಾನ ಮಾಡತೊಡಗಿದರು. ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸಿದಾಗ

ಕೆ ಎಸ್‍ ಆರ್ ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು | ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ನಿರ್ವಾಹಕ Read More »

ವಿಟ್ಲದ ಉದ್ಯಮಿ ಆತ್ಮಹತ್ಯೆ

ವಿಟ್ಲ : ವಿಟ್ಲದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಟ್ಲದ ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಮೃತರು ಇಬ್ಬರು ಮಕ್ಕಳು, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

ವಿಟ್ಲದ ಉದ್ಯಮಿ ಆತ್ಮಹತ್ಯೆ Read More »

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮ ನಿವಾಸಿ ದಲಿತೆ ರಾಧಮ್ಮ ಕುಟುಂಬದ ಮೇಲೆ ಮತ್ತೆ ಮತ್ತೆ ದೌರ್ಜನ್ಯ ಎಸಗುತ್ತಿರುವ ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ ಅವರ ಕಾನೂನು ದುರುಪಯೋಗದ ನಡೆಯನ್ನು ಸಹಿಸಲು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಜಿಲ್ಲಾ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ. ರೇಣುಕೆ ಎಂಬ ಬೆಳ್ತಂಗಡಿ ತಾಲೂಕು ಶಿಬಾಜೆ ನಿವಾಸಿಯ ಹೆಸರಲ್ಲಿ ಹೈಕೋರ್ಟಲ್ಲಿ ದಾವೆ ದಾಖಲಿಸಲಾಗಿದೆ ಎಂದು ರೇಣುಕೆ ಎಂಬವರ ಮನೆಯನ್ನು ದ್ವಂಸ ಮಾಡಲು ಆದೇಶವಿದೆ

ಕಡಬ ತಹಶೀಲ್ದಾರ್ ರಿಂದ ದಲಿತರ ಮೇಲೆ ಮುಂದುವರಿದ ದೌರ್ಜನ್ಯ : ಬಿ.ಎಂ.ಭಟ್‌ಖಂಡನೆ Read More »

ಚೆಲ್ಯಡ್ಕ ಸೇತುವೆ ನಿರ್ಮಾಣದ ಹಿನ್ನಲೆ | ಇಲಾಖೆಯಿಂದ ಬದಲಿ ಮಾರ್ಗ ಸೂಚಿ

ಪುತ್ತೂರು : ದೇವಸ್ಯ-ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿ ಶಿಥಿಲಾವಸ್ಥೆಯಲ್ಲಿರುವ ಚೆಲ್ಯಡ್ಕ ಮುಳುಗು ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿರುವುದರಿಂದ ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ -ಪಾಣಾಜೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಡಿ.9 ರಿಂದ ಮುಂದಿನ ಮೇ 6 ರ ತನಕ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಈ ಅವಧಿಯಲ್ಲಿ ಬದಲಿ ರಸ್ತೆಯನ್ನು ಬಳಸಿಕೊಂಡು ಸಾರ್ವಜನಿಕರು ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವಾಹನ ಸವಾರರು ದೇವಸ್ಯ-ಬೈರೋಡಿ-ಕಾಫಿಕಾಡು

ಚೆಲ್ಯಡ್ಕ ಸೇತುವೆ ನಿರ್ಮಾಣದ ಹಿನ್ನಲೆ | ಇಲಾಖೆಯಿಂದ ಬದಲಿ ಮಾರ್ಗ ಸೂಚಿ Read More »

ತೋಡಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

ಪುತ್ತೂರು: ರೋಟರಿ  ಸಾಮೆತ್ತಡ್ಕ ನಡುವೆ ಇರುವ ತೋಡಿನಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದೆ. ಪುತ್ತೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುರುತು ಪತ್ತೆ ಹಚ್ಚಿದ್ದಾರೆ. ನಂದಕುಮಾ‌ರ್ ನಿನ್ನೆ ಸಂಜೆ ಬೊಳ್ಳಾರಿನಿಂದ ಕಾಣೆಯಾಗಿದ್ದರು. ಇಂದು ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ತೋಡಿನಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ Read More »

ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ | ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು: ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇದೆ. ಅದೂ ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಯನ್ನು ಧ್ವಂಸಗೊಳಿಸುವುದಲ್ಲದೆ ಕೆಟ್ಟ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದ್ದಾರೆ. ಅವರು ಖಾಸಗಿ ವ್ಯಕ್ತಿಯಿಂದ ಹಾನಿಗೊಳಗಾದ ನಗರದ ಖಾಸಗಿ ಬಸ್‍ ನಿಲ್ದಾಣದ ಬಳಿ ಇರುವ ನಾಗನಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸಿದ ಅವರು, ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅನ್ಯಾಯ ಆದಾಗ

ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ | ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು: ಕಿಶೋರ್ ಕುಮಾರ್ ಪುತ್ತೂರು Read More »

error: Content is protected !!
Scroll to Top