ಪುತ್ತೂರು

ಬಲ್ನಾಡು ಗ್ರಾಮ ಅರಣ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ ಆಯ್ಕೆ

ಪುತ್ತೂರು: ಬಲ್ನಾಡು ಗ್ರಾಮ ಅರಣ್ಯ ಸಮಿತಿ  ಕಾರ್ಯಕಾರಿಣಿಯ ಮುಂದಿನ 5 ವರ್ಷಕ್ಕೆ  ನೂತನ ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ ಆಯ್ಕೆಯಾಗಿದ್ದಾರೆ. ಬಲ್ನಾಡು ಗ್ರಾಮದ ಸಾಜ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ  ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯಲ್ಲಿ 172 ಮಂದಿ ಸದಸ್ಯರ ಪೈಕಿ ಚಂದಪ್ಪ ಪೂಜಾರಿ  ಕೆ, ಸುಂದರ ಎಂ, ಕುಟ್ಟಿ ನಲಿಕೆ, ಕೆ, ಪ್ರವೀಣಚಂದ್ರ ಆಳ್ವ, ಅಣ್ಣಿ ಪೂಜಾರಿ ಸಾರ್ಯ, ಉಷಾ ಸಾಜ, ಕಮಲಾಕ್ಷಿ ಸಾಜ, ವಸಂತಿ ಸಾಜ, ನಳಿನಿ ಕೆ, ಕುಸುಮ ಎಂ. […]

ಬಲ್ನಾಡು ಗ್ರಾಮ ಅರಣ್ಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ ಆಯ್ಕೆ Read More »

ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ

ಪುತ್ತೂರು: ಬೋಳೂವಾರಿನ ಪ್ರಗತಿ ಆಸ್ಪತ್ರೆಯ ಎದುರುಗಡೆ ಆಟೋರಿಕ್ಷಾ  ಪಲ್ಟಿಯಾಗಿ ಮಹಿಳೆಯೋರ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಗತಿ ಆಸ್ಪತ್ರೆ, ಎದುರುಗಡೆ ಪುತ್ತೂರಿಂದ ಬೊಳುವಾರು ಕಡೆ ಆಟೋರಿಕ್ಷಾ ಬರುತ್ತಿರುವಾಗ, ಎದುರುಗಡೆಯಿಂದ ಬರುವ ರಿಕ್ಷಾವೊಂದು ಸಡನ್ ಆಗಿ ತಿರುಗಿಸಿದಾಗ, ಪೇಟೆ ಕಡೆಯಿಂದ ಬರುವ ರಿಕ್ಷಾ ಚಾಲಕ ಕೂಡಲೇ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಪಲ್ಟಿ ಯಾದ ಘಟನೆ ನಡೆದಿದೆ. ಪಲ್ಟಿಯಾದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆತೂರಿನ ಮಹಿಳೆ ಎಂದು ತಿಳಿದು ಬಂದಿದೆ, ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಿಕ್ಷಾ ಪಲ್ಟಿ | ಮಹಿಳೆಗೆ ಗಾಯ Read More »

ಕೀಟನಾಶಕ ಸೇರಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಉಪ್ಪಿನಂಗಡಿ: ಕೀಟನಾಶಕ ಸೇವಿಸಿದ ವಯೋವೃದ್ಧರೋರ್ವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಪಿಲಿಕೂಡೇಲುನಲ್ಲಿ ನಡೆದಿದೆ. ವಯೋಸಹಜ ಕಾಯಿಲೆ ಮತ್ತು ಮರೆಗುಳಿತನದಿಂದ ಬಳಲುತ್ತಿದ್ದ ಪದ್ಮನಾಭ ಭಟ್  ಡಿ.4 ರಂದು ಮನೆಯಲ್ಲಿ ಮಗನಿಲ್ಲದ ವೇಳೆ , ತೋಟಕ್ಕೆ ಸಿಂಪಡಿಸಿ ಉಳಿದಿದ್ದ ಕ್ರಿಮಿನಾಶಕವನ್ನು, ಔಷಧಿ ಎಂದು ತಿಳಿದು ಸೇವಿಸಿದ ಕಾರಣ ಅಸ್ವಸ್ಥಕ್ಕೆ ತುತ್ತಾಗಿದ್ದಾರೆ. ಅವರನ್ನು ಕೂಡಲೆ ಆಸ್ಪತ್ರೆಗೆ ಕರೆದೊಯಿದರು ಚಿಕಿತ್ಸೆಗೆ ಸ್ಪಂದಿಸದೆ ಅದಿತ್ಯವಾರದಂದು ನಿಧನರಾದರು ಎಂದು ಅವರ ಮಗ ಕೇಶವ ಪ್ರಸಾದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೀಟನಾಶಕ ಸೇರಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ

ಬೆಳ್ತಂಗಡಿ : ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ಬೆಳ್ತಂಗಡಿಯ ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರ ಕುತ್ತಿಗೆಯಿಂದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್‍ ಗೌಡ ಕರಿಮಣಿ ಸರ ಎಳೆದು ಪರಾರಿಯಾಗಿದ್ದನೆ ಎನ್ನಲಾಗಿದೆ. ಮಹಿಳೆ ಬೆಳ್ತಂಗಡಿಗೆ ಹೋಗಿ ವಾಪಸ್ ಮನೆಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ Read More »

ಅಕ್ರಮ ಮರಳುಗಾರಿಕೆ ಕುರಿತು ಇಲಾಖಾಧಿಕಾರಿಗಳಿಗೆ ಸ್ಥಳೀಯರಿಂದ ದೂರು | ಮರಳುಗಾರಿಕೆ ಸಕ್ರಮ ಎಂದು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ | ಇನ್ನುಮುಂದೆ ಅಡ್ಡಿಪಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಕಡಬ: ತಾಲೂಕಿನ ಪೇರಾಬೆ ಗ್ರಾಮದ ಕುಮಾರಧಾರ ನದಿಯಲ್ಲಿ ಪರವಾನಿಗೆ ಪಡೆದು ಮರುಳುಗಾರಿಕೆ ನಡೆಸುತ್ತಿದ್ದರೂ, ಸ್ಥಳೀಯರಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಇಲಾಖೆಗಳಿಗೂ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಗಣಿ ಇಲಾಖೆ ಅಧಿಕಾರಿಗಳಾದ ವಸುದ ಜಿಪಿಎಸ್ ಅಧಿಕಾರಿ ಯಶವಂತ್, ಕಡಬ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್, ಸಿಬ್ಬಂದಿ ವರ್ಗ ಕಂದಾಯ ಇಲಾಖೆ ಅಧಿಕಾರಿ ಸಂತೋಷ್, ಪೇರಾಬೆ ಗ್ರಾಮ ಪಂಚಾಯಿತಿ ಪಿಡಿಯೋ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಗಡಿ ಗುರುತು ಮಾಡಿದ್ದು, ಇಲ್ಲಿ ನಡೆಯುತ್ತಿರುವ ಮರಳುಗಾರಿಕೆ

ಅಕ್ರಮ ಮರಳುಗಾರಿಕೆ ಕುರಿತು ಇಲಾಖಾಧಿಕಾರಿಗಳಿಗೆ ಸ್ಥಳೀಯರಿಂದ ದೂರು | ಮರಳುಗಾರಿಕೆ ಸಕ್ರಮ ಎಂದು ಪರಿಶೀಲಿಸಿದ ಅಧಿಕಾರಿಗಳಿಂದ ಸ್ಪಷ್ಟನೆ | ಇನ್ನುಮುಂದೆ ಅಡ್ಡಿಪಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ Read More »

ವಿಟ್ಲದ ತೀರ್ಥಶ್ರೀ ಸಾವಿನ ಪ್ರಕರಣದಲ್ಲಿ ಬಿಗ್‍ ಟ್ವಿಸ್ಟ್ | ಮಾಹಿತಿ ಕಲೆಹಾಕುವಲ್ಲಿ ವಿಟ್ಲ ಪೋಲಿಸರ ಹರಸಾಹಸ

ವಿಟ್ಲ : ಬಂಟ್ವಾಳ ತಾಲೂಕಿನ ಪೆರಾಜೆಯ  ಬಾಲಕಿ ತೀರ್ಥಶ್ರೀ (8) ಜೋಕಾಲಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ವಿಟ್ಲ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ತನಿಖೆಯ ವರದಿ ಪ್ರಕಾರ ಅದೊಂದು ಆತ್ಮಹತ್ಯೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆರಂಭದಲ್ಲಿ ಆಶೆ ಜೋಕಾಲಿಯ ಹಗ್ಗ ಸಿಲುಕಿ ಮೃತಪಟ್ಟಿರಬಹುದು ಎಂದು ವರದಿಯಾಗಿತ್ತು. ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ ಡಿ 8ರ ಸಂಜೆ 5 ಗಂಟೆಯಿಂದ 7.30ರ ಅವಧಿಯಲ್ಲಿ ಮೃತಪಟ್ಟಿದ್ದಾಳೆ. ಬಟ್ಟೆ ಹಾಕಲು ಹಾಕಿದ ಸ್ಟೀಲ್

ವಿಟ್ಲದ ತೀರ್ಥಶ್ರೀ ಸಾವಿನ ಪ್ರಕರಣದಲ್ಲಿ ಬಿಗ್‍ ಟ್ವಿಸ್ಟ್ | ಮಾಹಿತಿ ಕಲೆಹಾಕುವಲ್ಲಿ ವಿಟ್ಲ ಪೋಲಿಸರ ಹರಸಾಹಸ Read More »

ಮನೆ ಅಂಗಳಕ್ಕೆ ನುಗ್ಗಿದ ಆಂಬುಲೆನ್ಸ್

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಮನೆಯ ಅಂಗಳಕ್ಕೆ ನುಗ್ಗಿದ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ. ಪುತ್ತೂರಿನಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ಅಂಬ್ಯುಲೆನ್ಸ್ , ವನಸುಮ ನರ್ಸರಿ ರಸ್ತೆಯಲ್ಲಿರುವ  ಮನೆಯೊಂದರ ವರಾಂಡಕ್ಕೆ ನುಗ್ಗಿದೆ. ಘಟನೆಯಿಂದ ಮನೆಯ ಅವರಣ ಗೋಡೆಗೆ ಹಾನಿಯಾಗಿದ್ದು, ಆ್ಯಂಬುಲೆನ್ಸ್ ಮನೆಯ ಗೋಡೆಗೆ ಢಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಈ ಸಂದರ್ಭ ರಸ್ತೆ ಬದಿ ಶಾಲಾ ಮಕ್ಕಳು ನಿಂತಿದ್ದು,  ಅಪಾಯದಿಂದ ಪಾರಾಗಿದ್ದಾರೆ.

ಮನೆ ಅಂಗಳಕ್ಕೆ ನುಗ್ಗಿದ ಆಂಬುಲೆನ್ಸ್ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ

ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ ಮಾಡಲಾಯಿತು. ಪೆರ್ನೆ ವಲಯದ  ಪೆರಾಜೆ ನೇರಳಕಟ್ಟೆ ಒಕ್ಕೂಟಗಳ  ಗಜಾನನ ಪ್ರಗತಿ ಬಂಧು ಸಂಘ, ಸ್ವರ್ಣ ನಿಧಿ ಪ್ರಗತಿ  ಬಂಧು ಸಂಘ ದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಲಾಭಾಂಶ  ವಿತರಿಸಲಾಗಿದೆ. ಪೆರ್ನೆ ವಲಯ ಮೇಲ್ವಿಚಾರಕರಾದ  ಶಾರದಾ, ಸೇವಾಪ್ರತಿನಿಧಿ ರಮ್ಲತ್ ವಿತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಸದಸ್ಯರಿಗೆ  ಲಾಭಾಂಶ  ವಿತರಣೆ Read More »

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು

ಪುತ್ತೂರು: ನಾವು ಉಪ್ಪಿನಂಗಡಿಯಿಂದ ವಿಟ್ಲ ಐಟಿಐ ಕಾಲೇಜಿಗೆ ವ್ಯಾಸಂಗಕ್ಕೆ ಬರುತ್ತಿದ್ದೇವೆ, ನಮಗೆ ಬೊಳುವಾರಿನಿಂದ ವಿಟ್ಲ ಎಂದು ಬಸ್ ಪಾಸ್ ಕೊಟ್ಟಿದ್ದಾರೆ. ಮನೆಯಿಂದ ಕಾಲೇಜಿಗೆ ಬರುವಾಗ ನಾವು ಬೊಳುವಾರಿನ ಇಳಿಯಬೇಕು ಕಾಲೇಜು ಮುಗಿಸಿ ಬರುವಾಗಲೂ ನಾವು ಬೊಳುವಾರಿನಲ್ಲೇ ಇಳಿಯಬೇಕು. ಬೊಳುವಾರಿನಲ್ಲಿ ಇಳಿದರೆ ನಮಗೆ ಬಸ್ ಸಿಗುವುದಿಲ್ಲ ನಮಗೆ ಬಸ್ ಸ್ಟ್ಯಾಂಡ್ ವರೆಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ವಿಟ್ಲ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲಿ ಸಿದ್ದಾರೆ. ವಿಟ್ಲದ ಐಟಿಐ ಕಾಲೇಜಿನಲ್ಲಿ ಕಾಮಗಾರಿ

ನಮ್ಮನ್ನು ಬೊಳುವಾರಿನಲ್ಲಿ ಇಳಿಸುತ್ತಾರೆ: ವಿದ್ಯಾರ್ಥಿಗಳಿಂದ ಶಾಸಕರಿಗೆ ದೂರು Read More »

ಹೂವಿನ ವ್ಯಾಪರಿ ಕೆ. ಸೀತಾರಾಮ ಗೌಡ ನಿಧನ

ಪುತ್ತೂರು: ಪುತ್ತೂರು ವಿನಾಯಕ ಪ್ಲವರ್ಸ್ ಮಾಲಕ ಕೆ. ಸೀತಾರಾಮ ಗೌಡ (52 , ಡಿ. 8ರಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.   ದರ್ಬೆ ಪರ್ಲಡ್ಕ ನಿವಾಸಿಯಾಗಿದ್ದು, ಸುಮಾರು 30 ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿಯ ದ್ವಾರದಲ್ಲಿ ಹೂವಿನ ಅಂಗಡಿಯಿಟ್ಟು ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಅಂಕಿತಾ, ಯಕ್ಷಿತಾ ಅವರನ್ನು ಅಗಲಿದ್ದಾರೆ.

ಹೂವಿನ ವ್ಯಾಪರಿ ಕೆ. ಸೀತಾರಾಮ ಗೌಡ ನಿಧನ Read More »

error: Content is protected !!
Scroll to Top